ಭಾರತದ ಟ್ಯೂಶನ್ ಶಿಕ್ಷಣ ಪದ್ಧತಿಯು (Indian Education System) ಕೆಲವೊಮ್ಮೆ ಆಕ್ಷೇಪಕ್ಕೆ ಒಳಗಾಗಿದ್ದರೂ ಕೋವಿಡ್ (Covid-19) ಸಮಯದಲ್ಲಿ ಅದೆಷ್ಟೋ ಕಡಿಮೆ ಆದಾಯದ ಪಷಕರಿಗೆ (Parents) ಹಾಗೂ ಮಕ್ಕಳಿಗೆ (Children) ಜೀವನಾಡಿಯಾಗಿದೆ. ಆನ್ಲೈನ್ ತರಗತಿಗಳಲ್ಲಿ (Online Classes) ಅರ್ಥವಾಗದ ಅದೆಷ್ಟೋ ಪಾಠಗಳನ್ನು ಟ್ಯೂಶನ್ ತರಗತಿಗಳಲ್ಲಿ ಅರಿತುಕೊಂಡವರಿದ್ದಾರೆ. ಹಾಗಾಗಿಯೇ ಸರ್ಕಾರಿ ಶಾಲೆಗೆ (Government Schools) ಮಕ್ಕಳನ್ನು ಕಳುಹಿಸುವ ಪೋಷಕರು ಟ್ಯೂಶನ್ ತರಗತಿಗಳ ದುಬಾರಿ ವೆಚ್ಚವನ್ನು ಭರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನೊದಗಿಸುವ ಗುರಿ ಹೊಂದಿದ್ದಾರೆ.
ಅಂಕಿ-ಅಂಶಗಳು ತಿಳಿಸಿರುವ ಮಾಹಿತಿಗಳೇನು?
ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 2019-2020 ರಲ್ಲಿ 130,931,634 ರಿಂದ 2021-2022 ರಲ್ಲಿ 143,240,480 ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಹೆಚ್ಚುವರಿ 1.23 ಕೋಟಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿನ ದಾಖಲಾತಿಗಳು 1.81 ಕೋಟಿಗೂ ಹೆಚ್ಚು ಕಡಿಮೆಯಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ.
ಏರಿಳಿತಕ್ಕೆ ಕಾರಣಗಳೇನು?
ಈ ಏರಿಳಿತಕ್ಕೆ ಕಾರಣ ಆರ್ಥಿಕ ಅಂಶಗಳಾಗಿರಬಹುದು ಅಥವಾ ಮಕ್ಕಳ ಪೋಷಕರು ನಗರದಿಂದ ಗ್ರಾಮೀಣ ಭಾಗಗಳಿಗೆ ವಲಸೆ ಹೋಗಿರುವುದಾಗಿರಬಹುದು ಗ್ರಾಮೀಣ ಭಾಗಗಳಲ್ಲಿ ಮನೆಗಳ ಸಮೀಪ ಹೆಚ್ಚಾಗಿ ಸರಕಾರಿ ಶಾಲೆಗಳು ಇರುತ್ತವೆ ಎಂಬುದಾಗಿ ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ (CSF) ನ ಯೋಜನಾ ನಿರ್ದೇಶಕ ಹರೀಶ್ ದೊರೈಸ್ವಾಮಿ ತಿಳಿಸಿದ್ದಾರೆ.
ಮಕ್ಕಳು ಟ್ಯೂಶನ್ ತರಗತಿಗಳಿಗೆ ಹೋಗಲು ಕಾರಣವೇನು?
ಸಾಂಕ್ರಾಮಿಕ ರೋಗ ಬರುವವರೆಗೂ ಹೆಚ್ಚಿನ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದರು ಆದರೆ ಸಾಂಕ್ರಾಮಿಕ ಉಂಟುಮಾಡಿದ ಆರ್ಥಿಕ ನಷ್ಟ, ಉದ್ಯೋಗ ನಷ್ಟದಿಂದ ಹೆಚ್ಚಿನ ಪೋಷಕರು ಮಕ್ಕಳನ್ನು ಕಡಿಮೆ ಶಾಲಾ ಶುಲ್ಕವಿರುವ ಶಾಲೆಗಳಿಗೆ ಸೇರ್ಪಡೆಗೊಳಿಸುತ್ತಿದ್ದಾರೆ.
ಉತ್ತಮ ಶಾಲೆಯಿಂದ ಮಕ್ಕಳ ದಾಖಲಾತಿಯನ್ನು ಕೊನೆಗೊಳಿಸುವ ಹಾಗೂ ಅವರ ಟ್ಯೂಶನ್ ತರಗತಿಗಳನ್ನು ನಿಲ್ಲಿಸುವ ಕಠಿಣ ನಿರ್ಧಾರಗಳನ್ನು ಅನೇಕ ಪಾಲಕರು ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಶಾಲೆ ಹಾಗೂ ಟ್ಯೂಶನ್ ತರಗತಿಗಳ ಅಧಿಕ ಶುಲ್ಕವನ್ನು ಭರಿಸಲು ಸಾಧ್ಯವಾಗದಿರುವುದಾಗಿದೆ.
ಇನ್ನು ಕೆಲವು ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರ್ಪಡೆಗೊಳಿಸಿದ್ದು, ಆರ್ಥಿಕ ಮಟ್ಟ ಉತ್ತಮಗೊಂಡಾಗ ಪುನಃ ಟ್ಯೂಶನ್ ತರಗತಿಗಳಿಗೆ ಮಕ್ಕಳನ್ನು ದಾಖಲಿಸಿದ್ದಾರೆ. ಇದಕ್ಕೆ ಕಾರಣವನ್ನು ನೀಡುವ ಪೋಷಕರು ಮಕ್ಕಳು ಎಳವೆಯಿಂದಲೂ ಟ್ಯೂಶನ್ ತರಗತಿಗಳಿಗೆ ಹೋಗುತ್ತಿದ್ದು ತಮ್ಮ ಕೆಲಸಗಳಿಂದಾಗಿ ಅವರ ಓದಿನತ್ತ ಗಮನ ನೀಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಮಕ್ಕಳ ಕಲಿಕಾ ವಿಷಯದ ಕುರಿತು ಜ್ಞಾನವಿಲ್ಲದ ಕಾರಣ ಟ್ಯೂಶನ್ ತರಗತಿಗಳಲ್ಲಿ ಮಕ್ಕಳು ಅಗತ್ಯ ಸಹಕಾರವನ್ನು ಪಡೆದುಕೊಳ್ಳುತ್ತಾರೆ ಎಂಬುದು ಪೋಷಕರ ಮಾತಾಗಿದೆ.
ಹೆಚ್ಚುತ್ತಿರುವ ಗ್ರಾಹಕರ ಸಂಖ್ಯೆ
CSF ನ ದೊರೈಸ್ವಾಮಿ ಅವರ ಪ್ರಕಾರ, ಟ್ಯೂಷನ್ಗಳು ಯಾವಾಗಲೂ ಭಾರತದಲ್ಲಿ ಬದುಕಿನ ಮೂಲಭೂತ ಅಂಶವಾಗಿ ಮಾರ್ಪಟ್ಟಿದೆ. ಜೊತೆಗೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆ, ಹೆಚ್ಚಿನ ಸೌಲಭ್ಯ ಹೊಂದಿರುವ ವಿದ್ಯಾರ್ಥಿಗಳು ಟ್ಯೂಶನ್ ತರಗತಿಗಳನ್ನು ಪಡೆಯಲು ಒಲವು ತೋರುತ್ತಿದ್ದರು, ಈಗ ಕಡಿಮೆ ಆದಾಯದ ಗುಂಪುಗಳ ಪೋಷಕರೂ ಸಹ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳ ಕಲಿಕೆಯ ನಷ್ಟವನ್ನು ಸರಿದೂಗಿಸಲು ಟ್ಯೂಶನ್ ತರಗತಿಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸುತ್ತಿದ್ದಾರೆ.
ಟ್ಯೂಶನ್ ತರಗತಿಗಳಿಗೆ ದುಪ್ಪಟ್ಟು ಹಣ ಸುರಿಯುತ್ತಿರುವ ಪೋಷಕರು
2020 ರಲ್ಲಿ ಬಿಡುಗಡೆಯಾದ ಶಿಕ್ಷಣದ ಕುರಿತಾದ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್ಎಸ್ಎಸ್) ವರದಿಯ ಪ್ರಕಾರ, 2017-18 ರಲ್ಲಿ ಸುಮಾರು 20% ದಷ್ಟು ವಿದ್ಯಾರ್ಥಿಗಳು ಖಾಸಗಿ ಟ್ಯೂಷನ್ಗಳನ್ನು ಆರಿಸಿಕೊಂಡಿದ್ದು, ಸಮೀಕ್ಷೆಯನ್ನು ಕೊನೆಯದಾಗಿ ನಡೆಸಿದ 2014 ರಿಂದ ಆರು ಶೇಕಡಾ ಪಾಯಿಂಟ್ ಕುಸಿತವಾಗಿದೆ. ಇದಲ್ಲದೆ, ಖಾಸಗಿ ಕೋಚಿಂಗ್ಗೆ ಹೋದ ಸರಾಸರಿ ಮನೆಯ ವೆಚ್ಚದ ಪಾಲು 15% ದಿಂದ 12% ಕ್ಕೆ ಇಳಿದಿದೆ.
ಟ್ಯೂಶನ್ ಶಿಕ್ಷಕರು ಹೇಳುವಂತೆ ಕೋವಿಡ್ ನಂತರ ದಾಖಲಾತಿ ಸಂಖ್ಯೆಗಳು ಏರಿಕೆಗೊಂಡಿದ್ದು ಸಾಂಕ್ರಾಮಿಕದ ಸಮಯದಲ್ಲಿ ಮಕ್ಕಳು ನಷ್ಟಗೊಂಡಿರುವ ತಮ್ಮ ಕಲಿಕಾ ಚಟುವಟಿಕೆಗಳನ್ನು ಮರಳಿ ಪಡೆಯಬೇಕು ಹಾಗೂ ಕ್ರಿಯಾತ್ಮಕವಾಗಿರಬೇಕು ಎಂದು ಬಯಸುತ್ತಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ