ಈ ಅರ್ಹತೆಗಳಿದ್ರೆ CSIR Scientist Award ಸಿಗೋದು ಪಕ್ಕಾ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಐದು ವರ್ಷಗಳ ಅವಧಿಯಲ್ಲಿ  25 ಲಕ್ಷ ರೂ ಸಂಶೋಧನಾ ಅನುದಾನವನ್ನು ಸಹ ನೀಡಲಾಗುತ್ತದೆ. ಸಾಮಾನ್ಯವಾಗಿ CSIR ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತರಿಗೆ ಪ್ರತಿ ವರ್ಷಕ್ಕೆ 5 ಲಕ್ಷ ರೂ. ಸಿಗುತ್ತದೆ

  • Share this:

CSIR ಯುವ ವಿಜ್ಞಾನಿ (Scientist) ಪ್ರಶಸ್ತಿ ನಿಮ್ಮದಾಗಿಸಿಕೊಳ್ಳಲು ನೀವು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ನಿಮಗೂ ಈ ಪ್ರಶಸ್ತಿ ಗೆಲ್ಲುವ ಹಂಬಲವಿದ್ದರೆ ಇದನ್ನು ಓದಿ (Read). ನಾವು ಇಲ್ಲಿ ತಿಳಿಸಿರುವ ಅರ್ಹತೆಗಳನ್ನು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ. ಇದರಲ್ಲೇ ಹಲವಾರು ಕ್ಷೇತ್ರಗಳನ್ನುಗುರುತಿಸಿ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ (Award) ನೀಡಲಾಗುತ್ತದೆ. ಆದ್ದರಿಂದ ಇಲ್ಲಿ ನೀಡಿರುವ ಮಾಹಿತಿಯನ್ನು (Information) ಸರಿಯಾಗಿ ಗಮನಿಸಿ. 


ಈ ಕೆಳಗಿನ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ:
ಜೈವಿಕ ವಿಜ್ಞಾನ, ರಾಸಾಯನಿಕ ವಿಜ್ಞಾನ, ಭೂಮಿ, ವಾತಾವರಣ, ಸಾಗರ ಮತ್ತು ಗ್ರಹ ವಿಜ್ಞಾನ, ಇಂಜಿನಿಯರಿಂಗ್ ವಿಜ್ಞಾನ, ಭೌತಿಕ ವಿಜ್ಞಾನ, ಹೀಗೆ ಈ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರತೀ ಪ್ರಶಸ್ತಿಯೂ 50 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ.


ಪ್ರಶಸ್ತಿ ಪುರಸ್ಕೃತರು 45 ವರ್ಷ ವಯಸ್ಸಿನವರೆಗೆ ತಿಂಗಳಿಗೆ ರೂ 7500 ಪಡೆಯುತ್ತಾರೆ. ಈ ವಿಶೇಷ ಗೌರವಧನಕ್ಕೆ ಅವರು ಅರ್ಹರಾಗಿರುತ್ತಾರೆ.


ಇದನ್ನೂ ಓದಿ: Education Loan: ವಿದ್ಯಾರ್ಥಿಗಳಿಂದ ಅರಿವು ಎಜುಕೇಶನ್​ ಲೋನ್​ಗೆ ಅರ್ಜಿ ಆಹ್ವಾನ


ಐದು ವರ್ಷಗಳ ಅವಧಿಯಲ್ಲಿ  25 ಲಕ್ಷ ರೂ ಸಂಶೋಧನಾ ಅನುದಾನವನ್ನು ಸಹ ನೀಡಲಾಗುತ್ತದೆ. ಸಾಮಾನ್ಯವಾಗಿ CSIR ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತರಿಗೆ ಪ್ರತಿ ವರ್ಷಕ್ಕೆ 5 ಲಕ್ಷ ರೂ. ಸಿಗುತ್ತದೆ


ಆಯ್ಕೆಯ ವಿಧಾನ
ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಸಂಶೋಧನಾ ಪ್ರಬಂಧವನ್ನು ಮಂಡಿಸಬೇಕಾಗುತ್ತದೆ. ಅವರು ಮಂಡಿಸಿದ ಸಂಶೋಧನಾ ಪ್ರಬಂಧದ ಮೇಲೆ ಪ್ರಶ್ನೆ ಕೇಳಲಾಗುತ್ತದೆ. ಆ ನಂತರ 5 ನಿಮಿಷಗಳ ಪ್ರಶ್ನೋತ್ತರ ಅವಧಿ ಕಳೆದ ನಂತರ ಚರ್ಚೆ ನಡೆಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿ ಏನಾದರು ಗೈರಾಗಿದ್ದರೆ ಅವರನ್ನು ಪರಿಗಣಸಲಾಗುವುದಿಲ್ಲ. ಪ್ರಾಥಮಿಕವಾಗಿ ಭಾರತದಲ್ಲಿ ಮಾಡಿದ ಕೆಲಸಗಳ ಕುರಿತು ಯುವ CSIR ವಿಜ್ಞಾನಿಗಳು ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಇವಿಷ್ಟು ಅರ್ಹತೆಗಳು ಹಾಗೂ ಬಹುಮಾನ ಮೊತ್ತವನ್ನು ಯುವ ವಿಜ್ಞಾನಿ ಪ್ರಶಸ್ತಿ ಗೆದ್ದ ಅಭ್ಯರ್ಥಿಗೆ ನೀಡಲಾಗುತ್ತದೆ. ಇದರಲ್ಲಿ ಸೌಲಭ್ಯ ಹೆಚ್ಚಿರುವುದರಿಂದ ನೀವೂ ಕೂಡಾ ಸಾಧನೆ ಮಾಡಿ ಈ ಪ್ರಶಸ್ತಿ ಪಡೆದುಕೊಳ್ಳಬಹುದು.

ಡಾ.ಮಹಾಲಿಂಗಂ ಗೋವಿಂದರಾಜ್
ಕೃಷಿ ವಿಜ್ಞಾನಿಯಾಗಿರುವ ಡಾ.ಮಹಾಲಿಂಗಂ ಗೋವಿಂದರಾಜ್ ಅವರು 2022 ರ ಭೂಮಿ ಸಂಶೋಧನೆ ಮತ್ತು ಅಪ್ಲಿಕೇಶನ್‌ಗಾಗಿ ನಾರ್ಮನ್ ಇ ಬೋರ್ಲಾಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರಿಗೆ ಈ ಪ್ರಶಸ್ತಿ ನೀಡಿರುವುದು ಕೃಷಿಯಲ್ಲಿ ಮಹಾಲಿಂಗಂ ಮಾಡಿರುವ ಸಾಧನೆಗಾಗಿ. ಕಬ್ಬಿಣ ಮತ್ತು ಸತುವು ಸಮೃದ್ಧವಾಗಿರುವ ಬಯೋಫೋರ್ಟಿಫೈಡ್ ಸಜ್ಜೆ ಅನ್ನು ಅಭಿವೃದ್ಧಿಪಡಿಸಿರುವ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.


CGIAR ಸಂಶೋಧಕರಗೆ ನೀಡುವ ಪ್ರಶಸ್ತಿ

ಹಾರ್ವೆಸ್ಟ್‌ಪ್ಲಸ್ ಮತ್ತು ಅಲೈಯನ್ಸ್ ಆಫ್ ಬಯೋವರ್ಸಿಟಿ ಇಂಟರ್‌ನ್ಯಾಶನಲ್ ಮತ್ತು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಟ್ರಾಪಿಕಲ್ ಅಗ್ರಿಕಲ್ಚರ್ನಲ್ಲಿ ಹಿರಿಯ ಬೆಳೆ ಅಭಿವೃದ್ಧಿ ವಿಜ್ಞಾನಿಯಾಗಿ ಡಾ ಗೋವಿಂದರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 2011 ರಿಂದ 2021 ರವರೆಗೆ ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ದಿ ಸೆಮಿ-ಆರಿಡ್ ಟ್ರಾಪಿಕ್ಸ್ (ICRISAT) ನಲ್ಲಿ CGIAR ಸಂಶೋಧಕರಾಗಿ ಕೆಲಸ ಮಾಡಿದರು. ಅವರ ಸತತ ಪ್ರಯತ್ನಗಳ ಮೂಲಕ, ಸಜ್ಜೆಯು 2018 ರಲ್ಲಿ ಕನಿಷ್ಠ ಮಟ್ಟದ ಸತು ಮತ್ತು ಕಬ್ಬಿಣವನ್ನು ಕಡ್ಡಾಯಗೊಳಿಸಿದ ಮೊದಲ ಬೆಳೆಯಾಗಿದೆ.


ಪ್ರಶಸ್ತಿಗಳನ್ನು ಪಡೆಯಲು ಆಸಕ್ತರಾಗಿರುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಅರ್ಹತೆಗಳನ್ನು ಹೊಂದಿದ್ದರೆ ಮುಂದೆ ಉತ್ತಮ ಗೌರವ ಧನ ಹಾಗೂ ಇನ್ನೂ ಹಲವು ಸೌಕರ್ಯಗಳನ್ನು ಪಡೆದುಕೊಳ್ಳಬಹುದು.

First published: