• Home
  • »
  • News
  • »
  • jobs
  • »
  • Study Time: ಅಧ್ಯಯನ ಮಾಡಲು ಯಾವ ಸಮಯ ಉತ್ತಮ? ತಜ್ಞರು ನೀಡಿರುವ ಸಲಹೆ ಇಲ್ಲಿದೆ

Study Time: ಅಧ್ಯಯನ ಮಾಡಲು ಯಾವ ಸಮಯ ಉತ್ತಮ? ತಜ್ಞರು ನೀಡಿರುವ ಸಲಹೆ ಇಲ್ಲಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕ್ರೋನೋಟೈಪ್‌ಗಳೆಂದರೆ ನಿರ್ದಿಷ್ಟ ಸಮಯದಲ್ಲಿ ನಿದ್ರಿಸಲು ದೇಹವು ತೋರುವ ನೈಸರ್ಗಿಕ ಬಯಕೆಯಾಗಿದೆ ಅಂದರೆ ಸಾಮಾನ್ಯವಾಗಿ ನಿದ್ರಿಸುವ ಸಮಯ ರಾತ್ರಿಯಾಗಿರುತ್ತದೆ. ಈ ದಿನಚರಿಗೆ ದೇಹ ಒಗ್ಗಿಕೊಂಡಿರುತ್ತದೆ. ಹಾಗಾಗಿ ಹಗಲಿನಲ್ಲಿ ನಮ್ಮ ಮೆದುಳು ಹೆಚ್ಚು ಸಕ್ರಿಯವಾಗಿರುತ್ತದೆ ಎಂಬುದು ಕ್ಲಿನಿಕಲ್ ಮನಃಶಾಸ್ತ್ರಜ್ಞೆ ಸಾರಾ ಹುಸೇನ್ ಅಭಿಪ್ರಾಯವಾಗಿದೆ

ಮುಂದೆ ಓದಿ ...
  • Share this:

ಜನವರಿ ಕಳೆದು ಫೆಬ್ರವರಿ (February) ಮಾರ್ಚ್ ತಿಂಗಳು ಬಂತೆಂದರೆ ವಿದ್ಯಾರ್ಥಿಗಳಿಗೆ ಫುಲ್ ಟೆನ್ಶನ್, ಭಯ ಇದ್ದಿದ್ದೇ. ಇದಿಕ್ಕೆ ಕಾರಣ ಈ ಸಮಯದಲ್ಲಿ (Time) ನಡೆಯುವ ಬೋರ್ಡ್ ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳು. ವರ್ಷವೆಲ್ಲಾ ಆರಾಮವಾಗಿ ಓದಿಕೊಂಡು (Reading) ಸಿದ್ಧತೆಗಳನ್ನು ಮಾಡಿದ್ದರೂ ಪರೀಕ್ಷೆಯ ಅಂತಿಮ ಸಮಯದಲ್ಲಿ ಒಂದು ರೀತಿಯ ನಡುಕ ಉಂಟಾಗುವುದು ಸಹಜವಾಗಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. ಹೀಗೆ ಪರೀಕ್ಷೆಗಳಿಗೆ (Exam) ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಒಂದೆಡೆಯಾದರೆ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಹೇಗೆ ಅಂಕ ಗಳಿಸುತ್ತಾರೋ? ಎಂಬ ಚಿಂತೆ ಪೋಷಕರದ್ದಾಗಿರುತ್ತದೆ.


ಇಂತಹ ಚಿಂತೆಗಳನ್ನು ದೂರವಾಗಿಸಲು ಖುದ್ದು ಹರಿಯಾಣ ಸರಕಾರ ವಿದ್ಯಾರ್ಥಿಗಳಿಗೆ ಒಂದು ಸಲಹೆಯನ್ನು ನೀಡಿದ್ದು ಬೆಳಗ್ಗೆ 4: 30ಕ್ಕೆ ಎದ್ದು ಓದಿಕೊಳ್ಳುವುದು ಉತ್ತಮ ಎಂದು ತಿಳಿಸಿದೆ.


4:30ಗೆ ಏಳುವುದು ಉತ್ತಮ


ಸುದ್ದಿಮಾಧ್ಯಮಗಳ ಪ್ರಕಾರ ವಿದ್ಯಾರ್ಥಿಗಳನ್ನು 4:30 ಗೆ ಎಚ್ಚರಗೊಳಿಸುವುದಕ್ಕೆ ಸರಕಾರವು ದೇವಸ್ಥಾನ, ಮಸೀದಿ ಹಾಗೂ ಗುರುದ್ವಾರಗಳಿಗೆ ವಿನಂತಿಯನ್ನು ಮಾಡಿದೆ ಹಾಗೂ ಈ ಸಂಸ್ಥೆಗಳ ನೆರವನ್ನು ಕೇಳಿದೆ ಎಂದು ವರದಿಯಾಗಿದೆ. ಪರೀಕ್ಷೆಗೆ ಉತ್ತಮವಾಗಿ ಸಜ್ಜಾಗಲು ಪ್ರಾತಃಕಾಲ 4:30 ಒಳ್ಳೆಯ ಸಮಯ ಎಂದು ತಿಳಿಸಿದೆ.ಮಾನಸಿಕ ತಜ್ಞರು ಹೇಳುವಂತೆ ಓದಿಕೊಳ್ಳಲು ಮುಂಜಾನೆ ಹಾಗೂ ಸಂಜೆ ಎಂಬ ಭಿನ್ನತೆ ಇಲ್ಲ ಎಂದು ಸೂಚಿಸಿದ್ದಾರೆ. ಆರೋಗ್ಯವಂತನಾಗಿರಲು ಸೂಕ್ತ ಪ್ರಮಾಣದ ನಿದ್ರೆ ಅಗತ್ಯ ಎಂಬುದು ತಜ್ಞರ ಅಭಿಮತವಾಗಿದೆ. ಹಾಗಿದ್ದರೆ ಪರೀಕ್ಷೆಗೆ ಸಿದ್ಧಗೊಳ್ಳಲು ಅಥವಾ ಓದಿಕೊಳ್ಳಲು ಉತ್ತಮ ಸಮಯ ಯಾವುದು ಎಂಬುದನ್ನು ತಿಳಿದುಕೊಳ್ಳೋಣ


ಬೆಳಗ್ಗೆ ಮಾಡುವ ಅಧ್ಯಯನ


ಸಾಮಾನ್ಯವಾಗಿ ಬೆಳಗ್ಗಿನ ಸಮಯದಲ್ಲಿ ನಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ ಹಾಗೂ ತಾಜಾ ಆಗಿರುತ್ತದೆ ಎಂಬುದು ನಂಬಿಕೆಯಾಗಿದೆ. ಈ ಸಮಯದಲ್ಲಿ ಏನು ಓದಿದರೂ ಯಾವುದೇ ಕೆಲಸ ಮಾಡಿದರೂ ಅದು ಸ್ಮರಣೆಯಲ್ಲಿರುತ್ತದೆ ಎಂಬುದು ತಜ್ಞರ ಹೇಳಿಕೆಯಾಗಿದೆ. ರಾತ್ರಿಗೆ ಹೋಲಿಸಿದರೆ ಹಗಲಿನಲ್ಲಿ ಮನಸ್ಸು ಹೆಚ್ಚು ಜಾಗೃತವಾಗಿರುತ್ತದೆ. ಆದರೆ ಇನ್ನು ಕೆಲವರು ರಾತ್ರಿ ವೇಳೆಯಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಎಂಬ ಅಂಶವನ್ನು ಇಲ್ಲಿ ತಳ್ಳಿಹಾಕಲಾಗುವುದಿಲ್ಲ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: Education: ಫಿನ್‌ಲ್ಯಾಂಡ್ ಶಿಕ್ಷಣ ಪದ್ಧತಿಗೂ ನಮ್ಮಲ್ಲಿನ ಶಿಕ್ಷಣ ಪದ್ಧತಿಗೂ ಇರುವ ವ್ಯತ್ಯಾಸವೇನು? ಇಲ್ಲಿದೆ ಡಿಟೇಲ್ಸ್​

ಕ್ರೋನೋಟೈಪ್‌ಗಳ ಪಾತ್ರ ಮುಖ್ಯವಾದುದು


ಕ್ರೋನೋಟೈಪ್‌ಗಳೆಂದರೆ ನಿರ್ದಿಷ್ಟ ಸಮಯದಲ್ಲಿ ನಿದ್ರಿಸಲು ದೇಹವು ತೋರುವ ನೈಸರ್ಗಿಕ ಬಯಕೆಯಾಗಿದೆ ಅಂದರೆ ಸಾಮಾನ್ಯವಾಗಿ ನಿದ್ರಿಸುವ ಸಮಯ ರಾತ್ರಿಯಾಗಿರುತ್ತದೆ. ಈ ದಿನಚರಿಗೆ ದೇಹ ಒಗ್ಗಿಕೊಂಡಿರುತ್ತದೆ. ಹಾಗಾಗಿ ಹಗಲಿನಲ್ಲಿ ನಮ್ಮ ಮೆದುಳು ಹೆಚ್ಚು ಸಕ್ರಿಯವಾಗಿರುತ್ತದೆ ಎಂಬುದು ಕ್ಲಿನಿಕಲ್ ಮನಃಶಾಸ್ತ್ರಜ್ಞೆ ಸಾರಾ ಹುಸೇನ್ ಅಭಿಪ್ರಾಯವಾಗಿದೆ. ರಾತ್ರಿ ಚೆನ್ನಾಗಿ ನಿದ್ರಿಸಿದರೆ ಹಗಲಿನಲ್ಲಿ ಉತ್ತಮವಾಗಿ ಓದಿದ್ದನ್ನು ಮನನ ಮಾಡಿಕೊಳ್ಳಬಹುದು ಎಂಬುದು ಸಾರಾ ಸಲಹೆಯಾಗಿದೆ.


ಜ್ಞಾಪಕ ಶಕ್ತಿ ಬಲಗೊಳ್ಳುವುದು ಯಾವಾಗ


ಮೆದುಳು ಮಾಹಿತಿಯನ್ನು ಸಂಗ್ರಹಿಸಿಕೊಂಡು ಅದನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯನ್ನು ಮಾಡುತ್ತದೆ ಈ ಸಮಯದಲ್ಲಿ ಮೆದುಳಿನ ಚಟುವಟಿಕೆಗೆ ನಿದ್ರೆ ಅತ್ಯವಶ್ಯಕವಾಗಿರುತ್ತದೆ. ಮಕ್ಕಳು ಅಧ್ಯಯನ ಮಾಡಿ ನಂತರ ಮಲಗಿದಾಗ ಜ್ಞಾಪಕ ಶಕ್ತಿ ಬಲಗೊಳ್ಳುತ್ತದೆ ಎಂಬುದು ತಜ್ಞರ ಸಲಹೆಯಾಗಿದೆ.


ಸಾಕಷ್ಟು ನಿದ್ರೆ ಬೇಕು


ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹಾಗೂ ಯಾವ ಸಮಯದಲ್ಲಿ ಓದಿದರೆ ಉತ್ತಮ ಎಂಬುದು ವ್ಯಕ್ತಿಗಳನ್ನು ಅವಲಂಬಿಸಿದ್ದರೂ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಏಳು ಗಂಟೆಗಳ ನಿದ್ರೆಯನ್ನು ಶಿಫಾರಸು ಮಾಡಲಾಗುತ್ತದೆ. ವಿದ್ಯಾರ್ಥಿಗಳು ಚೆನ್ನಾಗಿ ನಿದ್ರಿಸಿದರೆ ಓದಿದ್ದು ಸ್ಮರಣೆಯಲ್ಲಿರುತ್ತದೆ ಇದರಿಂದ ಪರೀಕ್ಷೆಗಳಲ್ಲಿ ಬರೆಯಲು ಅನುಕೂಲವಾಗಿರುತ್ತದೆ ಎಂಬುದು ಹುಸೇನ್ ಹೇಳಿಕೆಯಾಗಿದೆ.


ತಡರಾತ್ರಿಯವರೆಗೆ ಓದುವುದು ಬೇಡ. ರಾತ್ರಿ ಸಮಯದಲ್ಲಿ ಬೆಳವಣಿಗೆಗೆ ಬೇಕಾದ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ ಹಾಗೂ ಈ ವೇಳೆಯಲ್ಲಿ ಅಂದರೆ ರಾತ್ರಿ ಸಮಯದಲ್ಲಿ ನಿದ್ರೆ ಮಾಡದೇ ಇದ್ದರೆ ದೇಹದ ಕಾರ್ಯಚಟುವಟಿಕೆಗೆ ತೊಂದರೆಯುಂಟಾಗುತ್ತದೆ ಎಂಬುದು ಹುಸೇನ್ ಸಲಹೆಯಾಗಿದೆ.


First published: