ವಿದ್ಯಾರ್ಥಿಗಳು ಯಾವಾಗಲು ಅಭ್ಯಾಸ ನಿರತರಾಗಿರುವ ಕಾರಣ ಅವರ ಗುರಿ ಒಂದೇ ಆಗಿರುತ್ತದೆ. ಉತ್ತಮ ಅಂಕಗಳಿಸಬೇಕು (Marks) ಒಳ್ಳೆ ಹುದ್ದೆ ಸೇರಬೇಕು. ಅಂತ ವಿದ್ಯಾರ್ಥಿ ಜೀವನವನ್ನು ಅನುಭವಿಸುತ್ತಾ. ಅನುಸರಿಸುತ್ತಾ ಇರುವ ವಿದ್ಯಾರ್ಥಿಗಳು ಬೆಳಿಗ್ಗೆ (Morning) ಬೇಗ ಏಳುವುದರಿಂದ ಅವರ ಜೀವನದಲ್ಲಿ ಯಶಸ್ಸು ಸಿಗುತ್ತೆ ಎಂದು ಪಾಲಕರು ಭಾವಿಸಿರುತ್ತಾರೆ ಮತ್ತು ತಮ್ಮ ಮಕ್ಕಳಿಗೆ (Students) ಆಗಾಗ ಇದನ್ನೇ ಹೇಳುತ್ತಿರುತ್ತಾರೆ. ಪ್ರತಿದಿನ ಮುಂಜಾನೆ 4:30 ಕ್ಕೆ ಎದ್ದು ಓದಿದರೆ ಅದನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆಯಲಾಗುತ್ತದೆ. ಯಾರೆಲ್ಲಾ ಈ ಸಮಯಕ್ಕೆ ಎದ್ದು ಅಭ್ಯಾಸ (Study) ಮಾಡುತ್ತಾರೋ ಅವರು ತಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಹಲವಾರು ಜನರು ಇದನ್ನೇ ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಸೂರ್ಯೋದಕ್ಕೆ ಒಂದೂ ವರೆ ಗಂಟೆ ಮುಂಚಿತವಾಗಿ ಈ ಮುಹೂರ್ತ ಇರುತ್ತದೆ. ಬ್ರಾಹ್ಮೀ ಮುಹೂರ್ತಂ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಂ ಆಯುಷ: ತತ್ರ ಸರ್ವಾರ್ಥ ಶಾಂತ್ಯರ್ಥಂ ಸ್ಮರೇಚ್ಚ ಮಧುಸೂದನಂ’’ - ಅಷ್ಟಾಂಗ ಹೃದಯ ಎಂಬ ಒಂದು ಆಯುರ್ವೇದದ ಗ್ರಂಥ , ಬ್ರಹ್ಮ ಮುಹೂರ್ತದಲ್ಲಿ ಎದ್ದರೆ ಏನಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟಿದೆ. ಈ ಸಮಯದಲ್ಲಿ ಎದ್ದೇಳುವುದರಿಂದ ಆರೋಗ್ಯ ಹೆಚ್ಚಾಗುತ್ತದೆ ಹಾಗೂ ಆಯುಶ್ಯವೂ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Culinary Arts: ಫುಡ್ ಡೆಕೋರೇಟ್ ಮಾಡಲು ಕಲಿಸುವುದೇ ಈ ಕೋರ್ಸ್! ಇದಕ್ಕಿದೆ ಭಾರೀ ಡಿಮ್ಯಾಂಡ್
ಈ ಸಮಯದಲ್ಲಿ ಧ್ಯಾನ ಮಾಡುವುದು ಉತ್ತಮ. ಅಷ್ಟಾಂಗ ಹೃದಯದ ಪ್ರಕಾರ ಆಧ್ಯಾತ್ಮಿಕ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಗ್ರಹಿಸಲು ಬ್ರಹ್ಮ ಮುಹೂರ್ತವು ಅತ್ಯಂತ ಸೂಕ್ತವಾದ ಸಮಯವಾಗಿದೆ. ಪ್ರಾಚೀನ ಗ್ರಂಥಗಳನ್ನು ಅನ್ವೇಷಿಸಿ ಅಥವಾ ಬುದ್ಧಿವಂತಿಕೆಯ ಸರಳ ತತ್ವಗಳ ಮೂಲಕ ಹೋಗಿ. ಧರ್ಮಶಾಸ್ತ್ರದ ಪ್ರಕಾರ, ಬ್ರಹ್ಮ ಮುಹೂರ್ತದ ಸಮಯದಲ್ಲಿ ಶಾಸ್ತ್ರಗಳ ಅಧ್ಯಯನವು ಮಾನಸಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Explained: ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಲು ಏನು ಕಾರಣ? ತಡೆಯೋಕೆ ಇಲ್ಲಿದೆ ದಾರಿ
ನೀವು ಇಂದು ಏನು ಮಾಡಬೇಕು ಅಂದುಕೊಂಡಿದ್ದೀರಿ ಎಂಬುದನ್ನು ನೆನಪು ಮಾಡಿಕೊಳ್ಳಿ ಮತ್ತು ನಾಳೆ ನೀವೇನು ಮಾಡಲಿದ್ದೀರಿ ಎಂಬುದನ್ನು ಕಲ್ಪಿಸಿಕೊಳ್ಳಿ ಹಾಗೇ ನಿನ್ನೆ ನೀವೇನು ಅಂದುಕೊಂಡಿದ್ದೀರಿ ಅದ ಆಗಿದೆಯೋ ಇಲ್ಲವೋ ಎಂಬ ಅಂಶವನ್ನು ಗಮನಿಸಿಕೊಳ್ಳಿ. ಪ್ರಾಚೀನ ಯುಗದಲ್ಲಿ, ದಿನದ ಯಾವ ಸಮಯ ಎಂದು ಲೆಕ್ಕಾಚಾರ ಮಾಡಲು ಜನರು ಯಾವುದೇ ಗಡಿಯಾರವನ್ನು ಹೊಂದಿರಲಿಲ್ಲ? ಆದ್ದರಿಂದ, ಅವರು ಸಮಯದ ಬಗ್ಗೆ ಕಲ್ಪನೆಯನ್ನು ಪಡೆಯಲು ಸೂರ್ಯ ಮತ್ತು ಚಂದ್ರನ ಚಲನೆಯನ್ನು ಡಿಕೋಡ್ ಮಾಡಿದರು. ಪ್ರತಿದಿನ 4 ಗಂಟೆಗಳ ಕಾಲ ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಆ ಸಮಯದಲ್ಲಿ ಮೊದಲ ಸಮಯವೇ ಈ ಬ್ರಾಹ್ಮಿ ಮುಹೂರ್ತವಾಗಿರುತ್ತದೆ.
ಪರೀಕ್ಷೆ ತಯಾರಿ ಹೀಗಿರಲಿ
ಪರೀಕ್ಷೆಗೆ ಇನ್ನು ಕೆಲವೇ ದಿನ ಎಂದಾಗ ನಿಮ್ಮ ಆತಂಕ ಹೆಚ್ಚಾಗುತ್ತಿದ್ದರೆ ನೀವು ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಕೆಲಸ ಬಹಳ ಮುಖ್ಯವಾಗುತ್ತದೆ. ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸಲು ನೀವು ಹಿಂದೆ ಓದುವಾಗ ಮಾಡಿಕೊಂಡಿದ್ದ ಕೆಲವು ಶಾರ್ಟ್ ನೋಟ್ಸ್ ಅನ್ನು ಆಗಾಗಾ ತೆಗೆದು ಓದುವ ಕಾರ್ಯ ಮಾಡಬೇಕು ಹಾಗಾದಾಗ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಸರಿಯಾಗಿ ನಿದ್ರೆ ಮಾಡಬೇಕು. ಪರೀಕ್ಷೆಯ ಆತಂಕದಲ್ಲಿ ನಿದ್ರೆ ಮಾಡದೇ ಇದ್ದರೆ ಜ್ವರ ಅಥವಾ ವಾಂತಿ ಎರಡರಲ್ಲೋಂದು ನಿಮ್ಮನ್ನು ಭಾದಿಸುತ್ತದೆ ಹಾಗಾಗಿ ಸರಿಯಾದ ನಿದ್ರೆ ಮಾಡಿ. ನೀರು ಕುಡಿಯಿರಿ. ಈ ಎಲ್ಲಾ ರೀತಿಯಲ್ಲಿ ನೀವು ನಿಮ್ಮ ಪರೀಕ್ಷೆಗೆ ತಯಾರಿ ನಡೆಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ