• Home
  • »
  • News
  • »
  • jobs
  • »
  • Government Job: ಹಾವೇರಿಯಲ್ಲಿ 119 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ Apply ಮಾಡಿ

Government Job: ಹಾವೇರಿಯಲ್ಲಿ 119 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ Apply ಮಾಡಿ

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊಬೈಲ್​ ನಂಬರ್ 9449843198 ಗೆ ಕರೆ ಮಾಡಿ.

  • Share this:

    DHFWS Haveri Recruitment 2022: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Haveri) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 119 ನರ್ಸ್​, ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ(Apply) ಸಲ್ಲಿಸಬಹುದು. ನವೆಂಬರ್ 07ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಹೆಚ್ಚಿನ ಮಾಹಿತಿಗಾಗಿ haveri.nic.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ
    ಹುದ್ದೆಯ ಹೆಸರುನರ್ಸ್​, ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್
    ಒಟ್ಟು ಹುದ್ದೆ119
    ವಿದ್ಯಾರ್ಹತೆಬಿ.ಎಸ್ಸಿ ನರ್ಸಿಂಗ್
    ವೇತನನಿಯಮಾನುಸಾರ
    ಸ್ಥಳಹಾವೇರಿ
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ07/11/2022
    ಅರ್ಜಿ ಸಲ್ಲಿಸಲು ಕೊನೆ ದಿನ17/11/2022


    ಹುದ್ದೆಯ ಮಾಹಿತಿ:
    ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್- 17
    ನರ್ಸ್​- 82
    ಆಸಾ ಸೂಪರ್​ವೈಸರ್-5
    ಆಯುಷ್ ಮೆಡಿಕಲ್ ಆಫೀಸರ್-3
    ಆಪ್ತ್ಲಾಮಿಕ್ ಅಸಿಸ್ಟೆಂಟ್/ಫಾರ್ಮಾಸಿಸ್ಟ್​ (RBSK)-2
    ಡಯೆಟ್ ಕೌನ್ಸಲರ್-1
    ಸಿವಿಲ್ ಎಂಜಿನಿಯರ್-1
    ಬಯೋಮೆಡಿಕಲ್ ಎಂಜಿನಿಯರ್-1
    ಪಂಚಕರ್ಮ ಥೆರಪಿಸ್ಟ್​-1
    ಪುರುಷ ಹೆಲ್ತ್​ ವರ್ಕರ್(NUHM) ಫಾರ್ಮಾಸಿಸ್ಟ್​-1
    ಡೆಂಟಲ್ ಹೈಜೀನಿಸ್ಟ್​-1
    ಡೆಂಟಲ್ ಟೆಕ್ನಿಷಿಯನ್-1
    ಆಡಿಯೋಮೆಟ್ರಿಕ್ ಅಸಿಸ್ಟೆಂಟ್-1
    ಇನ್​​ಸ್ಟ್ರಕ್ಟರ್ ಫಾರ್ ಇಯರಿಂಗ್ ಇಂಪೇರ್​ಮೆಂಟ್ ಚಿಲ್ಡ್ರನ್-1
    ಇಎನ್​ಟಿ ಸ್ಪೆಷಲಿಸ್ಟ್​-1


    ಇದನ್ನೂ ಓದಿ: Walk-in-Interview: ವಿಕಾಸಸೌಧದ ಕೊಠಡಿ ಸಂಖ್ಯೆ 135ರಲ್ಲಿ ನಡೆಯುತ್ತಿದೆ ಸಂದರ್ಶನ; ಅಭ್ಯರ್ಥಿಗಳು ಈಗಲೇ ಹೋಗಿ


    ವಿದ್ಯಾರ್ಹತೆ:
    ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್- ಕರ್ನಾಟಕ ನರ್ಸಿಂಗ್ ಕೌನ್ಸಿಲ್​​ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
    ನರ್ಸ್​- ಕರ್ನಾಟಕ ನರ್ಸಿಂಗ್ ಕೌನ್ಸಿಲ್​​ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು, ಜಿಎನ್​ಎಂ ಟ್ರೇನಿಂಗ್ ಆಗಿರಬೇಕು.
    ಆಸಾ ಸೂಪರ್​ವೈಸರ್-GNM/INM/B.Sc ನರ್ಸಿಂಗ್, ಸಾರ್ವಜನಿಕ ಆರೋಗ್ಯದಲ್ಲಿ ಡಿಪ್ಲೊಮಾ, ಪದವಿ, ಸಮಾಜ ಕಾರ್ಯ/ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
    ಆಯುಷ್ ಮೆಡಿಕಲ್ ಆಫೀಸರ್-BAMS, MBBS
    ಆಪ್ತ್ಲಾಮಿಕ್ ಅಸಿಸ್ಟೆಂಟ್/ಫಾರ್ಮಾಸಿಸ್ಟ್​ (RBSK)- ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಸಹಾಯಕರಾಗಿ ಡಿಪ್ಲೊಮಾ, ಬಿ.ಫಾರ್ಮಾ, ಎನ್​ಪಿಸಿಬಿ ಟ್ರೇನಿಂಗ್,
    ಡಯೆಟ್ ಕೌನ್ಸಲರ್-ಪೌಷ್ಟಿಕಾಂಶ/ಗೃಹ ವಿಜ್ಞಾನದಲ್ಲಿ ಬಿ.ಎಸ್ಸಿ, ಬಿ.ಎ
    ಸಿವಿಲ್ ಎಂಜಿನಿಯರ್- ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಬಯೋಮೆಡಿಕಲ್ ಎಂಜಿನಿಯರ್-ಬಯೋಮೆಡಿಕಲ್ ಇಂಜಿನಿಯರ್/ಮೆಡಿಕಲ್ ಎಲೆಕ್ಟ್ರಾನಿಕ್ಸ್/ಬಯೋಮೆಡಿಕಲ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ B.E ಅಥವಾ B.Tech, ಬಯೋಮೆಡಿಕಲ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ M.Sc
    ಪಂಚಕರ್ಮ ಥೆರಪಿಸ್ಟ್​-ಯೋಗ ಮತ್ತು ಹರ್ಬಲ್ ಮೆಡಿಸಿನ್‌ನಲ್ಲಿ B.Sc, ಮಸಾಜಿಸ್ಟ್ ತರಬೇತಿ, ಜನರಲ್ ನರ್ಸಿಂಗ್ ಕೋರ್ಸ್, ಡಿಪ್ಲೊಮಾ, B.Sc ಇನ್ ನರ್ಸಿಂಗ್
    ಪುರುಷ ಹೆಲ್ತ್​ ವರ್ಕರ್(NUHM) ಫಾರ್ಮಾಸಿಸ್ಟ್​-ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ ಇನ್ ಹೆಲ್ತ್ ಇನ್‌ಸ್ಪೆಕ್ಟರ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತರಬೇತಿ
    ಡೆಂಟಲ್ ಹೈಜೀನಿಸ್ಟ್​-ಪಿಯುಸಿ, ಡಿಪ್ಲೊಮಾ ಇನ್ ಡೆಂಟಲ್ ಹೈಜೀನಿಸ್ಟ್
    ಡೆಂಟಲ್ ಟೆಕ್ನಿಷಿಯನ್-ಪಿಯುಸಿ ವಿಜ್ಞಾನ, ಡಿಪ್ಲೊಮಾ ಇನ್ ಡೆಂಟಲ್ ಟೆಕ್ನಿಷಿಯನ್
    ಆಡಿಯೋಮೆಟ್ರಿಕ್ ಅಸಿಸ್ಟೆಂಟ್-ಡಿಪ್ಲೊಮಾ, DHLS
    ಇನ್​​ಸ್ಟ್ರಕ್ಟರ್ ಫಾರ್ ಇಯರಿಂಗ್ ಇಂಪೇರ್​ಮೆಂಟ್ ಚಿಲ್ಡ್ರನ್-ಡಿಪ್ಲೊಮಾ, ಯಂಗ್ ಕಿವುಡ ಮತ್ತು ಶ್ರವಣ ನ್ಯೂನತೆಯ ತರಬೇತಿ
    ಇಎನ್​ಟಿ ಸ್ಪೆಷಲಿಸ್ಟ್​-ಡಿಪ್ಲೊಮಾ, ENT ನಲ್ಲಿ M.S


    ಅನುಭವ
    ಆಶಾ ಸೂಪರ್​ವೈಸರ್-ಅಭ್ಯರ್ಥಿಗಳು 2-3 ವರ್ಷ ತರಬೇತಿ ಅನುಭವ ಹೊಂದಿರಬೇಕು.
    ಸಿವಿಲ್ ಎಂಜಿನಿಯರ್, ಬಯೋಮೆಡಿಕಲ್ ಎಂಜಿನಿಯರ್- ಅಭ್ಯರ್ಥಿಗಳು ಆಸ್ಪತ್ರೆಯಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
    ಡೆಂಟಲ್ ಹೈಜೀನಿಸ್ಟ್​, ಡೆಂಟಲ್ ಟೆಕ್ನಿಷಿಯನ್- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.


    ವಯೋಮಿತಿ:
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಹಾವೇರಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DHFWS ಹಾವೇರಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.


    ವಯೋಮಿತಿ ಸಡಿಲಿಕೆ:
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಹಾವೇರಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Government Job: ಬೆಂಗಳೂರಿನಲ್ಲಿ JRF ಹುದ್ದೆ ಖಾಲಿ ಇದೆ, ತಿಂಗಳಿಗೆ 31,000 ಸಂಬಳ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 17, 2022ಕ್ಕೆ ಮುನ್ನ ಕಳುಹಿಸಬೇಕು.


    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
    ಜಿಲ್ಲಾ ಯೋಜನಾ ನಿರ್ವಹಣಾ ಘಟಕ
    ರಾಷ್ಟ್ರೀಯ ಆರೋಗ್ಯ ಅಭಿಯಾನ ಬಿ ಬ್ಲಾಕ್
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಧಿಕಾರಿಗಳ ಕಚೇರಿ ಆವರಣ
    ಜಿಲ್ಲಾ ಆಡಳಿತ ಭವನ, ದೇವಗಿರಿ
    ಹಾವೇರಿ-581110


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 17/11/2022


    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊಬೈಲ್​ ನಂಬರ್ 9449843198 ಗೆ ಕರೆ ಮಾಡಿ.

    Published by:Latha CG
    First published: