HDFC Bank Recruitment: 2,500 ಜನರಿಗೆ ಕೆಲಸ ಕೊಡೋಕೆ ಎಚ್​​ಡಿಎಫ್​ಸಿ ಸಜ್ಜು, ಬ್ಯಾಂಕಿಂಗ್​ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್

ಪ್ರಸ್ತುತ ಬ್ಯಾಂಕ್​ 1,00,000 ಹಳ್ಳಿಗಳಿಗೆ ಬ್ಯಾಂಕಿಂಗ್​ ಸೇವೆಗಳನ್ನು ಒದಗಿಸುತ್ತಿದೆ. ಇದನ್ನು 2,00,000 ಹಳ್ಳಿಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

ಎಚ್​ಡಿಎಫ್​​ಸಿ ಬ್ಯಾಂಕ್

ಎಚ್​ಡಿಎಫ್​​ಸಿ ಬ್ಯಾಂಕ್

  • Share this:
ಖಾಸಗಿ ಸಾಲದಾತ ಎಚ್​ಡಿಎಫ್​ಸಿ(Private Lender HDFC) ಬ್ಯಾಂಕ್​ ಮುಂದಿನ 18-24 ತಿಂಗಳಲ್ಲಿ 2 ಲಕ್ಷ ಗ್ರಾಮಗಳಿಗೆ ತನ್ನ ಗ್ರಾಮೀಣ ವ್ಯಾಪ್ತಿಯನ್ನು ದ್ವಿಗುಣಗೊಳಿಸುವುದಾಗಿ ಭಾನುವಾರ ತಿಳಿಸಿದೆ. ಬ್ರ್ಯಾಂಚ್ ನೆಟ್​ವರ್ಕ್(Branch Network)​, ಬ್ಯುಸಿನೆಸ್​​ ಕರೆಸ್ಪಾಂಡೆಂಟ್ಸ್(business correspondents)​, ಬ್ಯುಸಿನೆಸ್​ ಫೆಸಿಲಿಟೇಟರ್ಸ್(business facilitators)​, ಸಿಎಸ್​​ಸಿ ಪಾರ್ಟ್ನರ್ಸ್(CSC partners)​, ವರ್ಚುಯಲ್ ರಿಲೇಶನ್​ಶಿಪ್​ ಮ್ಯಾನೇಜ್​ಮೆಂಟ್(virtual relationship management) ಮತ್ತು ಡಿಜಿಟಲ್ ಔಟ್​ರೀಚ್ ಪ್ಲಾಟ್​ಫಾರ್ಮ್​ಗಳ(digital outreach platforms) ಸಂಯೋಜನೆಯ ಮೂಲಕ ಬ್ಯಾಂಕ್​ ಈ ವಿಸ್ತರಣೆಯನ್ನು ಯೋಜಿಸಿದೆ.

ಇದು ಬ್ಯಾಂಕಿನ ಗ್ರಾಮೀಣ ವ್ಯಾಪ್ತಿಯನ್ನು ದೇಶದ ಹಳ್ಳಿಗಳ ಮೂರನೇ ಒಂದು ಭಾಗಕ್ಕೆ ಹೆಚ್ಚಿಸಲಿದೆ ಎಂದು ಬ್ಯಾಂಕ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಎಚ್​ಡಿಎಫ್​ಸಿ ಬ್ಯಾಂಕ್​ ಪ್ರಸ್ತುತ ತನ್ನ ಉತ್ಪನ್ನಗಳು ಮತ್ತು ಸೇವೆಗಳನ್ನು MSME ಗಳಿಗೆ 550 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೀಡುತ್ತದೆ. ಪ್ರಸ್ತುತ ಬ್ಯಾಂಕ್​ 1,00,000 ಹಳ್ಳಿಗಳಿಗೆ ಬ್ಯಾಂಕಿಂಗ್​ ಸೇವೆಗಳನ್ನು ಒದಗಿಸುತ್ತಿದೆ. ಇದನ್ನು 2,00,000 ಹಳ್ಳಿಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

ಈ ಪ್ಲಾನ್​ನ ಭಾಗವಾಗಿ ಮುಂದಿನ 6 ತಿಂಗಳಲ್ಲಿ 2,500 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಎಚ್​​ಡಿಎಫ್​ಸಿ ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ:Accenture is Hiring: ಅಸೆಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್​ಗಳಿಗೆ ಉದ್ಯೋಗಾವಕಾಶ..!

ಬ್ಯಾಂಕಿನ ಗ್ರಾಮೀಣ ವಿಸ್ತರಣೆಯ ಕಾರ್ಯತಂತ್ರ ಕುರಿತು ಎಚ್​​ಡಿಎಫ್​ಸಿ ಬ್ಯಾಂಕಿನ್ ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್​ ಗ್ರೂಪ್​​ನ ಮುಖ್ಯಸ್ಥ ರಾಹುಲ್​ ಶುಕ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ’’ಭಾರತದ ಗ್ರಾಮೀಣ ಮತ್ತು ಅರೆ ನಗರ(ಸೆಮಿ-ಅರ್ಬನ್) ಮಾರುಕಟ್ಟೆಗಳು ಸಾಲ ವಿಸ್ತರಣೆಯಲ್ಲಿ ಕಡಿಮೆ ಸೇವೆ ಸಲ್ಲಿಸುತ್ತಿವೆ. ಅವುಗಳು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಸುಸ್ಥಿರ ದೀರ್ಘಕಾಲೀನ ಬೆಳವಣಿಗೆಯ ಅವಕಾಶಗಳನ್ನು ಒದಗಿಸುತ್ತವೆ. ಮುಂದುವರೆಯುತ್ತಾ, ಪ್ರತಿ ಪಿನ್​ಕೋಡ್​​ನಲ್ಲಿಯೂ ನಾವು ಪ್ರವೇಶಿಸುವ ಕನಸು ಹೊಂದಿದ್ದೇವೆ‘‘ ಎಂದರು.

ಬ್ಯಾಂಕ್​ ತನ್ನ ಸಾಂಪ್ರದಾಯಿಕ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುತ್ತಿದ್ದು, ಗ್ರಾಮೀಣ ಪ್ರದೇಶಗಳಿಗೆ ಹೊಸ ಸೇವೆಗಳನ್ನು ಒದಗಿಸಲಿದೆ. ಎಚ್​ಡಿಎಫ್​ಸಿ ಬ್ಯಾಂಕ್​​ ಈಗಾಗಲೇ ಕಟಾವಿನ ಮುಂಚಿನ ಮತ್ತು ನಂತರದ ಬೆಳೆ ಸಾಲಗಳು, ದ್ವಿಚಕ್ರ ವಾಹನ ಮತ್ತು ಆಟೋ(ವಾಹನ) ಸಾಲಗಳು, ಚಿನ್ನದ ಆಭರಣಗಳ ಮೇಲಿನ ಸಾಲಗಳು ಹಾಗೂ ಕ್ಯೂರೇಟೆಡ್ ಸಾಲದ ಉತ್ಪನ್ನಗಳನ್ನು ಬ್ಯಾಂಕುಗಳಲ್ಲದ ಮತ್ತು ಅಂಡರ್ ಬ್ಯಾಂಕಿಂಗ್​ನಲ್ಲಿ ನೀಡುತ್ತಿದೆ.

ಭಾರತ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಗ್ರಾಮೀಣ ಅರ್ಥಶಾಸ್ತ್ರವನ್ನು ಪರಿವರ್ತಿಸುತ್ತಿದೆ. ಬ್ಯಾಂಕಿಂಗ್​ ಮತ್ತು ಹಣಕಾಸು ಸೇವೆಗಳ ಜಾಗದಲ್ಲಿ ಜವಾಬ್ದಾರಿಯುತ ನಾಯಕರಾಗಿ, ಅತ್ಯುತ್ತಮ ದರ್ಜೆಯ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳನ್ನು ಸಮಾಜದ ಎಲ್ಲಾ ವರ್ಗಗಳಿಗೆ ತಲುಪುವಂತೆ ಮಾಡುವ ಮೂಲಕ ನಾವು ನಿರ್ದೇಶನವನ್ನು ಅನುಸರಿಸುತ್ತಿದ್ದೇವೆ ಎಂದು ನಂಬುತ್ತೇವೆ ಎಂದರು.

ಇದನ್ನೂ ಓದಿ:BEL Recruitment 2021: 35,000 ರೂ ಸಂಬಳ, ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆ... ಅರ್ಜಿ ಹಾಕೋದು ಹೀಗೆ

ಮುಂದುವರೆದ ಅವರು, ಭಾರತದ ದೂರದ ಮೂಲೆಗಳಲ್ಲಿ ಒಳಹೊಕ್ಕಿ ಆಳವಾಗಿಸುವಲ್ಲಿ ನಮ್ಮ ಡಿಜಿಟಲ್​ ಉಪಕ್ರಮಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ನಮ್ಮ ರಾಷ್ಟ್ರದ ಪ್ರಗತಿಯ ಹೊರತಾಗಿಯೂ ಆರ್ಥಿಕವಾಗಿ ಹೊರಗುಳಿದಿರುವವರಿಗೆ ಸಾಲವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಶುಕ್ಲಾ ಹೇಳಿದರು.
Published by:Latha CG
First published: