ರಾಜ್ಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಅರೆಕಾಲಿಕ ಶಿಕ್ಷಕರ (Guest Teachers) ಹುದ್ದೆಗಳ ಭರ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ (Department of Public Education) ಮುಂದಾಗಿದೆ. ಒಟ್ಟು 5159 ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. 2022-23ರ ಪ್ರತಿಯಾಗಿ ಪ್ರಸಕ್ತ ಸಾಲಿನಲ್ಲಿ ಈ ಅತಿಥಿ ಶಿಕ್ಷಕರನ್ನು ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕರಡು ಅಧಿಸೂಚನೆ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕಡೆಯ ದಿನಾಂಕ ಜುಲೈ 26 ಆಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ತಾಲೂಕುಗಳು | ಹುದ್ದೆ ಸಂಖ್ಯೆ |
ಬೆಂಗಳೂರು ಉತ್ತರ | 18 |
ಬೆಂಗಳೂರು ದಕ್ಷಿಣ | 51 |
ಬೆಂಗಳೂರು ಗ್ರಾಮಾಂತರ | 80 |
ಚಿತ್ರದುರ್ಗ | 83 |
ಕೋಲಾರ | 172 |
ಶಿವಮೊಗ್ಗ | 108 |
ತುಮಕೂರು | 74 |
ಮಧುಗಿರಿ | 124 |
ಮೈಸೂರು | 189 |
ಚಿಕ್ಕಮಗಳೂರು | 119 |
ದಕ್ಷಿಣ ಕನ್ನಡ | 186 |
ಹಾಸನ | 213 |
ಕೊಡಗು | 62 |
ಮಂಡ್ಯ | 244 |
ಚಿಕ್ಕೋಡಿ | 215 |
ಬೆಳಗಾವಿ | 179 |
ವಿಜಯಪುರ | 143 |
ಧಾರವಾಡ | 101 |
ಉತ್ತರ ಕನ್ನಡ | 19 |
ಶಿರಸಿ | 73 |
ಕಲಬುರಗಿ | 257 |
ಬಳ್ಳಾರಿ | 209 |
ವಿಜಯನಗರ | 139 |
ಬೀದರ್ | 227 |
ರಾಯಚೂರು | 441 |
ಯಾದಗಿರಿ | 190 |
ದಾವಣಗೆರೆ | 26 |
ರಾಮನಗರ | 65 |
ಚಿಕ್ಕಬಳ್ಳಾಪುರ | 142 |
ಚಾಮರಾಜನಗರ | 105 |
ಉಡುಪಿ | 111 |
ಬಾಗಲಕೋಟೆ | 209 |
ಗದಗ | 122 |
ಹಾವೇರಿ | 95 |
ಕೊಪ್ಪಳ | 273 |
ವಯೋಮಿತಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಕನಿಷ್ಠ ವಯಸ್ಸು ಕಾಲೇಜು ಶಿಕ್ಷಣ ಇಲಾಖೆಯ ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.
ವಯೋಮಿತಿ ಸಡಿಲಿಕೆ: ಸಾರ್ವಜನಿಕ ಶಿಕ್ಷಣ ಇಲಾಖೆ ನಿಯಮಾವಳಿ ಪ್ರಕಾರ
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 19 ಜಲೈ 2022
ಅತಿಥಿ ಶಿಕ್ಷಕರು ಮತ್ತು ತಾಲೂಕುವಾರು ಹುದ್ದೆಗಳ ಅರ್ಜಿಯ ಸಾಫ್ಟ್ ಕಾಪಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 26 ಜುಲೈ 2022
ಇದನ್ನು ಓದಿ: ಸುರತ್ಕಲ್ನ ಎನ್ಐಟಿಕೆಯಲ್ಲಿದೆ ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆ; ತಿಂಗಳಿಗೆ 31 ಸಾವಿರ ವೇತನ
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ವೆಬ್ಸೈಟ್: schooleducation.kar.nic.in
ಅರ್ಜಿ ಸಲ್ಲಿಕೆ ವಿಧಾನ
ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ಅತಿಥಿ ಶಿಕ್ಷಕರ ನೇಮಕಾತಿ ಮತ್ತು ತಾಲೂಕುವಾರು ಹುದ್ದೆಗಳ ವಿವರಗಳಿಗಾಗಿ 26-ಜುಲೈ-2022 ರಂದು ಅಥವಾ ಮೊದಲು ಇ-ಮೇಲ್ ಐಡಿ est4cpibng@gmail.com ಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಕಳುಹಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ