Karnataka Govt Jobs: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ; 320 ಹುದ್ದೆಗಳಿಗೆ ಅರ್ಜಿ ಆಹ್ವಾನ

ಫಾರ್ಮಸಿ ಆಫೀಸರ್​, ಕಿರಿಯ ಆರೋಗ್ಯ ಸಹಾಯಕ ಸೇರಿದಂತೆ ಒಟ್ಟು 320 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ (Health and Family Welfare Department) ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಫಾರ್ಮಸಿ ಆಫೀಸರ್​, ಕಿರಿಯ ಆರೋಗ್ಯ ಸಹಾಯಕ ಸೇರಿದಂತೆ ಒಟ್ಟು 320 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 28 ಸೆಪ್ಟೆಂಬರ್​ ಆಗಿದೆ.

    ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀಧರ್​, ಬಳ್ಳಾರಿ ಮತ್ತು ವಿಜಯನಗರದಲ್ಲಿ ಖಾಲಿ ಇವರು ಅರೆ ವೈದ್ಯಕೀಯ ಮತ್ತು ಬ್ಯಾಕ್​ಲಾಗ್​ ಹುದ್ದೆಗಳು ಇವಾಗಿವೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
    ಹುದ್ದೆಯ ಹೆಸರು: ಫಾರ್ಮಸಿ ಅಧಿಕಾರಿ, ಕಿರಿಯ ಆರೋಗ್ಯ ಸಹಾಯಕ
    ಹುದ್ದೆಗಳ ಸಂಖ್ಯೆ: 320
    ಉದ್ಯೋಗ ಸ್ಥಳ: ಕರ್ನಾಟಕ
    ವೇತನ: 23,500 – 83,900 ರೂ. ಪ್ರತಿ ತಿಂಗಳು























































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಮನಶಾಸ್ತ್ರಜ್ಞ3ಸೈಕಲಾಜಿಯಲ್ಲಿ ಎಎ, ಎಂಎಸ್ಸಿ431000-839000 ರೂ ಮಾಸಿಕ
    ಸೈಕಿಯಾಟ್ರಿಸ್ಟ್​ ಸೋಶಿಯಲ್​ ವರ್ಕ್​1ಸೋಷಿಯಲ್​ ವರ್ಕ್​ನಲ್ಲಿ ಎಂಎ431000-839000 ರೂ ಮಾಸಿಕ
    ಮೈಕ್ರೋಬಾಯಾಲಾಜಿಸ್ಟ್​​6ಮೈಕ್ರೋಬಯಾಲಾಜಿಯಲ್ಲಿ ಎಂಎಸ್ಸಿ ಪದವಿ431000-839000 ರೂ ಮಾಸಿಕ
    ಕೀಟಶಾಸ್ತ್ರ ಸಹಾಯಕ1ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ40900-78200 ರೂ ಮಾಸಿಕ
    ಪಿಜಿಯೋಥೆರಪಿಸ್ಟ್​5ಪಿಜಿಯೋಥೆರಪಿಸ್ಟ್​ನಲ್ಲಿ ಪದವಿ33450-62600 ರೂ ಮಾಸಿಕ
    ಡೆಂಟಲ್​ ಮೆಕಾನಿಕ್3ಡೆಂಟಲ್​ ಮೆಕಾನಿಕ್​ನಲ್ಲಿ ಪ್ರಮಾಣ ಪತ್ರ431000-839000 ರೂ ಮಾಸಿಕ
    ಕಿರಿಯ ಲ್ಯಾಬ್​ ಟೆಕ್ನಿಶಿಯನ್​  27650-5265054ಲಾಬೋರೆಟರಿ ಟೆಕ್ನಿಶಿಯನ್​ನಲ್ಲಿ ಎರಡು ವರ್ಷದ ಡಿಪ್ಲೊಮಾ27650-52650ರೂ ಮಾಸಿಕ
    ನೇತ್ರಾಧಿಕಾರಿ 1515ನೇತ್ರ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪದವಿ27650-52650 ರೂ ಮಾಸಿಕ
    ಫಾರ್ಮಸಿಸ್ಟ್​​98ಫಾರ್ಮಸಿ ಡಿಪ್ಲೊಮಾ27650-52650 ರೂ ಮಾಸಿಕ
    ಇಸಿಜಿ ಟೆಕ್ನಿಷಿಯನ್​ 55ಕಾರ್ಡಿಯಕ್​ ಕೇರ್​ ಟೆಕ್ನಾಲಾಜಿಯಲ್ಲಿ ಬಿಎಸ್ಸಿ27650-52650 ರೂ ಮಾಸಿಕ
    ಡಯಾಲಿಸಿಸ್​ ಟೆಕ್ನಿಷಿಯನ್​2ಡಯಾಲಿಸಿಸ್​ ಟೆಕ್ನಾಲಾಜಿಯಲ್ಲಿ ಡಿಪ್ಲೊಮಾ27650-52650 ರೂ ಮಾಸಿಕ
    ಕಿರಿಯ ಆರೋಗ್ಯ ಸಹಾಯಕರು (ಮಹಿಳೆ)126ನರ್ಸಿಂಗ್​ ಪದವಿ23500-47650 ರೂ ಮಾಸಿಕ
    ಎಲೆಕ್ಟ್ರಿಷಿಯನ್​2ಎಲೆಕ್ಟ್ರಿಕಲ್​ ಇಂಜಿನಿಯರ್​ ಕೋರ್ಸ್​ ಪ್ರಮಾಣ ಪತ್ರ23500-47650 ರೂ ಮಾಸಿಕ

    ವಯೋಮಿತಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

    ವಯೋಮಿತಿ ಸಡಿಲಿಕೆ:
    2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 3 ವರ್ಷಗಳು
    ಪ.ಜಾ, ಪ.ಪಂ ಅಭ್ಯರ್ಥಿಗಳು: 5 ವರ್ಷಗಳು

    ಅರ್ಜಿ ಶುಲ್ಕ:
    ಸಾಮಾನ್ಯ ಅಭ್ಯರ್ಥಿಗಳು: 700 ರೂ.
    2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 400 ರೂ
    ಮಾಜಿ ಸೈನಿಕ ಅಭ್ಯರ್ಥಿಗಳು:  200 ರೂ.
    ಪ.ಜಾ, ಪ.ಪಂ ಅಭ್ಯರ್ಥಿಗಳು:  100 ರೂ.

    ಇದನ್ನು ಓದಿ: ಪಿಯು ಉಪನ್ಯಾಸಕರ ನೇಮಕಾತಿ; ಇಲ್ಲಿದೆ ಹುದ್ದೆಯ ಸಂಪೂರ್ಣ ಮಾಹಿತಿ

    ಪಾವತಿ ವಿಧಾನ: ಆನ್‌ಲೈನ್ (ಇ-ಪಾವತಿ ಪೋಸ್ಟ್ ಆಫೀಸ್)

    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ, ಸಂದರ್ಶನ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29 ಆಗಸ್ಟ್​​ ​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಸೆಪ್ಟೆಂಬರ್​ 2022
    ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29 ಸೆಪ್ಟೆಂಬರ್​ 2022

     ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: karunadu.karnataka.gov.in

    ಇದನ್ನು ಓದಿ: ಚಿತ್ರದುರ್ಗ ಜಿಲ್ಲಾ ಪಂಚಾಯತ್​ನಲ್ಲಿದೆ ಉದ್ಯೋಗಾವಕಾಶ; ಪಿಯುಸಿ, ಡಿಗ್ರಿ ಆದವರಿಗೆ ಅವಕಾಶ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    - ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    - ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಲಗತ್ತಿಸಿ

    -ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    -ನಿಮ್ಮ ವರ್ಗಕ್ಕೆ ಅನುಸಾರವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಲೋಡ್​ ಮಾಡಿ

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: