FCI Recruitment 2021: ಭಾರತೀಯ ಆಹಾರ ನಿಗಮವು(Food Corporation of India-FCI) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಹರಿಯಾಣದಲ್ಲಿರುವ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಕಚೇರಿಯಲ್ಲಿ ಒಟ್ಟು 380 ವಾಚ್ಮನ್(Watchman) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 8ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ವಾಚ್ಮನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ |
ಹುದ್ದೆಯ ಹೆಸರು |
ವಾಚ್ಮನ್ |
ಒಟ್ಟು ಹುದ್ದೆಗಳು |
380 |
ವಿದ್ಯಾರ್ಹತೆ |
8ನೇ ತರಗತಿ |
ಉದ್ಯೋಗದ ಸ್ಥಳ |
ಹರಿಯಾಣ |
ವೇತನ |
ಮಾಸಿಕ ₹ 23,300-64,400 |
ಅರ್ಜಿ ಸಲ್ಲಿಸುವ ಬಗೆ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
20/10/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
19/11/ 2021 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/10/2021
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 19/11/2021
ಇದನ್ನೂ ಓದಿ:FCI Recruitment 2021: ತಿಂಗಳಿಗೆ ₹ 64,400 ಸಂಬಳ, ಭಾರತೀಯ ಆಹಾರ ನಿಗಮದಲ್ಲಿ 860 ವಾಚ್ಮನ್ ಹುದ್ದೆಗಳು ಖಾಲಿ
ವಿದ್ಯಾರ್ಹತೆ:
ವಾಚ್ಮನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 8ನೇ ತರಗತಿ ಪಾಸಾಗಿರಬೇಕು. 8ನೇ ತರಗತಿ ಪಾಸಾಗಿರುವವರು ವಾಚ್ಮನ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ನೇಮಕಾತಿಯ ವಾಚ್ಮನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಅದೇ ರೀತಿ ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು.
ಭಾರತ ಆಹಾರ ನಿಗಮವು ವಾಚ್ಮನ್ ಹುದ್ದೆಗಳನ್ನು ಹರಿಯಾಣ ಶಾಖೆಗಳಲ್ಲಿ ನೇಮಕ ಮಾಡಲಿದೆ.
ವೇತನ:
ಭಾರತೀಯ ಆಹಾರ ನಿಗಮ ನೇಮಕಾತಿಯ ವಾಚ್ಮನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 23,300-64,400 ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ₹250 ರೂ. ಅರ್ಜಿ ಶುಲ್ಕ ಪಾವತಿಸಬೇಕು.
- ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಅರ್ಜಿ ಶುಲ್ಕವನ್ನು ಡೆಬಿಡ್ ಕಾರ್ಡ್/ ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ವೈಯಕ್ತಿಕ ಸಂದರ್ಶನ
ಪರೀಕ್ಷೆಗೂ 15 ದಿನ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪರೀಕ್ಷೆಯ ದಿನಾಂಕ ಬಿಡುಗಡೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್ಸೈಟ್
fci.gov.in ಗೆ ಭೇಟಿ ನೀಡಿ.
ಇದನ್ನೂ ಓದಿ:Karnataka Jobs: ಕರ್ನಾಟಕ ಖಾದಿ ಮಂಡಳಿಯಲ್ಲಿ ವಿವಿಧ ಹುದ್ದೆಗಳು ಖಾಲಿ; ತಿಂಗಳಿಗೆ ₹ 88,000 ಸಂಬಳ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ