• Home
  • »
  • News
  • »
  • jobs
  • »
  • Vijayapura: ಶಾಲೆಗೆ ಕುಡಿದು ಬಂದ ಶಿಕ್ಷಕ, ವಿಜಯಪುರದಲ್ಲಿ ಶಾಕಿಂಗ್ ಘಟನೆ

Vijayapura: ಶಾಲೆಗೆ ಕುಡಿದು ಬಂದ ಶಿಕ್ಷಕ, ವಿಜಯಪುರದಲ್ಲಿ ಶಾಕಿಂಗ್ ಘಟನೆ

ಬಿ ಎಸ್ ರಾಠೋಡ

ಬಿ ಎಸ್ ರಾಠೋಡ

ಶಾಲೆಗೆ ಕುಡಿದ ಬಂದ ಶಿಕ್ಷಕನನ್ನು ತರಾಟೆ ತೆಗೆದುಕೊಂಡ ಎಸ್ ಡಿ ಎಂ ಸಿ. ಬಾಲಕಿಯರ ಪ್ರೌಢ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಾಗಿ ಈ ರೀತಿ ಮಾಡಿದ್ದು ಸರಿಯಲ್ಲಾ ಎಂದು ಎಸ್ ಡಿ ಎಂ ಸಿ ಅಧ್ಯಕ್ಷರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯಪುರ ತಾಲೂಕಿನ ಕನ್ನೂರಿನಲ್ಲಿ ಈ ಘನಟೆ ಜರುಗಿದೆ.

ಮುಂದೆ ಓದಿ ...
  • Share this:

ಶಿಕ್ಷಕರು (Tecaher) ಎಂದರೆ ವಿದ್ಯಾರ್ಥಿಗಳಿಗೆ (Students) ಮಾದರಿಯಾಗಿರಬೇಕು. ಇವರಂತೆ ನಾನೂ ಕೂಡ ಆಗ್ಬೇಕು ಅಂತ ಅನಿಸುವ ಹಾಗಿರಬೇಕು. ಶಿಕ್ಷಕರು (Teachers) ಯಾವಾಗಲೂ ವಿದ್ಯಾರ್ಥಿಗಳ ಜೀವನ ರೂಪಿಸುವ ಶಕ್ತಿಯಾಗಿರಬೇಕು. ಬದಲಾಗಿ ವಿದ್ಯಾರ್ಥಿಗಳ ಹಾದಿ ತಪ್ಪಿಸಿ ಅವರ ಭವಿಷ್ಯವನ್ನು (Future) ಹಾಳು ಮಾಡುವಂತಿರಬಾರದು. ಆದರೆ ಇಲ್ಲಿ ನಡೆದ ಒಂದು ಘಟನೆ (Insident) ನೋಡಿದರೆ ಇಂಥಾಶಿಕ್ಷಕರೂ ಇರ್ತಾರಾ ಅನಿಸಿಬಿಡುತ್ತದೆ. ವಿಜಯಪುರದಲ್ಲಿ ಶಿಕ್ಷಕ ಕುಡಿದು ತರಗತಿಗೆ ಬಂದಿರುವ ಘಟನೆ ಜರುಗಿದೆ ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ. 


ಶಿಕ್ಷಕರು ಕುಡಿಯಲೇ ಬಾರದು ಇನ್ನೊಬ್ಬರ ಜೀವನ ರೂಪಿಸುವ ಗುರುವಿನ ಸ್ಥಾನದಲ್ಲಿರುವುದರಿಂದ ಕೆಟ್ಟ ವರ್ತನೆ ಮಾಡುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಶಿಕ್ಷಕರು ಯಾವುದೇ ಕಾರಣಕ್ಕೂ ಶಾಲೆಯಲ್ಲಾಗಲಿ ಸಮಾಜದಲ್ಲಾಗಲಿ ನೆಗಟಿವ್​ ಜೀವನ ಶೈಲಿಯನ್ನು ತೋರಿಸಿಕೊಳ್ಳಬಾರದು. ಆದರೆ ಕುಡಿದುಕೊಂಡು ಸೀದಾ ತರಗತಿಗೇ ಬರುತ್ತಾರೆ ಅಂದರೆ ಏನರ್ಥ?


ಶಾಲೆಗೆ ಕುಡಿದ ಬಂದ ಶಿಕ್ಷಕನನ್ನು ತರಾಟೆ ತೆಗೆದುಕೊಂಡ ಎಸ್ ಡಿ ಎಂ ಸಿ
ಬಾಲಕಿಯರ ಪ್ರೌಢ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಾಗಿ ಈ ರೀತಿ ಮಾಡಿದ್ದು ಸರಿಯಲ್ಲಾ ಎಂದು ಎಸ್ ಡಿ ಎಂ ಸಿ ಅಧ್ಯಕ್ಷರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯಪುರ ತಾಲೂಕಿನ ಕನ್ನೂರಿನಲ್ಲಿ ಈ ಘನಟೆ ಜರುಗಿದೆ.


ಇದನ್ನೂ ಓದಿ: Raichur: ಶಾಲೆ ಬಿಟ್ಟು ನಿತ್ಯ ಬಾರ್ ಕದ ತಟ್ಟುತ್ತಿರುವ ಶಿಕ್ಷಕರು! ಇದೆಂಥಾ ವಿಪರ್ಯಾಸ 


ಶಾಲೆಯ ಹೆಡ್ ಮಾಸ್ಟರ್ ಬಿ ಎಸ್ ರಾಠೋಡ ಎಂಬಾತನೇ ಕುಡಿದು ಶಾಲೆಗೆ ಬಂದ ಶಿಕ್ಷಕರಾಗಿದ್ದು ಉಳಿದ ಶಿಕ್ಷಕರಿಗೂ ಇದರಿಂದ ಕಿರಿಕಿರಿ ಉಂಟಾಗಿದೆ. ಇವರು ಇದೇ ಮೊದಲಲ್ಲ ಹೇಳದೇ ಕೇಳದೆ ಗೈರು ಹಾಜರಾಗುವ ರೂಢಿ ಇಟ್ಟುಕೊಂಡಿದ್ದರು. ಶಾಲೆಗೆ ಬಂದರೂ ಸಹ ಕುಡಿದುಕೊಂಡೇ ಬರುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಲೆಯ ಹೆಡ್ ಮಾಸ್ಟರ್ ಬಿ ಎಸ್ ರಾಠೋಡ್​ ದೈಹಿಕ ಶಿಕ್ಷಕರಾಗಿದ್ದಾರೆ.ಇವರ ವರ್ತನೆ ಕುರಿತು ಕ್ರಮ ತೆಗೆದುಕೊಳ್ಳಲು ಆದೇಶ
ಹೌದು ದಿನನಿತ್ಯ ಇವರು ಇದೇ ರೀತಿ ಮಾಡಿದರೆ ತೊಂದರೆ ಉಂಟಾಗುತ್ತದೆ. ವಿದ್ಯಾರ್ಥಿನಿಯರಿಗೂ ಇದರಿಂದ ಕಿರಿಕಿರಿಯಾಗುತ್ತದೆ. ಆದ್ದರಿಂದ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳಲೇ ಬೇಕು ಎಂದು ಪಾಲಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರನ್ನು ಕೂರಿಸಿ ವಿಚಾರಣೆ ಮಾಡುವ ವೇಳೆಯೂ ಸಹ ಪಾನಮತ್ತರಾಗಿಯೇ ಇದ್ದಿರುವುದು ಕಂಡು ಬಂದಿದೆ. ಈ ಹಿಂದೇ ಇದೇ ರೀತಿ ಒಂದು ಘಟನೆ ರಾಯಚೂರಿನಲ್ಲೂ ಜರುಗಿತ್ತು.


ರಾಯಚೂರು ಜಿಲ್ಲೆಯ ಹಟ್ಟಿ ಪ್ರೌಢಶಾಲಾ ಶಿಕ್ಷಕರ ದುರ್ವರ್ತನೆ
ಮದ್ಯಾಹ್ನದ ತರಗತಿಗಳನ್ನ ಬಂಕ್ ಮಾಡಿ, ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಿದ ಶಿಕ್ಷಕರನ್ನು ವಿಚಾರಿಸಲು ಹೋದಾಗ ಶಿಕ್ಷಕರು ಶಾಲೆಯಲ್ಲಿ ಇರಲೇ ಇಲ್ಲ. ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಿ ನೇರವಾಗಿ ಟೀಚರ್ಸ್ ಬಾರ್ ಸೇರಿದ್ದರು. ಶಿಕ್ಷಕರ ಈ ರೀತಿಯ ವರ್ತನೆಯನ್ನು ಗಮನಿಸಿದ ಪಾಲಕರು ಶಿಕ್ಷಕರ ನಡತೆಗೆ ಬೇಸತ್ತು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಶಾಲೆಯ ತರಗತಿ ಕೊಠಡಿಗಳಲ್ಲೂ ಮೊಬೈಲ್ ನಲ್ಲಿ ಜಿಪಿಎಸ್ ಸಮೇತ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಶಾಲೆ ಬಿಟ್ಟು ನಿತ್ಯ ಬಾರ್​ಗೆ ತೆರಳಿ ಕುಡಿಯುತ್ತಿದ್ದರು ಎಂದು ತಿಳಿದು ಬಂದಿದೆ. 3.42 ನಿಮಿಷಕ್ಕೆ ಶಾಲೆ ಬಿಟ್ಟು ಬಾರ್ ಹೊಕ್ಕಾಗ ಪೋಷಕರು ತೆಗೆದ ಫೋಟೋದಲ್ಲಿ ಸಮಯ ಮೆನ್ಷನ್ ಆಗಿದೆ. ಶಿಕ್ಷಕರ ಈ ರೀತಿ ವರ್ತನೆಯಿಂದಾಗಿ ವಿದ್ಯಾರ್ಥಿಗಳ ಮನಸ್ಸು ಮತ್ತು ಶಿಕ್ಷಣದಲ್ಲಿ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ.

First published: