ಫುಟ್ಬಾಲ್ನಲ್ಲಿ (Foot Ball) ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವೊಂದನ್ನು ಆಯಿಲ್ ಇಂಡಿಯಾ ಲಿಮಿಟೆಡ್ ನೀಡಿದೆ. ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ (Oil India Limited) ಫುಟ್ಬಾಲ್ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನ ಜುಲೈ 1 ಆಗಿದೆ.
ಅಸ್ಸಾಂ ಸರ್ಕಾರ ಈ ಫುಟ್ಬಾಲ್ ಹುದ್ದೆಗೆ ನೇಮಕಾತಿ ನಡೆಸಲು ಮುಂದಾಗಿದೆ. ಒಂದು ವರ್ಷದ ಒಪ್ಪಂದ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ, ವೇತನ ಸೇರಿದಂತೆ ಇನ್ನಿತರ ಮಾಹಿತಿ ಕೆಳಗಿನಂತಿದೆ.
ಹುದ್ದೆ ಮಾಹಿತಿ |
ಹುದ್ದೆ ವಿವರ |
ಸಂಸ್ಥೆಯ ಹೆಸರು |
ಆಯಿಲ್ ಇಂಡಿಯಾ ಲಿಮಿಟೆಡ್ |
ಪೋಸ್ಟ್ಗಳ ಸಂಖ್ಯೆ |
ನಿರ್ದಿಷ್ಟಪಡಿಸಲಾಗಿಲ್ಲ |
ಉದ್ಯೋಗ ಸ್ಥಳ |
ದುಲಿಯಾಜನ್ - ಅಸ್ಸಾಂ |
ಹುದ್ದೆ |
ಫುಟ್ಬಾಲ್ ಕೋಚ್ |
ವೇತನ: |
100000-120000 ರೂ ಪ್ರತಿ ತಿಂಗಳು |
ಶೈಕ್ಷಣಿಕ ಅರ್ಹತೆ: ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಅನುಭವ: ಏಷ್ಯಾನ್ ಫುಟಬಾಲ್ ಕಾನ್ಫೆಡರೇಷನ್ನಿಂದ ಎ ಲೈಸೆನ್ಸ್ ಪಡೆದಿರಬೇಕು
ಫುಟ್ಬಾಲ್ ಕ್ಲಬ್ನಲ್ಲಿ ಐದು ವರ್ಷ ಕೋಚ್ ಆಗಿ ನಿರ್ವಹಣೆ ಮಾಡಿ ಅನುಭವ ಇರಬೇಕು.
ಹಿಂದಿ ಮತ್ತು ಇಂಗ್ಲಿಷಿನಲ್ಲಿ ನಿರ್ಗಳವಾಗಿ ಮಾತನಾಡಬೇಕು
ವಯಸ್ಸಿನ ಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 65 ವರ್ಷಗಳು ಮೀರಿರಬಾರದು.
ಇದನ್ನು ಓದಿ: ಈಶಾನ್ಯ ಗಡಿ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 5636 ಹುದ್ದೆಗೆ ಅರ್ಜಿ ಆಹ್ವಾನ
ಆಯ್ಕೆ ವಿಧಾನ
ಸಂದರ್ಶನ ಮತ್ತು ಮೆರಿಟ್ ಆಧಾರದ ಮೇಲೆ
ಅರ್ಜಿ ಸಲ್ಲಿಕೆ ವಿಧಾನ
ಇ ಮೇಲ್ ಮುಖಾಂತರ
ಇ- ಮೇಲ್ ವಿಳಾಸ: er_welfare@oilindia.in a
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಜೂನ್ 2, 2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: ಜುಲೈ 1, 2022
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
oil-india.com
ಇದನ್ನು ಓದಿ: ಪದವೀಧರರಿಗೆ ಉತ್ತಮ ಅವಕಾಶ; ಬ್ಯಾಂಕ್ ಆಫ್ ಬರೋಡಾದಯಲ್ಲಿದೆ ಕೆಲಸ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ಬಳಿಕ ಕೆಳಕಂಡ ದಾಖಲೆಗಳನ್ನೊಳಗಂಡ ರೆಸ್ಯೂಮ್ ಅನ್ನು ಮೇಲಿನ ಇ ಮೇಲ್ ಐಡಿಗೆ ಕಳುಹಿಸಬೇಕು.
ಎಎಫ್ಸಿ ಎ ಲೈಸೆನ್ಸ್ ಪ್ರಮಾಣಪತ್ರ
ಜನನ ಪ್ರಮಾಣ ಪತ್ರ
ಶೈಕ್ಷಣಿಕ ಪದವಿಯ ಪ್ರಮಾಣ ಪತ್ರ
ಅನುಭವದ ಪ್ರಮಾಣ ಪತ್ರ
ಮೀಸಲಾತಿ ಇದ್ದಲ್ಲಿ ಜಾತಿ ಪ್ರಮಾಣ ಪತ್ರ
ವಿಶೇಷ ಸೂಚನೆ
ಕೋಚ್ ಹುದ್ದೆಗೆ ಆಯ್ಕೆ ಆದವರಿಗೆ ಆಯಿಲ್ ಇಂಡಿಯಾ ಲಿಮಿಟೆಡ್ ನಿಂದಲೇ ವಸತಿ ಮತ್ತು ವೈದ್ಯಕೀಯ ಸೇವೆಯನ್ನು ನೀಡಲಾಗುವುದು. ಟೂರ್ನಮೆಂಟ್ ಸೇರಿದಂತೆ ಯಾವುದೇ ಕ್ರೀಡಾ ಚಟುವಟಿಕೆಯಲ್ಲಿ ಕೋಚ್ ವೆಚ್ಚ ಸಂಪೂರ್ಣವಾಗಿ ಭರಿಸಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ