Goa Excise Department Recruitment 2021: ಗೋವಾ ಅಬಕಾರಿ ಇಲಾಖೆ(Goa Excise Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 46 ಸಹಾಯಕ ಅಬಕಾರಿ ಗಾರ್ಡ್(Assistant Excise Guard), ಜೂನಿಯರ್ ಸ್ಟೆನೋಗ್ರಾಫರ್(Junior Stenographer), ಅಬಕಾರಿ ಇನ್ಸ್ಪೆಕ್ಟರ್(Excise Inspector), ಅಬಕಾರಿ ಸಬ್ ಇನ್ಸ್ಪೆಕ್ಟರ್(Excise Sub Inspector) ಹುದ್ದೆಗಳು ಖಾಲಿ ಇದ್ದು, 12ನೇ ತರಗತಿ, ಡಿಪ್ಲೋಮಾ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 25ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ goa.gov.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಗೋವಾ ಅಬಕಾರಿ ಇಲಾಖೆ |
ಹುದ್ದೆಯ ಹೆಸರು |
ಸಹಾಯಕ ಅಬಕಾರಿ ಗಾರ್ಡ್, ಜೂನಿಯರ್ ಸ್ಟೆನೋಗ್ರಾಫರ್, ಅಬಕಾರಿ ಇನ್ಸ್ಪೆಕ್ಟರ್, ಅಬಕಾರಿ ಸಬ್ ಇನ್ಸ್ಪೆಕ್ಟರ್ |
ಒಟ್ಟು ಹುದ್ದೆಗಳು |
46 |
ವಿದ್ಯಾರ್ಹತೆ |
12ನೇ ತರಗತಿ, ಡಿಪ್ಲೋಮಾ, ಪದವಿ |
ಉದ್ಯೋಗದ ಸ್ಥಳ |
ಪಣಜಿ(ಗೋವಾ) |
ವೇತನ |
ನಿಯಮಾನುಸಾರ |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
25/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
10/12/2021 |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/12/2021
ಇದನ್ನೂ ಓದಿ : SSB Recruitment 2021: ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸಶಸ್ತ್ರ ಸೀಮಾ ಬಲ; ಮಾಸಿಕ ವೇತನ ₹ 1,12,400
ಹುದ್ದೆಯ ಮಾಹಿತಿ
ಅಬಕಾರಿ ಇನ್ಸ್ಪೆಕ್ಟರ್- 13
ಅಬಕಾರಿ ಸಬ್ ಇನ್ಸ್ಪೆಕ್ಟರ್- 7
ಜೂನಿಯರ್ ಸ್ಟೆನೋಗ್ರಾಫರ್-3
ಸಹಾಯಕ ಅಬಕಾರಿ ಗಾರ್ಡ್- 23
ಒಟ್ಟು - 46 ಹುದ್ದೆಗಳು
ವಿದ್ಯಾರ್ಹತೆ
ಅಬಕಾರಿ ಇನ್ಸ್ಪೆಕ್ಟರ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಪದವಿ ಪಡೆದಿರಬೇಕು.
ಅಬಕಾರಿ ಸಬ್ ಇನ್ಸ್ಪೆಕ್ಟರ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಪಿಯುಸಿ ಪಾಸಾಗಿರಬೇಕು.
ಜೂನಿಯರ್ ಸ್ಟೆನೋಗ್ರಾಫರ್-ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಪಿಯುಸಿ ಪಾಸಾಗಿರಬೇಕು.
ಸಹಾಯಕ ಅಬಕಾರಿ ಗಾರ್ಡ್- 7ನೇ ತಗರತಿ ಪಾಸಾಗಿರಬೇಕು.
ವಯೋಮಿತಿ:
ಸಹಾಯಕ ಅಬಕಾರಿ ಗಾರ್ಡ್, ಜೂನಿಯರ್ ಸ್ಟೆನೋಗ್ರಾಫರ್, ಅಬಕಾರಿ ಇನ್ಸ್ಪೆಕ್ಟರ್, ಅಬಕಾರಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 45 ವರ್ಷ ಮೀರಿರಬಾರದು.
ಇದನ್ನೂ ಓದಿ: Indian Air Force Recruitment 2021: ತಿಂಗಳಿಗೆ ₹ 1,77,500 ಸಂಬಳ, ಭಾರತೀಯ ವಾಯುಪಡೆಯಲ್ಲಿ BE, B Tech ಪದವೀಧರರಿಗೆ ಉದ್ಯೋಗ
ವೇತನ:
ಸಹಾಯಕ ಅಬಕಾರಿ ಗಾರ್ಡ್, ಜೂನಿಯರ್ ಸ್ಟೆನೋಗ್ರಾಫರ್, ಅಬಕಾರಿ ಇನ್ಸ್ಪೆಕ್ಟರ್, ಅಬಕಾರಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ