ESIC Recruitment: ಕಾರ್ಮಿಕರ ವಿಮಾ ನಿಗಮದಲ್ಲಿ ಭರ್ಜರಿ ನೇಮಕಾತಿ; ವಾಕ್​ ಇನ್​ ಇಂಟರ್​ವ್ಯೂ ಮೂಲಕ ಆಯ್ಕೆ

ಇದು ಮೂರು ವರ್ಷದ ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, ಅಭ್ಯರ್ಥಿಯ ಕಾರ್ಯ ದಕ್ಷತೆ ಅನುಸಾರ ಎರಡು ವರ್ಷಗಳ ಕಾಲ ವಿಸ್ತರಣೆ ನಡೆಸಲಾಗುವುದು.

 ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

  • Share this:
    ಕಾರ್ಮಿಕರ ರಾಜ್ಯ ವಿಮಾ ನಿಗಮನದಲ್ಲಿ (Employees State Insurance Corporation) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 32 ಅಸೋಸಿಯೇಟ್ ಪ್ರೊಫೆಸರ್ (Professor), ಅಸಿಸ್ಟೆಂಟ್ ಪ್ರೊಫೆಸರ್ (Assistant Professor) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇಎಸ್​ಐಸಿ ಮೆಡಿಕಲ್​ ಕಾಲೇಜುಗಳಿಗೆ ಈ ಹುದ್ದೆ ಭರ್ತಿ ಕ್ರಮ ನಡೆಯಲಿದೆ. ಆಸಕ್ತರು ನೇರ ಸಂದರ್ಶನದಲ್ಲಿ (Walk-in-interview) ಭಾಗಿಯಾಗಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್​ 30 ಕಡೆಯ ದಿನಾಂಕವಾಗಿದೆ.

    ಇದು ಮೂರು ವರ್ಷದ ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, ಅಭ್ಯರ್ಥಿಯ ಕಾರ್ಯ ದಕ್ಷತೆ ಅನುಸಾರ ಎರಡು ವರ್ಷಗಳ ಕಾಲ ವಿಸ್ತರಣೆ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ
    ಹುದ್ದೆಯ ಹೆಸರು: ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
    ಹುದ್ದೆಗಳ ಸಂಖ್ಯೆ: 32
    ಉದ್ಯೋಗ ಸ್ಥಳ: ಬೆಂಗಳೂರು
    ವೇತನ: 130797-228942 ರೂ ಪ್ರತಿ ತಿಂಗಳು























    ಹುದ್ದೆಹುದ್ದೆ ಸಂಖ್ಯೆವೇತನ
    ಪ್ರಾಧ್ಯಾಪಕ3228942 ರೂ ಮಾಸಿಕ
    ಅಸೋಸಿಯೇಟ್ ಪ್ರೊಫೆಸರ್12152241 ರೂ ಮಾಸಿಕ
    ಸಹಾಯಕ ಪ್ರಾಧ್ಯಾಪಕ17130797 ರೂ ಮಾಸಿಕ

    ಶೈಕ್ಷಣಿಕ ಅರ್ಹತೆ: ESIC ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ

    ವಯಸ್ಸಿನ ಮಿತಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 67 ವರ್ಷಗಳು.

    ವಯೋಮಿತಿ ಸಡಿಲಿಕೆ:
    ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಕರ್ನಾಟಕ ನಿಯಮಗಳ ಪ್ರಕಾರ

    ಇದನ್ನು ಓದಿ: ಬಿಎಸ್​ಎನ್​ಎಲ್​ನಲ್ಲಿ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನ

    ಆಯ್ಕೆ ವಿಧಾನ
    ವಾಕ್ ಇನ್ ಇಂಟರ್​ವ್ಯೂ

    ಅನುಭವ
    ಶೈಕ್ಷಣಿಕ ಅನುಭವ, ವೈದ್ಯಕೀಯ ಸಂಸ್ಥೆಗಳ ನಿಯಮಾವಳಿಗಳಲ್ಲಿ ಶಿಕ್ಷಕರಿಗೆ ಕನಿಷ್ಠ ಅರ್ಹತೆಗಳು, 1998 ಪ್ರಕಾರದ ಅನುಭವ ಹೊಂದಿರಬೇಕು

    ಸೂಚನೆ
    ನೇರ ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ESIC ವೆಬ್‌ಸೈಟ್‌ನಿಂದ ನಿಗದಿತ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ಜೊತೆಗೆ ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಜೂನ್​ 14, 2022
    ವಾಕ್-ಇನ್ ದಿನಾಂಕ: 30 ಜೂನ್​2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: esic.nic.in

    ಇದನ್ನು ಓದಿ: ಬೆಳಗಾವಿಯ ಎಚ್​ಎಲ್​ಎಲ್​​ ಲೈಫ್​ಕೇರ್​​ನಲ್ಲಿ ಟ್ರೈನಿಗಳ ನೇಮಕಾತಿ; SSLC, ITI ಆಗಿದ್ರೆ ನೋಡಿ

    ನೇರ ಸಂದರ್ಶನ

    ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಜೂನ್​ 28ರಂದು ನೇರ ಸಂದರ್ಶನ ನಡೆಯಲಿದೆ.
    ಸಹಾಯಕ ಪ್ರಾಧ್ಯಾಪಕರು 29 ಮತ್ತು 30 ಜೂನ್ ರಂದು ಎರಡು ದಿನ ನೇರ ಸಂದರ್ಶನ ನಡೆಯಲಿದೆ

     ಸಂದರ್ಶನ ನಡೆಯುವ ಸ್ಥಳ
    ನ್ಯೂ ಅಕಾಡೆಮಿಕ್​ ಬ್ಲಾಕ್​, ಇಎಸ್​ಐಸಿ ಮೆಡಿಕಲ್​ ಕಾಲೇಜ್​, ಪಿಜಿಐಎಂಎಸ್ಆರ್​ ಮತ್ತು ಮಾಡೆಲ್​ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು.

    ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ

    -ಎರಡು ಪಾಸಪೋರ್ಸ್​ ಸೈಜ್​ ಫೋಟೋ
    -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
    -ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ
    Published by:Seema R
    First published: