Google Hiring Alert: ಗೂಗಲ್​ನಲ್ಲಿ ಫ್ರೆಶರ್ಸ್​ಗೆ ಉದ್ಯೋಗಾವಕಾಶ; ವಾರ್ಷಿಕ 10 ಲಕ್ಷ ರೂ ಪ್ಯಾಕೇಜ್​

ಮಹಾರಾಷ್ಟ್ರದ ಪುಣೆ ಕಚೇರಿಯಲ್ಲಿ ಈ ನೇಮಕಾತಿ ನಡೆಯಲಿದೆ. ಟೆಕ್ನಿಕಲ್​ ಸಲ್ಯೂಷನ್​ ಇಂಜಿನಿಯರ್ (Technical Solutions Engineer) ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಐಟಿ ದೈತ್ಯ ಗೂಗಲ್​ (Google India) ಭಾರತದಲ್ಲಿ ನೇಮಕಾತಿಗೆ ಮುಂದಾಗಿದೆ. ಮಹಾರಾಷ್ಟ್ರದ ಪುಣೆ ಕಚೇರಿಯಲ್ಲಿ ಈ ನೇಮಕಾತಿ ನಡೆಯಲಿದೆ. ಟೆಕ್ನಿಕಲ್​ ಸಲ್ಯೂಷನ್​ ಇಂಜಿನಿಯರ್ (Technical Solutions Engineer) ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಬಿಸಿಎ, ಬಿಎಸ್ಸಿ ಮತ್ತು ಬಿಇ ಪದವಿ ಹೊಂದಿರುವ ಹೊಸಬರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ 2020, 21 ಮತ್ತು 2022ರ ಬ್ಯಾಚ್​ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಕೆಳಕಂಡ ಲಿಂಕ್​ ಮೂಲಕ ಸಲ್ಲಿಸಬಹುದಾಗಿದೆ.

    ಗೂಗಲ್​​ನ ಗೂಗಲ್​ ಕ್ಲೌಡ್​ಗೆ ಈ ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಗೂಗಲ್​ ಇಂಡಿಯಾ
    ಹುದ್ದೆಟೆಕ್ನಿಕಲ್​ ಸಲ್ಯೂಷನ್​ ಇಂಜಿನಿಯರ್​ (ಗೂಗಲ್​ ಕ್ಲೌಡ್​​​)
    ಒಟ್ಟು ಹುದ್ದೆನಿಗದಿ ಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಪುಣೆ
    ವೇತನ10 ಲಕ್ಷ ರೂ ವಾರ್ಷಿಕ ವೇತನ

    ಶೈಕ್ಷಣಿಕ ಅರ್ಹತೆ: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
    Java, C, C++, Python, Shell, Perl, JavaScript ಹಾಗೂ ಕೋಡ್​ ರಿಡೀಂಗ್​ ಮತ್ತು ಡೀಬಗ್​ ಅನುಭವ ಹೊಂದಿರಬೇಕು.
    ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಸಲಹಾ ಕಾರ್ಯದ ಅನುಭವ ಹೊಂದಿರಬೇಕು.

    ಇದನ್ನು ಓದಿ: ಗ್ರಾಜುಯೇಟ್​ ಇಂಜಿನಿಯರ್​ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ 40 ಸಾವಿರ ರೂ ವೇತನ

    ಹುದ್ದೆ ಜವಾಬ್ದಾರಿ
    ಕ್ಲೌಡ್ ಆಧಾರಿತ ಸರ್ವರ್‌ಲೆಸ್, ಸ್ಟೋರೇಜ್ ಮತ್ತು ಡೆವಲಪರ್ ತಂತ್ರಜ್ಞಾನಗಳ ಅನುಭವ.
    ವೆಬ್ ಅಥವಾ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ
    ಅಪ್ಲಿಕೇಶನ್ ಎಂಜಿನ್, ಮುಕ್ತ ಮೂಲ ಸಾಫ್ಟ್‌ವೇರ್, ಕ್ಲೌಡ್ ನೆಟ್‌ವರ್ಕಿಂಗ್ ಸಲ್ಯೂಷನ್​ ಮಾಡುವುದು.
    ಡೇಟಾಬೇಸ್, ಡೇಟಾಬೇಸ್ ಸ್ಕೀಮಾ ವಿನ್ಯಾಸ
    ಲಿನಕ್ಸ್/ಯುನಿಕ್ಸ್ ಅಥವಾ ವಿಂಡೋಸ್ ಸಿಸ್ಟಮ್‌, ನೆಟ್​​ವರ್ಕ್​ ನಿರ್ವಹಣೆ ಜ್ಞಾನ ಹೊಂದಿರಬೇಕು

    ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ

    ಅನುಭವ: ಫ್ರೆಶರ್ಸ್​

    ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಸಂದರ್ಶನ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: google.com

    ಇದನ್ನು ಓದಿ: ಸೌತ್​ ಇಂಡಿಯನ್​ ಬ್ಯಾಂಕ್​ನಲ್ಲಿ ಭರ್ಜರಿ ಅವಕಾಶ; ಪದವಿ ಆದವರಿಗೆ ಅವಕಾಶ

    ಅರ್ಜಿ ಸಲ್ಲಿಸುವ ವಿಧಾನ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ

    - ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    ಅರ್ಜಿ ಸಲ್ಲಿಸುವವರು ಈ ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.
    Published by:Seema R
    First published: