ESIC Recruitment 2021: ತಿಂಗಳ ಸಂಬಳ ₹ 76,000, ನೇರ ಸಂದರ್ಶನ; ಕಲಬುರ್ಗಿ ಡೆಂಟಲ್​ ಕಾಲೇಜಿನಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ನಿಯಮಗಳಂತೆ ಒಬಿಸಿ ವರ್ಗಕ್ಕೆ 3 ವರ್ಷ ಮತ್ತು ಎಸ್​​/ಎಸ್​ಟಿ ವರ್ಗಕ್ಕೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ

ಇಎಸ್​ಐಸಿ

ಇಎಸ್​ಐಸಿ

  • Share this:
    ESIC Recruitment 2021:  ಕರ್ನಾಟಕ ರಾಜ್ಯ ಇಎಸ್​ಐಸಿ ಡೆಂಟಲ್ ಕಾಲೇಜಿ(ESIC Medical College)ನಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ(Recruitment) ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಖಾಲಿ ಇರುವ ಬೋಧಕ (ಟ್ಯೂಟರ್-Tutor)​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕೆಲಸ ಅರಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.





















    ಖಾಲಿ ಇರುವ ಹುದ್ದೆಗಳು ಕೆಲಸದ ಸ್ಥಳ ವಯೋಮಿತಿ ವಿದ್ಯಾರ್ಹತೆ ಆಯ್ಕೆ ಪ್ರಕ್ರಿಯೆ ಸಂಬಳ ಹುದ್ದೆಗಳ ಮೀಸಲಾತಿ
    21  ಕಲಬುರ್ಗಿ, ಕರ್ನಾಟಕ 30 ವರ್ಷ ಮೀರಿರಬಾರದು ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಡೆಂಟಲ್​ ಸರ್ಜರಿಯಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕನಿಷ್ಠ 1 ವರ್ಷ ಅನುಭವ ಇರಬೇಕು. ಸಂದರ್ಶನ  ಮಾಸಿಕ ವೇತನ 76,000 ರೂ. ಸಾಮಾನ್ಯ-10, ಒಬಿಸಿ-05, ಎಸ್​ಸಿ- 03, ಎಸ್​ಟಿ-01, ಎಡಬ್ಲ್ಯೂಎಸ್​​-02



    ಇಎಸ್​​ಐಸಿ(Employees' State Insurance Corportion) ಡೆಂಟಲ್​ ಕಾಲೇಜು ಕಲಬುರ್ಗಿಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಇಎಸ್​ಐಸಿ ಮೆಡಿಕಲ್​ ಕಾಲೇಜಿನ ಬೋರ್ಡ್​ ಉದ್ಯೋಗ ಮಾಡ ಬಯಸುವ ಆಸಕ್ತರು ಈಗಲೇ ಅರ್ಜಿ ಸಲ್ಲಿಸಬಹುದಾಗಿದೆ.

    • ಸದ್ಯ ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಅಗತ್ಯತೆಗನುಗುಣಗಾಗಿ ಕಡಿಮೆ/ ಹೆಚ್ಚು ಮಾಡಲಾಗುತ್ತದೆ.

    • ಸಡಿಲಿಕೆ: ಕೇಂದ್ರ ಸರ್ಕಾರದ ನಿಯಮಗಳಂತೆ ಒಬಿಸಿ ವರ್ಗಕ್ಕೆ 3 ವರ್ಷ ಮತ್ತು ಎಸ್​​/ಎಸ್​ಟಿ ವರ್ಗಕ್ಕೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

    • ಸಾಮಾನ್ಯ ವರ್ಗದಡಿಯಲ್ಲಿ ಅರ್ಜಿ ಸಲ್ಲಿಸುವ ಎಸ್​​/ಎಸ್​ಟಿ/ಒಬಿಸಿ ಅಭ್ಯರ್ಥಿಗಳಿಗೆ ಯಾವುದೇ ವಯಸ್ಸಿನ ಸಡಿಲಿಕೆ ಇರುವುದಿಲ್ಲ.


    ಅರ್ಜಿ ಸಲ್ಲಿಸುವುದು ಹೇಗೆ?

    • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅರ್ಹತಾ ಮಾನದಂಡಗಳ ಬಗ್ಗೆ ತಿಳಿದುಕೊಂಡಿರಬೇಕು.

    • ಅರ್ಜಿ ನಮೂನೆಯನ್ನು ಜಾಹೀರಾತಿನ ಜೊತೆ ಅಟ್ಯಾಚ್ ಮಾಡಿರಬೇಕು. ಎಲ್ಲಾ ಅಭ್ಯರ್ಥಿಗಳು ಅರ್ಜಿಯನ್ನು ಡೌನ್​ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಅಕ್ಟೋಬರ್ 21, ಬೆಳಗ್ಗೆ 9-11 ಗಂಟೆಯೊಳಗೆ ಇಎಸ್​ಐಸಿ ಡೆಂಟಲ್​ ಕಾಲೇಜು ಕಲಬುರ್ಗಿ ಇವರಿಗೆ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಮನವಿ ಮಾಡಲಾಗಿದೆ.

    • ಅಭ್ಯರ್ಥಿಗಳು ಅಕ್ಟೋಬರ್ 21ರಂದು ಬೆಳಗ್ಗೆ 9 ಗಂಟೆಗೆ ಡೆಂಟಲ್ ಕಾಲೇಜಿನಲ್ಲಿ ಹಾಜರಿರಬೇಕು.

    • ಅಭ್ಯರ್ಥಿಗಳು ಸಂದರ್ಶನ ದಿನ ದಾಖಲಾತಿ ಪರಿಶೀಲನೆ ಸಮಯದಲ್ಲಿ ಕೇಳುವ ಎಲ್ಲಾ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.

    • ಅರ್ಜಿಯ ಜೊತೆಗೆ ಮೂಲ ದಾಖಲಾತಿಗಳನ್ನು ಅಭ್ಯರ್ಥಿ ತಂದಿರಬೇಕು.




    ಸಂದರ್ಶನದ ವೇಳೆ ಸಲ್ಲಿಸಬೇಕಾದ ದಾಖಲಾತಿಗಳು

    ಇದನ್ನೂ ಓದಿ:HESCOM Recruitment 2021: ಬಿಇ/ಬಿಟೆಕ್​ ಪದವೀಧರರಿಗೆ ಹೆಸ್ಕಾಂನಲ್ಲಿ ಉದ್ಯೋಗಾವಕಾಶ



    • ಎಸ್​ಎಸ್​ಎಲ್​ಸಿ/10ನೇ ತರಗತಿ ಅಂಕಪಟ್ಟಿ

    • ಬಿಡಿಎಸ್​ ಸರ್ಟಿಫಿಕೇಟ್

    • ಎಂಡಿಎಸ್​ ಸರ್ಟಿಫಿಕೇಟ್ (ಯಾವುದಾದರೂ)

    • ಸ್ಟೇಟ್ ಡೆಂಟಲ್ ಕೌನ್ಸಿಲ್​​ನೊಂದಿಗೆ ರಿಜಿಸ್ಟ್ರೇಶನ್ ಮಾಡಿರುವ ಪ್ರತಿ

    • ಇಂಟರ್ನ್​ಶಿಪ್​ ಪೂರ್ಣಗೊಳಿಸಿರುವ ಸರ್ಟಿಫಿಕೇಟ್(ಅಗತ್ಯ ಇದ್ದರೆ)

    • ಜಾತಿ ಪ್ರಮಾಣ ಪತ್ರ(ಅನ್ವಯವಾದರೆ)

    • ಅನುಭವ ಪ್ರಮಾಣಪತ್ರ

    • ಎನ್​ಒಸಿ (ಈಗಾಗಲೇ ಕೆಲಸ ಮಾಡುತ್ತಿದ್ದರೆ)

    • ಗುರುತಿನ ಚೀಟಿ

    • 2 ಪಾಸ್​​ಪೋರ್ಟ್​ ಅಳತೆಯ ಫೋಟೋಗಳು

    • ಬೇರೆ ಯಾವುದೇ ದಾಖಲಾತಿಗಳು


    ಆಯ್ಕೆ ಪ್ರಕ್ರಿಯೆ ಹೇಗೆ?

    • ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

    • ಎಲ್ಲಾ ಅರ್ಹ ಅಭ್ಯರ್ಥಿಗಳು ತಮ್ಮ ಹೆಸರನ್ನು ಅಕ್ಟೋಬರ್ 21ರಂದು ಇಎಸ್​ಐಸಿ ಡೆಂಟಲ್​ ಕಾಲೇಜು ಕಲಬುರ್ಗಿ ಇಲ್ಲಿ ನೊಂದಾಯಿಸಿರಬೇಕು.

    • ಅರ್ಹ ಅಭ್ಯರ್ಥಿಗಳಿಗೆ 30 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ. ಒಂದು ಗಂಟೆಯ ಕಾಲಾವಕಾಶ(ಮಧ್ಯಾಹ್ನ 1-2) ನೀಡಲಾಗುತ್ತದೆ. ಬಳಿಕ ಇಎಸ್​ಐಸಿ ಬೋರ್ಡ್ ಅರ್ಹ​ ಅಭ್ಯರ್ಥಿಗಳ ಹೆಸರನ್ನು ಶಾರ್ಟ್​ಲಿಸ್ಟ್​​ ಮಾಡುತ್ತದೆ.

    • ಶಾರ್ಟ್​ಲಿಸ್ಟ್​ ಆದ ಅಭ್ಯರ್ಥಿಗಳ ಫಲಿತಾಂಶವನ್ನು ಅಕ್ಟೋಬರ್ 21ರಂದು ಸಂಜೆ 5 ಗಂಟೆಗೆ ಕಾಲೇಜಿನ ನೋಟಿಸ್​ ಬೋರ್ಡ್​​ನಲ್ಲಿ ಪ್ರಕಟಿಸಲಾಗುತ್ತದೆ.

    • ಶಾರ್ಟ್​​ಲಿಸ್ಟ್​​ ಆದ ಅಭ್ಯರ್ಥಿಗಳು ಅಕ್ಟೋಬರ್ 22ರಂದು ಸಂದರ್ಶನಕ್ಕೆ ಬರಬೇಕು.

    • ಅಂತಿಮ ಆಯ್ಕೆಯನ್ನು ಸಂದರ್ಶನದಲ್ಲಿ ಅಭ್ಯರ್ಥಿಯ ಪರ್ಫಾಮೆನ್ಸ್​ ಆಧರಿಸಿ ಮಾಡಲಾಗುತ್ತದೆ.

    • ಆಯ್ಕೆಯಾದ ಅಭ್ಯರ್ಥಿಗಳು ಕೂಡಲೇ ಆಫರ್ ಲೆಟರ್​ನೊಂದಿಗೆ ಕೆಲಸಕ್ಕೆ ಹಾಜರಾಗಬೇಕು.

    • ಅಂತಿಮ ಫಲಿತಾಂಶ https://www.esic.nic.in/recruitments ವೆಬ್​ಸೈಟ್​ನಲ್ಲಿ ಲಭ್ಯವಾಗುತ್ತದೆ.


    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ https://www.esic.nic.in/attachments/recruitmentfile/edfb78dbb6a7fe2df6730a46aac65a7c.pdf ಡೌನ್​ಲೋಡ್ ಮಾಡಿಕೊಳ್ಳಿ.
    Published by:Latha CG
    First published: