• ಹೋಂ
  • »
  • ನ್ಯೂಸ್
  • »
  • Jobs
  • »
  • Womens Day Speech: ಮಹಿಳಾ ದಿನಾಚರಣೆಯಂದು ಈ ರೀತಿ ಭಾಷಣ ಮಾಡಿ, ಶಭಾಷ್​ ಎನಿಸಿಕೊಳ್ಳಿ

Womens Day Speech: ಮಹಿಳಾ ದಿನಾಚರಣೆಯಂದು ಈ ರೀತಿ ಭಾಷಣ ಮಾಡಿ, ಶಭಾಷ್​ ಎನಿಸಿಕೊಳ್ಳಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ಈ ನಿಯಮ ಪಾಲಿಸಿ, ಭಾಷಣ ಆರಂಭಿಸುವುದಕ್ಕೂ ಮುನ್ನ ಸಭೆಯಲ್ಲಿ ಕೂತಿರುವ ಹಿರಿಯರಿಗೆ ನಮಸ್ಕಾರ ಮಾಡಿ.

  • Share this:

ಏನಾದರೂ ವಿಶೇಷ ದಿನ ಇದ್ದರೆ ಶಾಲೆಗಳಲ್ಲಿ  ವಿದ್ಯಾರ್ಥಿಗಳಿಗೆ (School Students) ಭಾಷಣ ಮತ್ತು ಪ್ರಬಂಧ ಸ್ಪರ್ಧೆ ಇದ್ದೇ ಇರುತ್ತದೆ ಆದ್ದರಿಂದ ಅದಕ್ಕೆ ಮಕ್ಕಳು ಹುಡುಕಾಟ ನಡೆಸುತ್ತಿರುತ್ತಾರೆ. ನೀವೂ ಈ ಬಾರಿ ಮಹಿಳಾ ದಿನಾಚರಣೆಯ (Womens Day) ಪ್ರಯುತ್ತ ಭಾಷಣ (Speech) ಮಾಡುತ್ತಿದ್ದೀರಾ ಎಂದರೆ ನಾವು ಇಲ್ಲಿ ನೀಡಿರುವ ಭಾಷಣವನ್ನು ಗಮನಿಸಿ ಈ ವಿಷಯ ಬಳಸಿಕೊಂಡು ಭಾಷಣ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿ. ಪ್ರತಿ ವರ್ಷ ಮಾರ್ಚ್ (March) 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಎಲ್ಲಾ ಮಹಿಳೆಯರಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ  ಶಾಲಾ ಕಾಲೇಜುಗಳಲ್ಲಿ (College) ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.


ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ಮತ್ತು ಮಕ್ಕಳ ಭಾಷಣ ತಯಾರಿ ನಡೆಸಿ ಭಾಷಣ ಆರಂಭಿಸುವುದಕ್ಕೂ ಮುನ್ನ ಸಭೆಯಲ್ಲಿ ಕೂತಿರುವ ಹಿರಿಯರಿಗೆ ನಮಸ್ಕಾರ ಮಾಡಿ.


ನೀವು ಭಾಷಣ ಮಾಡುವಾಗ ಕೆಲವು ಅಂಶಗಳನ್ನು ಬಹಳ ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅದೇನೆಂದರೆ ಕಡಿಮೆ ಸಮಯದಲ್ಲಿ ಎಲ್ಲರ ಮನ ಮುಟ್ಟುವಂತೆ ಭಾಷಣ ಮಾಡುವುದು. ಕೂತಿರುವವರಿಗೆ ಬೇಸರವಾಗದಂತೆ ಮಾತನಾಡುವುದು. ವಿಷಯಕ್ಕೆ ತಕ್ಕನಾಗಿ ಭಾಷಣ ಮಾಡುವುದು.


ಇದನ್ನೂ ಓದಿ: Question Paper Leaked: ಬೆಂಗಳೂರು ವಿವಿ ಪ್ರಾಯೋಗಿಕ ಪ್ರಶ್ನೆ ಪತ್ರಿಕೆ ಸೋರಿಕೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ


ಮೊದಲನೇಯದಾಗಿ- ಎಲ್ಲರಿಗೂ ನಮಸ್ಕಾರ ಶುಭೋದಯ, ಮಹಿಳಾ ದಿನಾಚರಣೆಯ ಶುಭಾಶಯಗಳು. ನನ್ನ ಸ್ನೇಹಿತರೇ, ಮಾರ್ಚ್ 8 ರಂದು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಯಾಕೆ ಎಂದು ನೀಮಗೆ ಗೊತ್ತಾ? ಆ ವಿಚಾರವಾಗಿಯೇ ನಾನೀಗ ಕೆಲವು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.




ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಎಲ್ಲಾ ಲಿಂಗಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಜಗತ್ತಿಗೆ ಸಾರುವ ಸಲುವಾಗಿ ಆಚರಿಸಲಾಗಗುತ್ತದೆ. ಪ್ರತಿಯೊಬ್ಬರೂ ಹೆಣ್ಣನ್ನು ಗೌರವಿಸಬೇಕು. ಪುರುಷರ ಪ್ರಾಬಲ್ಯವಿರುವ ಜಗತ್ತಿನಲ್ಲಿ ಮಹಿಳೆಯ ಜೀವನದ ಮಹತ್ವವನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ಇದನ್ನು ಆಚರಿಸಲಾಗುತ್ತದೆ.


ಯಾಕಾಗಿ ಈ ದಿನವನ್ನೇ ಮಹಿಳೆಯರ ದಿನಾಚರಣೆಯಾಗಿ ಆಚರಿಸಲಾಗುತ್ತೆ?


ಸೋವಿಯತ್ ರಷ್ಯಾದಲ್ಲಿ ಮಹಿಳೆಯರು 1917 ರಲ್ಲಿ ನೀಡಲಾದ ಮತದಾನದ ಹಕ್ಕಿಗಾಗಿ ಪ್ರತಿಭಟನೆಗಳನ್ನು ಪ್ರಾರಂಭಿಸಿದ ದಿನವನ್ನು ಗುರುತಿಸುವುದರಿಂದ ಮಾರ್ಚ್ 8 ದಿನಾಂಕವನ್ನು ಆಚರಣೆಗೆ ಆಯ್ಕೆ ಮಾಡಲಾಯಿತು. ಈ ದಿನವು ನಮ್ಮ ಜೀವನದಲ್ಲಿ ಮತ್ತು ಸುತ್ತಮುತ್ತಲಿನ ಮಹಿಳೆಯರ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಅಂಗೀಕರಿಸುತ್ತದೆ.


ಮಹಿಳೆಯರ ಸಬಲೀಕರಣ


ಮಹಿಳೆಯರ ಸಬಲೀಕರಣದ ಸಲುವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಸಲುವಾಗಿ ಇದನ್ನು ಆಚರಿಸಲಾಗುತ್ತದೆ. ಜಾಗತಿಕವಾಗಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಲು ನಾವು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ. ಈ ಆಚರಣೆಯು ತಮ್ಮದೇ ಆದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳಾ ವ್ಯಕ್ತಿತ್ವಗಳಿಗೆ ಮನ್ನಣೆ ನೀಡುತ್ತದೆ.ಸಮಾಜ ಮತ್ತು ದೇಶದ ಕಲ್ಯಾಣಕ್ಕೆ ಮಹಿಳೆಯರು ಗಣನೀಯ ಕೊಡುಗೆ ನೀಡಿದ್ದಾರೆ. ಮಹಿಳಾ ದಿನವು ಒಂದು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಇದು ವರ್ಷದಿಂದ ವರ್ಷಕ್ಕೆ ಒಂದು ಪದ್ಧತಿಯಾಗುತ್ತಿದೆ.


ಭಾಷಣದ ಕೊನೆ ತುಣುಕು ಹೀಗಿರಲಿ


ಜೊತೆಗೆ ಈಗ ಶಾಲಾ-ಕಾಲೇಜುಗಳಲ್ಲಿ ಮಹಿಳಾ ದಿನಾಚರಣೆ ಆಚರಿಸುತ್ತಿರುವುದು ಮಕ್ಕಳಲ್ಲೂ ಮಹಿಳೆಯರ ಕುರಿತು ಗೌರವ ಮತ್ತು ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಅದೇ ರೀತಿ ನಾವೆಲ್ಲರೂ ಇಂದು ಮಹಿಳಾ ದಿನಾಚರಣೆಯನ್ನುಆಚರಿಸುತ್ತಿದ್ದೇವೆ. ನಾವೂ ನಮ್ಮ ಅಕ್ಕ, ತಂಗಿ, ತಾಯಿಯನ್ನು ಪ್ರೀತಿಸೋಣ, ಗೌರವಿಸೋಣ ಎಂದು ಹೇಳುತ್ತಾ ನನ್ನ ಭಾಷಣಕ್ಕೆ ಪೂರ್ಣ ವಿರಾಮ ನೀಡುತ್ತಿದ್ದೇನೆ


ಧನ್ಯವಾದ.

First published: