• ಹೋಂ
  • »
  • ನ್ಯೂಸ್
  • »
  • jobs
  • »
  • World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ!

World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ!

ನತಾಶಾ ಪೆರಿಯನಾಯಗಂ

ನತಾಶಾ ಪೆರಿಯನಾಯಗಂ

ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ ಆಯೋಜಿಸಿದ್ದ ಸ್ಪರ್ಧೆಯಲ್ಲಿ 76 ದೇಶಗಳಿಂದ ಸುಮಾರು 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಎಲ್ಲಾ ವಿದ್ಯಾರ್ಥಿಗಳಿಗೆ ಮೇಲ್ದರ್ಜೆಯ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯ ಫಲಿತಾಂಶದ ಅಧಾರದ ಮೇಲೆ ಈ ಪಟ್ಟಿಯನ್ನು ತಯಾರು ಮಾಡಿದ್ದು, 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತ ಮೂಲದ ಅಮೆರಿಕಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ʼವಿಶ್ವದ ಕುಶಾಗ್ರಮತಿʼ ಎಂಬ ಸ್ಥಾನ ಪಡೆದಿದ್ದಾಳೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • New Delhi, India
  • Share this:

ವಾಷಿಂಗ್ಟನ್: ಭಾರತ (India) ಮೂಲದ ಅಮೆರಿಕಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಎಂಬ ವಿದ್ಯಾರ್ಥಿನಿ (Student) ʼವರ್ಲ್ಡ್‌ ಬ್ರೈಟೆಸ್ಟ್ʼ ವಿದ್ಯಾರ್ಥಿನಿ ಎಂಬ ಪಟ್ಟಿಯಲ್ಲಿ ಸ್ಥಾನ ಪಡೆದು ಭಾರತದ ಹಿರಿಮೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾಳೆ. ಯುಎಸ್ ಮೂಲದ ಜಾನ್ಸ್ ಹಾಪ್‌ಕಿನ್ಸ್ ನಡೆಸುವ ʼಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ʼ ಕಾರ್ಯಕ್ರಮದಲ್ಲಿ ʼವಿಶ್ವದ ಬ್ರೈಟೆಸ್ಟ್‌ʼ (World Brightest Student) ಸ್ಟೂಡೆಂಟ್‌ ಎಂಬ ಖ್ಯಾತಿಗೆ ನತಾಶಾ ಪೆರಿಯನಾಯಗಂ (Natasha Perianayagam) ಸತತ ಎರಡನೇ ಬಾರಿಗೆ ಪಾತ್ರಳಾಗಿದ್ದಾಳೆ.


ವಿಶ್ವದ ಬ್ರೈಟೆಸ್ಟ್‌ ಸ್ಟೂಡೆಂಟ್‌


ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ ಆಯೋಜಿಸಿದ್ದ ಸ್ಪರ್ಧೆಯಲ್ಲಿ 76 ದೇಶಗಳಿಂದ ಸುಮಾರು 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಎಲ್ಲಾ ವಿದ್ಯಾರ್ಥಿಗಳಿಗೆ ಮೇಲ್ದರ್ಜೆಯ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯ ಫಲಿತಾಂಶದ ಅಧಾರದ ಮೇಲೆ ಈ ಪಟ್ಟಿಯನ್ನು ತಯಾರು ಮಾಡಿದ್ದು, 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತ ಮೂಲದ ಅಮೆರಿಕಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ʼವಿಶ್ವದ ಕುಶಾಗ್ರಮತಿʼ ಎಂಬ ಸ್ಥಾನ ಪಡೆದಿದ್ದಾಳೆ.


ಐದನೇ ತರಗತಿಯಲ್ಲಿದ್ದಾಗಲೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಪೆರಿಯನಾಯಗಂ


13 ವರ್ಷದ ಪೆರಿಯನಾಯಗಂ ನ್ಯೂಜೆರ್ಸಿಯ ಫ್ಲಾರೆನ್ಸ್ ಎಂ ಗೌಡಿನೀರ್ ಮಿಡಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ. ಮೊದಲೆ ಹೇಳಿದಂತೆ ವಿಶ್ವದ ಬ್ರೈಟೆಸ್ಟ್ ಸ್ಟೂಡೆಂಟ್‌ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದು ಇದೇ ಮೊದಲಲ್ಲ.


ಇದನ್ನೂ ಓದಿ: Deepika Padukone: ಶಿಕ್ಷಣ ತಜ್ಞರನ್ನು ದ್ವೇಷಿಸುತ್ತಿದ್ದೆ ಎಂದ ದೀಪಿಕಾ!


hಪೆರಿಯನಾಯಗಂ ಐದನೇ ತರಗತಿಯಲ್ಲಿ ಓದುತ್ತಿರುವಾಗಲೇ ಇಂತಹದ್ದೊಂದು ಹಿರಿಮೆಗೆ ಪಾತ್ರಳಾಗಿದ್ದಳು. ಈಕೆ ಐದನೆ ದರ್ಜೆ ವಿದ್ಯಾರ್ಥಿನಿಯಾಗಿದ್ದಾಗ 2021ರ ಚಳಿಗಾಲದಲ್ಲೂ ಕೂಡಾ ಜಾನ್ಸ್ ಹಾಪ್‌ಕಿನ್ಸ್ ಕೇಂದ್ರದಲ್ಲಿ ಪ್ರತಿಭಾವಂತ ಯುವಕರಿಗಾಗಿ ನಡೆದ ಪರೀಕ್ಷೆ ತೆಗೆದುಕೊಂಡಿದ್ದಳು. ಮೊದಲ ಪರೀಕ್ಷೆಯಲ್ಲಿ ಪೆರಿಯನಾಯಗಂ ಮೌಖಿಕ ಹಾಗೂ ಲಿಖಿತ ಪರೀಕ್ಷೆಯಲ್ಲಿ ಮೇಲ್ದರ್ಜೆಯ ಸಾಧನೆಯ ಮೂಲಕ ಶೇ. 90ರಷ್ಟು ಅಂಕ ಗಳಿಸಿ, ಆ ವರ್ಷದಲ್ಲಿ ಬ್ರೈಟೆಸ್ಟ್ ವಿದ್ಯಾರ್ಥಿಗಳ ಪಟ್ಟಿಯಲ್ಲಿ‌ ಸ್ಥಾನ ಪಡೆದಿದ್ದಳು.


ವಿಶ್ವವಿದ್ಯಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ


ಈ ವರ್ಷ ಜಾನ್ಸ್ ಹಾಪ್‌ಕಿನ್ಸ್ ಕೇಂದ್ರ ಮತ್ತೆ ನಡೆಸಿದ ಪ್ರತಿಭಾವಂತ ಯುವಕರಿಗಾಗಿ ಆಯೋಜಿಸಲಾಗಿದ್ದ ಎಸ್‌ಎಟಿ (SAT), ಎಸಿಟಿ (ACT), ಶಾಲೆ ಮತ್ತು ಕಾಲೇಜು ಸಾಮರ್ಥ್ಯ ಪರೀಕ್ಷೆ ಅಥವಾ ಸಿಟಿವೈ ಟ್ಯಾಲೆಂಟ್ ಸರ್ಚ್‌ನ ಭಾಗವಾಗಿ ತೆಗೆದುಕೊಂಡ ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆ ತೋರುವ ಮೂಲಕ ಮತ್ತೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಳೆ ಎಂದು ವಿಶ್ವವಿದ್ಯಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




ಕಾದಂಬರಿ ಓದುವುದು, ಚಿತ್ರಕಲೆ ಈಕೆಯ ಹವ್ಯಾಸ


ಪೆರಿಯನಾಯಗಂ ಅವರ ಪೋಷಕರು ಚೆನ್ನೈ ಮೂಲದವರು. ತಮ್ಮ ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪೋಷಕರು ಪೆರಿಯನಾಯಗಂ ಬಿಡುವಿನ ವೇಳೆಯಲ್ಲಿ JRR ಟೋಲ್ಕಿನ್ ಅವರ ಕಾದಂಬರಿಗಳನ್ನು ಓದುವ ಮತ್ತು ಚಿತ್ರಕಲೆಯಲ್ಲಿ ನಿರತಳರಾಗಿರುತ್ತಾಳೆ ಎಂದು ತಿಳಿಸಿದರು.


ಅತ್ಯಧಿಕ ಅಂಕ ಗಳಿಸಿದ ಪೆರಿಯನಾಯಗಂ


ಪ್ರಪಂಚದಾದ್ಯಂತದ ಮುಂದುವರಿದ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ಅವರ ಶೈಕ್ಷಣಿಕ ಸಾಮರ್ಥ್ಯಗಳ ಸ್ಪಷ್ಟ ಚಿತ್ರಣವನ್ನು ಒದಗಿಸಲು ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ (CTY) ಉನ್ನತ ದರ್ಜೆಯ-ಮಟ್ಟದ ಪರೀಕ್ಷೆಯನ್ನು ನಡೆಸುತ್ತದೆ. ಈ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 27 ಕ್ಕಿಂತ ಕಡಿಮೆ ಜನರು ಅರ್ಹತೆ ಪಡೆದು ಈ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ ಎಂದು ತಿಳಿಸಿದೆ. ಈ ಪೈಕಿ ಪೆರಿಯನಾಯಗಂ ಎಲ್ಲಾ ಅಭ್ಯರ್ಥಿಗಳಿಗಿಂತ ಅತ್ಯಧಿಕ ಶ್ರೇಣಿಗಳನ್ನು ಗಳಿಸಿದ್ದಾರೆ ಎಂದು ಸಂಸ್ಥೆಯು ಹೇಳಿದೆ.


ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ CTY ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಆಮಿ ಶೆಲ್ಟನ್ "ಕೇವಲ ಒಂದು ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಯಶಸ್ಸನ್ನು ನಾವು ಗುರುತಿಸುತ್ತಿಲ್ಲ. ಇಲ್ಲಿ ಅದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಅನ್ವೇಷಣೆ ಮತ್ತು ಕಲಿಕೆಯ ಪ್ರೀತಿಗೆ ಮತ್ತು ಅವರು ತಮ್ಮ ಯುವ ಜೀವನದಲ್ಲಿ ಸಂಗ್ರಹಿಸಿದ ಎಲ್ಲಾ ಜ್ಞಾನಕ್ಕೆ ನೀಡುವ ಗೌರವಾರ್ಥ" ಎಂದಿದ್ದಾರೆ.

First published: