ESIC Recruitment: ನೌಕರರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ನಾಳೆ ನಡೆಯಲಿದೆ ವಾಕ್​ ಇನ್​

ಇದು ಮೂರು ವರ್ಷದ ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, ಅಭ್ಯರ್ಥಿಯ ಕಾರ್ಯ ದಕ್ಷತೆ ಅನುಸಾರ ಎರಡು ವರ್ಷಗಳ ಕಾಲ ವಿಸ್ತರಣೆ ನಡೆಸಲಾಗುವುದು.

ESICಯಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

ESICಯಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

 • Share this:
  ಕರ್ನಾಟಕ ನೌಕರರ ರಾಜ್ಯ ವಿಮಾ ನಿಗಮವು (Employees’ State Insurance Corporation Karnataka) ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 33 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು,  ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.  ಆಗಸ್ಟ್​​ 24ರಂದು ನೇರ ಸಂದರ್ಶನ ನಡೆಯಲಿದೆ.

  ಇದು ಮೂರು ವರ್ಷದ ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, ಅಭ್ಯರ್ಥಿಯ ಕಾರ್ಯ ದಕ್ಷತೆ ಅನುಸಾರ ಎರಡು ವರ್ಷಗಳ ಕಾಲ ವಿಸ್ತರಣೆ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  ಸಂಸ್ಥೆಯ ಹೆಸರು: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC ಕರ್ನಾಟಕ)
  ಹುದ್ದೆಗಳ ಸಂಖ್ಯೆ: 7
  ಉದ್ಯೋಗ ಸ್ಥಳ: ಬೆಂಗಳೂರು
  ಹುದ್ದೆಯ ಹೆಸರು: ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
  ವೇತನ: 130797-228942 ರೂ- ಪ್ರತಿ ತಿಂಗಳು
  ಹುದ್ದೆಹುದ್ದೆ ಸಂಖ್ಯೆವೇತನ
  ಪ್ರೊಫೆಸರ್2228942 ರೂ ಮಾಸಿಕ
  ಅಸೋಸಿಯೇಟ್ ಪ್ರೊಫೆಸರ್13152241 ರೂ ಮಾಸಿಕ
  ಸಹಾಯಕ ಪ್ರಾಧ್ಯಾಪಕ18130797 ರೂ ಮಾಸಿಕ


  ವಯಸ್ಸಿನ ಮಿತಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 67 ವರ್ಷಗಳು.

  ವಯಸ್ಸಿನ ಸಡಿಲಿಕೆ:
  ನೌಕರರ ರಾಜ್ಯ ವಿಮಾ ನಿಗಮದ ಕರ್ನಾಟಕ ನಿಯಮಗಳ ಪ್ರಕಾರ

  ಆಯ್ಕೆ ಪ್ರಕ್ರಿಯೆ
  ಸಂದರ್ಶನ ಮತ್ತು ಶೈಕ್ಷಣಿಕ ಅರ್ಹತೆ

  ಆಯ್ಕೆ ವಿಧಾನ
  ವಾಕ್ ಇನ್ ಇಂಟರ್​ವ್ಯೂ

  ಅನುಭವ
  ಶೈಕ್ಷಣಿಕ ಅನುಭವ, ವೈದ್ಯಕೀಯ ಸಂಸ್ಥೆಗಳ ನಿಯಮಾವಳಿಗಳಲ್ಲಿ ಶಿಕ್ಷಕರಿಗೆ ಕನಿಷ್ಠ ಅರ್ಹತೆಗಳು, 1998 ಪ್ರಕಾರದ ಅನುಭವ ಹೊಂದಿರಬೇಕು.

  ಇದನ್ನು ಓದಿ: ಗದಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ; ನೇರ ಸಂದರ್ಶನದ ಮೂಲಕ ಆಯ್ಕೆ

  ಅಧಿಸೂಚನೆ ಪ್ರಮುಖ ಲಿಂಕ್‌ಗಳು
  ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ವೆಬ್‌ಸೈಟ್: esic.nic.in

  ನೇರ ಸಂದರ್ಶನದ ಸಮಯ
  ಪ್ರೊಫೆಸರ್ ಹುದ್ದೆಗೆ  ಆಗಸ್ಟ್​ 22 ರಂದು ಬೆಳಗ್ಗೆ 9.30
  ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ  ಆಗಸ್ಟ್​ 22 ರಂದು ಬೆಳಗ್ಗೆ 9.30
  ಸಹಾಯಕ ಪ್ರಾಧ್ಯಾಪಕ ಹುದ್ದೆಗೆ  ಆಗಸ್ಟ್​ 23 ಮತ್ತು 24 ರಂದು ಬೆಳಗ್ಗೆ 9.30

  ಸಂದರ್ಶನ ನಡೆಯುವ ಸ್ಥಳ
  ನ್ಯೂ ಅಕಾಡೆಮಿಕ್​ ಬಿಲ್ಡಿಂಗ್​, ಇಎಸ್​ಐಸಿ ಮೆಡಿಕಲ್​ ಕಾಲೇಜ್​, ಪಿಜಿಐಎಂಎಸ್ಆರ್​ ಮತ್ತು ಮಾಡೆಲ್​ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು.

  ಇದನ್ನು ಓದಿ: ಧಾರವಾಡದಲ್ಲಿದೆ ಸಹಾಯಕ ಪ್ರಾಧ್ಯಾಪಕರ ಹುದ್ದೆ; ಮಾಸಿಕ 45000 ರೂ ವೇತನ

  ಆಯ್ಕೆ ವಿಧಾನ

  ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ
  ಆಯ್ಕೆ ಮಂಡಳಿಯ ಮುಂದೆ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

  ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ

  -ಎರಡು ಪಾಸಪೋರ್ಸ್​ ಸೈಜ್​ ಫೋಟೋ
  -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
  -ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ
  Published by:Seema R
  First published: