Apprentice Job in HAL: 10ನೇ ತರಗತಿ ಬಳಿಕ ಮುಂದೇನು ಎನ್ನುತ್ತಿದ್ರೆ ಎಚ್​ಎಎಲ್​ನಲ್ಲಿದೆ ಅಪ್ರೆಂಟಿಸ್​ ಹುದ್ದೆ

ಎಚ್​ಎಎಲ್​ನ ಸಾಮಾಜಿಕ ಹೊಣೆಗಾರಿಕೆ ಕೌಶಲ್ಯಾಭಿವೃದ್ಧಿ ಚಾಲನೆ ಅನ್ವಯ ಈ ಹುದ್ದೆಗಳ ನೇಮಕಾತಿ ನಡೆಯಲಿದೆ.

HAL

HAL

  • Share this:
    ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನ (Hindustan Aeronautics Limited) ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ (Technical Training Institute) ವಿವಿಧ ಅಪ್ರೆಂಟಿಸ್​ಶಿಪ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿಎನ್​ಸಿ ಪ್ರೋಗ್ರಾಮರ್​, ಆಪರೇಟರ್​, ಮೆಷಿನಿಸ್ಟ್​, ಎಲೆಕ್ಟ್ರಿಷಿಯನ್​ ಮತ್ತು ವೆಲ್ಡರ್​ ಟ್ರೇಡ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 9 ಆಗಿದೆ.

    ಎಚ್​ಎಎಲ್​ನ ಸಾಮಾಜಿಕ ಹೊಣೆಗಾರಿಕೆ ಕೌಶಲ್ಯಾಭಿವೃದ್ಧಿ ಚಾಲನೆ ಅನ್ವಯ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಅಪ್ರೆಂಟಿಸ್​ ಶಿಪ್​ ಅವಧಿ 15 ರಿಂದ 24 ತಿಂಗಳ ಕಾಲ ಪೂರ್ಣಾವಧಿ ಇರಲಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
    ಹುದ್ದೆಅಪ್ರೆಂಟಿಸ್
    ಒಟ್ಟು ಹುದ್ದೆ120
    ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು
    ಸ್ಟೈಪೆಂಡ್ಸರ್ಕಾರದ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ನೇಮಕಾತಿ ಅಧಿಸೂಚನೆ ಅನುಸಾರ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

    ವಯೋಮಿತಿ: ನೇಮಕಾತಿ ಅಧಿಸೂಚನೆ ಅನುಸಾರ ಅಭ್ಯರ್ಥಿಗಳು ಕನಿಷ್ಠ 15 ರಿಂದ ಗರಿಷ್ಠ 18 ವರ್ಷದೊಳಗೆ ಇರಬೇಕು.

    ಇದನ್ನು ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ: ಆಫ್​ಲೈನ್​

    ಆಯ್ಕೆ ಪ್ರಕ್ರಿಯೆ:  ಲಿಖಿತ ಪರೀಕ್ಷೆ ಮತ್ತು ಮೆರಿ​ ಅನುಸಾರ

    ಅರ್ಜಿ ಸಲ್ಲಿಕೆ
    ಟೆಕ್ನಿಕಲ್​ ಟ್ರೈನಿಂಗ್​ ಇನ್ಸಿಟ್ಯೂಷನ್​ (ಟಿಟಿಐ), ಹಿಂದೂಸ್ತಾನ್​ ಏರೋನಾಟಿಕ್​ ಲಿಮಿಟೆಡ್​, ವಿಮಾನಪುರ ಅಂಚೆ, ಬೆಂಗಳೂರು- 560017

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26 ಆಗಸ್ಟ್​​ 2022
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: 9 ಸೆಪ್ಟೆಂಬರ್​ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್​: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: hal-india.co.in

    ಇದನ್ನು ಓದಿ: ಐಟಿಐ, ಡಿಪ್ಲೊಮಾ ಆದವರಿಗೆ ಬಿಇಎಲ್​ನಲ್ಲಿದೆ ಕೆಲಸದ ಅವಕಾಶ; ಇಲ್ಲಿದೆ ಉದ್ಯೋಗ ಮಾಹಿತಿ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    -ಎಸ್​ಎಲ್​ಸಿ ಅಂಕಪಟ್ಟಿ, ಜಾತಿ ಮೀಸಲಾತಿ ಪಟ್ಟಿ, ಅಂತ್ಯೂದಯ, ಬಿಪಿಎಲ್​ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ದಾಖಲಿಸಿ

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ನೀಡಿ. , ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ ಲಗತ್ತಿಸಿ

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿದ ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ತಲುಪುವಂತೆ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮಾಡಿ.
    Published by:Seema R
    First published: