• ಹೋಂ
  • »
  • ನ್ಯೂಸ್
  • »
  • Jobs
  • »
  • Canadaದಲ್ಲಿ 700 ಭಾರತೀಯ ವಿದ್ಯಾರ್ಥಿಗಳಿಗೆ ಗಡಿಪಾರು ನೋಟಿಸ್; ಬ್ರಿಜೇಶ್ ಮಿಶ್ರಾನಿಂದ ವೀಸಾ ವಂಚನೆ

Canadaದಲ್ಲಿ 700 ಭಾರತೀಯ ವಿದ್ಯಾರ್ಥಿಗಳಿಗೆ ಗಡಿಪಾರು ನೋಟಿಸ್; ಬ್ರಿಜೇಶ್ ಮಿಶ್ರಾನಿಂದ ವೀಸಾ ವಂಚನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕನ್ಸಲ್ಟೆಂಟ್ ಬ್ರಿಜೇಶ್ ಮಿಶ್ರಾ ಅವರ ಮೂಲಕ ಅಧ್ಯಯನ ವೀಸಾಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ 700 ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾದ ಅಧಿಕಾರಿಗಳು ಗಡಿಪಾರು ನೋಟಿಸ್ ನೀಡಿದ್ದಾರೆ.

  • Trending Desk
  • 3-MIN READ
  • Last Updated :
  • Delhi, India
  • Share this:

    ಹಲವಾರು ಮಹತ್ವದ ಕನಸುಗಳನ್ನು ಹೊತ್ತು ಕೆನಾಡಕ್ಕೆ (Canada) ವಿದ್ಯಾಭ್ಯಾಸಕ್ಕೆ ತೆರಳಿದ್ದ ಬರೋಬ್ಬರಿ 700 ಭಾರತೀಯ ವಿದ್ಯಾರ್ಥಿಗಳಿಗೆ (Indian Students) ಅಲ್ಲಿನ ಅಧಿಕಾರಿಗಳು ಗಡಿಪಾರು ನೋಟಿಸ್(Deportation) ಕಳುಹಿಸುವ ಮೂಲಕ ಬಿಗ್‌ ಶಾಕ್‌ ನೀಡಿದೆ. 700 ಭಾರತೀಯ ವಿದ್ಯಾರ್ಥಿಗಳ ವೀಸಾ ದಾಖಲೆಗಳು ( Visa Documents) ನಕಲಿ ಎಂದು ಕಂಡುಬಂದ ನಂತರ ಕೆನಡಾ ಬಾರ್ಡರ್ ಸೆಕ್ಯುರಿಟಿ ಏಜೆನ್ಸಿ ವಿದ್ಯಾರ್ಥಿಗಳಿಗೆ ಗಡಿಪಾರು ನೋಟಿಸ್ ನೀಡಿದೆ.


    ಗಡಿಪಾರು ನೋಟಿಸ್ ಯಾಕೆ?


    ವರದಿಗಳ ಪ್ರಕಾರ, ಈ ವಿದ್ಯಾರ್ಥಿಗಳು ಜಲಂಧರ್ ಮೂಲದ ಶಿಕ್ಷಣ ವಲಸೆ ಸೇವೆಗಳಿಂದ ತಮ್ಮ ವೀಸಾಗಳನ್ನು ಪಡೆದಿದ್ದರು. ಈಗ ಕಂಪನಿಯೇ ಹಣ ವಸೂಲಿ ಮಾಡಿ ಮೋಸ ಮಾಡಿದ್ದೇಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಕನ್ಸಲ್ಟೆಂಟ್ ಬ್ರಿಜೇಶ್ ಮಿಶ್ರಾ ಅವರ ಮೂಲಕ ಅಧ್ಯಯನ ವೀಸಾಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ 700 ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾದ ಅಧಿಕಾರಿಗಳು ದಾಖಲೆಗಳು ನಕಲಿ ಎಂದು ಉಲ್ಲೇಖಿಸಿ ಗಡಿಪಾರು ನೋಟಿಸ್ ನೀಡಿದ್ದಾರೆ.


    ಬ್ರಿಜೇಶ್ ಮಿಶ್ರಾ ನೇತೃತ್ವದ ಕಂಪನಿ ಮೂಲಕ ವೀಸಾ ಪಡೆದ ವಿದ್ಯಾರ್ಥಿಗಳು
    ಬ್ರಿಜೇಶ್ ಮಿಶ್ರಾ ನೇತೃತ್ವದ ಎಜುಕೇಶನ್ ಮೈಗ್ರೇಷನ್ ಸರ್ವಿಸಸ್ ಕಚೇರಿ ಜಲಂಧರ್‌ನಲ್ಲಿದ್ದು, ಇಲ್ಲಿ 700 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ವೀಸಾಗಳಿಗೆ ಅರ್ಜಿ ಸಲ್ಲಿಸಿದ್ದರು. ಹೀಗೆ ಅರ್ಜಿ ಸಲ್ಲಿಸಿದ್ದ ಪ್ರತಿ ವಿದ್ಯಾರ್ಥಿಗಳಿಗೆ ವಿಮಾನ ದರಗಳು ಮತ್ತು ಭದ್ರತಾ ಠೇವಣಿಗಳನ್ನು ಹೊರತುಪಡಿಸಿ ಪ್ರವೇಶ ಶುಲ್ಕ ಸೇರಿದಂತೆ ವೀಸಾ ವೆಚ್ಚಗಳಿಗಾಗಿ ಬ್ರೀಜೇಶ್ ಮಿಶ್ರಾ ಪ್ರತಿ ವಿದ್ಯಾರ್ಥಿಗೆ ಕನಿಷ್ಠ 16 ಲಕ್ಷ ರೂಪಾಯಿಗಳ ಶುಲ್ಕ ವಿಧಿಸಿದ್ದಾರೆ. ಈ ವೀಸಾ ಅರ್ಜಿಗಳನ್ನು 2018 ರಿಂದ 2022 ರವರೆಗೆ ಸಲ್ಲಿಸಲಾಗಿತ್ತು. ಆದ್ದರಿಂದ ಈಗ ಅವಧಿ ಮುಗಿದಿದ್ದು, ಕೆನಾಡಾದಿಂದ ಹೊರಹೋಗುವಂತೆ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೆಲ್ಲಾ ಹಣ ನೀಡಿ ಹೋಗಿರುವ ವಿದ್ಯಾರ್ಥಿಗಳಿಗೆ ಗಡಿಪಾರು ನೋಟಿಸ್‌ ನಡುಕು ಹುಟ್ಟಿಸಿದೆ.


    ಸಾಂದರ್ಭಿಕ ಚಿತ್ರ


    12 ನೇ ತರಗತಿಯಿಂದ ಉತ್ತೀರ್ಣರಾದ ನಂತರ, ಜಲಂಧರ್‌ನಲ್ಲಿರುವ ಬ್ರಿಜೇಶ್ ಮಿಶ್ರಾ ನೇತೃತ್ವದ ಶಿಕ್ಷಣ ವಲಸೆ ಸೇವೆಗಳ ಮೂಲಕ ಸುಮಾರು 700 ವಿದ್ಯಾರ್ಥಿಗಳು ಅಧ್ಯಯನ ವೀಸಾಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಗಡಿಪಾರು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಚಮನ್ ಸಿಂಗ್ ಬಾತ್ ಹೇಳಿದ್ದಾರೆ.


    ಬ್ರಿಜೇಶ್ ಮಿಶ್ರಾ ನಾಪತ್ತೆ
    ಅಲ್ಲದೇ ಬ್ರಿಜೇಶ್ ಮಿಶ್ರಾ ಕೂಡ ಹಲವಾರು ತಿಂಗಳುಗಳಿಂದ ಕಚೇರಿಯಲ್ಲಿ ಕಾಣಿಸಿಕೊಂಡಿಲ್ಲ. ಶಿಕ್ಷಣ ವಲಸೆ ಸೇವೆಗಳ ವೆಬ್‌ಸೈಟ್ ಅನ್ನು ತೆಗೆದುಹಾಕಲಾಗಿದೆ ಎಂದು ವರದಿಗಳು ಕೇಳಿ ಬರುತ್ತಿವೆ.


    2013ರಲ್ಲೂ ವಿದ್ಯಾರ್ಥಿಗಳಿಗೆ ವಂಚಿಸಿ ಅರೆಸ್ಟ್‌ ಆಗಿದ್ದ ಮಿಶ್ರಾ
    ಮಿಶ್ರಾ ವಿರುದ್ಧ ಅಕ್ರಮ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. 2013ರಲ್ಲಿ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಲು ನಕಲಿ ದಾಖಲೆ ಸೃಷ್ಟಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ನಂತರ, ಅವರು ಇತರ ನಿರ್ದೇಶಕರೊಂದಿಗೆ 'ಈಸಿ ವೇ ಇಮಿಗ್ರೇಷನ್ ಕನ್ಸಲ್ಟೆನ್ಸಿ' ಎಂಬ ಕಂಪನಿಯನ್ನು ನಡೆಸುತ್ತಿದ್ದರು.




    ಮಿಶ್ರಾ ಅವರು ಒಂಟಾರಿಯೊದ ಹಂಬರ್ ಕಾಲೇಜಿಗೆ ಪ್ರವೇಶ ಶುಲ್ಕ ಸೇರಿದಂತೆ ಪ್ರತಿ ವಿದ್ಯಾರ್ಥಿಗೆ 16 ಲಕ್ಷಕ್ಕೂ ಹೆಚ್ಚು ಶುಲ್ಕ ವಿಧಿಸಿದ್ದರು. ಮಿಶ್ರಾ ಅವರು ಪ್ರತಿ ವಿದ್ಯಾರ್ಥಿಗೆ 5-6 ಲಕ್ಷ ರೂಪಾಯಿಗಳನ್ನು ಇಟ್ಟುಕೊಂಡಿದ್ದಾರೆ . ಕೆನಡಾದ ಇತರ ಕೆಲವು ಕಾಲೇಜುಗಳಲ್ಲಿ ಪ್ರವೇಶ ಪಡೆದಾಗ ಉಳಿದ ಹಣವನ್ನು ಹಿಂದಿರುಗಿಸಿದ್ದಾರೆ ಎಂದು ಕಂಪನಿಯ ಮೂಲಗಳು ಹೇಳಿವೆ. ಆದಾಗ್ಯೂ, ಹೆಚ್ಚಿನ ವಿದ್ಯಾರ್ಥಿಗಳು ಕೆನಡಾಕ್ಕೆ ಹೋದಮೇಲೆ ಅವರು ಅಧ್ಯಯನ ಮಾಡದ ಕಾಲೇಜುಗಳಿಗೆ ಆಫರ್ ಲೆಟರ್‌ಗಳನ್ನು ಒದಗಿಸಿದ್ದಾರೆ. ಅವರಲ್ಲಿ ಕೆಲವರನ್ನು ಬೇರೆ ಕಾಲೇಜುಗಳಿಗೆ ಸ್ಥಳಾಂತರಿಸಿದರೆ, ಇನ್ನು ಕೆಲವರಿಗೆ ಮುಂದಿನ ಸೆಮಿಸ್ಟರ್‌ವರೆಗೆ ಕಾಯುವಂತೆ ಸೂಚನೆ ನೀಡಲಾಗಿದೆ.


    ಇದನ್ನೂ ಓದಿ: Explained: ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಲು ಏನು ಕಾರಣ? ತಡೆಯೋಕೆ ಇಲ್ಲಿದೆ ದಾರಿ


    ಕೆನಡಾದಲ್ಲಿ PR ಗೆ ಅರ್ಜಿ ಸಲ್ಲಿಸುವಾಗ ಈ ವಿದ್ಯಾರ್ಥಿಗಳು ತಮ್ಮ 'ಪ್ರವೇಶ ಪತ್ರ'ವನ್ನು ಸಲ್ಲಿಸಿದ್ದರಿಂದ, CBSA ಈ ಪತ್ರಗಳು ನಕಲಿ ಎಂದು ಕಂಡುಹಿಡಿದಿದ್ದು, ವಂಚನೆ ಬಹಿರಂಗಗೊಳ್ಳುತ್ತಿದ್ದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಗಡಿಪಾರು ನೋಟೀಸ್ ನೀಡಿದೆ. ಆದರೆ ಇಲ್ಲಿ ಕೆನಡಾ ಸರ್ಕಾರ ತನ್ನ ವೀಸಾ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ವೈಫಲ್ಯದ ಬಗ್ಗೆ ಮಾತನಾಡದೇ ವಿದ್ಯಾರ್ಥಿಗಳಿಗೆ ಬರೆ ಎಳೆದಿದೆ.

    Published by:Kavya V
    First published: