• Home
  • »
  • News
  • »
  • jobs
  • »
  • Government Job: ಬಿಎಸ್ಸಿ ನರ್ಸಿಂಗ್ ಆದವರಿಗೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಹಾಕಲು ಇವತ್ತೇ ಕೊನೆ ದಿನ

Government Job: ಬಿಎಸ್ಸಿ ನರ್ಸಿಂಗ್ ಆದವರಿಗೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಹಾಕಲು ಇವತ್ತೇ ಕೊನೆ ದಿನ

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ಖಾಲಿ ಇರುವ 119 ನರ್ಸ್​, ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇವತ್ತೇ ಕೊನೆಯ ದಿನವಾಗಿದೆ. ನವೆಂಬರ್ 07ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.

  • News18 Kannada
  • Last Updated :
  • Haveri, India
  • Share this:

    DHFWS Haveri Recruitment 2022: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Haveri)ಯಲ್ಲಿ ಖಾಲಿ ಇರುವ 119 ನರ್ಸ್​, ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇವತ್ತೇ ಕೊನೆಯ ದಿನವಾಗಿದೆ. ನವೆಂಬರ್ 07ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗಾಗಿ haveri.nic.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ
    ಹುದ್ದೆಯ ಹೆಸರುನರ್ಸ್​, ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್
    ಒಟ್ಟು ಹುದ್ದೆ119
    ವಿದ್ಯಾರ್ಹತೆಬಿ.ಎಸ್ಸಿ ನರ್ಸಿಂಗ್
    ವೇತನನಿಯಮಾನುಸಾರ
    ಸ್ಥಳಹಾವೇರಿ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ07/11/2022
    ಅರ್ಜಿ ಸಲ್ಲಿಸಲು ಕೊನೆ ದಿನ17/11/2022 (ಇಂದು)


    ಹುದ್ದೆಯ ಮಾಹಿತಿ:
    ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್- 17
    ನರ್ಸ್​- 82
    ಆಸಾ ಸೂಪರ್​ವೈಸರ್-5
    ಆಯುಷ್ ಮೆಡಿಕಲ್ ಆಫೀಸರ್-3
    ಆಪ್ತ್ಲಾಮಿಕ್ ಅಸಿಸ್ಟೆಂಟ್/ಫಾರ್ಮಾಸಿಸ್ಟ್​ (RBSK)-2
    ಡಯೆಟ್ ಕೌನ್ಸಲರ್-1
    ಸಿವಿಲ್ ಎಂಜಿನಿಯರ್-1
    ಬಯೋಮೆಡಿಕಲ್ ಎಂಜಿನಿಯರ್-1
    ಪಂಚಕರ್ಮ ಥೆರಪಿಸ್ಟ್​-1
    ಪುರುಷ ಹೆಲ್ತ್​ ವರ್ಕರ್(NUHM) ಫಾರ್ಮಾಸಿಸ್ಟ್​-1
    ಡೆಂಟಲ್ ಹೈಜೀನಿಸ್ಟ್​-1
    ಡೆಂಟಲ್ ಟೆಕ್ನಿಷಿಯನ್-1
    ಆಡಿಯೋಮೆಟ್ರಿಕ್ ಅಸಿಸ್ಟೆಂಟ್-1
    ಇನ್​​ಸ್ಟ್ರಕ್ಟರ್ ಫಾರ್ ಇಯರಿಂಗ್ ಇಂಪೇರ್​ಮೆಂಟ್ ಚಿಲ್ಡ್ರನ್-1
    ಇಎನ್​ಟಿ ಸ್ಪೆಷಲಿಸ್ಟ್​-1


    ಇದನ್ನೂ ಓದಿ: NESAC Recruitment 2022: ತಿಂಗಳಿಗೆ 1.77 ಲಕ್ಷ ಸಂಬಳ- ಬಿಇ/ ಬಿ ಟೆಕ್ ಆದವರಿಗೆ ಇಲ್ಲಿದೆ ಬಂಪರ್ ಉದ್ಯೋಗ


    ವಿದ್ಯಾರ್ಹತೆ:
    ಪ್ರೈಮರಿ ಹೆಲ್ತ್​ ಸೇಫ್ಟಿ ಆಫೀಸರ್- ಕರ್ನಾಟಕ ನರ್ಸಿಂಗ್ ಕೌನ್ಸಿಲ್​​ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
    ನರ್ಸ್​- ಕರ್ನಾಟಕ ನರ್ಸಿಂಗ್ ಕೌನ್ಸಿಲ್​​ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು, ಜಿಎನ್​ಎಂ ಟ್ರೇನಿಂಗ್ ಆಗಿರಬೇಕು.
    ಆಸಾ ಸೂಪರ್​ವೈಸರ್-GNM/INM/B.Sc ನರ್ಸಿಂಗ್, ಸಾರ್ವಜನಿಕ ಆರೋಗ್ಯದಲ್ಲಿ ಡಿಪ್ಲೊಮಾ, ಪದವಿ, ಸಮಾಜ ಕಾರ್ಯ/ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
    ಆಯುಷ್ ಮೆಡಿಕಲ್ ಆಫೀಸರ್-BAMS, MBBS
    ಆಪ್ತ್ಲಾಮಿಕ್ ಅಸಿಸ್ಟೆಂಟ್/ಫಾರ್ಮಾಸಿಸ್ಟ್​ (RBSK)- ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಸಹಾಯಕರಾಗಿ ಡಿಪ್ಲೊಮಾ, ಬಿ.ಫಾರ್ಮಾ, ಎನ್​ಪಿಸಿಬಿ ಟ್ರೇನಿಂಗ್,
    ಡಯೆಟ್ ಕೌನ್ಸಲರ್-ಪೌಷ್ಟಿಕಾಂಶ/ಗೃಹ ವಿಜ್ಞಾನದಲ್ಲಿ ಬಿ.ಎಸ್ಸಿ, ಬಿ.ಎ
    ಸಿವಿಲ್ ಎಂಜಿನಿಯರ್- ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಬಯೋಮೆಡಿಕಲ್ ಎಂಜಿನಿಯರ್-ಬಯೋಮೆಡಿಕಲ್ ಇಂಜಿನಿಯರ್/ಮೆಡಿಕಲ್ ಎಲೆಕ್ಟ್ರಾನಿಕ್ಸ್/ಬಯೋಮೆಡಿಕಲ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ B.E ಅಥವಾ B.Tech, ಬಯೋಮೆಡಿಕಲ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ M.Sc
    ಪಂಚಕರ್ಮ ಥೆರಪಿಸ್ಟ್​-ಯೋಗ ಮತ್ತು ಹರ್ಬಲ್ ಮೆಡಿಸಿನ್‌ನಲ್ಲಿ B.Sc, ಮಸಾಜಿಸ್ಟ್ ತರಬೇತಿ, ಜನರಲ್ ನರ್ಸಿಂಗ್ ಕೋರ್ಸ್, ಡಿಪ್ಲೊಮಾ, B.Sc ಇನ್ ನರ್ಸಿಂಗ್
    ಪುರುಷ ಹೆಲ್ತ್​ ವರ್ಕರ್(NUHM) ಫಾರ್ಮಾಸಿಸ್ಟ್​-ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ ಇನ್ ಹೆಲ್ತ್ ಇನ್‌ಸ್ಪೆಕ್ಟರ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತರಬೇತಿ
    ಡೆಂಟಲ್ ಹೈಜೀನಿಸ್ಟ್​-ಪಿಯುಸಿ, ಡಿಪ್ಲೊಮಾ ಇನ್ ಡೆಂಟಲ್ ಹೈಜೀನಿಸ್ಟ್
    ಡೆಂಟಲ್ ಟೆಕ್ನಿಷಿಯನ್-ಪಿಯುಸಿ ವಿಜ್ಞಾನ, ಡಿಪ್ಲೊಮಾ ಇನ್ ಡೆಂಟಲ್ ಟೆಕ್ನಿಷಿಯನ್
    ಆಡಿಯೋಮೆಟ್ರಿಕ್ ಅಸಿಸ್ಟೆಂಟ್-ಡಿಪ್ಲೊಮಾ, DHLS
    ಇನ್​​ಸ್ಟ್ರಕ್ಟರ್ ಫಾರ್ ಇಯರಿಂಗ್ ಇಂಪೇರ್​ಮೆಂಟ್ ಚಿಲ್ಡ್ರನ್-ಡಿಪ್ಲೊಮಾ, ಯಂಗ್ ಕಿವುಡ ಮತ್ತು ಶ್ರವಣ ನ್ಯೂನತೆಯ ತರಬೇತಿ
    ಇಎನ್​ಟಿ ಸ್ಪೆಷಲಿಸ್ಟ್​-ಡಿಪ್ಲೊಮಾ, ENT ನಲ್ಲಿ M.S




    ಅನುಭವ
    ಆಶಾ ಸೂಪರ್​ವೈಸರ್-ಅಭ್ಯರ್ಥಿಗಳು 2-3 ವರ್ಷ ತರಬೇತಿ ಅನುಭವ ಹೊಂದಿರಬೇಕು.
    ಸಿವಿಲ್ ಎಂಜಿನಿಯರ್, ಬಯೋಮೆಡಿಕಲ್ ಎಂಜಿನಿಯರ್- ಅಭ್ಯರ್ಥಿಗಳು ಆಸ್ಪತ್ರೆಯಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
    ಡೆಂಟಲ್ ಹೈಜೀನಿಸ್ಟ್​, ಡೆಂಟಲ್ ಟೆಕ್ನಿಷಿಯನ್- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.


    ವಯೋಮಿತಿ:
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಹಾವೇರಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DHFWS ಹಾವೇರಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.


    ಇದನ್ನೂ ಓದಿ: NIMHANS Recruitment 2022: ನಿಮ್ಹಾನ್ಸ್​​ನಲ್ಲಿರುವ 47,000 ಸಂಬಳದ ಉದ್ಯೋಗಕ್ಕೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ


    ವಯೋಮಿತಿ ಸಡಿಲಿಕೆ:
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಹಾವೇರಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಇವತ್ತೇ ಕಳುಹಿಸಬೇಕು.


    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
    ಜಿಲ್ಲಾ ಯೋಜನಾ ನಿರ್ವಹಣಾ ಘಟಕ
    ರಾಷ್ಟ್ರೀಯ ಆರೋಗ್ಯ ಅಭಿಯಾನ ಬಿ ಬ್ಲಾಕ್
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಧಿಕಾರಿಗಳ ಕಚೇರಿ ಆವರಣ
    ಜಿಲ್ಲಾ ಆಡಳಿತ ಭವನ, ದೇವಗಿರಿ
    ಹಾವೇರಿ-581110

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 17/11/2022


    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊಬೈಲ್​ ನಂಬರ್ 9449843198 ಗೆ ಕರೆ ಮಾಡಿ.

    Published by:Latha CG
    First published: