ESIC Recruitment: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ಪ್ರಾಧ್ಯಾಪಕ ಹುದ್ದೆ ನೇಮಕಾತಿ: ನಾಳೆಯೇ ವಾಕ್​-ಇನ್-ಇಂಟರ್​​ವ್ಯೂ

ಇದು ಮೂರು ವರ್ಷದ ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, ಅಭ್ಯರ್ಥಿಯ ಕಾರ್ಯ ದಕ್ಷತೆ ಅನುಸಾರ ಎರಡು ವರ್ಷಗಳ ಕಾಲ  ವಿಸ್ತರಣೆ ನಡೆಸಲಾಗುವುದು. 

 ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

  • Share this:
    ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ನಿಗಮವು (Employees’ State Insurance Corporation Karnataka) ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಜೂನ್​ 10ರಂದು ನೇರ ಸಂದರ್ಶನ ನಡೆಯಲಿದೆ.

    ಇದು ಮೂರು ವರ್ಷದ ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, ಅಭ್ಯರ್ಥಿಯ ಕಾರ್ಯ ದಕ್ಷತೆ ಅನುಸಾರ ಎರಡು ವರ್ಷಗಳ ಕಾಲ  ವಿಸ್ತರಣೆ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC ಕರ್ನಾಟಕ)
    ಹುದ್ದೆಗಳ ಸಂಖ್ಯೆ: 7
    ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
    ಹುದ್ದೆಯ ಹೆಸರು: ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
    ವೇತನ: 130797-152241 ರೂ- ಪ್ರತಿ ತಿಂಗಳು











































    ಹುದ್ದೆ ಮಾಹಿತಿಹುದ್ದೆ ಸಂಖ್ಯೆವೇತನ
    ತುರ್ತು ಮೆಡಿಸಿನ್ ಅಸೋಸಿಯೇಟ್ ಪ್ರೊಫೆಸರ್1130797 ರೂ ಮಾಸಿಕ
    ಅನಾಟಮಿ - ಅಸಿಸ್ಟೆಂಟ್ ಪ್ರೊಫೆಸರ್1152241 ರೂ ಮಾಸಿಕ
    ಅನಾಟಮಿ- ಅಸಿಸ್ಟೆಂಟ್ ಪ್ರೊಫೆಸರ್1152241 ರೂ ಮಾಸಿಕ
    ಪಿಜಿಯಲಾಜಿ- ಅಸಿಸ್ಟೆಂಟ್ ಪ್ರೊಫೆಸರ್1152241 ರೂ ಮಾಸಿಕ
    ಫಾರ್ಮಾಲಾಜಿ- ಅಸಿಸ್ಟೆಂಟ್ ಪ್ರೊಫೆಸರ್1152241 ರೂ ಮಾಸಿಕ
    ಫಾರೆನ್ಸಿಕ್ ಮೆಡಿಸಿನ್​- ಅಸಿಸ್ಟೆಂಟ್ ಪ್ರೊಫೆಸರ್1152241 ರೂ ಮಾಸಿಕ
    ಎಮೆರ್ಜೆನ್ಸಿ ಮೆಡಿಸಿನ್​-ಅಸಿಸ್ಟೆಂಟ್ ಪ್ರೊಫೆಸರ್1152241 ರೂ ಮಾಸಿಕ

    ವಯಸ್ಸಿನ ಮಿತಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 67 ವರ್ಷಗಳು.

    ವಯಸ್ಸಿನ ಸಡಿಲಿಕೆ:
    ನೌಕರರ ರಾಜ್ಯ ವಿಮಾ ನಿಗಮದ ಕರ್ನಾಟಕ ನಿಯಮಗಳ ಪ್ರಕಾರ

    ಇದನ್ನು ಓದಿ: ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಾಕ್​ ಇನ್ ಇಂಟರ್​ವ್ಯೂ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಶೈಕ್ಷಣಿಕ

    ಆಯ್ಕೆ ವಿಧಾನ
    ವಾಕ್ ಇನ್ ಇಂಟರ್​ವ್ಯೂ

    ಅನುಭವ
    ಶೈಕ್ಷಣಿಕ ಅನುಭವ, ವೈದ್ಯಕೀಯ ಸಂಸ್ಥೆಗಳ ನಿಯಮಾವಳಿಗಳಲ್ಲಿ ಶಿಕ್ಷಕರಿಗೆ ಕನಿಷ್ಠ ಅರ್ಹತೆಗಳು, 1998 ಪ್ರಕಾರದ ಅನುಭವ ಹೊಂದಿರಬೇಕು.

    ಇದನ್ನು ಓದಿ: ಟ್ರೈನಿ ಮೈನಿಂಗ್ ಇಂಜಿನಿಯರಿಂಗ್ ಹುದ್ದೆಗೆ ವಾಕ್​-ಇನ್​-ಇಂಟರ್​ವ್ಯೂ

    ಸೂಚನೆ
    ನೇರ ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಭ್ಯರ್ಥಿಗಳು  ESIC ವೆಬ್‌ಸೈಟ್‌ನಿಂದ ನಿಗದಿತ ಅರಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ಜೊತೆಗೆ ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಮೇ 31, 2022
    ವಾಕ್-ಇನ್ ದಿನಾಂಕ: 10 ಜೂನ್​2022

     ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: esic.nic.in

    ನೇರ ಸಂದರ್ಶನದ ಸಮಯ
    ಜೂನ್​​​ 10 ರಂದು ಬೆಳಗ್ಗೆ 11 ಗಂಟೆಗೆ

    ಸಂದರ್ಶನ ನಡೆಯುವ ಸ್ಥಳ
    ಇಎಸ್​ಐಸಿ ಮೆಡಿಕಲ್​ ಕಾಲೇಜ್​, ಪಿಜಿಐಎಂಎಸ್ಆರ್​ ಮತ್ತು ಮಾಡೆಲ್​ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು.

    ಆಯ್ಕೆ ವಿಧಾನ

    ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ
    ಆಯ್ಕೆ ಮಂಡಳಿಯ ಮುಂದೆ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

    ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ

    -ಎರಡು ಪಾಸಪೋರ್ಸ್​ ಸೈಜ್​ ಫೋಟೋ
    -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
    -ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ
    Published by:Seema R
    First published: