• ಹೋಂ
  • »
  • ನ್ಯೂಸ್
  • »
  • Jobs
  • »
  • Pariksha pe Charcha 2023: ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಈ ಉಪವಾಸ ಮಾಡಬೇಕಂತೆ: ಮೋದಿ ಮಾತಿನ ಅರ್ಥವೇನು?

Pariksha pe Charcha 2023: ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಈ ಉಪವಾಸ ಮಾಡಬೇಕಂತೆ: ಮೋದಿ ಮಾತಿನ ಅರ್ಥವೇನು?

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್‌ಸ್ಟಾಗ್ರಾಮ್ ರೀಲ್ ಗಳಂತಹ ಸಾಮಾಜಿಕ ಮಾಧ್ಯಮದ ಗೊಂದಲಗಳ ಬಗ್ಗೆ ಸಲಹೆ ನೀಡಿದ ಪಿಎಂ ಮೋದಿ, ನಾವು "ಡಿಜಿಟಲ್ ಉಪವಾಸ" ವನ್ನು ಅಳವಡಿಸಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ನಮ್ಮ ಫೋನ್ ಗಳು ಮತ್ತು ಲ್ಯಾಪ್​ಟಾಪ್​ಗಳನ್ನು ಮುಟ್ಟುವುದಿಲ್ಲ ಅಂತ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Delhi, India
  • Share this:

    ಜನವರಿ ತಿಂಗಳು ಇನ್ನೇನು ಮುಗಿತಾ ಬಂತು, ಇನ್ನೇನು ಫೆಬ್ರುವರಿ ಒಂದೇ ತಿಂಗಳು ನೋಡಿ ಈ ವಿದ್ಯಾರ್ಥಿಗಳ (Students) ಬಳಿ ಪರೀಕ್ಷೆಗೆ (Exams) ಚೆನ್ನಾಗಿ ಓದಿಕೊಂಡು ತಯಾರಾಗುವುದಕ್ಕೆ ಉಳಿದಿರುವ ಸಮಯ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಬಹುತೇಕ ರಾಜ್ಯಗಳಲ್ಲಿ 1ನೇ ತರಗತಿಯಿಂದ ಹಿಡಿದು 9ನೇ ತರಗತಿಯವರೆಗೆ ವಾರ್ಷಿಕ ಪರೀಕ್ಷೆಗಳು ನಡೆಯುವುದು ಮಾರ್ಚ್ ಮೊದಲನೇ ವಾರದಿಂದ ಹಿಡಿದು ಕೊನೆಯ ವಾರದವರೆಗೆ. ಆದರೆ 10 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಎದುರಿಸ ಬೇಕಾಗಿರುವುದರಿಂದ ಅವುಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ಮುಂದಕ್ಕೆ ಹೋಗಬಹುದಷ್ಟೇ.


    ಪರೀಕ್ಷೆಗಳು ಎಂದರೆ ಎಲ್ಲಾ ವಿದ್ಯಾರ್ಥಿಗಳಿಗೂ ಮುಖ್ಯವಾದ ವಿಷಯವೇ ಅಂತ ಹೇಳಬಹುದು. ಅದರಲ್ಲೂ ಭವಿಷ್ಯವನ್ನು ನಿರ್ಧರಿಸುವ ಈ 10ನೇ ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಂತೂ ತುಂಬಾನೇ ಮುಖ್ಯವಾದ ಘಟ್ಟ ಅಂತ ಹೇಳಬಹುದು. ವಿದ್ಯಾರ್ಥಿಗಳಲ್ಲಿಯೂ ಸಹ ಈ ಪರೀಕ್ಷೆಗಳ ಬಗ್ಗೆ ತುಂಬಾನೇ ಒತ್ತಡ ಮತ್ತು ಭಯ ಇರುವುದು ಸಹಜ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈ ಪರೀಕ್ಷೆಗಳ ಸಮಯದಲ್ಲಿ ದೇಶದ ವಿದ್ಯಾರ್ಥಿಗಳನ್ನು ಕುರಿತು ‘ಪರೀಕ್ಷಾ ಪೇ ಚರ್ಚಾ’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.




    ಸಮಯ ನಿರ್ವಹಣೆಯನ್ನು ತಾಯಿಯನ್ನು ನೋಡಿ ಕಲಿಬೇಕು ಎಂದ ಪ್ರಧಾನಿ


    ಈ ಬಾರಿ ನಡೆದ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಮೋದಿ ಅವರು ವಿದ್ಯಾರ್ಥಿಗಳಿಗೆ ಅವರ ತಾಯಂದಿರನ್ನು ಮನೆಯಲ್ಲಿ ಗಮನಿಸಲು ಹೇಳಿದ್ದಾರೆ. ಎಂದರೆ ಅವರ ತಾಯಂದಿರು ದಿನವಿಡೀ ಅವರ ಅನೇಕ ಕೆಲಸಗಳನ್ನು ಸಮಯಕ್ಕೆ ಅನುಗುಣವಾಗಿ ಹೇಗೆ ನಿರ್ವಹಿಸುತ್ತಾರೆ ಅನ್ನೋದನ್ನು ಗಮನಿಸಿ ಅಂತ ಹೇಳಿದ್ದಾರೆ. ಅವರಿಂದ ನೀವು ಸಮಯ ನಿರ್ವಹಣೆಯನ್ನು ಚೆನ್ನಾಗಿ ಕಲೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ 'ಪರೀಕ್ಷಾ ಪೇ ಚರ್ಚಾ 2023' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಸಮಯ ನಿರ್ವಹಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಮೋದಿ ಅವರಿಂದ ಉತ್ತರ ಬಂದಿತ್ತು.


    "ನಿಮ್ಮ ತಾಯಿಯ ಸಮಯ ನಿರ್ವಹಣಾ ಕೌಶಲ್ಯಗಳನ್ನು ನೀವು ಎಂದಾದರೂ ಗಮನಿಸಿದ್ದೀರಾ? ಒಬ್ಬ ತಾಯಿ ತಾನು ಮಾಡುವ ಅಗಾಧ ಕೆಲಸದಿಂದ ಎಂದಿಗೂ ಹೊರೆಯನ್ನು ಅನುಭವಿಸುವುದಿಲ್ಲ. ನೀವು ನಿಮ್ಮ ತಾಯಿಯನ್ನು ಗಮನಿಸಿದರೆ, ನಿಮ್ಮ ಸಮಯವನ್ನು ಹೇಗೆ ಉತ್ತಮವಾಗಿ ನಿರ್ವಹಿಸಬೇಕೆಂದು ನೀವು ಅರ್ಥಮಾಡಿಕೊಳ್ಳುತ್ತೀರಿ" ಎಂದು ಅವರು ಹೇಳಿದರು.


    Central govt has ordered Twitter and YouTube to take down links of a BBC documentary on the 2002 Gujarat riots
    ಪ್ರಧಾನಿ ನರೇಂದ್ರ ಮೋದಿ


    ಡಿಜಿಟಲ್ ಉಪವಾಸ ಮಾಡಿ ಅಂತ ವಿದ್ಯಾರ್ಥಿಗಳಿಗೆ ಹೇಳಿದ ಮೋದಿ


    ಇನ್‌ಸ್ಟಾಗ್ರಾಮ್ ರೀಲ್ ಗಳಂತಹ ಸಾಮಾಜಿಕ ಮಾಧ್ಯಮದ ಗೊಂದಲಗಳ ಬಗ್ಗೆ ಸಲಹೆ ನೀಡಿದ ಪಿಎಂ ಮೋದಿ, ನಾವು "ಡಿಜಿಟಲ್ ಉಪವಾಸ" ವನ್ನು ಅಳವಡಿಸಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ನಮ್ಮ ಫೋನ್ ಗಳು ಮತ್ತು ಲ್ಯಾಪ್​ಟಾಪ್​ಗಳನ್ನು ಮುಟ್ಟುವುದಿಲ್ಲ ಅಂತ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಸ್ಮಾರ್ಟ್‌ಫೋನ್ ನಲ್ಲಿ ಸಮಯ ಕಳೆಯುವ ಬದಲು ಕುಟುಂಬದ ಸದಸ್ಯರು ಪರಸ್ಪರ ಸಂವಹನ ನಡೆಸಲು ಗ್ಯಾಜೆಟ್ ಗಳನ್ನು ಇಡಬಹುದಾದ "ತಂತ್ರಜ್ಞಾನ ರಹಿತ ವಲಯ" ವನ್ನು ರಚಿಸುವಂತೆ ಅವರು ಪೋಷಕರಿಗೆ ಸಲಹೆ ನೀಡಿದರು.


    "ಭಾರತದಲ್ಲಿ ಜನರು ಮೊಬೈಲ್ ಮತ್ತು ಟಿವಿ ಸ್ಕ್ರೀನ್ ನೋಡುತ್ತಲೇ ದಿನದ ಸರಾಸರಿ 6 ಗಂಟೆಗಳ ಸಮಯವನ್ನು ಕಳೆಯುತ್ತಾರೆ. ಇದು ಕಳವಳಕಾರಿ ವಿಷಯವಾಗಿದೆ. ದೇವರು ನಮಗೆ ಸ್ವತಂತ್ರ ಅಸ್ತಿತ್ವ ಮತ್ತು ಅಪಾರ ಸಾಮರ್ಥ್ಯದೊಂದಿಗೆ ವ್ಯಕ್ತಿತ್ವವನ್ನು ನೀಡಿರುವಾಗ ಗ್ಯಾಜೆಟ್ ಗಳ ಗುಲಾಮನಾಗಿರಲು ಕಾರಣವೇನು?" ಎಂದು ಪಿಎಂ ಮೋದಿ ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.




    "ಸ್ಮಾರ್ಟ್ ಆಗಿ ಕೆಲಸ ಮಾಡಿ" ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅವರು 'ಕಾಗೆ ಮತ್ತು ಖಾಲಿ ಕೊಡದ' ಕಥೆಯನ್ನು ಹೇಳಿದರು.


    ಪರೀಕ್ಷೆಗಳಲ್ಲಿ ನಕಲು ಮಾಡುವುದರ ಬಗ್ಗೆ ಏನಂದ್ರು ಮೋದಿ?


    ಪರೀಕ್ಷೆಗಳ ಸಮಯದಲ್ಲಿ ಮೋಸ ಮಾಡುವುದು, ನಕಲು ಮಾಡುವುದರ ಬಗ್ಗೆ ಮಾತನಾಡಿದ ಪಿಎಂ ಮೋದಿ, "ಕೆಲವು ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಪರೀಕ್ಷೆಗಳಲ್ಲಿ 'ಮೋಸ' ಮಾಡಲು ಬಳಸುತ್ತಾರೆ ಆದರೆ ಆ ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಸೃಜನಶೀಲತೆಯನ್ನು ಉತ್ತಮ ರೀತಿಯಲ್ಲಿ ಬಳಸಿದರೆ ಅವರು ಯಶಸ್ಸನ್ನು ಸಾಧಿಸುತ್ತಾರೆ. ನಾವು ಜೀವನದಲ್ಲಿ ಎಂದಿಗೂ ಶಾರ್ಟ್ ಕಟ್ ಗಳನ್ನು ಆರಿಸಿಕೊಳ್ಳಬಾರದು” ಎಂದು ಹೇಳಿದರು.


    ಪರೀಕ್ಷಾ ಪೇ ಚರ್ಚಾ ವಾರ್ಷಿಕ ಕಾರ್ಯಕ್ರಮವಾಗಿದ್ದು, ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸುತ್ತಾರೆ. ಪರೀಕ್ಷೆಯ ಒತ್ತಡ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುತ್ತಾರೆ.

    Published by:Kavya V
    First published: