Good News: ನಿರುದ್ಯೋಗಿಗಳ ಸವಲತ್ತನ್ನು ಒಂದು ವರ್ಷ ವಿಸ್ತರಿಸಿದ ಇಎಸ್​ಐಸಿ

ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಇಎಸ್​ಐಸಿ ನೆರವಾಗುತ್ತಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಕೈಗಾರಿಕಾ ಕಾರ್ಮಿಕರ ನಿರುದ್ಯೋಗ ಸವಲತ್ತುಗಳನ್ನು ಇನ್ನೊಂದು ವರ್ಷ ಮುಂದುವರೆಸುವುದಾಗಿ ಇಎಸ್​ಐಸಿ (Employees’ State Insurance Corporation ) ತಿಳಿಸಿದೆ. ಇದರ ಅನ್ವಯ ಕೈಗಾರಿಕಾ ಕಾರ್ಮಿಕರಿಗೆ 2022 ಜೂನ್ 30 ರವರೆಗೆ ಈ ಸವಲತ್ತನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಇಎಸ್​ಐಸಿ ನೆರವಾಗುತ್ತಿದೆ. ಈ ಯೋಜನೆ ಕಳೆದ ಜೂನ್​ 30ರಂದೇ ಕೊನೆಗೊಂಡಿತು. ಆದರೆ, ಕೋವಿಡ್​ ಸಾಂಕ್ರಮಿಕ ಹಿನ್ನಲೆ ಜನರು ಸಂಕಷ್ಟದಲ್ಲಿದ್ದು, ಅವರಿಗೆ ನೆರವನ್ನು ಒದಗಿಸುವ ದೃಷ್ಟಿಯಿಂದ ಈ ಸೌಲಭ್ಯಗಳನ್ನು ಮುಂದುವರೆಸುವುದಾಗಿ ತಿಳಿಸಿದೆ.

    ನಿರುದ್ಯೋಗಿಗಳಿಗೆ ಸವಲತ್ತನ್ನು ವಿಸ್ತರಿಸುವ ಕುರಿತು ಮಂಡಳಿಯ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ, ಇದರಿಂದ ಉದ್ಯೋಗ ಕಳೆದುಕೊಂಡ ಚಂದಾದಾರರಿಗೆ ನೆರವಾಗಲಿದೆ ಎಂದು ಮಂಡಳಿಯ ಸದಸ್ಯ ಅಮರ್​​​ಜೀತ್​ ಕೌರ್ ತಿಳಿಸಿದ್ದಾರೆ.

    ಕೋವಿಡ್​ 19ನಿಂದ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದು, ಕೆಲಸದಿಂದ ಕಾರ್ಮಿಕರನ್ನು ಕೈ ಬಿಟ್ಟ ಬಗ್ಗೆ ಪಾರದರ್ಶಕವಾಗಿ ವರದಿ ಮಾಡುತ್ತಿಲ್ಲ. ಈ ಹಿನ್ನಲೆ ಈ ಬಗ್ಗೆ ಇಎಸ್​ಐಸಿ ಹಚ್ಚಿನ ಗಮನ ಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

    ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ಇಎಸ್‌ಐಸಿ ಚಂದಾದಾರರು ತಮ್ಮ ಮೂರು ತಿಂಗಳ ಸಂಬಳದ 50 ಪ್ರತಿ ಶತದಷ್ಟು ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
    ವಿಮೆ ಮಾಡಿದ ವ್ಯಕ್ತಿಯು ನೇರವಾಗಿ ಇಎಸ್​ಐಸಿ ಶಾಖೆಗೆ ತಮ್ಮ ಕ್ಲೈಮ್ ಸಲ್ಲಿಸಬಹುದು. ಜೊತೆಗೆ ಅವರು ತಮ್ಮ ಹಿಂದಿನ ಸಂಸ್ಥೆಗೆ ಭೇಟಿ ನೀಡಬೇಕಾಗಿಲ್ಲ. ಕೋವಿಡ್​ ಸಾಂಕ್ರಾಮಿಕದ ಬಳಿಕ ಈ ನಿರುದ್ಯೋಗ ಅಡಿ ಯೋಜನೆಯಲ್ಲಿ 5000ಕ್ಕೂ ಹೆಚ್ಚ ಕಾರ್ಮಿಕರು ಪ್ರಯೋಜನ ಪಡೆದಿದ್ದಾರೆ.

    ಏನಿದು ಯೋಜನೆ?
    ಯಾವ ಕಾರ್ಮಿಕರು ಕೊರೋನಾ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಳ್ಳುತ್ತಾರೋ ಅಂತಹ ಕಾರ್ಮಿಕರಿಕೆ ಪರಿಹಾರ ದೊರಕಿಸಲಾಗುವುದು. ಫಲಾನುಭವಿಗಳು ಈ ಯೋಜನೆ ಅಡಿ ಪ್ರಯೋಜನ ಪಡೆಯಲು ಅಫಿಡವಿಟ್​ ಅರ್ಜಿ ಸಲ್ಲಿಸಬೇಕು.

    ಹೇಗೆ ಅರ್ಜಿ ದಾಖಲಿಸುವುದು

    ಇಎಸ್​ಐಸಿ ಯಿಂದ ವಿಮೆ ಮಾಡಿಸಿಕೊಂಡಿರುವ ಅರ್ಹ ಕಾರ್ಮಿಕರು, ಇಎಸ್​ಐಸಿ ಶಾಖೆಯ ಕಚೇರಿಗೆ ಭೇಟಿ ನೀಡಿ ಪ್ರಯೋಜನಗಳಿಗಾಗಿ ಅರ್ಜಿ ಸಲ್ಲಿಸಬಹುದು. ನಿಬಂಧನೆಯ ಅಡಿಯಲ್ಲಿ ಎಲ್ಲಾ ಪಾವತಿಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮಾಡಲಾಗುತ್ತದೆ

    ಇದನ್ನು ಓದಿ: ಕೊಳಗೇರಿಯಲ್ಲಿ ಅರಳಿದ ಪ್ರತಿಭೆ: ಮೊದಲ ಪ್ರಯತ್ನದಲ್ಲೇ ಐಎಎಸ್​ ಅಧಿಕಾರಿಯಾದ ಉಮ್ಮಲ್​ ಖೇರ್​

    ಇದರ ಜೊತೆಗೆ, ವಿಮೆ ಹೊಂದಿರುವವರಿಗೆ ಮತ್ತು ಫಲಾನುಭವಿಗಳಿಗಾಗಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಇಎಸ್ಐ ಫಲಾನುಭವಿಗಳ ಕಷ್ಟವನ್ನು ನಿವಾರಿಸುವ ಸಲುವಾಗಿ, ಲಾಕ್‌ ಡೌನ್ ಅವಧಿಯಲ್ಲಿ ಖಾಸಗಿ ಔಷಧ ಮಾರಾಟಗಾರರಿಂದ ಇಎಸ್‌.ಐ ಫಲಾನುಭವಿಗಳಿಂದ ಔಷಧಿಗಳನ್ನು ಖರೀದಿಸಲು ಮತ್ತು ಅದರ ನಂತರದ ಇಎಸ್‌.ಐಸಿ ಮರುಪಾವತಿಯನ್ನು ಅನುಮತಿಸಲಾಗಿದೆ

    ಇಷ್ಟೇ ಅಲ್ಲದೇ, ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶ ಅತ್ಯಂತ ಸವಾಲಿನ ಸ್ಥಿತಿಯನ್ನು ಎದುರಿಸುತ್ತಿದೆ. ಹಲವಾರು ಉದ್ದಿಮೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ ಮತ್ತು ಕಾರ್ಮಿಕರು ಕೆಲಸ ಮಾಡದಂತಾಗಿದೆ. ಕಾರ್ಮಿಕರಿಗೆ ಮತ್ತು ವಾಣಿಜ್ಯ ಕಾಯಗಳಿಗೆ, ಸರ್ಕಾರ ಈ ಸಂದರ್ಭದಲ್ಲಿ ನೀಡಿರುವ ಪರಿಹಾರದ ಕ್ರಮಗಳ ಹಿನ್ನೆಲೆಯಲ್ಲಿ ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ತನ್ನ ಬಾಧ್ಯಸ್ಥರ ಅದರಲ್ಲೂ ಉದ್ಯೋಗದಾತರ ಮತ್ತು ವಿಮಾದಾರರಿಗಾಗಿ ಈ ಕೆಳಕಂಡ ಪರಿಹಾರ ಕ್ರಮಗಳನ್ನು ಕೈಗೊಂಡಿದೆ ಮತ್ತು ಕೋವಿಡ್ 19 ವಿರುದ್ಧ ಹೋರಾಟಲು ವೈದ್ಯಕೀಯ ಸಂಪನ್ಮೂಲವನ್ನು ಬಲಪಡಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
    Published by:Seema R
    First published: