ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation)ದಲ್ಲಿ ಖಾಲಿ ಇರುವ ಅನೇಕ ಹುದ್ದೆಗಳ ನೇರ ನೇಮಕಾತಿಗೆ(Direct Recruitment) ಮರುಚಾಲನೆ ನೀಡುವಂತೆ ಸಂಸ್ಥೆಯು ಸರ್ಕಾರದ ಅನುಮತಿ ಕೋರಿದೆ. ಹೀಗಾಗಿ ಇದು ಉದ್ಯೋಗಾಂಕ್ಷಿಗಳಿಗೆ(Job Seekers) ಸಿಹಿಸುದ್ದಿಯಾಗಿದೆ. ಒಟ್ಟು 726 ತಾಂತ್ರಿಕ ಸಹಾಯಕ, 200 ಕರಾಸಾ ಪೇದೆ ಹಾಗೂ 3,745 ಚಾಲನಾ ಸಿಬ್ಬಂದಿ ಹುದ್ದೆ ಸೇರಿ ಒಟ್ಟು 4600ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹೀಗಾಗಿ ಈ ಹುದ್ದೆಗಳ ನೇರ ನೇಮಕಾತಿಗೆ ಮರುಚಾಲನೆ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸರ್ಕಾರ(Government )ವನ್ನು ಕೋರಿದೆ.
ಕೊರೋನಾ ಕಾರಣದಿಂದಾಗಿ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡವಂತೆ ಸರ್ಕಾರವನ್ನು ಕೋರಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿಯೋಗಿ ಕಳಸದ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ: SBI Recruitment 2021: ತಿಂಗಳಿಗೆ ₹ 63,840 ಸಂಬಳ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ
ಹುದ್ದೆಯ ವಿವರ
ಹುದ್ದೆಯ ಹೆಸರು |
ಒಟ್ಟು ಹುದ್ದೆಗಳು |
ತಾಂತ್ರಿಕ ಸಹಾಯಕ |
726 |
ಕರಾಸಾ ಪೇದೆ |
200 |
ಚಾಲನಾ ಸಿಬ್ಬಂದಿ |
3745 |
ಒಟ್ಟು |
4600 ಹುದ್ದೆಗಳು |
ಈ ಮೊದಲು ಕೆಎಸ್ಆರ್ಟಿಸಿಯಲ್ಲಿ ಖಾಲಿ ಇರುವ 726 ತಾಂತ್ರಿಕ ಸಹಾಯಕ, 200 ಕರಾಸಾ ಪೇದೆ ಮತ್ತು 3,745 ಚಾಲನಾ ಸಿಬ್ಬಂದಿಯ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ತದನಂತರದಲ್ಲಿ ಕೋವಿಡ್-19 ಕಾರಣದಿಂದಾಗಿ ಈ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಈಗ ಈ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕೃತ ವೆಬ್ಸೈಟ್
www.ksrtcjobs.karnataka.gov.in ಗೆ ಭೇಟಿ ನೀಡಬಹುದು. ಈ ಕುರಿತು ಅನುಮತಿ ಬಂದ ಕೂಡಲೇ ಮೇಲ್ಕಂಡ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುವುದು ಎಂದು ಶಿವಯೋಗಿ ಕಳಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ