GIMS Gadag Recruitment: ಅಸಿಸ್ಟಂಟ್​ ಪ್ರೋಫೆಸರ್​ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಎಲ್‌ಎಂಒ, ಸಿಎಮ್‌ಒ ಸೇರಿದಂತೆ ಒಟ್ಟು 17 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (Gadag Institute of Medical Sciences)  ವಿವಿಧ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಎಲ್‌ಎಂಒ, ಸಿಎಮ್‌ಒ ಸೇರಿದಂತೆ ಒಟ್ಟು 17 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಗದಗದಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ವೈದ್ಯಕೀಯ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 10 ಆಗಿದೆ.

    ಸಂಸ್ಥೆಯ ಹೆಸರು: ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (GIMS ಗದಗ)
    ಹುದ್ದೆಯ ಹೆಸರು: ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಎಲ್‌ಎಂಒ, ಸಿಎಮ್‌ಒ
    ಹುದ್ದೆಗಳ ಸಂಖ್ಯೆ: 17
    ಉದ್ಯೋಗ ಸ್ಥಳ: ಗದಗ - ಕರ್ನಾಟಕ
    ಸಂಬಳ: ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿಯಮಗಳ ಪ್ರಕಾರ




























    ಹುದ್ದೆಹುದ್ದೆ ಸಂಖ್ಯೆವಿಭಾಗ
    ಅಸೋಸಿಯೇಟ್ ಪ್ರೊಫೆಸರ್4ಅನಸ್ತೇಶಿಯ-3, ಡೆಂಟಿಸ್ಟ್​-1
    ಸಹಾಯಕ ಪ್ರಾಧ್ಯಾಪಕ8ಫಿಜಿಯಾಲಾಜಿ-1, ಬಯೋಕೆಮಿಸ್ಟಿ-1, ಮೈಕ್ರೋಬಯಾಲಜಿ-1, ಸ್ಕಿನ್-1, ಇಎನ್​ಟಿ-1, ಒಬಿಜಿ-1, ಸೈಕಿಯಾಟ್ರಿ-1, ಡೆಂಟಿಸ್ಟ್ರಿ-1
    ಎಲ್​ಎಂಒ 22ಕಮ್ಯೂನಿಟಿ ಮೆಡಿಸಿನ್​-2
    ಸಿಎಂಒ3ಕ್ಯಾಶುಲಟಿ

    ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿಯಮಗಳ ಪ್ರಕಾರ

    ವಯೋಮಿತಿ ಸಡಿಲಿಕೆ:
    ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿಯಮಗಳ ಪ್ರಕಾರ

    ಇದನ್ನು ಓದಿ: ಕನ್ಸಲ್ಟೇಂಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 65000 ರೂ ವೇತನ

    ಆಯ್ಕೆ ಪ್ರಕ್ರಿಯೆ
    ನೇರ ಸಂದರ್ಶನ

    ಅರ್ಜಿ ಸಲ್ಲಿಕೆ
    ಆಫ್​ಲೈನ್​

    ಅರ್ಜಿ ಶುಲ್ಕ: 500 ರೂ

    ಅರ್ಜಿ ಶುಲ್ಕ ಪಾವತಿ ವಿಧಾನ: ಡಿಮ್ಯಾಂಡ್​ ಡ್ರಾಫ್ಟ್​​

    ವಿಶೇಷ ಸೂಚನೆ:
    ಅಭ್ಯರ್ಥಿಗಳು ಅರ್ಜಿ ಜೊತೆ ನಿರ್ದೇಶಕರು, ಜಿಮ್ಸ್, ಗದಗ ಇವರ ಹೆಸರಿನಲ್ಲಿ 500ರೂ ಡಿಡಿಯನ್ನು ಆಗಸ್ಟ್​ 10ರ ಸಂಜೆ 4 ಗಂಟೆಯೊಳಗೆ ಈ ವಿಳಾಸಕ್ಕೆ ಖುದ್ದು ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ.

    ಅರ್ಜಿ ಸಲ್ಲಿಕೆ ವಿಳಾಸ
    ನಿರ್ದೇಶಕರು, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಲ್ಲಸಮುದ್ರ, ಗದಗ-582103

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25 ಜುಲೈ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: gimsgadag.karnataka.gov.in

    ಇದನ್ನು ಓದಿ: ಪಿಂಚಣಿ ನಿರ್ದೇಶನಾಲಯದಲ್ಲಿ ವಿವಿಧ ಪ್ರೋಗ್ರಾಮರ್​ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 90000 ರೂ ವೇತನ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ನೀಡಿ.  ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿದ ಬಳಿಕ ಮೇಲ್ಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕಿದೆ.

    ಬಳಿಕ ನೇರ ಸಂದರ್ಶನದ ವಿಳಾಸವನ್ನು ಜಿಮ್ಸ್​, ಗದಗ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು.
    Published by:Seema R
    First published: