• ಹೋಂ
 • »
 • ನ್ಯೂಸ್
 • »
 • jobs
 • »
 • Education and Career: ಈ ಮೂರು ವಲಯದಲ್ಲಿ ನೀವು ಶಿಕ್ಷಣ ಪೂರೈಸಿದರೆ ಉತ್ತಮ ಉದ್ಯೋಗಕ್ಕೆ ಆತಂಕ ಪಡಬೇಕಾಗಿಲ್ಲ!

Education and Career: ಈ ಮೂರು ವಲಯದಲ್ಲಿ ನೀವು ಶಿಕ್ಷಣ ಪೂರೈಸಿದರೆ ಉತ್ತಮ ಉದ್ಯೋಗಕ್ಕೆ ಆತಂಕ ಪಡಬೇಕಾಗಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಕ್ಷಣ ಮತ್ತು ಉದ್ಯೋಗವನ್ನು ಸಮಾನ ಹಂತವಾಗಿ ವಿಶ್ಲೇಷಿಸಲಾಗುತ್ತಿದ್ದು, ಇದು ಭವಿಷ್ಯದ ಬಗ್ಗೆ ಚಿಂತಿಸುವ ಪದವೀಧರರಿಗೆ ಆದಾಯ ಮತ್ತು ವೃತ್ತಿ ಬೆಳವಣಿಗೆಯ ವಿಷಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗುತ್ತದೆ.

 • Share this:

  ವೃತ್ತಿ ಹಾಗೂ ಶಿಕ್ಷಣ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಳ್ಳೆಯ ವೃತ್ತಿ ನಿಮ್ಮದಾಗಬೇಕು ಎಂದಾದರೆ ಅದಕ್ಕೆ ಪೂರಕವಾದ ಶಿಕ್ಷಣವನ್ನು ನೀವು ಪಡೆದಿರುವುದು ಅತ್ಯವಶ್ಯಕವಾಗಿದೆ.


  ವೃತ್ತಿಗೆ ಪೂರಕವಾಗಿರುವ ಜ್ಞಾನವನ್ನು ಒದಗಿಸುವ ಕೆಲಸವನ್ನು ಇಂದು ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಅದರಲ್ಲಿ ಬ್ಯುಸಿನೆಸ್ ಡಿಗ್ರಿಗಳನ್ನು ಕಲಿಸುವ ಸಂಸ್ಥೆಗಳೂ ಸೇರಿವೆ. ಇಂತಹ ಶಾಲೆಗಳಿಂದ ಪದವಿ ಗಳಿಸುವ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದಲ್ಲಿ ಧನಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳುತ್ತಿದ್ದಾರೆ.


  ಬಿ-ಸ್ಕೂಲ್‌ಗಳು ಉದ್ಯೋಗ ಕ್ಷೇತ್ರಕ್ಕೆ ಹೇಗೆ ಕೊಡುಗೆ ನೀಡುತ್ತಿವೆ?


  ತಂತ್ರಜ್ಞಾನ ವಲಯಕ್ಕೆ ಸೂಕ್ತವಾಗಿರುವ ವೇದಿಕೆಯನ್ನೇ ಬಿ-ಸ್ಕೂಲ್‌ಗಳು ಒದಗಿಸುತ್ತಿದ್ದು ಭವಿಷ್ಯದ ನೇಮಕಾತಿ ಪ್ರಕ್ರಿಯೆಗೆ ಸರಿಹೊಂದುವಂತೆ ಅಭ್ಯರ್ಥಿಗಳಿಗೆ ಸಿದ್ಧಪಡಿಸುವ ಉದ್ದೇಶವನ್ನು ಹೊಂದಿವೆ. ಐಟಿ, ಬಿಟಿ, ಬಿಎಫ್‌ಎಸ್‌ಐ ಹಾಗೂ ಕನ್ಸಲ್ಟಿಂಗ್ ವಲಯಗಳು ಬ್ಯುಸಿನೆಸ್ ಸ್ಕೂಲ್‌ಗಳಲ್ಲಿ ಹೆಚ್ಚಿನ ನೇಮಕಾತಿಗಳನ್ನು ನಡೆಸುತ್ತಿದ್ದು ಈ ಶಾಲೆಗಳು ಉದ್ಯೋಗ ವಲಯದಲ್ಲಿ ಅರ್ಧಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.


  ಉದ್ಯಮ ಕ್ಷೇತ್ರಕ್ಕೆ ಅಗತ್ಯವಾಗಿರುವ ಕೌಶಲ್ಯಗಳನ್ನು ಬ್ಯುಸಿನೆಸ್ ಶಾಲೆಗಳ ಪದವೀಧರರು ಪಡೆದುಕೊಂಡಿರುವುದರಿಂದ ನೇಮಕಾತಿ ಪ್ರಕ್ರಿಯೆ ಸುಲಭವಾಗಿ ನಡೆಯುತ್ತಿದೆ ಅಂತೆಯೇ ಉದ್ಯೋಗಿಗಳು ಮಾರುಕಟ್ಟೆಯ ಒಳಹೊರಗನ್ನು ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತಿದೆ.


  ಇದನ್ನೂ ಓದಿ: Delhi Govt: ದೆಹಲಿ ಶಿಕ್ಷಣ ಇಲಾಖೆಯ ಮಹತ್ವದ ಯೋಜನೆ ‘ಹ್ಯಾಪಿನೆಸ್‌’ ವಿಡಿಯೋ ಸರಣಿ ಆರಂಭ


  ಬಿ-ಸ್ಕೂಲ್ ಪದವೀಧರರಿಗೆ ಉತ್ತಮ ಉದ್ಯೋಗ ಹೇಗೆ ದೊರೆಯುತ್ತದೆ?


  ಶಿಕ್ಷಣ ಮತ್ತು ಉದ್ಯೋಗವನ್ನು ಸಮಾನ ಹಂತವಾಗಿ ವಿಶ್ಲೇಷಿಸಲಾಗುತ್ತಿದ್ದು, ಇದು ಬಿ ಸ್ಕೂಲ್ ಪದವೀಧರರಿಗೆ ಆದಾಯ ಮತ್ತು ವೃತ್ತಿ ಬೆಳವಣಿಗೆಯ ವಿಷಯದಲ್ಲಿ ಅತ್ಯುತ್ತಮ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ.


  ಬಹುಪಾಲು ಬಿ-ಸ್ಕೂಲ್ ನೇಮಕಾತಿ ಜನಸಂಖ್ಯೆಯು ಭವಿಷ್ಯದಲ್ಲಿ ಆದಾಯ ಮತ್ತು ಚಲನಶೀಲತೆಯನ್ನು ಖಾತರಿಪಡಿಸುವ ಸಾಧನವಾಗಿ ಶಿಕ್ಷಣವನ್ನು ನೋಡುತ್ತದೆ. ಬಿ-ಸ್ಕೂಲ್‌ಗಳು ನಿರೀಕ್ಷಿತ ಉದ್ದೇಶವನ್ನು ಸಾಧಿಸಲು ತಮ್ಮ ಪ್ರಯತ್ನಗಳನ್ನು ನಡೆಸುತ್ತಿವೆ.


  ಎಚ್‌ಆರ್ ಕ್ಷೇತ್ರದಲ್ಲಿ ನೇಮಕಾತಿ ಪ್ರವೃತ್ತಿಗಳು


  ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಟೆಕ್ನಾಲಜಿ (BIMTECH) ನ ಕಾರ್ಪೊರೇಟ್ ಸಂಬಂಧಗಳ ಕೇಂದ್ರ (CCR) ಕಾರ್ಯಾಚರಣೆ ಮತ್ತು ನಿರ್ಧಾರ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ರಾಜೀವ್ ಶರ್ಮಾ ಅವರಿಂದ ಎಚ್‌ಆರ್ ಉದ್ಯಮದಲ್ಲಿ ಮುಂದುವರಿಯುತ್ತಿರುವ ಕೆಲವು ಪ್ರಮುಖ ನೇಮಕಾತಿ ಪ್ರವೃತ್ತಿಗಳನ್ನು ಹೀಗೆ ತಿಳಿಸಲಾಗಿದೆ.


  ನೇಮಕಾತಿ ಕ್ಷೇತ್ರದಲ್ಲಿ ಹೊರಹೊಮ್ಮುವ ಕೌಶಲ್ಯಗಳು


  ತಂತ್ರಜ್ಞಾನದಲ್ಲಿನ ಪ್ರಗತಿಗಳು ಮತ್ತು ಟೆಕ್-ಸೂಕ್ಷ್ಮ ನೇಮಕಾತಿಗಳು ನೇಮಕಾತಿ ರಂಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತಿವೆ. ಉತ್ತಮ-ವೇತನ ಪಾವತಿಸುವ ಉದ್ಯೋಗಗಳು ಹೊಸ ತಂತ್ರಜ್ಞಾನದಿಂದ ನಡೆಸಲಾದ ಉದಯೋನ್ಮುಖ ವಲಯದಲ್ಲಿದೆ.


  ಡೇಟಾ ಅನಾಲಿಟಿಕ್ಸ್, ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ವಿಸ್ತೃತ ರಿಯಾಲಿಟಿ ಮೊದಲಾದ ಉದ್ಯೋಗಗಳಿಗೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬಿಸ್ಕೂಲ್‌ಗಳು ಪೂರಕವಾಗಿರುವ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ತುಂಬುತ್ತಿದ್ದು ಅವರಲ್ಲಿ ಹೊಸ ತಂತ್ರಜ್ಞಾನ ಕೌಶಲ್ಯಗಳಿಗೆ ಸೂಕ್ತವಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿವೆ.


  ಇದನ್ನೂ ಓದಿ: Education News: ವಿದ್ಯಾರ್ಥಿಗಳಿಗೆ ನೀಡಬೇಕಾದ ಲೈಂಗಿಕ ಶಿಕ್ಷಣದ ಕುರಿತು ಮಾಹಿತಿ ಹಂಚಿಕೊಂಡ ರಿಷಿ ಸುನಕ್​


  ತಾಂತ್ರಿಕ-ಸೂಕ್ಷ್ಮತೆಯುಳ್ಳ ನೇಮಕಾತಿ ವಲಯದ ಬೇಡಿಕೆಗಳನ್ನು ಪೂರೈಸುವುದು


  ನೇಮಕಾತಿ ಕ್ಷೇತ್ರ ಮತ್ತು ವಲಯದಲ್ಲಿನ ಬದಲಾವಣೆಯನ್ನು ಪರಿಹರಿಸಲು ಶಿಕ್ಷಣ ಕ್ಷೇತ್ರವು ಸಾಕಷ್ಟು ಗಮನಹರಿಸಬೇಕಾಗಿದೆ. ಇದಕ್ಕೆಂದೇ ಮೀಸಲಾದ ಕ್ರಮಗಳನ್ನು ಜರುಗಿಸಬೇಕಿದೆ. ತಂತ್ರಜ್ಞಾನದಲ್ಲಿನ ಉದಯೋನ್ಮುಖ ಬದಲಾವಣೆಗಳೊಂದಿಗೆ ಸಾಮಾನ್ಯ ಶಿಕ್ಷಣ ವ್ಯವಸ್ಥೆಯನ್ನು ಸಂಯೋಜಿಸುವುದು ಮತ್ತು ತಮ್ಮ ನೇಮಕಾತಿದಾರರಿಗೆ ತಾಂತ್ರಿಕ ಮಾದರಿಯನ್ನೊದಗಿಸುವ ಉನ್ನತ ಮಟ್ಟದ ಸಮರ್ಥ ಕಾರ್ಯಪಡೆಯನ್ನು ರೂಪಿಸಿ ತಲುಪಿಸಬೇಕಾಗಿದೆ.


  ಟೆಕ್-ಸೂಕ್ಷ್ಮ ನೇಮಕಾತಿಯನ್ನು ಸಂಧಿಸುವುದು


  ತಂತ್ರಜ್ಞಾನ ಸೂಕ್ಷ್ಮ, ತಂತ್ರಜ್ಞಾನ ಅಗತ್ಯವಾದ ಜ್ಞಾನವನ್ನು ತರಗತಿಯಲ್ಲಿ ತಲುಪಿಸುವ ಸಾಮರ್ಥ್ಯ ಮತ್ತು ಅಂತಹ ಕೌಶಲ್ಯಗಳನ್ನು ಹೊಂದಿರುವುದು ಬಿ-ಸ್ಕೂಲ್‌ಗಳ ಅಗತ್ಯತೆಯಾಗಿದೆ. ಪ್ರಮುಖ ವಿಷಯಗಳು, ಮೂಲಭೂತ ಕೌಶಲ್ಯಗಳು ಮತ್ತು ಉದ್ಯಮ-ನಿರ್ದಿಷ್ಟ ಪರಿಣತಿಯ ಕ್ಷೇತ್ರಗಳ ಮೇಲೆ ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಸಹಯೋಗಗಳು ಪ್ರಸ್ತುತ ನೇಮಕಾತಿ ಅವಶ್ಯಕತೆಗಳನ್ನು ಪೂರೈಸುವಲ್ಲಿ ಮಟ್ಟವನ್ನು ಪಡೆಯುತ್ತಿವೆ.


  ತಂತ್ರಜ್ಞಾನವು ಹೊಸ ಆಕಾಂಕ್ಷಿಗಳಲ್ಲಿ ಉದ್ದೇಶಿತ ಕೌಶಲ್ಯ ಅಂತರವನ್ನು ತಗ್ಗಿಸಲು ವಿದ್ಯಾರ್ಥಿಗೆ ಸೂಕ್ತವಾಗಿರುವ ತಾಂತ್ರಿಕ ಕೊಡುಗೆಗಳನ್ನು ಬಳಸುವ ಅವಕಾಶವನ್ನೊದಗಿಸುವ ಮೂಲಕ ಜ್ಞಾನ ಮತ್ತು ಕೌಶಲ್ಯ ವೇದಿಕೆಗಳನ್ನು ಒದಗಿಸುತ್ತಿದೆ.

  Published by:Avinash K
  First published: