EPFO Recruitment 2022: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಫೆ.2 ಕೊನೆಯ ದಿನಾಂಕ, ಈಗಲೇ Apply ಮಾಡಿ

ಈ ಮೊದಲು ಜನವರಿ 2, 2022 ಕೊನೆಯ ದಿನಾಂಕವಾಗಿತ್ತು(Last Date). ಆದರೆ ಈಗ ಈ ದಿನಾಂಕವನ್ನು ವಿಸ್ತರಿಸಿದ್ದು, ಉದ್ಯೋಗಾಕಾಂಕ್ಷಿಗಳು(Job Seekers) ಫೆಬ್ರವರಿ 2ರವರೆಗೆ ಅರ್ಜಿ ಸಲ್ಲಿಸಬಹುದು.

EPFO

EPFO

  • Share this:
EPFO Recruitment 2022: ನೌಕರರ ಭವಿಷ್ಯ ನಿಧಿ ಸಂಸ್ಥೆ(Employees Provident Fund Organisation)ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ(Extend) ಮಾಡಿದೆ.ಈ ಮೊದಲು ಜನವರಿ 2, 2022 ಕೊನೆಯ ದಿನಾಂಕವಾಗಿತ್ತು(Last Date). ಆದರೆ ಈಗ ಈ ದಿನಾಂಕವನ್ನು ವಿಸ್ತರಿಸಿದ್ದು, ಉದ್ಯೋಗಾಕಾಂಕ್ಷಿಗಳು(Job Seekers) ಫೆಬ್ರವರಿ 2ರವರೆಗೆ ಅರ್ಜಿ ಸಲ್ಲಿಸಬಹುದು. ಒಟ್ಟು 98 ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​, ಆಡಿಟರ್, ಅಸಿಸ್ಟೆಂಟ್ ಆಡಿಟ್​ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. 2021ರ ಸೆಪ್ಟೆಂಬರ್ 8ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 2, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.epfindia.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆನೌಕರರ ಭವಿಷ್ಯ ನಿಧಿ ಸಂಸ್ಥೆ
ಹುದ್ದೆಯ ಹೆಸರುಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​, ಆಡಿಟರ್, ಅಸಿಸ್ಟೆಂಟ್ ಆಡಿಟ್​ ಆಫೀಸರ್
ಒಟ್ಟು ಹುದ್ದೆಗಳು98
ವಿದ್ಯಾರ್ಹತೆಪದವಿ
ಉದ್ಯೋಗದ ಸ್ಥಳಭಾರತ
ವೇತನಮಾಸಿಕ ₹ 15,600-39,100
ಅರ್ಜಿ ಸಲ್ಲಿಕೆ ಬಗೆ ಆಫ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ08/09/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ02/02/2022

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/09/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02/02/2022

ಹುದ್ದೆಯ ಮಾಹಿತಿ:
ಡೆಪ್ಯುಟಿ ಡೈರೆಕ್ಟರ್​-13
ಅಸಿಸ್ಟೆಂಟ್ ಡೈರೆಕ್ಟರ್​-25
ಅಸಿಸ್ಟೆಂಟ್ ಆಡಿಟ್ ಆಫೀಸರ್-26
ಆಡಿಟರ್-34
ಒಟ್ಟು -98 ಹುದ್ದೆಗಳು

ಇದನ್ನೂ ಓದಿ: HAL Recruitment 2022: ತಿಂಗಳಿಗೆ ₹ 2.40 ಲಕ್ಷ ಸಂಬಳ, ಬೆಂಗಳೂರು HALನಲ್ಲಿ ಉದ್ಯೋಗ, ಈಗಲೇ Apply ಮಾಡಿ

 ವಿದ್ಯಾರ್ಹತೆ:

ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​, ಆಡಿಟರ್, ಅಸಿಸ್ಟೆಂಟ್ ಆಡಿಟ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಯಾವುದೇ ಪದವಿ ಪಡೆದಿರಬೇಕು.

ವಯೋಮಿತಿ:
ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​, ಆಡಿಟರ್, ಅಸಿಸ್ಟೆಂಟ್ ಆಡಿಟ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 56 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:

ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​, ಆಡಿಟರ್, ಅಸಿಸ್ಟೆಂಟ್ ಆಡಿಟ್​ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಯಾವುದೇ ಸ್ಥಳದಲ್ಲಿ ಪೋಸ್ಟಿಂಗ್ ನೀಡಲಾಗುವುದು.

ವೇತನ:
ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​, ಆಡಿಟರ್, ಅಸಿಸ್ಟೆಂಟ್ ಆಡಿಟ್​ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 15,600-39,100 ವೇತನ ನೀಡಲಾಗುತ್ತದೆ.

ಇದನ್ನೂ ಓದಿ: Banking Jobs: ಕರ್ನಾಟಕ ಬ್ಯಾಂಕ್​​ನಲ್ಲಿ ಮುಖ್ಯ ಭದ್ರತಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

 ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಶ್ರೀ ಪರಿತೋಷ್​ ಕುಮಾರ್
ರೀಜನಲ್​ ಪ್ರಾವಿಡೆಂಟ್ ಫಂಡ್ ಕಮಿಷನರ್-1(HRM)
ಭವಿಷ್ಯ ನಿಧಿ ಭವನ
14 ಭಿಕಜಿ ಕ್ಯಾಮ ಸರ್ಕಲ್
ನವದೆಹಲಿ-11006
Published by:Latha CG
First published: