HAL Recruitment 2021: ಮಾಸಿಕ ವೇತನ ₹ 21,473, ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​​ನಲ್ಲಿ ವಿವಿಧ ಹುದ್ದೆಗಳು ಖಾಲಿ

ನವೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.

HAL

HAL

  • Share this:
HAL Recruitment 2021: ಹಿಂದೂಸ್ತಾನ್ ಏರೋನಾಟಿಕ್ಸ್​ ಲಿಮಿಟೆಡ್​ (Hindustan Aeronautics Limited)ನಲ್ಲಿ ಹಲವು ಟ್ರೇಡ್ ಅಪ್ರೆಂಟಿಸ್ ಹುದ್ದೆ(Trade Apprentice Posts)ಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 11 ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳು ಖಾಲಿ ಇದ್ದು, ಡಿಪ್ಲೊಮಾ, ಜಿಎನ್​ಎಂ, ಡಿ.ಫಾರ್ಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಆನ್​​ಲೈನ್(Online) ಮೂಲಕ ಅರ್ಜಿ ಸಲ್ಲಿಸಲು ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​​ನ ಅಧಿಕೃತ ವೆಬ್​ಸೈಟ್​ hal-india.co.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಹಿಂದೂಸ್ತಾನ್ ಏರೋನಾಟಿಕ್ಸ್​ ಲಿಮಿಟೆಡ್
ಹುದ್ದೆಯ ಹೆಸರುಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್
ಒಟ್ಟು ಹುದ್ದೆಗಳು11
ವಿದ್ಯಾರ್ಹತೆಡಿಪ್ಲೊಮಾ, ಜಿಎನ್​ಎಂ, ಡಿ.ಫಾರ್ಮಾ
ಉದ್ಯೋಗದ ಸ್ಥಳಬೆಂಗಳೂರು
ವೇತನಮಾಸಿಕ ₹ 15,910-21,473
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
​ಅರ್ಜಿ ಸಲ್ಲಿಕೆ ಆರಂಭ ದಿನಾಂಕ24/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ14/12/2021



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/12/2021

ಇದನ್ನೂ ಓದಿ: News18 Kannada is Hiring: ಸಬ್​ ಎಡಿಟರ್ & ಸೀನಿಯರ್ ಸಬ್​ ಎಡಿಟರ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ, ಕಡೇ ದಿನಾಂಕ ಡಿಸೆಂಬರ್ 4

ಅರ್ಜಿ ಶುಲ್ಕ:
ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಹುದ್ದೆಯ ಮಾಹಿತಿ:
ಸ್ಟಾಫ್​ ನರ್ಸ್​- 07
ಫಾರ್ಮಾಸಿಸ್ಟ್​ -01
ಫಿಜಿಯೋಥೆರಪಿಸ್ಟ್​ -01
ಡ್ರೆಸ್ಸೆರ್ - 02
ಒಟ್ಟು-11 ಹುದ್ದೆಗಳು

ವಿದ್ಯಾರ್ಹತೆ:
ಸ್ಟಾಫ್​ ನರ್ಸ್​- ಪಿಯುಸಿ ಜೊತೆಗೆ ಜನರಲ್​ ನರ್ಸಿಂಗ್​ & ಮಿಡ್​ವೈಫರಿಯಲ್ಲಿ 3 ವರ್ಷಗಳ ಡಿಪ್ಲೋಮಾ ಮಾಡಿರಬೇಕು.
ಫಾರ್ಮಾಸಿಸ್ಟ್​- ಪಿಯುಸಿ ಜೊತೆಗೆ 2 ವರ್ಷಗಳ ಪಿಜಿಯೋಥೆರಪಿ ಡಿಪ್ಲೋಮಾ ಮಾಡಿರಬೇಕು.
ಫಿಜಿಯೋಥೆರಪಿಸ್ಟ್- ಪಿಯುಸಿ ಜೊತೆಗೆ 2 ವರ್ಷಗಳ ಡಿ ಫಾರ್ಮಾ ಮಾಡಿರಬೇಕು.
ಡ್ರೆಸ್ಸೆರ್ - ಪಿಯುಸಿ ಜೊತೆಗೆ ಭಾರತೀಯ ರೆಡ್ ಕ್ರಾಸ್ ಅಥವಾ ಸೇಂಟ್ ಜಾನ್ಸ್ ಆಂಬ್ಯುಲೆನ್ಸ್ ಅಸೋಸಿಯೇಷನ್ ಅಥವಾ ಅಂತಹ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆಯಲ್ಲಿ ತರಬೇತಿಯ ಪ್ರಮಾಣಪತ್ರ ಹೊಂದಿರಬೇಕು.

ಇದನ್ನೂ ಓದಿ: UPPSC Recruitment 2021: ಮಾಸಿಕ ವೇತನ ₹ 1,77,500; UPPSCಯಲ್ಲಿ ವಿವಿಧ ಹುದ್ದೆಗಳು ಖಾಲಿ

ವಯೋಮಿತಿ:
ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:
ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ವೇತನ:
ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 15,910-21,473 ವೇತನ ನೀಡಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: