ಐಟಿ ದಿಗ್ಗಜ ಕಂಪನಿಯಲ್ಲಿ ಒಂದಾಗಿರುವ ಎಚ್ಪಿ ಎಂದೇ ಹೆಸರಾಗಿರುವ ಹೆವ್ಲೆಟ್ ಪ್ಯಾಕರ್ಡ್ (Hewlett-Packard) ನೇಮಕಾತಿಗೆ ಮುಂದಾಗಿದೆ. ಬೆಂಗಳೂರಿನ ಕಚೇರಿಗೆ ಈ ನೇಮಕಾತಿ ನಡೆಯಲಿದೆ. ಟೆಕ್ನಿಕಲ್ ಸಪೋರ್ಟ್ ರೆಪ್ರೆಸೆಂಟಟಿವ್ (Technical Support Representative) ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ವಿಷಯದಲ್ಲಿ ವಿಷಯದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಸ್ವರೂಪ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಮತ್ತು ನೇಮಕಾತಿ ಸೇರಿದಂತೆ ಇತರೆ ಮಾಹಿತಿಗಳು ಈ ಕೆಳಗಿನಂತಿದೆ.
ಹುದ್ದೆ ಮಾಹಿತಿ |
ಹುದ್ದೆ ವಿವರ |
ಸಂಸ್ಥೆ |
ಹೆವ್ಲೆಟ್ ಪ್ಯಾಕರ್ಡ್ (ಎಚ್ಪಿ) |
ಹುದ್ದೆ |
ಟೆಕ್ನಿಕಲ್ ಸಪೋರ್ಟ್ ರೆಪ್ರೆಸೆಂಟಟಿವ್ |
ಒಟ್ಟು ಹುದ್ದೆ ಸಂಖ್ಯೆ |
ನಿರ್ದಿಷ್ಟ ಪಡಿಸಿಲ್ಲ |
ಕಾರ್ಯ ನಿರ್ವಹಣೆ ಸ್ಥಳ |
ಬೆಂಗಳೂರು |
ವೇತನ |
ಕಂಪನಿಯ ನಿಯಮ ಅನುಸಾರ |
ಶೈಕ್ಷಣಿಕ ಅರ್ಹತೆ: ಸಂಸ್ಥೆಯ ನೇಮಕಾತಿ ನಿಯಮದ ಅನುಸಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯ ಅಥವಾ ಅಧಿಕೃತ ಮಂಡಳಿಯಿಂದ ಪದವಿಯನ್ನು ಪಡೆದಿರಬೇಕು.
ಇದನ್ನು ಓದಿ: ಪದವೀಧರರಿಗೆ ಅರ್ಜಿ ಆಹ್ವಾನಿಸಿದ ಇನ್ಫೋಸಿಸ್; ಇಲ್ಲಿದೆ ಹುದ್ದೆ ಸಂಪೂರ್ಣ ಮಾಹಿತಿ
ಅರ್ಜಿ ಸಲ್ಲಿಕೆ: ಆನ್ಲೈನ್
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವಯೋಮಿತಿ: ಸಂಸ್ಥೆಯ ನಿಯಮದ ಅನುಸಾರ
ಹುದ್ದೆಯ ಜವಾಬ್ದಾರಿ:
-ವಿವಿಧ ಕಾರ್ಯಯೋಜನೆಗಳು ಪೂರ್ಣಗೊಳಿಸಲು ಬೇಕಿರುವ ಉದ್ಯೋಗ ಕೌಶಲ್ಯಗಳು ಮತ್ತು ಕಂಪನಿಯ ನೀತಿ, ಕಾರ್ಯವಿಧಾನಗಳ ಮೂಲಭೂತ ಜ್ಞಾನ ಹೊಂದಿರಬೇಕು.
-ಕೆಲಸದ ಸಾಮಾನ್ಯ ಹಾಗೂ ತಾಂತ್ರಿಕ ಅಂಶಗಳ ಉತ್ತಮ ತಿಳುವಳಿಕೆ ಇರಬೇಕು. -ಮೂಲಭೂತ ಸಮಸ್ಯೆ ಪರಿಹಾರ ಮತ್ತು ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಬೇಕು.
-ಅತ್ಯುತ್ತಮವಾದ ಲಿಖಿತ ಮತ್ತು ಮೌಖಿಕ ಸಂವಹನ ಕಲೆ ಹೊಂದಿರಬೇಕು.
-Microsoft Office, CAD, Adobe Suite, ಪ್ರೋಗ್ರಾಮಿಂಗ್ ಜ್ಞಾನ ಹೊಂದಿರಬೇಕು.
-ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್ ಭಾಷೆ ತಿಳಿದಿರಬೇಕು.
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
https://www.hp.com/
ಇದನ್ನು ಓದಿ: ಆಕ್ಸೆಂಚರ್ನಲ್ಲಿ ಭರ್ಜರಿ ನೇಮಕಾತಿ; ಬಿಇ, ಎಂಎಸ್ಸಿ ಆದವರಿಗೆ ಅವಕಾಶ
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
- ಆನ್ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್ ಲೋಡ್ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.
ಅರ್ಜಿ ಸಲ್ಲಿಸುವವರು
ಈ ಲಿಂಕ್ ಕ್ಲಿಕ್ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ