4 Day Work 3 Days Off: ಉದ್ಯೋಗಿಗಳಿಗೆ ಗುಡ್​​​ನ್ಯೂಸ್​​.. ಇನ್ಮುಂದೆ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ!

enjoy long weekend: 3 ದಿನಗಳ ಕಾಲ ರಜೆ ನೀಡುವುದು ಕಾರ್ಮಿಕರನ್ನು ಸಂತೋಷವಾಗಿ ಇಟ್ಟಿದೆಯಂತೆ. ಹೆಚ್ಚು ಕೆಲಸ ಮಾಡಲು ಪ್ರೇರೇಪಿಸಿದೆಯಂತೆ. ಈ ಹಿನ್ನೆಲೆಯಲ್ಲಿ ಮುಂಬೈ ಕಚೇರಿಯಲ್ಲಿ 3 ದಿನ ರಜೆ ಪದ್ಧತಿಯನ್ನು ಶಾಶ್ವತವಾಗಿಸುವ ಬಗ್ಗೆ ಕಂಪನಿ ಅಭಿಪ್ರಾಯಪಟ್ಟಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಟಿ ಫೀಲ್ಡ್​​​​​ ಹೊರತುಪಡಿಸಿ ಎಲ್ಲಾ ವಲಯಗಳಲ್ಲೂ ಇಂದಿಗೂ ಭಾನುವಾರ ಒಂದೇ ದಿನ ವಾರದ ರಜೆಯಿದೆ. ಐಟಿ ವಲಯದಲ್ಲಿ ಶನಿವಾರ-ಭಾನುವಾರ ಎರಡು ದಿನಗಳ ಕಾಲ ರಜೆ ನೀಡಲಾಗುತ್ತಿದೆ. ಈಗ ಭಾರತೀಯ ಐಟಿ ವಲಯದಲ್ಲಿ (Indian IT sector) ಕೆಲಸ ಮಾಡುವ ವೃತ್ತಿಪರರಿಗೆ ಗುಡ್​​ನ್ಯೂಸ್​ ಸಿಕ್ಕಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವರು ಇನ್ಮುಂದೆ ಲಾಂಗ್​ ವೀಕೆಂಡ್​ ಎಂಜಾಯ್​ ಮಾಡಬಹುದು. ವಾರದಲ್ಲಿ ಬರೋಬ್ಬರಿ 3 ದಿನಗಳ ಕಾಲ ರಜೆ ನೀಡಲಾಗುವುದು.

TAC ಸೆಕ್ಯುರಿಟಿ ಉದ್ಯೋಗಿಗಳಿಗೆ ಬಂಪರ್​ 

ಸೈಬರ್ ಸೆಕ್ಯುರಿಟಿ ಕಂಪನಿ TAC ಸೆಕ್ಯುರಿಟಿ (cybersecurity company TAC Security )ಇನ್ಮುಂದೆ ತನ್ನ ಉದ್ಯೋಗಿಗಳಿಗೆ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆಯನ್ನು ಘೋಷಿಸಿದೆ. ಟಿಎಸಿ ಸೆಕ್ಯುರಿಟಿ ಕಳೆದ ಏಳು ತಿಂಗಳುಗಳಿಂದ ಶುಕ್ರವಾರದಂದು ತನ್ನ ಮುಂಬೈ ಕಚೇರಿಯನ್ನು ಮುಚ್ಚುತ್ತಿದೆ. ತನ್ನ ಉದ್ಯೋಗಿಗಳಿಗೆ ದೀರ್ಘ ವಾರಾಂತ್ಯವನ್ನು ಆನಂದಿಸಲು ಅವಕಾಶ ಮಾಡಿ ಕೊಟ್ಟಿದೆ. ಇದು ಉತ್ತಮ ಉತ್ಪಾದಕತೆಗೆ ಕಾರಣವಾಗಿದೆ ಎಂದು ಐಟಿ ಕಂಪನಿ ಹೇಳಿಕೊಂಡಿದೆ.

ಲಾಂಗ್​ ವೀಕೆಂಡ್​​ನಿಂದ ಅನುಕೂಲಗಳಿವೆ

3 ದಿನಗಳ ಕಾಲ ರಜೆ ನೀಡುವುದು ಕಾರ್ಮಿಕರನ್ನು ಸಂತೋಷವಾಗಿ ಇಟ್ಟಿದೆಯಂತೆ. ಹೆಚ್ಚು ಕೆಲಸ ಮಾಡಲು ಪ್ರೇರೇಪಿಸಿದೆಯಂತೆ. ಈ ಹಿನ್ನೆಲೆಯಲ್ಲಿ ಮುಂಬೈ ಕಚೇರಿಯಲ್ಲಿ 3 ದಿನ ರಜೆ ಪದ್ಧತಿಯನ್ನು ಶಾಶ್ವತವಾಗಿಸುವ ಬಗ್ಗೆ ಕಂಪನಿ ಅಭಿಪ್ರಾಯಪಟ್ಟಿದೆ. TAC ಸೆಕ್ಯುರಿಟಿ ಆಂತರಿಕ ಸಮೀಕ್ಷೆಯನ್ನು ನಡೆಸಿದೆ. ತಂಡದಲ್ಲಿ 80% ಉದ್ಯೋಗಿಗಳು ವಾರದ ನಾಲ್ಕು ದಿನಗಳು ದೀರ್ಘಾವಧಿಯವರೆಗೆ ಕೆಲಸ ಮಾಡಲು ಸಿದ್ಧವಾರಿದ್ದಾರೆ. ಜೊತೆಗೆ ದೀರ್ಘ ವಾರಾಂತ್ಯದಲ್ಲಿ ತಮ್ಮ ವೈಯಕ್ತಿಕ ಬದ್ಧತೆಗಳು ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸಲು ಸಿದ್ಧವಾಗಿದ್ದಾರೆ ಎಂದು  ಸಮೀಕ್ಷೆಯಿಂದ ತಿಳಿದು ಬಂದಿದೆ. ಪ್ರಕಟಣೆಯ ನಂತರ, ಅನೇಕ ಉದ್ಯೋಗಿಗಳು ಸ್ಪಷ್ಟವಾಗಿ ವಿವಿಧ ಕೋರ್ಸ್‌ಗಳನ್ನು ಕಲಿಯಲು ಮುಂದಾಗಿದ್ದಾರಂತೆ.

ಇದನ್ನೂ ಓದಿ: Create a Perfect Resume: ಬೇಗನೇ ಕೆಲಸ ಸಿಗಬೇಕು ಅಂದ್ರೆ ನಿಮ್ಮ ರೆಸ್ಯೂಮ್​ ಹೀಗಿರಲಿ..!

4 ದಿನ ಕೆಲಸದ ಟ್ರೆಂಡ್​ ಶುರುವಾಗಿದೆ

3 ದಿನಗಳ ರಜೆ ಉದ್ಯೋಗಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಿದೆ ಎಂದು ಟಿಎಸಿ ಸೆಕ್ಯುರಿಟಿಯ ಸಂಸ್ಥಾಪಕ ಮತ್ತು ಸಿಇಒ ತೃಶ್ನೀತ್ ಅರೋರಾ ಹೇಳಿದದ್ದಾರೆ. ಕೊರೊನಾ ನಂತರ ವಿಶ್ವದಾದ್ಯಂತ ಕಂಪನಿಗಳು ನಾಲ್ಕು ದಿನಗಳ ಕೆಲಸದ ವಾರವನ್ನು ಪ್ರತಿಪಾದಿಸುತ್ತಿವೆ. ಅವುಗಳಲ್ಲಿ ಕೆಲವು, ವಿಶೇಷವಾಗಿ ನಾರ್ಡಿಕ್ ಪ್ರದೇಶದಲ್ಲಿ, ಈ ಕ್ರಮವನ್ನು ಜಾರಿಗೆ ತಂದಿವೆ. ಹೊಸ ಕಾರ್ಮಿಕ ಸಂಹಿತೆಯು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಈಗಿನ ಐದು ದಿನಗಳ ಬದಲು ನಾಲ್ಕು ದಿನಗಳ ಕಾಲ ಕೆಲಸ ಮಾಡಲು ಅವಕಾಶ ನೀಡುತ್ತದೆ. ಉದ್ಯೋಗಿಗಳು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೆ ಇದು ಪರಿಣಾಮಕಾರಿಯಾಗಿರುತ್ತದೆ.

ಸದ್ಯದಲ್ಲೇ ಹೊಸ ಕಾರ್ಮಿಕ ಕಾನೂನು

ಹೊಸ ಕಾರ್ಮಿಕ ಕಾನೂನಿನ ಪ್ರಕಾರ, ನೌಕರರ ಕೆಲಸದ ಸಮಯವನ್ನು 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲಾಗುವುದು.ಹೊಸ ಕಾರ್ಮಿಕ ಕಾನೂನು ಜಾರಿಯಾದ ನಂತರ ನೌಕರರ ಕೈಯಲ್ಲಿರುವ ಸಂಬಳವೂ ಬದಲಾಗುತ್ತದೆ. ಕರಡು ಕಾರ್ಮಿಕ ಕಾನೂನಿನ ಪ್ರಕಾರ, ನೌಕರರ ಮೂಲ ವೇತನವು ಒಟ್ಟು ಸಂಬಳದ 50% ಅಥವಾ ಹೆಚ್ಚಿನದಾಗಿರುತ್ತದೆ.
Published by:Kavya V
First published: