Preparation For Govt job: ಸರ್ಕಾರಿ ಹುದ್ದೆ ಪಡೆಯಬೇಕು ಎಂದು ಕನಸು ಕಾಣ್ತಿದ್ರೆ; ಈಗಿನಿಂದಲೇ ತಯಾರಿ ಆರಂಭಿಸಿ!

ಅನೇಕ ಬಾರಿ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆ ತಮಗೆ ಏಟುಕದ ಕೆಲಸ ಎಂದು ಖಾಸಗಿ ಕಂಪನಿಯತ್ತ ಮುಖ ಮಾಡುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸರ್ಕಾರಿ ಹುದ್ದೆ ಒಂದು ರೀತಿ ಆನೆಯಂತೆ ಎಂಬ ಮಾತಿದೆ. ಉದ್ಯೋಗ ಭದ್ರತೆ (job security ) ಹೊಂದಲು ಅನೇಕರು ಸರ್ಕಾರಿ ಉದ್ಯೋಗವನ್ನೇ (Government job) ಆಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಅನೇಕ ಬಾರಿ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆ ತಮಗೆ ಏಟುಕದ ಕೆಲಸ ಎಂದು ಖಾಸಗಿ ಕಂಪನಿಯತ್ತ ಮುಖ ಮಾಡುತ್ತಾರೆ. ಇದಕ್ಕೆ ಕಾರಣ ಅವರಲ್ಲಿನ ತಯಾರಿ ಕೊರತೆ. ಯಾವುದೇ ಕೆಲಸಕ್ಕೆ ತಯಾರಿ ಎಂಬುದು ಅತ್ಯವಶ್ಯಕ. ಇದೇ ಕಾರಣಕ್ಕೆ ನಾವು ಮಾಡುವ ತಯಾರಿ ಸರಿಯಾದ ಕ್ರಮದಲ್ಲಿರುವುದು ಅವಶ್ಯ. ತಯಾರಿಗೆ ಎಂದು ನಾಲ್ಕು ಐದು ವರ್ಷ ಕಳೆದು ಇತ್ತ ಕೆಲಸವೂ ಇಲ್ಲ ಎನ್ನುವಂತಹ ಪರಿಸ್ಥಿತಿ ಅನೇಕರಿಗೆ ಉಂಟಾಗುತ್ತದೆ. ಇದಕ್ಕಿರುವ ಪರಿಹಾರ ಉತ್ತಮ ಮಾರ್ಗದರ್ಶನ, ಆತ್ಮ ವಿಶ್ವಾಸ, ತಾಳ್ಮೆಯ ಜೊತೆಗೆ ಛಲ.

    ಕಠಿಣ ಶ್ರಮದೊಂದಿಗೆ ಇರಲಿ ಸ್ಮಾರ್ಟ್​ ವರ್ಕ್​​
    ಅನೇಕರು ಸರ್ಕಾರಿ ಕೆಲಸಕ್ಕೆ ಅತಿ ಹೆಚ್ಚಿನ ತಯಾರಿ ಬೇಕು. ದಿನಕ್ಕೆ 10ರಿಂದ 12 ಗಂಟೆ ಓದಬೇಕು ಎಂದು ಕೊಂಡಿರುತ್ತಾರೆ. ಯಾವುದೇ ತಯಾರಿಗಾದರೂ ಕಠಿಣ ಶ್ರಮ ಅವಶ್ಯಕ. ಆದರೆ, ಇದರ ಜೊತೆಗೆ ಸ್ಮಾರ್ಟ್​ ವರ್ಕ್​ ಕೂಡ ಅವಶ್ಯಕ. ನಮ್ಮ ಗುರಿಗೆ ತಕ್ಕಂತೆ ಅಭ್ಯಾಸ ಇರಬೇಕು. ಸಿಕ್ಕ ಪುಸ್ತಕಗಳನ್ನೇಲ್ಲಾ ಪಡೆದು ಓದುವ ಬದಲು ಅಗತ್ಯ ಇರುವ ಪುಸ್ತಕ ಪಡೆಯಿರಿ.

    ಗೆದ್ದವರಿಂದ ಸ್ಪೂರ್ತಿ ಪಡೆಯಿರಿ.
    ಅನೇಕ ಪ್ರಯತ್ನಗಳ ಬಳಿಕ ಗೆಲುವು ಸಿಗದಿದ್ದಾಗ ನಿರಾಶೆಗೊಳ್ಳುವುದು ಸಹಜ. ಇತಂಹ ಸಂದರ್ಭದಲ್ಲಿ ಗೆಲುವು ಸಾಧಿಸಿದವರಿಂದ ಸ್ಪೂರ್ತಿ ಪಡೆಯಬೇಕು. ಹಲವು ಪ್ರಯತ್ನಗಳ ಬಳಿಕವೂ ಯಶಸ್ಸು ಪಡೆದ ಅನೇಕರ ಯಶೋಗಾಥೆಗಳನ್ನು ಪಡೆದು ನಮಗೆ ನಾವು ಹುರಿದುಂಬಿಸಿಕೊಳ್ಳಬೇಕು

    ಪ್ರಯತ್ನವನ್ನು ಅರ್ಧಕ್ಕೆ ಕೈ ಬಿಡಬೇಡಿ
    ಅನೇಕರು ಮಾಡುವ ತಪ್ಪು ಎಂದರೆ ತಮ್ಮ ಪ್ರಯತ್ನವನ್ನು ಅರ್ಧಕ್ಕೆ ಕೈ ಬಿಡುವುದು. ಎರಡು ಮೂರು ಪ್ರಯತ್ನಗಳ ಬಳಿಕ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ವಿಮುಖರಾಗುತ್ತಾರೆ. ಈ ರೀತಿ ತಪ್ಪು ಮಾಡದೇ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಂಪೂರ್ಣ ಪ್ರಯತ್ನ ನಡೆಸಿ

    ಇದನ್ನು ಓದಿ: ಸಾಫ್ಟ್​ವೇರ್​ ಕೆಲಸ​ ಹುಡುಕುತ್ತಿರುವವರಿಗೆ ಸುವರ್ಣಾವಕಾಶ; ವರ್ಷಕ್ಕೆ 10 ಲಕ್ಷ ರೂ ಪ್ಯಾಕೇಜ್

    ಅನೇಕ ಪರೀಕ್ಷೆಗೆ ಹಾಜರಾಗಿ
    ಅನೇಕ ಮಂದಿ ಮೊದಲ ಬಾರಿಯೇ ತಮ್ಮ ಪ್ರಯತ್ನದಲ್ಲಿ ಯಶಸ್ಸು ಹೊಂದುತ್ತಾರೆ. ಇದಕ್ಕೆ ಕಾರಣ ಅವರ ಗುರಿ ನಿರ್ಧಿಷ್ಠವಾಗಿದ್ದು, ಅದಕ್ಕಾಗಿ ಅವರು ತುಂಬಾ ಬೇಗನೇ ತಮ್ಮ ಪ್ರಯತ್ನ ಆರಂಭಿಸಿರುತ್ತಾರೆ. ಒಂದು ವೇಳೆ ನಿಮ್ಮ ತಯಾರಿ ಈಗಿನಿಂದ ಆರಂಭವಾಗಿದೆ ಎಂದರೇ ಅನೇಕ ಪರೀಕ್ಷೆ ಎದುರಿಸಿ

    ಇದನ್ನು ಓದಿ: ನ್ಯಾಯಾಲಯದಲ್ಲಿ ಸ್ಟೇನೋಗ್ರಾಫರ್​, ಟೈಪಿಸ್ಟ್​ ಹುದ್ದೆ ಖಾಲಿ; SSLC ಪಾಸ್​ ಆಗಿದ್ರೆ ಸಾಕು

    ಸಾಮಾಜಿಕ ಜಾಲತಾಣ ಬಳಸಿಕೊಳ್ಳಿ
    ಸ್ಪರ್ಧಾತ್ಮಕ ತಯಾರಿಗಾಗಿ ಈಗ ಅನೇಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಸಿಗುತ್ತದೆ. ಜೊತೆಗೆ ಆನ್​​ಲೈನ್​ ಟ್ರೈಯಲ್​ ಟೆಸ್ಟ್​ಗಳು ಸಿಗುತ್ತವೆ. ಇವುಗಳ ಉಪಯೋಗ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಏನು ಬೇಕು ಎಂಬುದನ್ನು ಅರಿತು ಬಳಕೆ ಮಾಡುವುದು ಉತ್ತಮ. ಈಗಂತೂ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಅನೇಕ ಯೂಟ್ಯೂಬ್​ ಚಾನೆಲ್​ ಸೇರಿದಂತೆ ಅನೇಕ ತಾಣಗಳು ಸಿಗಲಿದ್ದು, ಇದು ಕೂಡ ಸಹಕಾರಿಯಾಗಲಿದೆ.

    ಈಗಿನಂದಲೇ ತಯಾರಿ ಆರಂಭಿಸಿ

    ಸರ್ಕಾರಿ ಕೆಲಸ ಪಡೆಯಬೇಕು ಎಂಬುದು ನಿಮ್ಮ ಕನಸಾಗಿದ್ದರೆ, ಅದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿ. ಪದವಿ ಬಳಿಕ ಅಥವಾ ಪಿಯು ಬಳಿಕ ಕಾಲೇಜಿನ ಪಠ್ಯದ ಜೊತೆಗೆ ತಯಾರಿ ಪ್ರಾರಂಭ ಮಾಡುವುದು ನಿಮಗೆ ಸಹಾಯವಾಗಲಿದೆ. ಯಾವುದೇ ಕಾರಣಕ್ಕೂ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ತಯಾರಿ ನಡೆಸುತ್ತೇನೆ ಎಂಬ ಮನಸ್ಥಿತಿ ಬೇಡ. ಯಾವುದೇ ಯಶಸ್ಸು ಕೂಡ ದೀರ್ಘ ಪರಿಶ್ರಮವನ್ನು ಕೇಳುತ್ತದೆ. ಈ ಹಿನ್ನಲೆ ಆಗಲೇ ತಯಾರಿ ನಡೆಸಿ ಆಗಲೇ ಯಶಸ್ವಿಯಾಗುತ್ತೇನೆ ಎಂಬ ಭರವಸೆಯನ್ನು ಪಕ್ಕಕ್ಕೆ ಇಡುವುದು ಉತ್ತಮ.
    Published by:Seema R
    First published: