• ಹೋಂ
 • »
 • ನ್ಯೂಸ್
 • »
 • Jobs
 • »
 • Higher Education: ಭಾರತೀಯ ವಿದ್ಯಾರ್ಥಿಗಳು ಓದಲು ಹೆಚ್ಚಾಗಿ UKಗೆ ಹೋಗಲು 5 ಕಾರಣಗಳಿವೆ

Higher Education: ಭಾರತೀಯ ವಿದ್ಯಾರ್ಥಿಗಳು ಓದಲು ಹೆಚ್ಚಾಗಿ UKಗೆ ಹೋಗಲು 5 ಕಾರಣಗಳಿವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಲಂಡನ್‌  ಜಾಗತಿಕ ಶಿಕ್ಷಣ ಕೇಂದ್ರವಾಗಿದ್ದು, ಕಲೆ ಮತ್ತು ಸಾಹಿತ್ಯ, ಮಾನವತೆ, ವಾಸ್ತುಶಿಲ್ಪ, ಕ್ರೀಡೆ, ರಾಜಕೀಯ, ವ್ಯಾಪಾರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತನ್ನ ಶ್ರೀಮಂತ ಜ್ಞಾನದ ಸಂಪತ್ತನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ.

 • Trending Desk
 • 4-MIN READ
 • Last Updated :
 • Share this:

  ಇಂದಿನ ಕಾಲದಲ್ಲಿ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು (Indian Students) ವಿದೇಶಗಳಿಗೆ (Foreign) ಓದಲು ತೆರಳುತ್ತಾರೆ. ಅದರಲ್ಲೂ ಹೆಚ್ಚಾಗಿ ನಮ್ಮಲ್ಲಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಯುನೈಟೆಡ್‌ ಕಿಂಗ್‌ಡಮ್‌ (UK) ಆಯ್ಕೆ ಮಾಡುತ್ತಾರೆ. ಅದರಲ್ಲೂ ಇತ್ತೀಚಿಗೆ ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.


  ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಯುನೈಟೆಡ್‌ ಕಿಂಗ್‌ಡಮ್‌ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಚಿತ ಅಧ್ಯಯನ ತಾಣವಾಗಿದೆ ಎಂದರೆ ತಪ್ಪಾಗೋದಿಲ್ಲ. ಅಂದಹಾಗೆ ಲಂಡನ್‌  ಜಾಗತಿಕ ಶಿಕ್ಷಣ ಕೇಂದ್ರವಾಗಿದ್ದು, ಕಲೆ ಮತ್ತು ಸಾಹಿತ್ಯ, ಮಾನವತೆ, ವಾಸ್ತುಶಿಲ್ಪ, ಕ್ರೀಡೆ, ರಾಜಕೀಯ, ವ್ಯಾಪಾರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತನ್ನ ಶ್ರೀಮಂತ ಜ್ಞಾನದ ಸಂಪತ್ತನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಇಲ್ಲಿರುವ ಹೆಸರಾಂತ ಮತ್ತು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಉನ್ನತ ಗುಣಮಟ್ಟದ ಆಧುನಿಕ ಶಿಕ್ಷಣ ಮತ್ತು ಬೋಧನಾ ವಿಧಾನಗಳಿಗೆ ಹೆಚ್ಚು ಹೆಸರುವಾಸಿಯಾಗಿವೆ.


  ಶಿಕ್ಷಣಕ್ಕಾಗಿ ಯುಕೆಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ


  ಅಂದಹಾಗೆ ಉನ್ನತ ಶಿಕ್ಷಣವನ್ನು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಲಂಡನ್‌ ಬಹಳ ಹಿಂದಿನಿಂದಲೂ ಜನಪ್ರಿಯ ತಾಣವಾಗಿದೆ ಎನ್ನಬಹುದು. ಇತ್ತೀಚಿನ ವರ್ಷಗಳಲ್ಲಿ, ಯುಕೆಯಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂಬುದನ್ನು ವರದಿಗಳು ಹೇಳುತ್ತವೆ. ಅದರಲ್ಲೂ ಉನ್ನತ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವ ಭಾರತೀಯ ವಿದ್ಯಾರ್ಥಿಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.


  Indian students are given free and discounted education in these countries
  ಸಾಂಕೇತಿಕ ಚಿತ್ರ


  ವಿದ್ಯಾರ್ಥಿ ವೀಸಾಗಳಿಗೆ ಶೇ. 96ರ ಅನುಮೋದನೆ ದರದೊಂದಿಗೆ, ಸೆಪ್ಟೆಂಬರ್ 2022 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ಸುಮಾರು 160,970 ಭಾರತೀಯರು UK ಗೆ ವಿದ್ಯಾರ್ಥಿ ವೀಸಾಗಳನ್ನು ಪಡೆದಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 78% ರಷ್ಟು ಹೆಚ್ಚಳವಾಗಿದ್ದು ಆಗ 90,669 ವಿದ್ಯಾರ್ಥಿಗಳು ಅಲ್ಲಿಗೆ ತೆರಳಿದ್ದರು. ಇನ್ನು 2019 ರ ಇದೇ ಅವಧಿಗೆ ಹೋಲಿಸಿದರೆ ಈ ಪ್ರಮಾಣ ಶೇ.330ರಷ್ಟು ಹೆಚ್ಚಾಗಿದೆ.


  ಉನ್ನತ ಶಿಕ್ಷಣ ಆಯ್ಕೆಗಳಿಗೆ ಹೆಸರುವಾಸಿ


  ಅಂದಹಾಗೆ ಲಂಡನ್‌ ವ್ಯಾಪಕ ಶ್ರೇಣಿಯ ಉನ್ನತ ಶಿಕ್ಷಣ ಆಯ್ಕೆಗಳನ್ನು ನೀಡಲು ಹೆಸರುವಾಸಿಯಾಗಿದೆ. ಇದನ್ನು ವಿಶ್ವದ ಸಾಮಾಜಿಕ, ಆರ್ಥಿಕ ಭೂದೃಶ್ಯದ ಕೇಂದ್ರವೆಂದು ಪರಿಗಣಿಸಲಾಗಿದೆ. ಯುಕೆ ಬಗ್ಗೆ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಆಕರ್ಷಣೆ ಹೊಂದಿದ್ದಾರೆ. ಭಾರತ ಮತ್ತು ಯುಕೆ ವಿದ್ಯಾರ್ಥಿಗಳ ಚಲನಶೀಲತೆಯನ್ನು ಉತ್ತೇಜಿಸಲು ಮತ್ತು ಕಲಿಕೆಗೆ ಹೊಸ ಮಾರ್ಗಗಳನ್ನು ತೆರೆಯಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಅಲ್ಲದೇ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಬೇಕಾದಂತಹ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತವೆ.


  ಆದರೆ ಭಾರತೀಯ ವಿದ್ಯಾರ್ಥಿಗಳ ಮಟ್ಟಿಗೆ ಯುನೈಟೆಡ್‌ ಕಿಂಗ್ಡಮ್‌ ಆದರ್ಶ ವಿದೇಶಿ ಶಿಕ್ಷಣ ತಾಣವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದಕ್ಕೆ ಈ ಕೆಳಗಿನ ಅಂಶಗಳು ಕಾರಣವಾಗಿವೆ ಎನ್ನಬಹುದು.
  1. ಶಿಕ್ಷಣದ ಗುಣಮಟ್ಟ: ಯುಕೆ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವ್ಯಾಪಕ ಶ್ರೇಣಿಯ ಪದವಿಪೂರ್ವ ಮತ್ತು ಪದವಿ ಕಾರ್ಯಕ್ರಮಗಳನ್ನು ನೀಡುತ್ತವೆ. ಇದು ಉನ್ನತ ದರ್ಜೆಯ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಲಂಡನ್‌ನಾದ್ಯಂತ ಇರುವಂಥ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಕೌಶಲ್ಯಗಳನ್ನು ಒದಗಿಸಲು ಸಜ್ಜುಗೊಂಡಿವೆ.


  ಇದಕ್ಕೆ ಸರಿಯಾದ ಅರ್ಹತೆ ಹೊಂದಿರುವ ಅಧ್ಯಾಪಕರು, ಅತ್ಯಾಧುನಿಕ ಸಂಶೋಧನಾ ಪಠ್ಯಕ್ರಮ ಮತ್ತು ಅತ್ಯಾಧುನಿಕ ಸೌಲಭ್ಯಗಳು, ಮೂಲಸೌಕರ್ಯಗಳು ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿವೆ. 2023 ರ QS ವರ್ಲ್ಡ್ ಶ್ರೇಯಾಂಕಗಳು ಪ್ರಕಾರ, ವಿಶ್ವದಾದ್ಯಂತದ ಟಾಪ್ 10 ಸಂಸ್ಥೆಗಳಲ್ಲಿ 4 ಸಂಸ್ಥೆಗಳು ಯುಕೆಯಲ್ಲಿದೆ. ಯುಕೆಯಾದ್ಯಂತ ಸಂಸ್ಥೆಗಳು ಸುಸಜ್ಜಿತ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತವೆ.


  ಅಲ್ದೇ ಹೆಚ್ಚು ಜಾಗತೀಕರಣಗೊಳ್ಳುತ್ತಿರುವ ಕಾರಣ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಾಗ ಆರೋಗ್ಯಕರ ಶೈಕ್ಷಣಿಕ ವಾತಾವರಣವನ್ನು ಒದಗಿಸುತ್ತವೆ.


  2. ವಿದ್ಯಾರ್ಥಿವೇತನ ಅವಕಾಶಗಳು: ಯುಕೆ ಸರ್ಕಾರ ಮತ್ತು ವಿಶ್ವವಿದ್ಯಾನಿಲಯಗಳು ಭಾರತೀಯ ವಿದ್ಯಾರ್ಥಿಗಳಿಗೆ ವ್ಯಾಪಕ ಶ್ರೇಣಿಯ ವಿದ್ಯಾರ್ಥಿವೇತನ ಅವಕಾಶಗಳನ್ನು ನೀಡುತ್ತವೆ. ಈ ವಿದ್ಯಾರ್ಥಿವೇತನವನ್ನು ಬೋಧನಾ ಶುಲ್ಕಗಳು ಮತ್ತು ಜೀವನ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಯುಕೆಯಲ್ಲಿ ಅಧ್ಯಯನವನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.


  ಅಂದಹಾಗೆ ಯುಕೆ ಸರ್ಕಾರದ ಮಾಹಿತಿಯ ಪ್ರಕಾರ, ಲಕ್ಷಾಂತರ ಪೌಂಡ್‌ಗಳ ಮೌಲ್ಯದ ಭಾರತೀಯ ವಿದ್ಯಾರ್ಥಿಗಳಿಗೆ 200 ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳು ಲಭ್ಯವಿದೆ. ಅದರಲ್ಲಿ ಜನಪ್ರಿಯ ವಿದ್ಯಾರ್ಥಿವೇತನಗಳಾದ GREAT ವಿದ್ಯಾರ್ಥಿ ವೇತನಗಳು, ಕಾಮನ್‌ವೆಲ್ತ್ ವಿದ್ಯಾರ್ಥಿ ವೇತನಗಳು, ಬ್ರಿಟಿಷ್ ಕೌನ್ಸಿಲ್ ವುಮೆನ್ ಇನ್ STEM ವಿದ್ಯಾರ್ಥಿ ವೇತನಗಳು, ಚಾರ್ಲ್ಸ್ ವ್ಯಾಲೇಸ್ ಇಂಡಿಯಾ ಟ್ರಸ್ಟ್ ವಿದ್ಯಾರ್ಥಿ ವೇತನಗಳು ಮುಂತಾದವುಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು.


  indian students number in foreign countries


  ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಬಯಸುವ ವಿದ್ಯಾರ್ಥಿಗಳು ಬ್ರಿಟಿಷ್ ಕೌನ್ಸಿಲ್ ಅಥವಾ UKCISA (ಯುಕೆ ಕೌನ್ಸಿಲ್ ಫಾರ್ ಇಂಟರ್ನ್ಯಾಷನಲ್ ಸ್ಟೂಡೆಂಟ್ ಅಫೇರ್ಸ್) ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


  3. ವಿದ್ಯಾರ್ಥಿಗಳಿಗೆ ಅನುಕೂಲಕರ ನೀತಿಗಳು : ಯುಕೆ ಪದವಿಗಳು ಜಾಗತಿಕವಾಗಿ ಹೆಚ್ಚು ಗೌರವಾನ್ವಿತವಾಗಿವೆ ಮತ್ತು ಹೆಚ್ಚು ಗುರುತಿಸಲ್ಪಟ್ಟಿವೆ ಎನ್ನಬಹುದು. ಸಹಜವಾಗಿಯೇ ಇದು ಭಾರತೀಯ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಆಸ್ತಿಯಾಗಿದೆ.


  ಶೈಕ್ಷಣಿಕ ಅರ್ಹತೆಗಳ (MRQS) ಪರಸ್ಪರ ಗುರುತಿಸುವಿಕೆಯ ಕುರಿತು ಭಾರತ ಮತ್ತು ಯುಕೆ ನಡುವೆ ಇತ್ತೀಚೆಗೆ ಸಹಿ ಮಾಡಿದ ಒಪ್ಪಂದವು ಪದವಿಪೂರ್ವ, ಸ್ನಾತಕೋತ್ತರ ಪದವಿಯಿಂದ ಡಾಕ್ಟರೇಟ್ ಪದವಿಗಳವರೆಗೆ ಶೈಕ್ಷಣಿಕ ಅರ್ಹತೆಗಳನ್ನು ಗುರುತಿಸುತ್ತದೆ.


  ಅಲ್ಲದೆ, ಪದವೀಧರ ವಾಣಿಜ್ಯೋದ್ಯಮಿ ವೀಸಾ (ಟೈರ್ 1) ಪರಿಚಯಿಸಲಾಗಿದ್ದು ಇದು ಕಂಪನಿಯ ಯೋಜನೆಯನ್ನು ಹೊಂದಿರುವ ಪದವೀಧರರಿಗೆ ರಾಷ್ಟ್ರದಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಇದು ವಿದ್ಯಾರ್ಥಿಗಳಿಗೆ ಯುಕೆ ನೀಡುತ್ತಿರುವ ಬದ್ಧತೆಗೆ ಮತ್ತೊಂದು ಉದಾಹರಣೆಯಾಗಿದೆ ಎನ್ನಬಹುದು.


  4. ಓದಿನ ಬಳಿಕ ಉದ್ಯೋಗಾವಕಾಶ: ಯುಕೆ ಪದವಿಯು ಜಾಗತಿಕವಾಗಿ ಹೆಚ್ಚು ಗೌರವಾನ್ವಿತವಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳಿಗೆ ಬಾಗಿಲು ತೆರೆಯುತ್ತದೆ. ವಿಶ್ವವಿದ್ಯಾನಿಲಯಗಳ UK ಇಂಟರ್ನ್ಯಾಷನಲ್ (UUKi) ಸಂಶೋಧನೆಯ ಪ್ರಕಾರ, 83% ಅಂತರಾಷ್ಟ್ರೀಯ ಪದವೀಧರರು ತಮ್ಮ UK ಪದವಿಯಿಂದ ಉದ್ಯೋಗವನ್ನು ಹುಡುಕುವ ಸಾಮರ್ಥ್ಯವನ್ನು ಹೊಂದಿದ್ದಾರೆ.


  UK ಯಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಮಟ್ಟದ ಬೋಧನೆ ಮತ್ತು ಶೈಕ್ಷಣಿಕ ಮಾನದಂಡಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಸಾಮರ್ಥ್ಯ ಲಭಿಸುತ್ತದೆ. ಅಲ್ಲದೇ ಅನೇಕ ಯುಕೆ ವಿಶ್ವವಿದ್ಯಾನಿಲಯಗಳು ಬಲವಾದ ಉದ್ಯಮದ ಲಿಂಕ್‌ಗಳನ್ನು ಹೊಂದಿವೆ. ನೈಜ ಪ್ರಪಂಚದ ಸವಾಲುಗಳು ಮತ್ತು ಸಮಸ್ಯೆ - ಪರಿಹಾರದೊಂದಿಗೆ ಹೊಂದಿಕೆಯಾಗುವ ಮೂಲಕ ಮೌಲ್ಯಯುತ ಅನುಭವವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುತ್ತವೆ. ಈ ಮೂಲಕ, ಜಗತ್ತಿನ ಕೆಲವು ಅತ್ಯುತ್ತಮ ಕಂಪನಿಗಳಲ್ಲಿ ಆಧುನಿಕ ಉದ್ಯೋಗ ಅವಕಾಶಗಳಿಗೆ ಅರ್ಜಿ ಸಲ್ಲಿಸಿದಾಗ ಅವರು ಸವಾಲಿನ ಕೆಲಸಗಳಿಗೆ ಸಿದ್ಧರಾಗುತ್ತಾರೆ.


  foreign study is so costly for indian students
  ಸಾಂಕೇತಿಕ ಚಿತ್ರ


  5. ಅಧ್ಯಯನದ ನಂತರದ ಕೆಲಸ ಹುಡುಕಲು ಕಾಲಾವಕಾಶ: ಯುಕೆ ಪೋಸ್ಟ್-ಸ್ಟಡಿ ವರ್ಕ್ ವೀಸಾ ನೀತಿಯು 'ಕೇಕ್ ಮೇಲೆ ಚೆರ್ರಿ' ಇದ್ದಂತೆ ಎಂಬ ಹಾಗಿದೆ. ಇದು ಭಾರತೀಯ ವಿದ್ಯಾರ್ಥಿಗಳಿಗೆ ಯುಕೆ ಹೆಚ್ಚು ಇಷ್ಟವಾಗಲು ಮತ್ತೊಂದು ಕಾರಣವಾಗಿದೆ. ಹೊಸ ನಿಯಮಗಳ ಪ್ರಕಾರ, ಯುಕೆಯಲ್ಲಿ ಪದವಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿಯ ನಂತರ ಎರಡು ವರ್ಷಗಳ ಕಾಲ ದೇಶದಲ್ಲಿ ಉಳಿಯಲು, ಕೆಲಸ ಮಾಡಲು ಅಥವಾ ಉದ್ಯೋಗವನ್ನು ಹುಡುಕಲು ಅವಕಾಶವಿದೆ. ಅದರಲ್ಲೂ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ಅವಕಾಶವಿದೆ.


  ಈ ವೀಸಾದೊಂದಿಗೆ, ಪದವೀಧರರು ಇಲ್ಲಿ ಯಾವುದೇ ಕೌಶಲ್ಯ ಮಟ್ಟದಲ್ಲಿ ಮತ್ತು ಯಾವುದೇ ವಲಯದಲ್ಲಿ ಕೆಲಸ ಮಾಡಲು ಮುಕ್ತರಾಗಿರುತ್ತಾರೆ. ಇದು ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಮೂಲ್ಯವಾದ ಕೆಲಸದ ಅನುಭವವನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ.


  ಇವಿಷ್ಟು ಭಾರತೀಯ ವಿದ್ಯಾರ್ಥಿಗಳು ವಿದೇಶ ಅಧ್ಯಯನಕ್ಕೆ ಯುನೈಟೆಡ್ ಕಿಂಗ್‌ಡಮ್ ಅನ್ನು ಆರಿಸಿಕೊಳ್ಳಲು ಇರುವಂಥ ಪ್ರಮುಖ ಕಾರಣಗಳಾಗಿವೆ. ಒಟ್ಟಾರೆ, ಭಾರತೀಯ ವಿದ್ಯಾರ್ಥಿಗಳಿಗೆ ಯುಕೆ ಜನಪ್ರಿಯ ತಾಣವಾಗಿದೆ ಅನ್ನೋದಂತೂ ಸತ್ಯ. ಇಲ್ಲಿನ ಕೆಲವು ಪ್ರತಿಷ್ಠಿತ ಮತ್ತು ಉನ್ನತ ಶ್ರೇಣಿಯ ಸಂಸ್ಥೆಗಳಲ್ಲಿ ಓದುವುದರಿಂದ ವೃತ್ತಿ ಭವಿಷ್ಯ ಉಜ್ವಲವಾಗಿರುತ್ತದೆ ಎಂಬುದನ್ನು ನಾವು ಕಾಣಬಹುದು.


  ಇದನ್ನೂ ಓದಿ: Expensive Schools in India: ದೇಶದ ಅತ್ಯಂತ ದುಬಾರಿ ಶಾಲೆಗಳಿವು; ಇಲ್ಲಿನ ಫೀಸ್ ಕೇಳಿದ್ರೆ ಹುಬ್ಬೇರಿಸೋದು ಪಕ್ಕಾ


  ವಿಶ್ವದ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು ಯುಕೆಯಲ್ಲಿವೆ. ಅಲ್ಲದೇ ಇತರ ಕೆಲವು ಜನಪ್ರಿಯ ವಿದೇಶಿ ಶೈಕ್ಷಣಿಕ ಸ್ಥಳಗಳಿಗೆ ಹೋಲಿಸಿದರೆ UK ಸಾಮಾನ್ಯವಾಗಿ ಕಡಿಮೆ ಸರಾಸರಿ ವೆಚ್ಚದಲ್ಲಿ ಶಿಕ್ಷಣವನ್ನು ನೀಡುತ್ತದೆ ಅನ್ನೋದನ್ನು ತಳ್ಳಿ ಹಾಕುವಂತಿಲ್ಲ. ಇಲ್ಲಿನ ವಿಶ್ವವಿದ್ಯಾನಿಲಯಗಳು ಮತ್ತು ಬ್ರಿಟಿಷ್ ಸರ್ಕಾರವು ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ಮತ್ತಷ್ಟು ಪ್ರಯೋಜನಕಾರಿಯಾಗಿವೆ ಎನ್ನಬಹುದು.


  ಅಂತಿಮವಾಗಿ ಇಲ್ಲಿನ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದರೊಂದಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತವೆ ಎಂದರೆ ತಪ್ಪಾಗುವುದಿಲ್ಲ.

  Published by:Kavya V
  First published: