• Home
 • »
 • News
 • »
 • jobs
 • »
 • FACT Recruitment 2022: ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 32 ಸಾವಿರ

FACT Recruitment 2022: ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 32 ಸಾವಿರ

ಹುದ್ದೆಗೆ ಅರ್ಜಿ ಸಲ್ಲಿಸಿ

ಹುದ್ದೆಗೆ ಅರ್ಜಿ ಸಲ್ಲಿಸಿ

ಒಟ್ಟು 45 ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 16, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

 • News18 Kannada
 • Last Updated :
 • new delhi, India
 • Share this:

  FACT Recruitment 2022: ಫರ್ಟಿಲೈಜರ್ಸ್ & ಕೆಮಿಕಲ್ಸ್​ ಟ್ರಾವಂಕೂರ್ ಲಿಮಿಟೆಡ್(Fertilizers and Chemicals Travancore Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ. ಒಟ್ಟು 45 ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 16, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ fact.co.inಗೆ ಭೇಟಿ ನೀಡಿ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಫರ್ಟಿಲೈಜರ್ಸ್ & ಕೆಮಿಕಲ್ಸ್​ ಟ್ರಾವಂಕೂರ್ ಲಿಮಿಟೆಡ್
  ಹುದ್ದೆಯ ಹೆಸರುಟೆಕ್ನಿಷಿಯನ್
  ಒಟ್ಟು ಹುದ್ದೆ45
  ವಿದ್ಯಾರ್ಹತೆಡಿಪ್ಲೋಮಾ
  ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
  ವೇತನಮಾಸಿಕ ₹ 9250-32000
  ಅರ್ಜಿ ಸಲ್ಲಿಕೆ ಬಗೆಆನ್​ಲೈನ್
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ26/10/2022
  ಅರ್ಜಿಸಲ್ಲಿಸಲು ಕೊನೆಯ ದಿನ16/11/2022


  ರ್ಹತಾ ಮಾನದಂಡಗಳೇನು?


  ವಿದ್ಯಾರ್ಹತೆ:
  ಫರ್ಟಿಲೈಜರ್ಸ್ & ಕೆಮಿಕಲ್ಸ್​ ಟ್ರಾವಂಕೂರ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಕೆಮಿಕಲ್ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಡಿಪ್ಲೋಮಾ, ಕೆಮಿಸ್ಟ್ರಿ/ ಇಂಡಸ್ಟ್ರಿಯಲ್ ಕೆಮಿಸ್ಟ್ರಿಯಲ್ಲಿ ಬಿಎಸ್ಸಿ ಪೂರ್ಣಗೊಳಿಸಿರಬೇಕು.


  ಇದನ್ನೂ ಓದಿ: JOB ALERT: ಗುಪ್ತಚರ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಕೆಲಸ; ತಿಂಗಳಿಗೆ 69 ಸಾವಿರ ಸಂಬಳ


  ವಯೋಮಿತಿ:
  ಫರ್ಟಿಲೈಜರ್ಸ್ & ಕೆಮಿಕಲ್ಸ್​ ಟ್ರಾವಂಕೂರ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 1, 2022ಕ್ಕೆ 35 ವರ್ಷ ಮೀರಿರಬಾರದು.


  ವಯೋಮಿತಿ ಸಡಿಲಿಕೆ:
  ಒಬಿಸಿ-ಎನ್​ಸಿಎಲ್​ ಅಭ್ಯರ್ಥಿಗಳು- 3 ವರ್ಷ
  ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ


  ಅರ್ಜಿ ಶುಲ್ಕ:
  ಎಸ್​ಸಿ/ಎಸ್​ಟಿ/PWD/ESM ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
  ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 590 ರೂ. ಅರ್ಜಿ ಶುಲ್ಕ
  ಪಾವತಿಸುವ ವಿಧಾನ: ಆನ್​ಲೈನ್​


  ಆಯ್ಕೆ ಪ್ರಕ್ರಿಯೆ:
  ಲಿಖಿತ ಪರೀಕ್ಷೆ
  ಸಂದರ್ಶನ


  ಇದನ್ನೂ ಓದಿ: Bengaluru: ಸೆಂಟ್ರಲ್ ಸಿಲ್ಕ್​ ಬೋರ್ಡ್​ನಲ್ಲಿ ಸೈಂಟಿಸ್ಟ್​ ಹುದ್ದೆಗಳು ಖಾಲಿ, ಮಾಸಿಕ ವೇತನ 1.77 ಲಕ್ಷ ರೂ.


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/10/2022
  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16/11/2022

  Published by:Latha CG
  First published: