• ಹೋಂ
  • »
  • ನ್ಯೂಸ್
  • »
  • Jobs
  • »
  • Vijayanagara: ಮದ್ಯ ಕುಡಿದು ತರಗತಿಗೆ ಬಂದು ತೊಂದರೆ ಕೊಡುತ್ತಿದ್ದ ಹಳೆ ವಿದ್ಯಾರ್ಥಿ; ನನಗೂ ಪಾಠ ಮಾಡಿ ಅಂತಾನೆ ಈ ಕಿರಿಕ್ ಪಾರ್ಟಿ

Vijayanagara: ಮದ್ಯ ಕುಡಿದು ತರಗತಿಗೆ ಬಂದು ತೊಂದರೆ ಕೊಡುತ್ತಿದ್ದ ಹಳೆ ವಿದ್ಯಾರ್ಥಿ; ನನಗೂ ಪಾಠ ಮಾಡಿ ಅಂತಾನೆ ಈ ಕಿರಿಕ್ ಪಾರ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಟೂಡೆಂಟ್ಸ್ ಬಳಿ ಬಂದು, ಮದ್ಯ ಮಿಶ್ರೀತ ಜ್ಯೂಸ್ ಸೇವಿಸ್ತಾನೆ ಈ ಹಳೆ ವಿದ್ಯಾರ್ಥಿ ರಾಮು ಎಂಬ ಓಲ್ಡ್ ಸ್ಟೂಡೆಂಟ್ ಒಬ್ಬ ವಿಚಿತ್ರ ಕಿರಿಕ್ ಮಾಡುತ್ತಿದ್ದಾನೆ ಎಂದು ಶಾಲಾ ಶಿಕ್ಷಕರು ದೂರು ನೀಡುತ್ತಿದ್ದಾರೆ. ಪ್ರತಿ ನಿತ್ಯವೂ ಈತನದ್ದು ಒಂದೇ ಗೋಳು. ಶಾಲೆಗೆ ಬರುವುದು ಕುಡಿಯುವುದು. ಶಾಲೆಯ ಒಳಗೆ ತರಗತಿಗೇ ಒಂದು ಮಧ್ಯಪಾನ ಮಾಡ್ತಾನೆ ಎಂದು ಶಿಕ್ಷಕರೆಲ್ಲಾ ಬೇಸತ್ತು ಹೋಗಿದ್ದಾರೆ.

ಮುಂದೆ ಓದಿ ...
  • Share this:

ವಿಜಯನಗರ: ಎಷ್ಟೋ ವಿದ್ಯಾರ್ಥಿಗಳು (Students) ತಾವು ಈ ಹಿಂದೆ ಕಲಿತ ಶಾಲೆ, ಪಾಠ ಕಲಿಸಿದ ಶಿಕ್ಷಕರಿ ಎಂಬ ಗೌರವ ಇಟ್ಟುಕೊಂಡು ಆಗಾಗ ಶಾಲೆಗೆ ಆಗಮಿಸಿ ಶಾಲೆಗೆ ಕೊಡುಗೆ ನೀಡಿ. ಶಿಕ್ಷಕರಿಗೆ (Teacher) ನಮಸ್ಕರಿಸಿ ಹೋಗುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲಿ ಏನಾಗಿದೆ ಗೊತ್ತಾ? ಹಳೆ ವಿದ್ಯಾರ್ಥಿಯೊಬ್ಬ ಪದೇ ಪದೇ ಶಾಲೆಗೆ ಬಂದು ಶಿಕ್ಷಕರಿಗೆ ಕಾಟ ನೀಡುತ್ತಿರುವುದು ತಿಳಿದು ಬಂದಿದೆ. ಹಾಗಾದ್ರೆ ಈತ ಮಾಡಿದ್ದೇನು? ದಿನನಿತ್ಯವೂ ಇವನು ಶಾಲೆಗೆ ಬರಲು ಏನು ಕಾರಣ (Reason) ಎಂಬೆಲ್ಲಾ ಪ್ರಶ್ನೆಗೆ (Question) ಉತ್ತರ ಇಲ್ಲಿದೆ ನೋಡಿ. 


ಸ್ಟೂಡೆಂಟ್ಸ್ ಬಳಿ ಬಂದು, ಮದ್ಯ ಮಿಶ್ರೀತ ಜ್ಯೂಸ್ ಸೇವಿಸ್ತಾನೆ ಈ ಹಳೆ ವಿದ್ಯಾರ್ಥಿ
ರಾಮು ಎಂಬ ಓಲ್ಡ್ ಸ್ಟೂಡೆಂಟ್ ಒಬ್ಬ ವಿಚಿತ್ರ ಕಿರಿಕ್ ಮಾಡುತ್ತಿದ್ದಾನೆ ಎಂದು ಶಾಲಾ ಶಿಕ್ಷಕರು ದೂರು ನೀಡುತ್ತಿದ್ದಾರೆ. ಪ್ರತಿ ನಿತ್ಯವೂ ಈತನದ್ದು ಒಂದೇ ಗೋಳು. ಶಾಲೆಗೆ ಬರುವುದು ಕುಡಿಯುವುದು. ಶಾಲೆಯ ಒಳಗೆ ತರಗತಿಗೇ ಒಂದು ಮಧ್ಯಪಾನ ಮಾಡ್ತಾನೆ ಎಂದು ಶಿಕ್ಷಕರೆಲ್ಲಾ ಬೇಸತ್ತು ಹೋಗಿದ್ದಾರೆ.


ರಾಮು


ಹಾಗಾದ್ರೆ ಈತ ಮಾಡ್ತಾ ಇರುವ ಕಿರಿಕ್​ ಕೆಲಸಕ್ಕೆ ಬ್ರೇಕ್​ ಹಾಕೋದು ಹೇಗೆ  ಎಂಬ ಚಿಂತೆಯಲ್ಲಿದ್ದ ಶಿಕ್ಷಕರು ಈ ಹಿಂದೆ ಪೊಲೀಸರಿಗೂ ದೂರು ನೀಡಿದ್ದರು ಆದರೂ ಸಹ ಏನೂ ಪ್ರಯೋಜನವಾಗಿರಲಿಲ್ಲ. ಹೊಸಪೇಟೆಯ ಊರಮ್ಮ ಬಯಲು ಪ್ರದೇಶದಲ್ಲಿರೋ ಶ್ರೀಮತಿ ಕಟ್ಟಾ ಕೃಷ್ಣವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಈತ ಹೀಗೆ ಅನುಚಿತ ವರ್ತನೆ ಮಾಡ್ತಿದ್ದಾನೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Education News: ಏಪ್ರಿಲ್​ 1ಕ್ಕಿಂತ ಮೊದಲು ಪಾಠ ಆರಂಭಿಸಬಾರದು; CBSC ಸೂಚನೆ


ಗಾಂಜಾ ಹೊಡಿತಾನೆ, ನನಗೂ ಪಾಠ ಮಾಡಿ ಅಂತಾನೆ ಈ ಕಿರಿಕ್ ಪಾರ್ಟಿ
ತರಗತಿಗೆ ಬರುವಾಗ ಗಾಂಜಾ ಸೇದಿ ನನಗೂ ನೀವು ಪಾಠ ಮಾಡ್ಲೇ ಬೇಕು ನಾನು ಇಲ್ಲೇ ಕೂತಿರ್ತಿನಿ ಅಂತ ಶಿಕ್ಷಕರಿಗೆ ಪಾಠ ಮಾಡುವಾಗ ತೊಂದರೆ ಕೊಡ್ತಾನೆ. ಗಾಂಜಾ, ಸೇವನೆ ಮಾಡ್ತಾನೆ ಈ ರಾಮು ಅಂತ ಶಿಕ್ಷಕರು ಬೇಸತ್ತು ಹೋಗಿದ್ದಾರೆ. ಇವನನ್ನು ತರಗತಿಯಿಂದ ಹೊರಗೆಳೆದು ಹಾಕಲು ಹರ ಸಾಹಸ ಪಡ್ತಾರೆ.




ಕ್ಲಾಸ್ ಒಳಗಡೆ ಬಂದು, ಜ್ಯೂಸ್ ಒಳಗೆ ಮದ್ಯ ಹಾಕಿಕೊಂಡು ಕುಡಿದು ನಾನು ಜ್ಯೂಸ್ ಕುಡಿತಿನಿ ಅಂತ ಹೇಳ್ತಾನೆ.  ಹೊಸಪೇಟೆಯ ಊರಮ್ಮ ಬಯಲು ಪ್ರದೇಶದಲ್ಲಿರೋ ಶ್ರೀಮತಿ ಕಟ್ಟಾ ಕೃಷ್ಣವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು ಈತನ ವರ್ತನೆಗೆ ಫುಲ್​ ಸ್ಟಾಫ್​ ನೀಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದಾರೆ.


ತರಗತಿಯಲ್ಲಿ ಕೂತ ರಾಮು


ಹೊಸಪೇಟೆಯ ಈ ಶಾಲೆಗೆ ಇಲ್ಲಾ ಸೆಕ್ಯೂರಿಟಿ


ವಿದ್ಯಾರ್ಥಿಗಳು ಈತನ ವರ್ತನೆಯಿಂದ ರೋಸಿ ಹೋಗಿದ್ದಾರೆ. 1 ರಿಂದ 10 ತರಗತಿಯವರೆಗೆ 300 ಮಕ್ಕಳಿರೋ ಶಾಲೆಯಲ್ಲಿ ನಿತ್ಯವೂ ಕಿರಿಕ್ ಮಾಡ್ತಾರೆ. ಸೆಕ್ಯುರಿಟಿ ಇಲ್ಲದಿರುವುದೂ ಇದಕ್ಕೆ ಒಂದು ಕಾರಣವಾಗಿದೆ ಅಂತಲೇ ಹೇಳ್ಬಹುದು. ಯಾರೂ ಇಲ್ಲದಾಗ ಶಾಲಾ ಆವರಣದಲ್ಲಿ ಕುಡಿಯೋದು ನ್ಯೂಸನ್ಸ್ ಮಾಡ್ತಾನೆ ಆದ್ರೆ ಶಾಲೆ ಇದ್ದಾಗಲೇ, ಶಾಲೆಗೆ ನುಗ್ಗಿ ಕ್ಲಾಸ್ ರೂಂಗೆ ನುಗ್ಗಿ ಪಾಠ ಮಾಡೋ ಮೇಷ್ಟ್ರುಗಳಿಗೆ ಆವಾಜ್ ಹಾಕ್ತಾನೆ. ವಿದ್ಯಾರ್ಥಿಗಳು ಪಾಠ ಕೇಳೋ ಹೊತ್ತಲ್ಲೇ ಡೆಸ್ಕ್ ನಲ್ಲಿ ಕೂತಿರ್ತಾನೆ. ಪೊಲೀಸ್ ಠಾಣೆಗೆ ದೂರು ಕೊಟ್ರು ಪ್ರಯೋಜನವಿಲ್ಲಾ ಅಂತಾರೆ ಶಾಲೆ ಸಿಬ್ಬಂದಿ.

First published: