Jobs in Bangalore: ಫುಡ್​ ಬ್ಲಾಗರ್​ ಕೃಪಾಲ್​ ಅಮಣ್ಣ ಚಾನಲ್​ಗೆ ಬೇಕಾಗಿದ್ದಾರೆ ಸಹಾಯಕರು; ಆಸಕ್ತಿ ಇದ್ರೆ ಅರ್ಜಿ ಸಲ್ಲಿಸಿ​

ತಮ್ಮ ಫುಡ್​ ವೋಲ್ಗ್ ವಿಡಿಯೋಗಳಲ್ಲಿ ಕೆಲಸ ಮಾಡಲು ಅವರು ಇಂಟರ್ನ್‌ಗಳು ಅಥವಾ ಸಹಾಯಕರನ್ನು ಹುಡುಕುತ್ತಿದ್ದು, ಅವಕಾಶ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇದು ಡಿಜಿಟಲ್​ ಯುಗ. ಅದರಲೂ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್​, ಇನ್ಸ್ಟಾಗ್ರಾಂ, ಫೇಸ್​ಬುಕ್​ಗಳು ಜನರನ್ನು ಹೆಚ್ಚು ಹತ್ತಿರವಾಗುವಂತೆ ಮಾಡಿರುವ ಜೊತೆಗೆ ಅನೇಕ ಉದ್ಯೋಗಗಳನ್ನು ಸೃಷ್ಟಿಸಿದೆ. ಅದರಲ್ಲೂ ಯೂ ಟ್ಯೂಬ್​ ಕ್ರಿಯೇಟರ್ (YouTube Creator)​ ಹುದ್ದೆ ಸಾಕಷ್ಟು ಬೇಡಿಕೆ ಪಡೆದಿದೆ. ಈ ವಿಡಿಯೋ ಕ್ರಿಯೇಟರ್​ ಹುದ್ದೆಯಲ್ಲಿ ನೀವು ಆಸಕ್ತಿ ಹೊಂದಿದ್ರೆ, ಹೆಸರಾಂತ ಫುಡ್​ ಬ್ಲಾಗರ್ (Food Blogger)​ ಆಗಿರುವ ಕೃಪಾಲ್​ ಅಮಣ್ಣ(Kripal Amanna) ಚಾನೆಲ್​ನಲ್ಲಿದೆ ಅವಕಾಶ. ಈ ಸಂಬಂಧ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಹುದ್ದೆ ಆಸಕ್ತರಿಗೆ ಅರ್ಜಿ ಸಲ್ಲಿಸುವಂತೆ ಕರೆ ನೀಡಿದ್ದಾರೆ.

  ಈಗಾಗಲೇ ಕರ್ನಾಟಕದಾದ್ಯಂತ ಮನೆ ಮಾತನಾಗಿರುವ ಅವರ ಕೃಪಾಲ್​ ಅಮಣ್ಣ ಫುಡ್​ ಬ್ಲಾಗರ್​ ವಿಡಿಯೋಗಳು ನೋಡುಗರ ಜೊತೆ ಆಹಾರ ಪ್ರಿಯರಲ್ಲಿ ಬಾಯಲ್ಲಿ ನೀರುರಿಸುತ್ತದೆ. ಇದಕ್ಕಾಗಿ ಅವರು ಬೆಂಗಳೂರು ಸೇರಿದಂತೆ ಕರ್ನಾಟಕದ ಜನಪ್ರಿಯ ರುಚಿಕರ ತಿನಿಸುಗಳ ಹೋಟೆಲ್​ಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ರುಚಿಯಾದ ತಿನಿಸುಗಳ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ವಿಡಿಯೋಗಳನ್ನು ಮಾಡಲು ಅವರು, ಇಂಟರ್ನ್‌ಗಳು ಅಥವಾ ಸಹಾಯಕರನ್ನು ಹುಡುಕುತ್ತಿದ್ದು, ಅವಕಾಶ ನೀಡಿದ್ದಾರೆ.  ಹುದ್ದೆ ಮಾಹಿತಿಹುದ್ದೆ ವಿವರ
  ಹುದ್ದೆವಿಡಿಯೋ ಇಂಟರ್ನ್​ ಅಥವಾ ಸಹಾಯಕರು
  ಹುದ್ದೆ ಸಂಖ್ಯೆಸ್ಪಷ್ಟಪಡಿಸಿಲ್ಲ
  ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು

  ಹುದ್ದೆಯ ಜವಾಬ್ದಾರಿ: ಅಭ್ಯರ್ಥಿಗಳು ಉತ್ತಮ ಸಂಶೋಧನೆ ಮಾಡಬೇಕು. ವಿಡಿಯೋ ಉತ್ಪಾದನೆ, ಬಿಟಿಎಸ್ ಕ್ಯಾಪ್ಚರ್‌ಗಳು, ಸಾಮಾಜಿಕ ಮಾಧ್ಯಮಕ್ಕಾಗಿ ಪೋಸ್ಟ್‌ಗಳನ್ನು ಬರೆಯುವುದು, ಇತರ ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಬೇಕು.

  ವಿಶೇಷ ಸೂಚನೆ:

  -ಅಭ್ಯರ್ಥಿಗಳು ಹುದ್ದೆಯ ಕುರಿತ ವಿವರಗಳಿಗೆ ವಿಶೇಷ ಗಮನ ನೀಡಬೇಕು.
  -ಉತ್ತಮ ಸಂವಹನ ಮತ್ತು ಸಾಂಸ್ಥಿಕ ಕೌಶಲ್ಯಗಳು, ಬಿಟಿಎಸ್ ವಿಷಯಕ್ಕಾಗಿ ಸ್ಟಿಲ್ಸ್ , ವೀಡಿಯೊಗಳನ್ನು ಸೃಜನಾತ್ಮಕವಾಗಿ ಸೆರೆಹಿಡಿಯುವ ಸಾಮರ್ಥ್ಯ ಹೊಂದಿರಬೇಕು.
  -ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗಾಗಿ ಬರೆಯುವ ಕೌಶಲ್ಯ. ಕ್ಯಾಮರಾ, ಎಡಿಟಿಂಗ್ ಕೌಶಲ್ಯಗಳು ಹೊಂದಿರಬೇಕು.

  ಇದನ್ನು ಓದಿ: ಉಡುಪಿ ಜಿಲ್ಲೆಯಲ್ಲಿ 25 ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

  ಹುದ್ದೆ ಸ್ವರೂಪ:

  -ಅಭ್ಯರ್ಥಿಯು ಆನ್​ಸೈಟ್​ ಮತ್ತು ರಿಮೋಟ್​ನಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಬೇಕು.
  -ವಾರದಲ್ಲಿ 40 ಗಂಟೆಗಳ ಕಾಲದ ಹುದ್ದೆ ಆಗಿದ್ದು, ಕೆಲಸ ನಿಮಿತ್ತ ಪ್ರಯಾಣ ಮಾಡಲು ಸಿದ್ಧರಿರಬೇಕು.
  -ಈ ಹುದ್ದೆಗೆ ಪೂರ್ಣ ಮತ್ತು ಅರೆಕಾಲಿಕವಾಗಿ ಕೆಲಸ ನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

  ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಮುಖಾಂತರ

  ಇಮೇಲ್​ ವಿಳಾಸ: info@foodlovers.in

  ಇದನ್ನು ಓದಿ: ಐಐಎಂಬಿಯಲ್ಲಿದೆ ಕಾಪಿ ಎಡಿಟರ್​ ಹುದ್ದೆ; ಎಂಎ ಆದವರಿಗೆ ಅವಕಾಶ

  ಅರ್ಜಿ ಸಲ್ಲಿಸುವ ಪ್ರಕ್ರಿಯೆ
  ಫುಡ್​ ಬ್ಲಾಗಿಂಗ್​ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ರೆಸ್ಯೂಮೆ ಜೊತೆ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ ಮೇಲಿನ ಇಮೇಲ್​ ಐಡಿಗೆ ಸಲ್ಲಿಸಬೇಕು.

  ಜೊತೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೃಪಾಲ್​ ಅಮಣ್ಣ ಅವರ ಚಾನೆಲ್​ನಲ್ಲಿ ಯಾಕಾಗಿ ಕೆಲಸ ಮಾಡಲು ಇಚ್ಛಿಸುವುದಾಗಿ ಸಣ್ಣ ಪ್ರಬಂಧ ಬರೆದು ಕಳುಹಿಸಬೇಕು.
  Published by:Seema R
  First published: