ಶಿಕ್ಷಣ (Education) ಎಂಬುದು ಸಮಾಜದ ಮೂಲ ಅಡಿಪಾಯ ಎಂದೆನಿಸಿದ್ದು ಲಿಂಗ, ಹಿನ್ನೆಲೆ, ಆರ್ಥಿಕ ಸ್ಥಿತಿ, ಲೈಂಗಿಕ ದೃಷ್ಟಿಕೋನ ಮತ್ತು ಧರ್ಮವನ್ನು ಲೆಕ್ಕಿಸದೆ ಆರ್ಥಿಕ ಸ್ವಾತಂತ್ರ್ಯ ಮತ್ತು ಜ್ಞಾನ ಸೇರಿದಂತೆ ಜೀವನದ ವಿವಿಧ ಅಂಶಗಳನ್ನು ಸುಧಾರಿಸಲು ಹಾಗೂ ಮಹೋನ್ನತ ಗುರಿಯನ್ನು ಸಾಧಿಸಲು ಅವಕಾಶವನ್ನೊದಗಿಸುವ ಕ್ಷೇತ್ರವಾಗಿದೆ. ಆದರೆ ಮಹಿಳೆಯರಿಗೆ ಶಿಕ್ಷಣವನ್ನೊದಗಿಸುವ ವಿಷಯದಲ್ಲಿ ಮಾತ್ರ ಅನೇಕ ಪ್ರಶ್ನೆಗಳು (Questions) ಇಂದಿಗೂ ಕಾಡುತ್ತಲೇ ಇವೆ. ಇಂದು ವಿಶ್ವದ ಹೆಚ್ಚಿನ ಸ್ತ್ರೀಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೆಣ್ಣುಮಕ್ಕಳಿಗೆ (Girl's Education) ಶಿಕ್ಷಣವನ್ನೊದಗಿಸುವ ವಿಷಯದಲ್ಲಿ ಇಂದಿಗೂ ಪ್ರಪಂಚದ ಕೆಲವು ಸಮಯದಾಯಗಳು ತಾರತಮ್ಯವನ್ನು ನಡೆಸುತ್ತಿವೆ. ಅವರನ್ನು ಶಿಕ್ಷಣ ಸೌಲಭ್ಯಗಳಿಂದ ವಂಚಿತರಾಗಿಸುತ್ತಿವೆ.
ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ. ಹುಡುಗರಿಗಿಂತ ಗಂಡುಮಕ್ಕಳಿಗಿಂತ ಅವರು ಶ್ರೇಷ್ಠರಲ್ಲ ಎಂಬ ನಂಬಿಕೆ ಇಂದಿಗೂ ಹೆಚ್ಚಿನವರಲ್ಲಿ ಮೈಗೂಡಿದೆ.
ಗಂಡುಮಕ್ಕಳಿಗೆ ಎಷ್ಟು ಬೇಕಾದರೂ ಖರ್ಚುಮಾಡುವ ಈ ಸಮಾಜ ಹೆಣ್ಣು ಓದಬೇಕೆಂಬ ಆಸೆ ಪ್ರಕಟಿಸಿದಾಗ ಆಕೆಯನ್ನು ಮನೆಗೆಲಸಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ ಜೊತೆಗೆ ಹೆಣ್ಣು ಓದಿ ಯಾವ ದೇಶ ಆಳಬೇಕಾಗಿದೆ ಎಂಬ ತಾತ್ಸಾರದ ಹೇಳಿಕೆಗಳಿಂದ ಆಕೆ ಜರ್ಜರಿತಳಾಗುವಂತೆ ಮಾಡಲಾಗುತ್ತದೆ. ಸ್ತ್ರೀ ಶಿಕ್ಷಣ ಏಕೆ ಮಹತ್ವವಾದುದು ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಸ್ತ್ರೀ ಶಿಕ್ಷಣವು ವಿದ್ಯಾವಂತ ಪೀಳಿಗೆಗೆ ಅಡಿಪಾಯವಾಗಿದೆ
ಮಹಿಳೆಯರಿಗೆ ಶಿಕ್ಷಣವನ್ನು ಒದಗಿಸುವುದು ಎಂದರೆ ಸಂಪೂರ್ಣ ಸಮಾಜವನ್ನೇ ಶಿಕ್ಷಿತರನ್ನಾಗಿ ಮಾಡಿದಂತೆ ಏಕೆಂದರೆ ತಾವು ಕಲಿಯುವುದರ ಜೊತೆಗೆ ತಮ್ಮ ಕುಟುಂಬಗಳಿಗೆ ಜ್ಞಾನವನ್ನು ಪಸರಿಸುವ ಕಾರ್ಯವನ್ನು ಆಕೆ ಮಾಡುತ್ತಾಳೆ.
ಇದಲ್ಲದೆ, ಅವರು ಶಾಲೆಯ ಪ್ರಾಮುಖ್ಯತೆಯನ್ನು ಪ್ರಶಂಸಿಸಲು ಮುಖ್ಯ ಕಾರಣೀಕರ್ತರಾಗಿದ್ದಾರೆ ಮತ್ತು ಉನ್ನತ ಶಿಕ್ಷಣದ ಅಂತ್ಯವಿಲ್ಲದ ಪ್ರಯೋಜನಗಳನ್ನು ಪಡೆದುಕೊಳ್ಳಲು ಹಾಗೂ ತಮ್ಮ ಮಕ್ಕಳು ಉತ್ತಮ ಶಾಲೆಗಳು ಮತ್ತು ಕಾಲೇಜುಗಳಿಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಜವಬ್ದಾರಿಯನ್ನು ಹೆಣ್ಣು ವಹಿಸಿಕೊಳ್ಳುತ್ತಾಳೆ.
ಸ್ತ್ರೀ ಶಿಕ್ಷಣ ಬಡತನ ನಿರ್ಮೂಲನೆಗೆ ಸಹಕಾರಿ
ಮಹಿಳೆಯರಿಗೆ ತಮ್ಮ ಶಿಕ್ಷಣದ ಹಕ್ಕುಗಳನ್ನು ಪೂರೈಸಲು ಸಮಾನ ಅವಕಾಶಗಳನ್ನು ಒದಗಿಸುವುದು ಅವರಿಗೆ ವ್ಯಾಪಾರ ಮತ್ತು ಇತರ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.
ವಾಣಿಜ್ಯೋದ್ಯಮ ಸಾಮರ್ಥ್ಯಗಳ ಕಾರಣದಿಂದಾಗಿ, ಗಣಿತ ಮತ್ತು ಸಂಶೋಧನಾ ಕೌಶಲ್ಯಗಳು ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚುವರಿ ಜ್ಞಾನವು ಅವರನ್ನು ಸಜ್ಜುಗೊಳಿಸುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕರಾಗುತ್ತಾರೆ ಮತ್ತು ಬಡತನವನ್ನು ಎದುರಿಸಲು ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ.
ಸ್ತ್ರೀ ಶಿಕ್ಷಣವು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ
ಮಹಿಳೆಯರಿಗೆ ಶಿಕ್ಷಣ ನೀಡುವುದರಿಂದ ಆರ್ಥಿಕ ಅಭಿವೃದ್ಧಿಗೆ ಇದು ಸಹಕಾರಿಯಾಗುತ್ತದೆ. ದೇಶದ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಹೆಚ್ಚಿನ ದೇಶಗಳಲ್ಲಿ ಮಹಿಳೆಯರು ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ಹೀಗಾಗಿ ಅವರಿಗೆ ಶಿಕ್ಷಣ ನೀಡಲು ವಿಫಲವಾದರೆ ಇಲ್ಲವೇ ಅವರನ್ನು ಶಿಕ್ಷಣದಿಂದ ವಂಚಿತಗೊಳಿಸಿದರೆ ಅಭಿವೃದ್ಧಿ ಪ್ರಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಕಡಿಮೆ ಉತ್ಪಾದಕ ಸಮಾಜವಾಗಿ ಮಾರ್ಪಡುತ್ತದೆ ಎಂದರ್ಥವಾಗಿದೆ.
ಇದನ್ನೂ ಓದಿ: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ- ಈ ಷರತ್ತು ಅನ್ವಯ
ಆಧುನಿಕ ಸಮಾಜದಲ್ಲಿ, ಹೆಣ್ಣು ಆರ್ಥಿಕ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ತನ್ನ ಗಂಡನಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾಳೆ. ಶಿಕ್ಷಣ, ಸಹಜವಾಗಿ, ಉತ್ತಮ ಗುಣಮಟ್ಟದ, ಕನಿಷ್ಠ ಸವಾಲುಗಳೊಂದಿಗೆ ಜವಬ್ದಾರಿ ವಹಿಸಲು ಅವರಿಗೆ ಅನುವು ಮಾಡಿಕೊಡುತ್ತದೆ.
ಸ್ತ್ರೀ ಶಿಕ್ಷಣವು ಸುಸಜ್ಜಿತ ನಾಗರಿಕರನ್ನು ರೂಪಿಸುತ್ತದೆ
ಜೀವನದ ವಿವಿಧ ಅಂಶಗಳ ಬಗ್ಗೆ ಜ್ಞಾನವನ್ನು ನೀಡಲು ಶಿಕ್ಷಣವು ಮುಖ್ಯವಾಗಿದೆ. ವಿದ್ಯಾವಂತ ಮಹಿಳೆಯರು ಆತ್ಮವಿಶ್ವಾಸ, ಮಾಹಿತಿ ಮತ್ತು ಕೌಶಲ್ಯಗಳನ್ನು ಹೊಂದಿದ್ದು, ಉತ್ತಮ ನಾಗರಿಕರು, ಕೆಲಸಗಾರರು ಮತ್ತು ಪೋಷಕರಾಗಲು ಅನುವು ಮಾಡಿಕೊಡುತ್ತದೆ. ಸ್ತ್ರೀ ಶಿಕ್ಷಣವು ದೈಹಿಕ ಬೆಳವಣಿಗೆ ಮತ್ತು ಸಕಾರಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ.
ಒಟ್ಟಾರೆಯಾಗಿ, ಮಹಿಳೆಯರಿಗೆ ಶಿಕ್ಷಣ ಒದಗಿಸುವುದು ಬಡತನ ಮತ್ತು ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳುವ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದೆನಿಸಿದೆ.
ಆತ್ಮವಿಶ್ವಾಸ, ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯವನ್ನು ಸುಧಾರಿಸುವುದರ ಜೊತೆಗೆ, ಮಹಿಳೆಯರಿಗೆ ಶಾಲೆಗೆ ಹಾಜರಾಗಲು ಅವಕಾಶ ನೀಡುವುದು ಉತ್ತಮ ಸಮಾಜವನ್ನು ಬೆಳೆಸಲು ಅನುಕೂಲಕಾರಿಯಾಗಿದೆ. ತಾವು ಕಲಿಯುವುದರೊಂದಿಗೆ ತಮ್ಮ ಮನೆಗಳಲ್ಲೂ ಶಿಕ್ಷಣದ ಮಹತ್ವವನ್ನು ಹೆಣ್ಣುಮಕ್ಕಳು ಸಾರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ