FSSAI Recruitment 2021: ತಾಂತ್ರಿಕ ಅಧಿಕಾರಿಗಳು, ಹಿಂದಿ ಅನುವಾದಕರು ಹುದ್ದೆಗಳಿಗೆ ಅರ್ಜಿ ಆಹ್ವಾನ; ಆಸಕ್ತರು ನ.7ರೊಳಗೆ ಅರ್ಜಿ ಸಲ್ಲಿಸಿ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು FSSAI ನ ಅಧಿಕೃತ ವೆಬ್​ಸೈಟ್​ fssai.gov.in.ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

FSSAI

FSSAI

  • Share this:
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು(The Food Safety and Standard Authority of India -FSSAI) ಖಾಲಿ ಇರುವ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಖಾಲಿ ಇರುವ ಆಹಾರ ವಿಶ್ಲೇಷಕರು(food analysts), ತಾಂತ್ರಿಕ ಅಧಿಕಾರಿಗಳು(technical officers), ಹಿಂದಿ ಅನುವಾದಕರು(Hindi translators), ಕೇಂದ್ರೀಯ ಆಹಾರ ಸುರಕ್ಷತೆ ಅಧಿಕಾರಿಗಳು(central food safety officers -CFSO), ಅಸಿಸ್ಟೆಂಟ್(assistants), ಪರ್ಸನಲ್ ಅಸಿಸ್ಟೆಂಟ್(personal assistants) ಮತ್ತು ಐಟಿ ಅಸಿಸ್ಟೆಂಟ್(IT assistant ) ​​ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಹೊರಡಿಸಿದೆ.

ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ನೇರ ನೇಮಕಾತಿಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು 233 ಹುದ್ದೆಗಳು ಖಾಲಿ ಇದ್ದು, ಅಕ್ಟೋಬರ್ 13ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಲಿದೆ. ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 7, 2021 ಕೊನೆಯ ದಿನಾಂಕ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು FSSAI ನ ಅಧಿಕೃತ ವೆಬ್​ಸೈಟ್​ fssai.gov.in.ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

FSSAI Recruitment 2021: ಹುದ್ದೆಗಳ ಮಾಹಿತಿ



















































ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಆಹಾರ ವಿಶ್ಲೇಷಕ 4
ತಾಂತ್ರಿಕ ಅಧಿಕಾರಿ 125
ಕೇಂದ್ರೀಯ ಆಹಾರ ಸುರಕ್ಷತಾ ಅಧಿಕಾರಿ  37
ಅಸಿಸ್ಟೆಂಟ್ ಮ್ಯಾನೇಜರ್ ಐಟಿ  4
ಅಸಿಸ್ಟೆಂಟ್ ಮ್ಯಾನೇಜರ್  4
ಅಸಿಸ್ಟೆಂಟ್ 33
ಹಿಂದಿ ಅನುವಾದಕ  1
ಪರ್ಸನಲ್ ಅಸಿಸ್ಟೆಂಟ್  19
ಐಟಿ ಅಸಿಸ್ಟೆಂಟ್  3
ಜೂನಿಯರ್ ಅಸಿಸ್ಟೆಂಟ್ ಗ್ರೇಡ್-1  3
ಒಟ್ಟು  233



ಆಯ್ಕೆ ಪ್ರಕ್ರಿಯೆ ಹೇಗೆ?

  • ಲಿಖಿತ ಪರೀಕ್ಷೆ ಇರುತ್ತದೆ

  • ಸಂದರ್ಶನ/ ಕೌಶಲ್ಯ ಪರೀಕ್ಷೆ ಇರುತ್ತದೆ.

  • ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.


ಇದನ್ನೂ ಓದಿ:DRDO Recruitment 2021: ಮೈಸೂರಿನಲ್ಲಿ JRF & RA ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ಸಂಬಳ ₹54,000

ವಯೋಮಿತಿ:

  • ಆಹಾರ ವಿಶ್ಲೇಷಕ ಮತ್ತು ಜೂನಿಯರ್ ಅಸಿಸ್ಟೆಂಟ್​ ಗ್ರೇಡ್-1 ಹುದ್ದೆಗಳನ್ನು ಹೊರತುಪಡಿಸಿ, ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸವ ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು.

  • ಆಹಾರ ವಿಶ್ಲೇಷಕ- 35 ವರ್ಷ ಮೀರಿರಬಾರದು.

  • ಅಸಿಸ್ಟೆಂಟ್ ಗ್ರೇಡ್ 1- 25 ವರ್ಷ ಮೀರಿರಬಾರದು

  • ಎಸ್​ಸಿ & ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

  • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.


ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ FSSAI ನ ಅಧಿಕೃತ ವೆಬ್​ಸೈಟ್​ fssai.gov.in.ಗೆ ಭೇಟಿ ನೀಡಬೇಕು.

  • ಅಲ್ಲಿ "Jobs" ಟ್ಯಾಬ್ ಮೇಳೆ ಕ್ಲಿಕ್ ಮಾಡಬೇಕು. ಆಗ ಹೊಸ ವಿಂಡೋ ಓಪನ್ ಆಗುತ್ತದೆ.

  • ಅಭ್ಯರ್ಥಿ circular number-HR-12013/6/2021-HR-FSSAI [DR-04/2021] ಗೆ ಭೇಟಿ ನೀಡಿ, Apply Online ಮೇಲೆ ಕ್ಲಿಕ್ ಮಾಡಬೇಕು. ಅಕ್ಟೋಬರ್ 13ರಿಂದ ಅರ್ಜಿ ಹಾಕಲು ಲಿಂಕ್ ಆಕ್ಟಿವೇಟೆಡ್ ಆಗುತ್ತದೆ.

  • ಅಭ್ಯರ್ಥಿಗಳು ಅಗತ್ಯ ಮತ್ತು ಸೂಕ್ತ ಮಾಹಿತಿಯನ್ನು ಅರ್ಜಿಯಲ್ಲಿ ತುಂಬಬೇಕು.

  • ಅರ್ಜಿ ಭರ್ತಿ ಮಾಡಿದ ಬಳಿಕ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1500 ರೂ. ಪಾವತಿ ಮಾಡಬೇಕು.

Published by:Latha CG
First published: