ಇಂದು ಹೊಸ ಶಿಕ್ಷನ ನೀತಿ ಹಾಗೂ ನೈತಿಕ ಶಿಕ್ಷಣದ ಕುರಿತು ಸಭೆ ನಡೆಯಿತಿ ಇಂದಿನ ಸಭೆಯಲ್ಲಿ ಸ್ವಾಮೀಜಿಗಳು, ಶಿಕ್ಷಣ ತಜ್ಞರು, ಶಿಕ್ಷಣ (Education) ಸಂಸ್ಥೆ ಮುಖ್ಯಸ್ಥರು ಭಾಗಿಯಾಗಿದ್ದರು. ಬೇರೆ ಬೇರೆ ಕ್ಷೇತ್ರದ ಒಟ್ಟು 72 ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದಿಚುಂಚನಗಿರಿ ಮಠ, ಸಿರಿಗೆರೆ ಮಠ, ಬೋವಿ ಮಠ, ಕನಕಪೀಠ, ಮಾದಿಗಚೆನ್ನಯ್ಯ ಸ್ವಾಮೀಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆನ್ಲೈನ್ನಲ್ಲಿ (Online) ಕೂಡ ಕೆಲವರು ಭಾಗಿಯಾಗಿದ್ದರು. ಚರ್ಚ್, ಮಸೀದಿ ಮುಖಂಡರನ್ನೂ (Leaders) ಸಹ ಭಾಗಿ ಮಾಡಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಮಕ್ಕಳಿಗೆ ಮೌಲ್ಯ ಗಳ ಅಗತ್ಯತೆ ತುಂಬಾ ಇದೆ.ಇದು ಧರ್ಮ ಸಭೆ ಅಲ್ಲ ಎಂದು ಬಿ.ಸಿ ನಾಗೇಶ್ (B.C Nagesh) ತಿಳಿಸಿದ್ದಾರೆ.
ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಮೌಲ್ಯಗಳನ್ನು ಧರ್ಮದ ಜೊತೆ ಸೇರಿಸಬೇಡಿ. ಮೌಲ್ಯಗಳೇ ಬೇರೆ ಧರ್ಮವೇ ಬೇರೆ. ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯ ಯಾವ ರೀತಿ ತರಬೇಕು ಎಂಬುದು ಸಭೆಯ ವಿಚಾರ ಎಂದು ಹೇಳಿದ್ದಾರೆ. ಕೇವಲ ಸ್ವಾಮೀಜಿಗಳು, ಮಠಾಧೀಶರನ್ನು ಮಾತ್ರ ಸಭೆಗೆ ಕರೆದಿಲ್ಲ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳನ್ನೂ ಸಭೆಗೆ ಕರೆದಿದ್ದೇವೆ ಎಂದು ತಿಳಿಸಿದ್ದಾರೆ.
ನೈತಿಕ ಶಿಕ್ಷಣ ವಿಚಾರವಾಗಿ ನಡೆಯುತ್ತಿರುವ ಸಭೆಯಲ್ಲಿ ಸುಮಾರು 72 ಪ್ರಮುಖರು ಭಾಗಿಯಾಗಿದ್ದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಸಭೆ ನಡೆಯಿತು. ಮಕ್ಕಳಿಗೆ ಯಾಔ ರೀತಿಯ ಶಿಕ್ಷಣದ ಅವಶ್ಯಕತೆ ಇದೆ ಎಂಬ ಕುರಿತು ಚರ್ಚೆ ಜರುಗಿತು. ಹಲವಾರು ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Surendran Pattel: ಅಂದು ಬೀಡಿ ಕಟ್ಟುತ್ತಿದ್ದವ ಇಂದು ನ್ಯಾಯಾಧೀಶ! ಕೇರಳದ ಯುವಕನ ಬದುಕು ಬದಲಿಸಿದ ಅಮೇರಿಕಾ
ನಿರ್ಮಲಾನಂದ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಪೀಟರ್ ಮಚಾಡೋ, ಫಾದರ್ ಫ್ರಾನ್ಸಿಸ್, ಫಾದರ್ ಫ್ರಾನ್ಸಿಸ್ ಭಾಷ್ಯಂ,ಮೊಹಮದ್ ಸನಾವುಲ್ಲಾ, ಅಬ್ದುಸ್ ಸುಭಾನ್ ಶಿಕ್ಷಣ ತಜ್ಞರಾದ ಪ್ರೊ. ಕಸ್ತೂರಿ ರಂಗನ್, ಎಂ.ಕೆ ಶ್ರೀಧರ್, ಎಂ.ಆರ್ ದೊರೆಸ್ವಾಮಿ, ಗುರುರಾಜ ಕರ್ಜಗಿ, ಶಾಸಕ ಎ.ಟಿ ರಾಮಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಔದ್ಯೋಗಿಕ, ಆಧ್ಯಾತ್ಮಿಕ, ವ್ಯಾವಹಾರಿಕ ಮೂರು ಶಿಕ್ಷಣ ನೀಡಬೇಕು. ಇಂದಿನ ಶಿಕ್ಷಣದಲ್ಲಿ ಔದ್ಯೋಗಿಕ ಹಾಗೂ ವ್ಯಾವಹಾರಿಕ ಶಿಕ್ಷಣ ಸಿಗುತ್ತಿದೆ ಆದ್ರೆ ಆಧ್ಯಾತ್ಮಿಕ ಶಿಕ್ಷಣ ಸಿಗುತ್ತಿಲ್ಲ. ನೈತಿಕ ಶಿಕ್ಷಣ ನೀಡುವವರಿಗೆ ಮೊದಲು ಶಿಕ್ಷಣ ನೀಡಬೇಕು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಈ ಹಿಂದೆ ಪಂಚತಂತ್ರ ಕಥೆಗಳ ಮೂಲಕ ನೀತಿಗಳನ್ನು ತಿಳಿಹೇಳ್ತಿದ್ರು
ಗುರುಗಳ ಜೊತೆ, ತಂದೆ ತಾಯಿಗಳ ಜೊತೆ ಹೇಗೆ ವ್ಯವಹಾರ ಮಾಡಬೇಕು ಎಂಬುದನ್ನು ಕಲಿಸಬೇಕು ಅದನ್ನ ನಾಟಕಗಳ ಮೂಲಕ ಕಲಿಸಬಹುದು. ಪುಟ್ಟ ಪುಟ್ಟ ನಾಟಕಗಳಲ್ಲಿ ಮಕ್ಕಳು ಪಾತ್ರಧಾರಿಗಳಾಗಿ ಆ ಮೂಲಕ ನೀತಿ ತಿಳಿಹೇಳಬಹುದು. ತಾವೇ ಪಾತ್ರಧಾರಿಗಳಾದಾಗ ಅವರೇ ಅದರಲ್ಲಿ ಹೊಕ್ಕುತ್ತಾರೆ. ಸತ್ಯ, ದಯೆ, ಪರೋಪಕಾರದ ಲಾಭ ಏನು ಇದಿಲ್ಲವಾದ್ರೆ ಆಗುವ ನಷ್ಟವೇನು ಎಂಬುದನ್ನು ಪರಿಚಯಿಸಬೇಕು. ಮಕ್ಕಳನ್ನು ತಿದ್ದುವುದರ ಜವಾಬ್ದಾರಿ ಶಿಕ್ಷಕರದ್ದು ಎಂದು ಪೇಜಾವರ ಶ್ರೀಗಳು ಹೇಳಿದರು.
ಅಬ್ದುಲ್ ರಹಿಮ್ ಅವರ ಹೇಳಿಕೆ
ಎಲ್ಲ ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ಬೇಕಿದೆ. ನಮ್ಮ ದೇಶ ವಿವಿಧ ಸಂಸ್ಕೃತಿಗಳ ನಾಡು. ಯೂನಿವರ್ಸಲ್ ಚಿಂತನೆಗಳನ್ನ ನಾವು ತರಬೇಕು. ಮೌಲ್ಯ ಶಿಕ್ಷಣ ಪ್ರಯೋಗಿಕವಾಗಬೇಕು. ಪ್ರಯೋಗಿಕವಾಗಿ ಶಿಕ್ಷಣ ನೀಡುವುದು ಉತ್ತಮ. ಮೌಲ್ಯ ಶಿಕ್ಷಣ ಮನೆಯಿಂದ ಶುರುವಾಗಬೇಕು ಎಂದು ಹೇಳುತ್ತಾ ಅಬ್ದುಲ್ ರಹಿಮ್ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ