Forbes: ಫೋರ್ಬ್ಸ್​ ಪಟ್ಟಿಯಲ್ಲಿ ಈ ಬಾರಿ ಹೆಸರು ಪಡೆದ ಭಾರತೀಯ ನಾರಿಯರು ಇವರೇ ನೋಡಿ..!

ಪ್ರತಿ ವರ್ಷ, ಅಮೇರಿಕನ್ ಬಿಸಿನೆಸ್ ಮ್ಯಾಗಜೀನ್ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಪ್ರತಿ ವರ್ಷ, ಅಮೇರಿಕನ್ ಬಿಸಿನೆಸ್ ಮ್ಯಾಗಜೀನ್ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಪ್ರತಿ ವರ್ಷ, ಅಮೇರಿಕನ್ ಬಿಸಿನೆಸ್ ಮ್ಯಾಗಜೀನ್ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

 • Share this:
  ಫೋರ್ಬ್ಸ್​ ನಿಯತಕಾಲಿಕೆ(Forbes Magazine)ಯು 2021ರ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆ(Powerful Women)ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ(Indian) ಮಹಿಳಾಮಣಿಗಳ ಹೆಸರುಗಳು ರಾರಾಜಿಸುತ್ತಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಈ ಬಾರಿಯ ಫೋರ್ಬ್ಸ್​ ಪಟ್ಟಿ(Forbes List)ಯಲ್ಲಿ 37ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಇವರು ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆ ಎನಿಸಿಕೊಂಡಿದ್ದಾರೆ. ಕಳೆದ ಬಾರಿ ನಿರ್ಮಲಾ ಸೀತಾರಾಮನ್ 41ನೇ ಸ್ಥಾನದಲ್ಲಿದ್ದರು. ಸತತ ಮೂರನೇ ಬಾರಿಗೆ ನಿರ್ಮಲಾ ಸೀತಾರಾಮನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಇದು ಭಾರತದ ಹಿರಿಮೆಯಾಗಿದೆ.

  ಇವರು ಮಾತ್ರವಲ್ಲದೇ ಇನ್ನೂ ಅನೇಕ ಭಾರತೀಯರ ಮಹಿಳೆಯರು ಫೋರ್ಬ್ಸ್​ ನಿಯತಕಾಲಿಕೆಯ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದ್ದಾರೆ. ಫೋರ್ಬ್ಸ್​​ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನೈಕಾ ಸಂಸ್ಥಾಪಕ ಮತ್ತು ಸಿಇಒ ಫಲ್ಗುಣಿ ನಾಯರ್ ಸ್ಥಾನ ಪಡೆದಿದ್ದಾರೆ. ಬಯೋಕಾನ್​​ ಕಾರ್ಯಕಾರಿ ಅಧ್ಯಕ್ಷೆ ಕಿರಣ್​​ ಮುಜುಂದಾರ್ ಶಾ, HCL ಕಾರ್ಪೊರೇಷನ್ CEO ರೋಶ್ನಿ ನಾಡರ್ ಮಲ್ಹೋತ್ರಾ ಕೂಡ ಫೋರ್ಬ್ಸ್​​ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

  ಇದನ್ನೂ ಓದಿ: Bipin Rawat Helicopter Crashes: ತಮಿಳುನಾಡು ಬಳಿ ಸೇನಾ ಹೆಲಿಕಾಪ್ಟರ್ ಪತನ; ನಾಲ್ವರ ಸಾವು, ಮುಂದುವರೆದ ರಕ್ಷಣಾ ಕಾರ್ಯಾಚರಣೆ

  ಪ್ರತಿ ವರ್ಷ, ಅಮೇರಿಕನ್ ಬಿಸಿನೆಸ್ ಮ್ಯಾಗಜೀನ್ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ವರ್ಷ 18 ನೇ ವಾರ್ಷಿಕ ಪವರ್ ಮಹಿಳೆಯರ ಪಟ್ಟಿಯಲ್ಲಿ 40 CEO ಗಳು ಸೇರಿದ್ದಾರೆ. ಅವರು ನಿಯತಕಾಲಿಕದ ಪ್ರಕಾರ, “record $3.3 ಟ್ರಿಲಿಯನ್ ಆದಾಯವನ್ನು ನೋಡಿಕೊಳ್ಳುತ್ತಾರೆ.” ಈ ಪಟ್ಟಿಯಲ್ಲಿ 19 ವಿಶ್ವ ನಾಯಕರು, ಇಮ್ಯುನೊಲೊಜಿಸ್ಟ್ ಕೂಡ ಸೇರಿದ್ದಾರೆ.

  ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಟಾಪ್ 10 ಹೆಸರುಗಳು ಇಲ್ಲಿವೆ.

  1 Philanthropist ಮ್ಯಾಕೆಂಜಿ ಸ್ಕಾಟ್

  2 US ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

  3 ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಕ್ರಿಸ್ಟಿನ್ ಲಗಾರ್ಡೆ

  4 ಜನರಲ್ ಮೋಟಾರ್ಸ್ ಮೇರಿ ಬಾರ್ರಾ CEO

  5 Philanthropist ಮೆಲಿಂಡಾ ಫ್ರೆಂಚ್ ಗೇಟ್ಸ್

  6 ಫಿಡೆಲಿಟಿ ಇನ್ವೆಸ್ಟ್‌ಮೆಂಟ್ ಸಿಇಒ ಅಬಿಗೈಲ್ ಜಾನ್ಸನ್

  7 ಸ್ಯಾಂಟ್ಯಾಂಡರ್ ಕಾರ್ಯನಿರ್ವಾಹಕ ಅಧ್ಯಕ್ಷ ಅನಾ ಪೆಟ್ರಿಸಿಯಾ ಬೋಟಿನ್

  8 ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್

  9 ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್

  10 ಆಕ್ಸೆಂಚರ್ ಸಿಇಒ ಜೂಲಿ ಸ್ವೀಟ್

  ಇದನ್ನೂ ಓದಿ: ಜ. ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ರಷ್ಯಾ ನಿರ್ಮಿತ Mi-17V5 ಹೆಲಿಕಾಪ್ಟರ್ ​ ಕುರಿತ ಕುತೂಹಲದ ಸಂಗತಿಗಳು ಇವು

  ಮ್ಯಾಕೆಂಜಿ ಸ್ಕಾಟ್ ಈ 'ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ' ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಸ್ಕಾಟ್ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಮತ್ತು ಅಮೆಜಾನ್ ಗ್ರೂಪ್ ಮಾಲೀಕ ಜೆಫ್ ಬೆಜೋಸ್ ಅವರ ಮಾಜಿ ಪತ್ನಿ. 2019 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭಾರತೀಯ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸ್ಥಾನ ಪಡೆದಿದ್ದಾರೆ.
  Published by:Latha CG
  First published: