HESCOM Recruitment 2021: ಬಿಇ/ಬಿಟೆಕ್​ ಪದವೀಧರರಿಗೆ ಹೆಸ್ಕಾಂನಲ್ಲಿ ಉದ್ಯೋಗಾವಕಾಶ

HESCOM Recruitment 2021: ಒಟ್ಟು 200 ಅಪ್ರೆಂಟಿಸ್​ ಹುದ್ದೆಗಳು ಖಾಲಿ ಇವೆ. ಸೆಪ್ಟೆಂಬರ್ 27ರಿಂದಲೇ ಅರ್ಜಿ ಸಲ್ಲಿಸಲು ವೆಬ್​ಸೈಟ್​ನಲ್ಲಿ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 20.

HESCOM

HESCOM

  • Share this:
HESCOM Recruitment 2021: ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ(Hubli Electricity Supply Company Limited- HESCOM) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಹೆಸ್ಕಾಂ ಅನೇಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳು, ಅರ್ಹತಾ ಮಾನದಂಡ, ವಯೋಮಿತಿ, ವಿದ್ಯಾರ್ಹತೆ ಇನ್ನಿತರೆ ವಿವರಗಳಿಗಾಗಿ ನೋಟಿಫಿಕೇಶನ್ನು ಚೆಕ್ ಮಾಡಬೇಕು. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 200 ಅಪ್ರೆಂಟಿಸ್​ ಹುದ್ದೆಗಳು ಖಾಲಿ ಇವೆ. ಸೆಪ್ಟೆಂಬರ್ 27ರಿಂದಲೇ ಅರ್ಜಿ ಸಲ್ಲಿಸಲು ವೆಬ್​ಸೈಟ್​ನಲ್ಲಿ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 20.

ಹುದ್ದೆ ಹುದ್ದೆಗಳ ಸಂಖ್ಯೆಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿದ್ಯಾರ್ಹತೆ 
ಅಪ್ರೆಂಟಿಸ್20020/10/2021ಬಿಇ/ಬಿಟೆಕ್ಖಾಲಿ ಇರುವ ಹುದ್ದೆಗಳು:

200

ಪ್ರಮುಖ ದಿನಾಂಕಗಳು: Important Dates

  • ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ:  27/09/2021

  • ಹೆಸ್ಕಾಂಗೆ ಅರ್ಜಿ ಸಲ್ಲಿಸಲು NATS ಪೋರ್ಟಲ್​ನಲ್ಲಿ ದಾಖಲಾಗಲು ಕೊನೆಯ ದಿನಾಂಕ: 17/10/201

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/10/2021

  • ಶಾರ್ಟ್​ಲಿಸ್ಟ್​ ಮಾಡಿದ ಅಭ್ಯರ್ಥಿಗಳ ಘೋಷಣೆ ದಿನಾಂಕ: 22/10/2021

  • ಶಾರ್ಟ್​ಲಿಸ್ಟ್​ ಮಾಡಿದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ದಿನಾಂಕ: 09/11/20201 ರಿಂದ 12/11/2021.


ಇದನ್ನೂ ಓದಿ:SBI Recruitment 2021: ಸ್ಟೇಟ್ ಬ್ಯಾಂಕ್​​ನಲ್ಲಿ 606 ಹುದ್ದೆ ಖಾಲಿ ಇದೆ, ಯಾವುದೇ ಪರೀಕ್ಷೆ ಬರೆಯಬೇಕಿಲ್ಲ!

ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಅಪ್ರೆಂಟಿಸ್​​ಶಿಪ್​​ ನಿಯಮಗಳಾನುಸಾರ ಇರುತ್ತದೆ.

ವಿದ್ಯಾರ್ಹತೆ:

ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಬಿಇ/ಬಿ.ಟೆಕ್, ಡಿಪ್ಲೋಮಾ​ ಪದವಿ ಪಡೆದಿರಬೇಕು.

ಹುದ್ದೆಗಳ ವಿವರ

  • ಗ್ರಾಜುಯೇಟ್ ಅಪ್ರೆಂಟಿಸ್ -125

  • ಡಿಪ್ಲೋಮಾ ಅಪ್ರೆಂಟಿಸ್- 75


ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳ ಸಂಖ್ಯೆ
ಗ್ರಾಜುಯೇಟ್​ ಅಪ್ರೆಂಟಿಸ್​125
ಡಿಪ್ಲೋಮಾ ಅಪ್ರೆಂಟಿಸ್75ಹೆಚ್ಚಿನ ಮಾಹಿತಿಗಾಗಿ ಹೆಸ್ಕಾಂನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ. ವೆಬ್​ಸೈಟ್​ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ
Published by:Latha CG
First published: