ವೇದ ಗಣಿತವು ಭಾರತೀಯ ಗಣಿತಜ್ಞರಾದ ಜಗದ್ಗುರು ಶ್ರೀ ಭಾರತೀ ಕೃಷ್ಣ ತೀರ್ಥಜಿ ಅವರು ಕಂಡುಹಿಡಿದ ಗಣಿತ ಇದು. ಅವರು ಗಣಿತ (Mathematics) ಕ್ಷೇತ್ರದಲ್ಲಿ ತಾವು ಮಾಡಿದ ಸಂಶೋಧನೆಗಳನ್ನು ವೇದ ಗಣಿತ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಮಾನಸಿಕ ಗಣಿತ ಎಂದೂ ಸಹ ಕರೆಯಲಾಗುತ್ತದೆ. ವೇದ ಗಣಿತ (Vedic Mathematics) ಅಭ್ಯಾಸ ಮಾಡುವುದರಿಂದ ಮೆದುಳಿನ ಸಾಮರ್ಥ್ಯ (Mind Power) ಹೆಚ್ಚುತ್ತದೆ. ಲೆಕ್ಕಾಚಾರಗಳ ವೇಗವು ಐದು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ನೀವೂ ಸಹ ಗಣಿತದಲ್ಲಿ ಆಸಕ್ತಿ ಹೊಂದಿದವರಾಗಿದ್ದರೆ. ಈ ಕುರಿತು ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.ವೇದ ಗಣಿತದ ಅರ್ಥ ಏನೆಂದು ನೀವು ತಿಳಿಯಲು ಇಷ್ಟಪಡುವುದಾದರೆ ಇಲ್ಲಿ ಕೆಲವು ವಿಷಯಗಳನ್ನು ನೀಡಲಾಗಿದೆ ಇದನ್ನು ಗಮನಿಸಿ.
ವೇಗವಾಗಿ ಗಣಿತ ಮಾಡಬೇಕು ಎಂದಾದರೆ ನೀವು ವೇದ ಗಣಿತದ ಸೂತ್ರಗಳನ್ನು ನೆನಪಿಲ್ಲಿಟ್ಟುಕೊಳ್ಳಲಾಗಿದೆ. ಇದರಲ್ಲಿ ಮುಖ್ಯವಾಗಿ 16 ಸೂತ್ರಗಳನ್ನು ನೀಡಲಾಗುತ್ತದೆ. ಈ ಸೂತ್ರಗಳಿಗನುಸಾರವಾಗಿ ನೀವು ಗಣಿತವನ್ನು ಮಾಡಬಹುದು. ಇದಕ್ಕೆ ಮತ್ತೆ 13 ಉಪಸೂತ್ರಗಳಿರುತ್ತವೆ. ಅಂಕಗಣಿತ, ಬೀಜಗಣಿತ, ಜ್ಯಾಮಿತಿ, ಕಲನಶಾಸ್ತ್ರ, ಶಂಕುಗಳು ಹಾಗೂ ಇನ್ನಿತರ ಹೆಸರಿನಿಂದ ಗುರುತಿಸಲಾಗುತ್ತದೆ. ವೇದ ಗಣಿತದ ಎಲ್ಲಾ ಸೂತ್ರಗಳು ಮತ್ತು ಉಪ ಸೂತ್ರಗಳನ್ನು ಹೊಂದಿರುತ್ತದೆ.
ಇದನ್ನೂ ಓದಿ: School Holiday: ಮುಂದುವರಿದ ಚಳಿಗಾಲದ ರಜೆ, ಇನ್ನೆಷ್ಟು ದಿನ ಇರಲಿದೆ ನೋಡಿ
ನೀವು ನಿಖರವಾದ ಉತ್ತರವನ್ನೂ ಸಹ ಇದರಲ್ಲಿ ಪಡೆಯಲು ಸಾಧ್ಯವಾಗುತ್ತದೆ. ವೇದ ಗಣಿತದಿಂದ ಹಲವಾರು ಪ್ರಯೋಜನಗಳೂ ಸಹ ಇದೆ. ಆ ಕುರಿತು ಮಾಹಿತಿ ಇಲ್ಲಿದೆ ನೋಡಿ. ವೇದ ಗಣಿತದ ಮಹತ್ವವನ್ನು ವಿವಿಧ ರೀತಿಯಲ್ಲಿ ವಿವರಿಸಬಹುದು. ಸಂಖ್ಯಾತ್ಮಕ ಸಮಸ್ಯೆಗಳ ಸರಳೀಕರಣದಲ್ಲಿ ಇದು ಪ್ರಯೋಜನ ನೀಡುತ್ತದೆ. ವೇದ ಗಣಿತದ ಅನ್ವಯವು ಆಧುನಿಕ ಲೆಕ್ಕಾಚಾರದ ವಿಧಾನಗಳಿಗಿಂತ ಹಲವು ಪಟ್ಟು ವೇಗವಾಗಿರುತ್ತದೆ. ವೇದ ಗಣಿತವನ್ನು ಕಲಿಯುವುದರಿಂದ ಸಮಯವನ್ನು ಉಳಿಸಬಹುದು.
ಕೆಲವು ಪ್ರಯೋಜನಗಳ ಪಟ್ಟಿ ಇಲ್ಲಿದೆ
1. ವೇದ ಗಣಿತ ಕಲಿಯುವುದರಿಂದ ಸುಲಭವಾಗಿ ಮತ್ತು ವೇಗವಾಗಿ ಸಮಸ್ಯೆ ಪರಿಹರಿಸಬಹುದು.
2. ಕಡಿಮೆ ಸಮಯದಲ್ಲಿ ಸಮಸ್ಯೆ ಬಗೆಹರಿಸಬಹುದು.
3. ಸೂತ್ರ-ಆಧಾರಿತ ವಿಧಾನಗಳಿಂದ ಪಡೆದ ಫಲಿತಾಂಶಗಳನ್ನು ವೇದ ಗಣಿತದ ಸರಳ ತಂತ್ರಗಳನ್ನು ಬಳಸಿ ಬೇಗ ಪರಿಹರಿಸಬಹುದು.
4. ಈ ಸೂತ್ರಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಪ್ಪುಗಳನ್ನು ಮಾಡುವ ಸಾಧ್ಯತೆ ಕಡಿಮೆ
5. ಸೂತ್ರಗಳ ಬಳಕೆಯು ವಿದ್ಯಾರ್ಥಿಗಳಿಗೆ ಗಣಿತದ ವಿಷಯದಲ್ಲಿ ಅವರ ಜ್ಞಾನ ಮತ್ತು ಆಸಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
6. ಮಾನಸಿಕ ಲೆಕ್ಕಾಚಾರಗಳನ್ನು ಬಳಸಿಕೊಂಡು ಕಠಿಣ ಸಮಸ್ಯೆಗಳನ್ನು ಪರಿಹರಿಸಲು ವೇದ ಗಣಿತ ಸಹಾಯ ಮಾಡುತ್ತದೆ.
7. ಯಾವುದೇ ಉಪಕರಣ ಅಥವಾ ಸಾಧನಗಳನ್ನು ಬಳಸದೆ ನೀವು ಲೆಕ್ಕ ಮಾಡಬಹುದು.
ವೇದ ಗಣಿತದ ಕೆಲವು ಸೂತ್ರಗಳನ್ನು ಇಲ್ಲಿ ನೀಡಲಾಗಿದೆ.
ನಂಬರ್ | ಸೂತ್ರಗಳು | ಉಪ ಸೂತ್ರಗಳು |
1 | ಏಕಾಧಿಕೇನ್ ಪೂರ್ವೇನ | ಅನುರೂಪೇಣ |
2 | ನಿಖಿಲಂ ನವತಾಚರಮಂ ದಸತಃ | ಸಿಸ್ಯತೇ ಶೇಷಜ್ಞಃ |
3 | ಊರ್ಧ್ವ-ತಿರ್ಯಗ್ಭ್ಯಾಂ | ಆದ್ಯಮದ್ಯೇನನ್ತ್ಯ-ಮನ್ತ್ಯೇನ |
4 | ಪರಾವರ್ತ್ಯ ಯೋಜಯೇತ್ | ಕೇವಲೈಃ ಸಪ್ತಕಂ ಗುಣ್ಯಾತ್ |
5 | ಸುನ್ಯಮಾ ಸಮ್ಯಸಮುಚ್ಚಯೇ | ವೆಸ್ತಾನಂ |
6 | (ಅನುರೂಪೇ) ಸುನ್ಯಮನ್ಯತ್ | ಯಾವದೂನಂ ತಾವದೂನಂ |
7 | ಸಂಕಲನ-ವ್ಯವಕಲಮ್ನಾಭ್ಯಾಂ | ಯಾವದೂನಾಂ ತಾವದುನಿಕೃತ್ಯ ವರ್ಗಾಂಚ ಯೋಜಯೇತ್ |
8 | ಪುರಾಣಪುರಣಾಭ್ಯಾಮ್ | ಅಂತ್ಯಯೋರದಸ್ಕಯೇಪಿ |
9 | ಚಲನ-ಕಲನಾಭ್ಯಾಂ | ಅಂತ್ಯಯೋರೇವ |
10 | ಯಾವದೂನಂ | ಸಮುಚ್ಚಯಗುಣಿತಃ |
11 | ವ್ಯಸ್ತಿಸಮಸ್ತಿಃ | ಲೋಪನಸ್ಥಾಪನಾಭ್ಯಾಮ್ |
12 | ಸೇಸನ್ಯಂಕೇನ ಕಾರಮೇನ | ವಿಲೋಕನಮ್ |
13 | ಸೋಪಾನ್ತ್ಯದ್ವಯಮನ್ತ್ಯಮ್ | ಗುಣಿತಸಮುಚ್ಚಯಃ ಸಮುಚ್ಚಯಗುಣಿತಃ |
14 | ಏಕಾನ್ಯುನೇನ ಪೂರ್ವೇಣ | |
15 | ಗುಣಿತಸಮುಚ್ಚಾಯಃ | |
16 | ಗುಣಕಾಸಮುಚ್ಚಾಯಃ |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ