IT Professionalsಗಳಿಗೆ ಈ ವರ್ಷ ಭಾರಿ ಬೇಡಿಕೆ ಇದೆಯಂತೆ..! ಯಾವ್ಯಾವ ಹುದ್ದೆಗಳಲ್ಲಿ ಅಂತ ಗೊತ್ತೇ?

2015-2021ರವರೆಗಿನ ತನ್ನ ಬಾಲ್ಯಾವಧಿಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಸಾಧನಗಳು ಮೂರು ಪಟ್ಟು ಹೆಚ್ಚಳಗೊಂಡಿದ್ದು, ಹೀಗಾಗಿ ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞರಿಗೆ ಬೇಡಿಕೆ ಸೃಷ್ಟಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್ - 19, ಲಾಕ್‌ಡೌನ್‌ (Lockdown) ನಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ,ಉದ್ಯೋಗ ನೇಮಕಾತಿಗಳು ಮತ್ತೆ ಬಿರುಸು ಪಡೆದಿದ್ದು, ಹೊಸ ಪ್ರತಿಭಾವಂತರಿಗೆ ಹೆಚ್ಚು ಬೇಡಿಕೆ ಕಂಡು ಬರುತ್ತಿದ್ದರೆ, ಭಾರಿ ಪ್ರತಿಭಾವಂತರನ್ನು(Talent) ಉಳಿಸಿಕೊಳ್ಳುವ ಪ್ರಯತ್ನವನ್ನು ಎಲ್ಲ ಕಂಪನಿಗಳೂ ಮಾಡುತ್ತಿವೆ. ಈ ಪೈಕಿ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ (Information Technology) ವಲಯದಲ್ಲಿ ಇಂತಹ ಪ್ರವೃತ್ತಿ ಕಂಡು ಬರುತ್ತಿದ್ದು, ಉದ್ಯೋಗ ನೇಮಕಾತಿ ದರದಲ್ಲಿ ದೊಡ್ಡ ಏರಿಕೆಯಾಗಿರುವುದಕ್ಕೆ ಸಾಕ್ಷಿ ನುಡಿಯುತ್ತಿವೆ. ಸ್ಕಿಲ್ ಸಾಫ್ಟ್ ಸಂಸ್ಥೆಯ ಪ್ರಾದೇಶಿಕ ಉಪಾಧ್ಯಕ್ಷೆ ದಿವ್ಯೇಶ್ ಸಿಂಧ್ವಾಡ್ (Dyvesh Sindhwad) ಪ್ರಕಾರ, ಭಾರತೀಯ ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ (IT professionals) ಈ ಕೆಳಗೆ ನೀಡಲಾಗಿರುವ ಹುದ್ದೆ ಹಾಗೂ ನೈಪುಣ್ಯಕ್ಕೆ ಹೆಚ್ಚು ಬೇಡಿಕೆಯಿದೆ” ಎಂದು ತಿಳಿಸಿದ್ದಾರೆ.

ಸೈಬರ್ ಸೆಕ್ಯೂರಿಟಿ: ಸ್ಕಿಲ್ ಸಾಫ್ಟ್‌ನ 2021ರ ಮಾಹಿತಿ ತಂತ್ರಜ್ಞಾನ ನೈಪುಣ್ಯತೆ ಹಾಗೂ ಸಂಬಳದ ವರದಿ ಪ್ರಕಾರ, ಏಷ್ಯಾ ಪೆಸಿಫಿಕ್ ವಲಯದ ನಿರ್ಣಾಯಕರು ತಮ್ಮ ತಂಡದಲ್ಲಿ ಸೈಬರ್ ಸೆಕ್ಯೂರಿಟಿ ಹೊಂದುವುದನ್ನು ಆದ್ಯತೆಯನ್ನಾಗಿ ಪರಿಗಣಿಸಿದ್ದಾರೆ. ಸಂಸ್ಥೆಯ ಮೌಲ್ಯಯುತ ದತ್ತಾಂಶ ಹಾಗೂ ಸೈಬರ್ ದಾಳಿಯನ್ನು ತಡೆಯಲು ಹೆಚ್ಚು ಸೈಬರ್ ಸೆಕ್ಯೂರಿಟಿ ವೃತ್ತಿಪರರು ಅಗತ್ಯವಿದ್ದಾರೆ.

ಕ್ಲೌಡ್ ಕಂಪ್ಯೂಟಿಂಗ್: ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ‘ಮೊದಲು ಡಿಜಿಟಲ್’ ವಿಶ್ವದಲ್ಲಿ 2017ರಿಂದ ಇಲ್ಲಿಯವರೆಗೆ ಕ್ಲೌಡ್ ಕಂಪ್ಯೂಟಿಂಗ್ ವಲಯದಲ್ಲಿ ಬಂಡವಾಳ ಹೂಡುವುದು ಸಂಸ್ಥೆಗಳ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ. ಇದೇ ವರದಿಯು ಶೇ. 43ರಷ್ಟು ನಿರ್ಣಾಯಕರ ಪಾಲಿಗೆ ಕ್ಲೌಡ್ ಕಂಪ್ಯೂಟಿಂಗ್ ವಲಯವು ಮುಖ್ಯ ಬಂಡವಾಳ ಹೂಡಿಕೆ ಕ್ಷೇತ್ರವಾಗಿ ಬದಲಾಗಿದೆ ಎಂಬುದರತ್ತಲೂ ಬೊಟ್ಟು ಮಾಡಿದೆ.

ಇದನ್ನೂ ಓದಿ: Business Idea: 2022ರಲ್ಲಿ ಹೊಸ ಉದ್ದಿಮೆ ಆರಂಭಿಸಲು ಇಲ್ಲಿವೆ 5 ಹೊಸ ಐಡಿಯಾ

ಹೀಗಾಗಿ ಕ್ಲೌಡ್ ಕಂಪ್ಯೂಟಿಂಗ್ ನೈಪುಣ್ಯತೆಗಳಾದ DevOps, Serverless Architecture, Automation and QAಗಳೊಂದಿಗೆ ಸರ್ವಸಜ್ಜಿತರಾಗುವುದರಿಂದ ನಿಮ್ಮ ವೃತ್ತಿಜೀವನದ ಉತ್ಕರ್ಷಕ್ಕೆ ಕಾರಣವಾಗುತ್ತದೆ.

ಬಿಗ್ ಡಾಟಾ: ಒದಗಿರುವ ಮಾಹಿತಿಯ ಕುರಿತು ನಿರ್ಣಯ ಹಾಗೂ ದತ್ತಾಂಶ ನಿರ್ವಹಣೆಗಾಗಿ ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಹಾಗೂ ಸುರಕ್ಷಿತ ಬಳಕೆ ಮಾಹಿತಿ ತಂತ್ರಜ್ಞಾನ ನಾಯಕರ ಪಾಲಿಗೆ ಆದ್ಯತೆಯ ವಿಷಯವಾಗಿ ಪರಿಣಮಿಸಿದೆ. ಆದರೆ, ಈ ಬಿಗ್ ಡಾಟಾ ಉದ್ಯೋಗಗಳಿಗೆ ನೇಮಕವಾಗುವ ವಿದ್ಯಾರ್ಹತೆ ಹಾಗೂ ಪ್ರತಿಭೆ ಇರುವ ಅಭ್ಯರ್ಥಿಗಳನ್ನು ಹುಡುಕುವಲ್ಲಿ ಸಂಸ್ಥೆಗಳು ಈಗಲೂ ಪರದಾಡುತ್ತಿವೆ. ಏಷ್ಯಾ ಪೆಸಿಫಿಕ್ ವಲಯದ ಶೇ. 23ರಷ್ಟು ಮಂದಿ ಇದೇ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ: ಕೃತಕ ಬುದ್ಧಿಮತ್ತೆ ಹಾಗೂ ಯಾಂತ್ರಿಕ ಕಲಿಕೆಗಳು ನಮ್ಮ ನಿತ್ಯಜೀವನದ ಭಾಗವಾಗಿ ಬದಲಾಗಿವೆ. ಉದ್ಯಮಗಳಲ್ಲಿ ಯಾಂತ್ರೀಕರಣವನ್ನು ಮತ್ತಷ್ಟು ಸರಳೀಕರಿಸಲು ಇವು ಗಮನಾರ್ಹ ಕೊಡುಗೆ ನೀಡಿವೆ. ಹೀಗಾಗಿ ಈ ವಲಯದಲ್ಲಿ ನಿಪುಣರಾಗಿರುವ ಅಭ್ಯರ್ಥಿಗಳಿಗಾಗಿ ಸಂಸ್ಥೆಗಳು ನಿರಂತರವಾಗಿ ಹುಡುಕಾಟ ನಡೆಸುತ್ತಿವೆ. ಶೇ. 34ಷ್ಟು ಏಷ್ಯಾ ಪೆಸಿಫಿಕ್ ನಾಯಕರು ಈ ವಿಭಾಗದ ಹುದ್ದೆಗಳನ್ನು ತಮ್ಮ ನೇಮಕಾತಿ ಆದ್ಯತೆಯನ್ನಾಗಿ ರೂಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Jobs Alert: ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ನಿಂದ 1 ಲಕ್ಷಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳ ನೇಮಕಾತಿ; ವಿವರ ಇಲ್ಲಿದೆ

ಇಂಟರ್ನೆಟ್ ಆಫ್ ಥಿಂಗ್ಸ್: ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಾಧನಗಳು ಒಂದಕ್ಕೊಂದು ಸಂಪರ್ಕ ಹೊಂದುತ್ತಿದ್ದು, ಈ ಬಗೆಯ ಅಳವಡಿಕೆ ದರವು ತೀವ್ರ ಗತಿಯಲ್ಲಿ ಹೆಚ್ಚಳಗೊಂಡಿದೆ. ಹೀಗಾಗಿ ವ್ಯಾಪಾರ ವಹಿವಾಟುಗಳಲ್ಲಿ ನೂತನ ಐಒಟಿ ತಂತ್ರಜ್ಞಾನವು ಬಹುಬೇಡಿಕೆಯನ್ನು ಕುದುರಿಸಿಕೊಂಡಿದೆ. 2015-2021ರವರೆಗಿನ ತನ್ನ ಬಾಲ್ಯಾವಧಿಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಸಾಧನಗಳು ಮೂರು ಪಟ್ಟು ಹೆಚ್ಚಳಗೊಂಡಿದ್ದು, ಹೀಗಾಗಿ ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞರಿಗೆ ಬೇಡಿಕೆ ಸೃಷ್ಟಿಯಾಗಿದೆ.

ಆದರೆ, ಈ ನೈಪುಣ್ಯತೆಯನ್ನು ದುರ್ಬಲ ನೈಪುಣ್ಯತೆ ಎಂದು ಸಂಸ್ಥೆಗಳು ಪರಿಗಣಿಸಿವೆ ಎಂದು ವರದಿಯಾಗಿದೆ. ಈ ನೂತನ ತಂತ್ರಜ್ಞಾನವು ಇನ್ನಷ್ಟೇ ಅಳವಡಿಕೆ ಹಂತದಲ್ಲಿರುವುದು ಅಥವಾ ಈ ತಂತ್ರಜ್ಞಾನದ ನೈಪುಣ್ಯತೆ ಹೊಂದಿರುವ ವೃತ್ತಿಪರರು ದೊರೆಯದಿರುವುದು ಕಾರಣವಾಗಿರಬಹುದು.
Published by:vanithasanjevani vanithasanjevani
First published: