• Home
  • »
  • News
  • »
  • jobs
  • »
  • Government Job: ಗದಗ ಡಿಸಿ ಆಫೀಸ್​​ನಲ್ಲಿ ಲೋಡರ್ & ಕ್ಲೀನರ್ ಹುದ್ದೆಗಳು ಖಾಲಿ, ತಿಂಗಳಿಗೆ 28 ಸಾವಿರ ಸಂಬಳ

Government Job: ಗದಗ ಡಿಸಿ ಆಫೀಸ್​​ನಲ್ಲಿ ಲೋಡರ್ & ಕ್ಲೀನರ್ ಹುದ್ದೆಗಳು ಖಾಲಿ, ತಿಂಗಳಿಗೆ 28 ಸಾವಿರ ಸಂಬಳ

ಗದಗ ಜಿಲ್ಲಾಧಿಕಾರಿಗಳ ಕಚೇರಿ

ಗದಗ ಜಿಲ್ಲಾಧಿಕಾರಿಗಳ ಕಚೇರಿ

ಗದಗ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 55 ವರ್ಷ ಇರಬೇಕು.

  • Share this:

    Gadag DC Office Recruitment 2022: ಗದಗ ಜಿಲ್ಲಾಧಿಕಾರಿಗಳ ಕಚೇರಿ(Gadag DC Office)ಯಲ್ಲಿ 58 ಲೋಡರ್ & ಕ್ಲೀನರ್(Loader and Cleaner) ಕೆಲಸಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಗದಗದಲ್ಲಿ ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು(Local Candidates) ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ನವೆಂಬರ್ 28, 2022 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಗದಗ ಜಿಲ್ಲಾಧಿಕಾರಿಗಳ ಕಚೇರಿ
    ಹುದ್ದೆಯ ಹೆಸರುಲೋಡರ್ & ಕ್ಲೀನರ್
    ಒಟ್ಟು ಹುದ್ದೆ58
    ವೇತನಮಾಸಿಕ ₹ 17,000-28,950
    ವಯೋಮಿತಿ18-55 ವರ್ಷ
    ಸ್ಥಳಗದಗ
    ಅರ್ಜಿ ಸಲ್ಲಿಕೆ ವಿಧಾನಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ10/11/2022
    ಅರ್ಜಿ ಸಲ್ಲಿಸಲು ಕೊನೆ ದಿನ28/11/2022


    ಅರ್ಹತಾ ಮಾನದಂಡಗಳೇನು?


    ಲೋಡರ್ & ಕ್ಲೀನರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಮುನ್ಸಿಪಾಲಿಟಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.


    ಇದನ್ನೂ ಓದಿ: JOB ALERT: ನೀವು Ph.D ಮಾಡಿದ್ರೆ ಬೆಂಗಳೂರಿನಲ್ಲಿದೆ ಉದ್ಯೋಗ, ತಿಂಗಳಿಗೆ 47 ಸಾವಿರ ಸಂಬಳ


    ಗದಗ-ಬೆಟಗೇರಿ ಮುನ್ಸಿಪಾಲಿಟಿ, ಗಜೇಂದ್ರಗಡ ಮುನ್ಸಿಪಾಲಿಟಿ, ಲಕ್ಷ್ಮೇಶ್ವರ್ ಮುನ್ಸಿಪಾಲಿಟಿ, ಮುಂಡರಗಿ ಮುನ್ಸಿಪಾಲಿಟಿ, ನರಗುಂದ ಮುನ್ಸಿಪಾಲಿಟಿ, ರೋಣ ಮುನ್ಸಿಪಾಲಿಟಿ, ಮುಳಗುಂದ ಟೌನ್ ಮುನ್ಸಿಪಾಲಿಟಿ, ನರೆಗಲ್ಲ ಟೌನ್ ಮುನ್ಸಿಪಾಲಿಟಿ ಮತ್ತು ಶಿರಹಟ್ಟಿ ಟೌನ್ ಪಂಚಾಯತ್


    ವಯೋಮಿತಿ:
    ಗದಗ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 55 ವರ್ಷ ಇರಬೇಕು.


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 28, 2022ರೊಳಗೆ ಕಳುಹಿಸಬೇಕು.


    ಕೊಠಡಿ ಸಂಖ್ಯೆ-123
    ಮೊದಲನೇ ಮಹಡಿ
    ಜಿಲ್ಲಾ ನಗರಾಭಿವೃದ್ಧಿ ಘಟಕ
    ಜಿಲ್ಲಾಧಿಕಾರಿಗಳ ಕಚೇರಿ
    ಗದಗ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ ದಿನಾಂಕ: 10/11/2022
    ಅರ್ಜಿ ಸಲ್ಲಿಸಲು ಕೊನೆ ದಿನ : 28/11/2022


    ಇದನ್ನೂ ಓದಿ: JOBS: ಚಿಕ್ಕಮಗಳೂರಿನಲ್ಲಿದೆ ಸರ್ಕಾರಿ ಕೆಲಸ-ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ


    ಅರ್ಜಿ ದೊರೆಯುವ ಸ್ಥಳ:
    ಕೊಠಡಿ ಸಂಖ್ಯೆ-123
    ಮೊದಲನೇ ಮಹಡಿ
    ಜಿಲ್ಲಾ ನಗರಾಭಿವೃದ್ಧಿ ಘಟಕ
    ಜಿಲ್ಲಾಧಿಕಾರಿಗಳ ಕಚೇರಿ
    ಗದಗ

    Published by:Latha CG
    First published: