Excise Recruitment 2021: ಕೇಂದ್ರ ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 81,100

ಡಿಸೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Excise Recruitment 2021: ಕೇಂದ್ರೀಯ ಅಬಕಾರಿ ಚೆನ್ನೈ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 19 ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸ್ಟೆನೋಗ್ರಾಫರ್ ಗ್ರೇಡ್-2, ಹವಲ್ದಾರ್, ಟ್ಯಾಕ್ಸ್​ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 12ನೇ ತರಗತಿ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ centralexcisechennai.gov.in ವೆಬ್​ಸೈಟ್​ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೇಂದ್ರೀಯ ಅಬಕಾರಿ ಚೆನ್ನೈ
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್ ಸ್ಟಾಫ್, ಸ್ಟೆನೋಗ್ರಾಫರ್ ಗ್ರೇಡ್-2, ಹವಲ್ದಾರ್, ಟ್ಯಾಕ್ಸ್​ ಅಸಿಸ್ಟೆಂಟ್
ಒಟ್ಟು ಹುದ್ದೆಗಳು19
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ, ಪದವಿ
ಉದ್ಯೋಗದ ಸ್ಥಳಚೆನ್ನೈ
ವೇತನಮಾಸಿಕ ₹ 18,000-81,100
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ08/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ31/12/2021ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/12/2021

ಇದನ್ನೂ ಓದಿ: KPSC ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 82,400 ಸಂಬಳ

ಹುದ್ದೆಯ ಮಾಹಿತಿ:
ಟ್ಯಾಕ್ಸ್​ ಅಸಿಸ್ಟೆಂಟ್- 13
ಸ್ಟೆನೋಗ್ರಾಫರ್ ಗ್ರೇಡ್-2- 02
ಹವಲ್ದಾರ್- 03
ಮಲ್ಟಿ ಟಾಸ್ಕಿಂಗ್ ಸ್ಟಾಫ್-01
ಒಟ್ಟು 19 ಹುದ್ದೆಗಳು

ವಿದ್ಯಾರ್ಹತೆ:
ಟ್ಯಾಕ್ಸ್​ ಅಸಿಸ್ಟೆಂಟ್- ಪದವಿ ಪೂರ್ಣಗೊಳಿಸಿರಬೇಕು.
ಸ್ಟೆನೋಗ್ರಾಫರ್ ಗ್ರೇಡ್-2- 12ನೇ ತರಗತಿ ಉತ್ತೀರ್ಣರಾಗಿರಬೇಕು.
ಹವಲ್ದಾರ್- 10 ನೇ ತರಗತಿ ಪಾಸ್ ಆಗಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್- 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:
ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸ್ಟೆನೋಗ್ರಾಫರ್ ಗ್ರೇಡ್-2, ಹವಲ್ದಾರ್, ಟ್ಯಾಕ್ಸ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-27 ವರ್ಷದೊಳಗಿರಬೇಕು.

ಉದ್ಯೋಗದ ಸ್ಥಳ:
ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸ್ಟೆನೋಗ್ರಾಫರ್ ಗ್ರೇಡ್-2, ಹವಲ್ದಾರ್, ಟ್ಯಾಕ್ಸ್​ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಮಿಳುನಾಡಿನ ಚೆನ್ನೈನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಇದನ್ನೂ ಓದಿ: Government Job: ಪೋಸ್ಟ್ ಆಫೀಸ್​​ನಲ್ಲಿ ಕೆಲಸ ಖಾಲಿ ಇದೆ, SSLC, PUC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

ವೇತನ:
ಟ್ಯಾಕ್ಸ್​ ಅಸಿಸ್ಟೆಂಟ್- ಮಾಸಿಕ ₹ 25,500-81,100
ಸ್ಟೆನೋಗ್ರಾಫರ್ ಗ್ರೇಡ್-2- ಮಾಸಿಕ ₹ 25,500-81,100
ಹವಲ್ದಾರ್- ಮಾಸಿಕ ₹ 18,000-56,900
ಮಲ್ಟಿ ಟಾಸ್ಕಿಂಗ್ ಸ್ಟಾಫ್-ಮಾಸಿಕ ₹ 18,000-56,900

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: