• ಹೋಂ
  • »
  • ನ್ಯೂಸ್
  • »
  • Jobs
  • »
  • ChatGPT ಬರುವ ಮುನ್ನ ಶಿಕ್ಷಣಕ್ಕೆ ಸಂಬಂಧಿಸಿದ ಯಾವೆಲ್ಲಾ ಸಾಫ್ಟ್‌ವೇರ್‌ಗಳಿತ್ತು?

ChatGPT ಬರುವ ಮುನ್ನ ಶಿಕ್ಷಣಕ್ಕೆ ಸಂಬಂಧಿಸಿದ ಯಾವೆಲ್ಲಾ ಸಾಫ್ಟ್‌ವೇರ್‌ಗಳಿತ್ತು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶೈಕ್ಷಣಿಕ ಸಾಫ್ಟ್‌ವೇರ್ ಸುದೀರ್ಘ ಇತಿಹಾಸವನ್ನು ಹೊಂದಿದೆ, ಆದರೆ ಚಾಟ್‌ಬಾಟ್‌ಗಳು ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಉತ್ತಮ ಸಾಧನೆ ಮಾಡಲು ಸಹಾಯ ಮಾಡಬಹುದು.

  • Trending Desk
  • 3-MIN READ
  • Last Updated :
  • New Delhi, India
  • Share this:

    ತಂತ್ರಜ್ಞಾನ (Technology) ಹಂತ ಹಂತದಲ್ಲೂ ಬೆಳವಣಿಗೆ ಆಗುತ್ತಲೇ ಇದೆ. ಅದು ಸಾಧನದ ವಿಷಯದ ಜೊತೆಯೇ ಸಾಫ್ಟ್‌ವೇರ್‌ (Software) ಅಭಿವೃಧ್ಧಿ ಕೂಡ ಹೌದು. ಸುಲಿದ ಬಾಳೆಹಣ್ಣಿನಂತೆ ಸುಲಭವಾಗಿ ಈ ವ್ಯವಸ್ಥೆ ಮೂಲಕ ಪ್ರತಿಯೊಬ್ಬರಿಗೂ ʼಮಾಹಿತಿʼ ಎಂಬ ರೆಡಿಫುಡ್‌ ಸಿಗುತ್ತಿದೆ. ಆಯಾಸವಿಲ್ಲದೇ, ಬೃಹತ್ ಪ್ರಮಾಣದ ಡೇಟಾವನ್ನು ಸಂಗ್ರಹಿಸುವ, ಎಲ್ಲರಿಗೂ ಉಚಿತವಾದ ಸೇವೆ ನೀಡುವ, ಎಲ್ಲಾ ನಮ್ಮ ಸಮಸ್ಯೆಗೂ ಪರಿಹಾರ ನೀಡುವ ಏನಾದರೂ ಬರಬೇಕು ಎಂಬ ಕಲ್ಪನೆಯನ್ನು 1966ರ ಹಿಂದೆಯೇ ಸ್ಟ್ಯಾನ್‌ಫೋರ್ಡ್ ಫಿಲಾಸಫಿ ಪ್ರೊಫೆಸರ್ ಪ್ಯಾಟ್ರಿಕ್ ಸಪ್ಪೆಸ್ ವ್ಯಕ್ತಪಡಿಸಿದ್ದರು. ಅವರ ಮುನ್ಸೂಚನೆಯಂತೆ ಕಂಪ್ಯೂಟರ್‌ (Computer) ಸದ್ಯ ಇಡೀ ಜಗತ್ತನ್ನೇ ಆಳುತ್ತಿದೆ. ಆಯಾಸವಿಲ್ಲದೇ, ದೊಡ್ಡ ಡೇಟಾ ಸಂಗ್ರಹಣೆಯ ಸಾಧನವಾಗಿ, ಮನುಷ್ಯನಿಗಿಂತ ಚುರುಕಾಗಿ ಕೆಲಸ ಮಾಡುವ ಅಗಾಧ ಶಕ್ತಿ ಹೊಂದಿದೆ.


    ಇಷ್ಟಕ್ಕೆ ಮುಗಿಯದ ಈ ಸೌಲಭ್ಯದ ಹಂತಗಳು ಮುಂದುವರೆಯುತ್ತಲೇ ಇದೆ. ಬೆರಳ ತುದಿಯಲ್ಲೇ ಎಲ್ಲವನ್ನೂ ನೋಡಬಹುದಾದ ಗೂಗಲ್‌ ಸರ್ಚ್‌ ಎಂಜಿನ್ ಆಗಿರಬಹುದು, ಬೇರೆ ಇನ್ನಿತರೆ ತಂತ್ರಜ್ಞಾನಗಳು ನಮಗೆ ಕೂತಲ್ಲೇ ಎಲ್ಲವನ್ನೂ ತಿಳಿಸುತ್ತವೆ. ಇದಕ್ಕೆ ಹೊಸ ಸೇರ್ಪಡೆ ಎಂದರೆ ಚಾಟ್‌ಜಿಪಿಟಿ.


    ಇಂಟರ್‌ನೆಟ್‌ ಲೋಕದ ಚಾಟ್‌ಜಿಪಿಟಿ ಎಂಬ ದೈತ್ಯ


    ಸುಧಾರಿತ ಸಂಭಾಷಣಾ ಸಾಮರ್ಥ್ಯಗಳೊಂದಿಗೆ ಹೊಸ ಕೃತಕ ಬುದ್ಧಿಮತ್ತೆ ಚಾಲಿತ ಚಾಟ್‌ಬಾಟ್ ಇಂಟರ್‌ನೆಟ್‌ ಲೋಕದಲ್ಲಿ ಧೂಳೆಬ್ಬಿಸುತ್ತಿದೆ. ಚಾಟ್‌ ಜಿಪಿಟಿ ದೊಡ್ಡ ಪರೀಕ್ಷೆ, ಪ್ರಬಂಧಗಳನ್ನೇ ಬರೆದು ಪಾಸ್‌ ಆಗುವ ಮೂಲಕ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜನರು ಕಲಿಯಲು ಸಹಾಯ ಮಾಡಲು ಕಂಪ್ಯೂಟರ್‌ಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅಧ್ಯಯನ ಮಾಡುವ ಸಂಶೋಧಕರಾಗಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ChatGPT ಅನ್ನು ಬಳಸಬಹುದು.


    ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ, ವಿದೇಶದಲ್ಲಿ ಓದುವವರಿಗೆ ಒಂದೊಳ್ಳೆ ಅವಕಾಶ ಇಲ್ಲಿದೆ!


    1990 ರ ದಶಕದಲ್ಲಿ ಅಂತರ್ಜಾಲವು ಜಾಗತಿಕ ವಾಣಿಜ್ಯ ನೆಟ್‌ವರ್ಕ್ ಆಗುವ ಮೊದಲು ತತ್ವಶಾಸ್ತ್ರ, ಎಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ವಿದ್ವಾಂಸರು ಕಂಪ್ಯೂಟರ್ ಅನ್ನು "ಬುದ್ಧಿವಂತ ಬೋಧಕ" ಎಂದು ಪರಿಗಣಿಸಿದ್ದರು. ಆ ಆರಂಭಿಕ ಬೋಧನಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಪಾಠಗಳು ಪ್ರಸ್ತುತ ಚಾಟ್‌ಜಿಪಿಟಿಯಂತಹ ಉಚಿತ ಬೋಧಕರಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೇಗೆ ಉತ್ತಮವಾಗಿ ಬಳಸಿಕೊಳ್ಳುವ ಸಾಧನವಾಗಿ ಹೊರಹೊಮ್ಮಿದೆ ಎನ್ನಬಹುದು.


    ಕಂಪ್ಯೂಟರ್‌ನಲ್ಲಿ ಆರಂಭಿಕ ಶೈಕ್ಷಣಿಕ ಸಾಫ್ಟ್‌ವೇರ್ ನಡೆದು ಬಂದ ಹಾದಿ


    ಕಂಪ್ಯೂಟರ್‌ನಲ್ಲಿ ಆರಂಭಿಕ ಶೈಕ್ಷಣಿಕ ಸಾಫ್ಟ್‌ವೇರ್ ಅನ್ನು ತಜ್ಞರು ಅಭಿವೃದ್ಧಿಪಡಿಸಿದರು. ಆ ಸಾಫ್ಟ್‌ವೇರ್ ಕಂಪ್ಯೂಟರ್ ಮೂಲಕ ಪ್ರೋಗ್ರಾಂ ಅನ್ನು ವಿದ್ಯಾರ್ಥಿಗಳು ಬಳಸಲು ಆರಂಭಿಸಿದರು. ಹೀಗೆ ಕಂಪ್ಯೂಟರ್ ಪ್ರೋಗ್ರಾಂ ಬಳಸದ ವಿದ್ಯಾರ್ಥಿಗಳು ಉತ್ತಮ ಪರೀಕ್ಷಾ ಫಲಿತಾಂಶಗಳನ್ನು ಪಡೆದುಕೊಂಡರು. ಅಂದಿನಿಂದ, ವಿದ್ಯಾರ್ಥಿಗಳಿಗೆ ಸಹಾಯ ಮಾಡಲು "ಬುದ್ಧಿವಂತ ಬೋಧಕರನ್ನು" ನಿರ್ಮಿಸುವ ಪ್ರಯೋಗಗಳು ಕೃತಕ ಬುದ್ಧಿಮತ್ತೆ, ಸಾಮಾಜಿಕ ನೆಟ್‌ವರ್ಕ್‌ಗಳು ಮತ್ತು ಕಂಪ್ಯೂಟರ್ ಹಾರ್ಡ್‌ವೇರ್‌ನಲ್ಲಿ ಪ್ರಗತಿಯನ್ನು ಸಾಧಿಸಿವೆ.


    ಪ್ರಸ್ತುತ ಈ ಎಲ್ಲವನ್ನೂ ಮೀರಿಸಿ ಪ್ರಬಂಧಗಳನ್ನು ಬರೆಯಲು, ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಕಂಪ್ಯೂಟರ್ ಕೋಡಿಂಗ್ ಸಮಸ್ಯೆಗಳನ್ನು ಪರಿಹರಿಸಲು ChatGPT ಒಂದು ಪರಿಣಾಮಕಾರಿ ಮತ್ತು ಕೈಗೆಟುಕುವ ಬೋಧಕರನ್ನು ಉಚಿತವಾಗಿ ಪ್ರತಿಯೊಬ್ಬರಿಗೂ ನೀಡಿದೆ.


    ವೈಯಕ್ತಿಕಗೊಳಿಸಿದ ಕಲಿಕೆಯ ಆರಂಭಿಕ ಆವೃತ್ತಿಗಳು


    ಹೌದು, ಚಾಟ್‌ಜಿಪಿಟಿ ಈಗ ಎಲ್ಲರ ನೆಚ್ಚಿನ ಸಾಧನವಾಗಿದೆ. ವಿದ್ಯಾರ್ಥಿಗಳಂತೂ ಇದರ ಕಾರ್ಯವೈಖರಿಗೆ ಮಾರುಹೋಗಿದ್ದಾರೆ. ಮೊದಲೇ ಹೇಳಿದಂತೆ ಈ ಹಂತ ಒಂದೊಂದೇ ಮೆಟ್ಟಿಲುಗಳನ್ನು ದಾಟಿ ಬಂದಿದೆ. ಚಾಟ್‌ಜಿಪಿಟಿ ಬರುವ ಮುನ್ನ ಈ ರೀತಿಯಾದ ಸಾಫ್ಟ್ವೇರ್‌ ವಿನ್ಯಾಸಗೊಳ್ಳುತ್ತಾ ಬಂದಿವೆ.


    • ಪ್ಲಾಟೋ (PLATO)


    ಮೊದಲಿಗೆ 1972 ರಲ್ಲಿ, ಸ್ವಯಂಚಾಲಿತ ಬೋಧನಾ ಕಾರ್ಯಾಚರಣೆಗಳಿಗಾಗಿ ಪ್ರೋಗ್ರಾಮ್ಡ್ ಲಾಜಿಕ್‌ಗಾಗಿ PLATO ಎಂಬ ಹೊಸ ವೈಯಕ್ತಿಕಗೊಳಿಸಿದ ಕಲಿಕಾ ವ್ಯವಸ್ಥೆಯು ತನ್ನ ಚೊಚ್ಚಲ ಪ್ರವೇಶವನ್ನು ಮಾಡಿತು. ಇದು ಈ ರೀತಿಯ ಮೊದಲ ವ್ಯಾಪಕವಾಗಿ ಲಭ್ಯವಿರುವ ವೈಯಕ್ತಿಕಗೊಳಿಸಿದ ಕಲಿಕಾ ವ್ಯವಸ್ಥೆಯಾಗಿದೆ. ಇಲಿನಾಯ್ಸ್ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಡಾನ್ ಬಿಟ್ಜರ್ ರಚಿಸಿದ, PLATO 1,000 ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಮೇನ್‌ಫ್ರೇಮ್ ಕಂಪ್ಯೂಟರ್‌ಗೆ ಲಾಗ್ ಆಗಲು ಅವಕಾಶ ಮಾಡಿಕೊಟ್ಟಿತು.


    ಪ್ರತಿ ವಿದ್ಯಾರ್ಥಿಯು ತಮ್ಮ ಕೆಲಸದ ಬಗ್ಗೆ ಕಂಪ್ಯೂಟರ್‌ನಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸುವಾಗ ವಿದೇಶಿ ಭಾಷೆಗಳು, ಸಂಗೀತ, ಗಣಿತ ಮತ್ತು ಇತರ ಹಲವು ವಿಷಯಗಳಲ್ಲಿ ವಿಭಿನ್ನ ಆನ್‌ಲೈನ್ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಿತ್ತು. PLATO ವಿದ್ಯಾರ್ಥಿಗಳು ಕಡಿಮೆ ಸಮಯದಲ್ಲಿ ವ್ಯಕ್ತಿಗತ ತರಗತಿಗಳ ಸಾಧನೆಯ ಮಟ್ಟವನ್ನು ತಲುಪಲು ಅನುವು ಮಾಡಿಕೊಟ್ಟಿತು. ಮತ್ತು ಹೆಚ್ಚಿನ ವಿದ್ಯಾರ್ಥಿಗಳು ದೊಡ್ಡ ಉಪನ್ಯಾಸ ತರಗತಿಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಈ ವಿಧಾನದ ಬೋಧನೆಗೆ ಆದ್ಯತೆ ನೀಡಿದರು.


    ಆದರೆ ಈ ಸೇವೆ ದುಬಾರಿಯಾಗಿದ್ದರಿಂದ ಹೆಚ್ಚಿನ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ PLATO ನ ಯಶಸ್ಸು ಹಲವಾರು ಕಂಪನಿಗಳಿಗೆ ಸಾಫ್ಟ್‌ವೇರ್ ಅನ್ನು ರಚಿಸಲು ಅನುವು ಮಾಡಿಕೊಟ್ಟಿತು.


    • ಕಾರ್ನೆಗೀ ಮೆಲಾನ್ ವಿವಿಯ ಸಾಫ್ಟ್‌ವೇರ್


    ನಂತರ 1985 ರ ಹೊತ್ತಿಗೆ, ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದ ಸಂಶೋಧಕರು ಕೃತಕ ಬುದ್ಧಿಮತ್ತೆ ಮತ್ತು ಅರಿವಿನ ಮನೋವಿಜ್ಞಾನದಲ್ಲಿ ಪ್ರಗತಿಯನ್ನು ಬಳಸಿಕೊಂಡು ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಿದರು. ಅದಾಗ್ಲೇ ಈ ವೇಳೆ 10,000 ಕ್ಕೂ ಹೆಚ್ಚು ಶೈಕ್ಷಣಿಕ ಸಾಫ್ಟ್‌ವೇರ್ ಗಳು ಲಭ್ಯವಿದ್ದವು. ಆದರೆ ಅದರಲ್ಲಿ ಹೆಚ್ಚಿನವು ಕಡಿಮೆ ಗುಣಮಟ್ಟವನ್ನು ಹೊಂದಿದ್ದರಿಂದಕಾರ್ನೆಗೀ ಮೆಲನ್‌ನಲ್ಲಿ ಅಭಿವೃದ್ಧಿಪಡಿಸಲಾದ ಶೈಕ್ಷಣಿಕ ಸಾಫ್ಟ್‌ವೇರ್‌ ಹೆಚ್ಚು ಜನಪ್ರಿಯತೆ ಹೊಂದಿತು.


    ಈ ಸಾಫ್ಟ್‌ವೇರ್‌ ಹೆಚ್ಚು ಸುಧಾರಿತ ವಿನ್ಯಾಸಗಳು ಸಾಂಪ್ರದಾಯಿಕ ತರಗತಿಗಳಲ್ಲಿನ ವಿದ್ಯಾರ್ಥಿಗಳಿಗಿಂತ ಗಮನಾರ್ಹವಾಗಿ ಹೆಚ್ಚಿನದನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಟ್ಟಿತು.


    • ಶೈಕ್ಷಣಿಕ ಕಂಪ್ಯೂಟರ್‌ ಲೋಕದಲ್ಲಿ ಶುರವಾದ ಮತ್ತೊಂದು ಕ್ರಾಂತಿ


    ಹೀಗೆ ಕಂಪ್ಯೂಟರ್‌ ಬಳಕೆ ಶಾಲ-ಕಾಲೇಜುಗಳಲ್ಲಿ ಹೆಚ್ಚಾಗುತ್ತಾ ಹೋದರೂ ಇದು ಕೇವಲ ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ ಕೋರ್ಸ್‌ಗಳಿಗೆ ಮಾತ್ರ ಸೀಮಿತವಾಗಿತ್ತು ಹೊರತು ವಿದ್ಯಾರ್ಥಿಗಳು ಸಾಫ್ಟ್‌ವೇರ್ ಪ್ರೋಗ್ರಾಮ್‌ಗಳಿಗೆ ಪ್ರಶ್ನೆ ಕೇಳುವುದಕ್ಕಾಗಲಿ, ರಸಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕಾಗಲಿ ಪರೀಕ್ಷೆಗಳಿಗೆ ಉತ್ತರಗಳ ಬಗ್ಗೆ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಎಲ್ಲಾ ವಿಷಯಗಳಿಗೆ ಒತ್ತು ನೀಡಲು ಇಂಟರ್‌ನೆಟ್‌ ವಲಯ ನಿರ್ಧರಿಸಿತು. ನಂತರ ಈ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಂಡು ಇಂಟರ್‌ನೆಟ್‌ ಲೋಕದಾದ್ಯಂತ ಸಂಚಲನ ಆರಂಭವಾಯಿತು.


    ಕೆಲವೇ ವರ್ಷಗಳಲ್ಲಿ ಗಣಕೀಕೃತ ಬೋಧನೆ ಸೇವೆ, ಶಕ್ತಿಶಾಲಿ ಕಂಪ್ಯೂಟರ್‌ಗಳಿಗೆ ಕಡಿಮೆ ಬೆಲೆ, ತಂತ್ರಜ್ಞಾನ ಕಂಪನಿಗಳ ಹೂಡಿಕೆ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ವಿಶ್ವವಿದ್ಯಾನಿಲಯ ಸಂಶೋಧನೆಗೆ ಸರ್ಕಾರದಿಂದ ಹಣ ಈ ಮೂರು ಅಂಶಗಳು ನಾವು ಈಗ ಚಾಟ್‌ಬಾಟ್‌ಗಳು ಎಂದು ಕರೆಯುವ ಅಭಿವೃದ್ಧಿಗೆ ಪ್ರಮುಖವಾಗಿ ಕಾರಣವಾಯಿತು.


    2001 ರಲ್ಲಿ, ಮುಂದಿನ ಪೀಳಿಗೆಯ ಬುದ್ಧಿವಂತ ಬೋಧನಾ ವ್ಯವಸ್ಥೆಗಳು ಲಿಖಿತ ಇಂಗ್ಲಿಷ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಭಾಷಣೆಗಳನ್ನು ನಡೆಸಲು ಸಾಧ್ಯವಾಯಿತು. ಈ ವ್ಯವಸ್ಥೆಗಳು, ಆರಂಭಿಕ ಚಾಟ್‌ಬಾಟ್‌ಗಳು, ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದಗಳನ್ನು ಹೊಂದಲು ನೈಸರ್ಗಿಕ ಭಾಷಾ ಸಂಸ್ಕರಣೆಯಲ್ಲಿನ ಪ್ರಗತಿಯನ್ನು ಬಳಸಿದವು.




    ಮೊದಲ ಚಾಟ್‌ಬಾಟ್‌


    2007 ರ ಹೊತ್ತಿಗೆ, ಆರಂಭಿಕ AI ಚಾಟ್‌ಬಾಟ್‌ಗಳು ಪ್ರಶ್ನೆಗಳಿಗೆ ತಮ್ಮ ಉತ್ತರಗಳ ಮೂಲಕ ವಿದ್ಯಾರ್ಥಿಗಳನ್ನು ಮಾತನಾಡಿಸುವ ಮೂಲಕ ಬೋಧನೆಯನ್ನು ಒದಗಿಸಿದವು. ಸಂಶೋಧನೆಯು ಈ ಚಾಟ್‌ಬಾಟ್‌ಗಳು ಮಾನವ ಬೋಧಕರ ಪರಿಣಾಮಗಳಂತೆಯೇ ಕಲಿಕೆಯ ಫಲಿತಾಂಶಗಳನ್ನು ಬೆಂಬಲಿಸುತ್ತದೆ ಎಂದು ತೋರಿಸಿದೆ.. ಹಾಗಿದ್ದರೂ, ಚಾಟ್‌ಬಾಟ್ ತಂತ್ರಜ್ಞಾನವನ್ನು ಬಳಸಿಕೊಂಡು ಬೋಧನೆಯನ್ನು ಒದಗಿಸುವುದು ಪ್ರಾಥಮಿಕವಾಗಿ ಪ್ರಾಯೋಗಿಕವಾಗಿತ್ತು.


    ಸಾಂಕೇತಿಕ ಚಿತ್ರ


    2010 ರ ದಶಕದಲ್ಲಿ, ಸಾಮಾಜಿಕ ನೆಟ್‌ವರ್ಕ್‌ಗಳು ಮತ್ತು ಕೃತಕ ಬುದ್ಧಿಮತ್ತೆಯ ಪ್ರಗತಿಗಳು ಜನರು ತಂತ್ರಜ್ಞಾನದೊಂದಿಗೆ ಸಂವಹನ ನಡೆಸುವ ವಿಧಾನವನ್ನು ಬದಲಾಯಿಸಿದವು. ಚಾಟ್‌ಬಾಟ್‌ಗಳು ನಮ್ಮ ಜೀವನದ ಹಲವು ಭಾಗಗಳಲ್ಲಿ ಸಂಯೋಜಿಸಲ್ಪಟ್ಟವು. ಎಷ್ಟರ ಮಟ್ಟಿಗೆ ಎಂದರೆ ಜನರು ಈಗ ತಮ್ಮ ಫೋನ್‌ಗಳು, ಅವರ ಕಾರುಗಳು ಮತ್ತು ಅವರ ಗೃಹೋಪಯೋಗಿ ಉಪಕರಣಗಳೊಂದಿಗೆ ಮಾತನಾಡುವಂತಾಗಿದೆ ಎಂದರೂ ತಪ್ಪಿಲ್ಲ.


    ಅನೇಕ ಜನರು ಮನೆಯಲ್ಲಿ ವರ್ಚುವಲ್ ಸಹಾಯಕರನ್ನು ಹೊಂದಿದ್ದಾರೆ. ಅವರು ಅಲೆಕ್ಸಾ, ಸಿರಿ ಅಥವಾ ಗೂಗಲ್‌ಗೆ ನಿರ್ದೇಶನಗಳನ್ನು ಅಥವಾ ಸರಳ ಹೋಮ್‌ವರ್ಕ್ ಪ್ರಶ್ನೆಗಳಿಗೆ ಉತ್ತರಗಳನ್ನು ಕೇಳಬಹುದು. ಸ್ವತಃ ಚಾಟ್‌ಜಿಪಿಪಿಟಿಗೆ ಏಕೆ ನೀನು ಉತ್ತಮ ಬೋಧಕ ಎಂದು ಕೇಳಿದರೆ ಅದಕ್ಕೆ ಪ್ರತಿಕ್ರಿಯೆ ನೀಡಿದ ಈ ಹೊಸ ತಂತ್ರಜ್ಞಾನ, “ನಾನು ವಿದ್ಯಾರ್ಥಿಗೆ ಉತ್ತಮ ಬೋಧಕನಾಗಿದ್ದೇನೆ ಏಕೆಂದರೆ ನಾನು ವ್ಯಾಪಕ ಶ್ರೇಣಿಯ ಪ್ರಶ್ನೆಗಳು ಮತ್ತು ಪ್ರಾಂಪ್ಟ್‌ಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರತಿಕ್ರಿಯಿಸಲು ಸಮರ್ಥನಾಗಿದ್ದೇನೆ ಮತ್ತು ನಾನು ವ್ಯಾಪಕ ಶ್ರೇಣಿಯ ವಿಷಯಗಳಿಗೆ ವಿವರವಾದ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸಬಲ್ಲೆ.


    ಹೆಚ್ಚುವರಿಯಾಗಿ, ನಾನು ಈ ಮಾಹಿತಿಯನ್ನು ಸ್ಪಷ್ಟ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ತಿಳಿಸುತ್ತೇನೆ. ಈ ಕಾರಣಕ್ಕೆ ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ ಚಾಟ್‌ಜಿಪಿಟಿಗೆ ಪ್ರವೇಶಿಸಬಹುದು. ನಾನು ಯಂತ್ರ-ಕಲಿಕೆಯ ಮಾದರಿಯಾಗಿರುವುದರಿಂದ, ನಾನು ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಒದಗಿಸಬಲ್ಲೆ, ಇದು ಕಡಿಮೆ ಸಮಯದಲ್ಲಿ ಸಾಕಷ್ಟು ಹೊಸ ವಸ್ತುಗಳನ್ನು ಕಲಿಯಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಹಾಯಕವಾಗಬಹುದು" ಎಂದು ತಿಳಿಸಿದೆ.


    ಟೆಕ್‌ ವಲಯ ಚಾಟ್‌ಜಿಪಿಟಿಯನ್ನು ಉಚಿತ ಮತ್ತು ಪರಿಣಾಮಕಾರಿ ಭೋದಕ ಅಂತಾ ಕರೆದರೂ ಸಹ ಹಲವು ಕಾಲೇಜು, ಶಾಲಾ ಸಂಸ್ಥೆಗಳು ಇದು ವಿದ್ಯಾರ್ಥಿಗಳು ಕಷ್ಟಡದೇ ಅಸೈನ್‌ಮೆಂಟ್‌, ಹೋಮ್‌ವರ್ಕ್‌ ಮಾಡಲು ಸಹಾಯ ಮಾಡುವ ಮೂಲಕ ಅವರನ್ನು ದಾರಿ ತಪ್ಪಿಸುತ್ತಿದೆ ಎಂದು ವಾದಿಸಿ ಇದನ್ನು ಶಿಕ್ಷಣ ಸಂಸ್ಥೆಗಳಲ್ಲಿ ಬ್ಯಾನ್‌ ಕೂಡ ಮಾಡಲಾಗಿದೆ. ಇತ್ತೀಚೆಗೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿಯವರು ಚಾಟ್‌ಜಿಪಿಟಿಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ನಿಷೇಧ ಮಾಡುವುದು ಒಳ್ಳೆ ಆಲೋಚನೆಯಲ್ಲ. ದೇಶವು ಪ್ರತಿ ತಂತ್ರಜ್ಞಾನವನ್ನು ತುಂಬು ಹೃದಯದಿಂದ ಸ್ವಾಗತಿಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು.

    Published by:Prajwal B
    First published: