• ಹೋಂ
 • »
 • ನ್ಯೂಸ್
 • »
 • Jobs
 • »
 • Scholarship: ಅಮೆರಿಕದಲ್ಲಿ ಓದುವ ನಿಮ್ಮ ಕನಸು ನನಸಾಗಲಿದೆ: 25 ಸಾವಿರ ಡಾಲರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Scholarship: ಅಮೆರಿಕದಲ್ಲಿ ಓದುವ ನಿಮ್ಮ ಕನಸು ನನಸಾಗಲಿದೆ: 25 ಸಾವಿರ ಡಾಲರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅಮೆರಿಕದ ಅಗಸ್ಟನಾ ವಿಶ್ವವಿದ್ಯಾಲಯವು 2023 ರ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ಯುಜಿ ಕೋರ್ಸ್ ಗಳಿಗೆ ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ 25,000 ಡಾಲರ್ ವಿದ್ಯಾರ್ಥಿವೇತನವನ್ನು ನೀಡುವುದಾಗಿ ಘೋಷಿಸಿದ್ದು, ಅದಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.

 • Trending Desk
 • 5-MIN READ
 • Last Updated :
 • Bangalore [Bangalore], India
 • Share this:

  ಅನೇಕ ದೇಶಗಳಿಂದ ಪ್ರತಿವರ್ಷ ಅಮೆರಿಕದಲ್ಲಿರುವ (USA) ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣವನ್ನು ( Higher Education) ಪಡೆಯಲು ಸಾವಿರಾರು ವಿದ್ಯಾರ್ಥಿಗಳು (Students) ಹೋಗುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಭಾರತದಿಂದಲೂ ಸಹ ಅನೇಕ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ಎಂಜಿನಿಯರಿಂಗ್ ಕೋರ್ಸ್ ನಲ್ಲಿ ಪದವಿ ಪಡೆದ ನಂತರ ಅನೇಕ ರೀತಿಯ ಪ್ರವೇಶ ಪರೀಕ್ಷೆಗಳನ್ನು ಬರೆದು ಒಳ್ಳೆಯ ಅಂಕಗಳನ್ನು ಗಳಿಸಿ ಎಂ ಎಸ್ ಮಾಡಲು ವಿದೇಶಕ್ಕೆ ಹೋಗುವವರನ್ನು ನಾವು ನೋಡಿರುತ್ತೇವೆ.


  ಕೆಲವರು ಒಳ್ಳೆಯ ಅಂಕಗಳನ್ನು ಪಡೆದು, ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನಗಳನ್ನು ಪಡೆದುಕೊಂಡು ಒದಲು ಹೋದರೆ, ಇನ್ನೂ ಕೆಲವರು ಪ್ರವೇಶ ಪರೀಕ್ಷೆಯಲ್ಲಿ ಅಷ್ಟೊಂದು ಒಳ್ಳೆಯ ಅಂಕಗಳು ಬಾರದೇ ಇರುವುದರಿಂದ ಪೂರ್ತಿ ಹಣ ಕೊಟ್ಟು ಪೇಮೆಂಟ್ ಸೀಟ್ ಗಳನ್ನು ಪಡೆಯುವುದನ್ನು ಸಹ ನಾವು ನೋಡಿರುತ್ತೇವೆ. ಇದಕ್ಕಾಗಿ ಅವರು ಬ್ಯಾಂಕ್ ಗಳಿಂದ ಸಾಲವನ್ನು ಸಹ ಪಡೆಯುತ್ತಾರೆ.


  ಯುಜಿ ಕೋರ್ಸ್ ಗೆ ವಿದ್ಯಾರ್ಥಿವೇತನವನ್ನು ಘೋಷಿಸಿದೆ ಈ ವಿಶ್ವವಿದ್ಯಾಲಯ


  ಹೀಗೆ ಒಂದು ಅಮೆರಿಕದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಯುಜಿ ಕೋರ್ಸ್ ಗಳನ್ನು ಮಾಡಲು ವಿದ್ಯಾರ್ಥಿವೇತನವನ್ನು ನೀಡುವುದಾಗಿ ಘೋಷಿಸಲಾಗಿದೆ ನೋಡಿ. ಅಮೆರಿಕದ ಅಗಸ್ಟನಾ ವಿಶ್ವವಿದ್ಯಾಲಯವು 2023 ರ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ಯುಜಿ ಕೋರ್ಸ್ ಗಳಿಗೆ ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ 25,000 ಡಾಲರ್ ವಿದ್ಯಾರ್ಥಿವೇತನವನ್ನು ನೀಡುವುದಾಗಿ ಘೋಷಿಸಿದ್ದು, ಅದಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.


  scholarships available in february
  ಪ್ರಾತಿನಿಧಿಕ ಚಿತ್ರ


  ಈ ವಿದ್ಯಾರ್ಥಿವೇತನಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಯಸುವ ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿವೆ. ಆಸಕ್ತ ವಿದ್ಯಾರ್ಥಿಗಳು augie.edu ಅಧಿಕೃತ ವೆಬ್ಸೈಟ್ ನಲ್ಲಿ ಇದರ ಬಗ್ಗೆ ಮಾಹಿತಿಯನ್ನು ಪರಿಶೀಲಿಸಬಹುದು ಮತ್ತು ಇದಕ್ಕೆ ಅರ್ಜಿ ಸಹ ಸಲ್ಲಿಸಬಹುದು.


  ಈ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಯಲ್ಲಿ ಇರಬೇಕಾದ ಅರ್ಹತೆಗಳೇನು?


  ಭಾರತೀಯ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಬಿಸಿನೆಸ್, ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ಗಣಿತ, ಅಕೌಂಟಿಂಗ್ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ನಾಲ್ಕು ವರ್ಷಗಳ ಶಿಕ್ಷಣದಲ್ಲಿ 25,000 ಡಾಲರ್ ಪದವಿಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.


  ಇದನ್ನೂ ಓದಿ: Internship: ಇತರ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಇಂಟರ್ನ್​​ಶಿಪ್​ ಅವಕಾಶ ನೀಡಲಿದೆಯಂತೆ ಐಐಟಿ ಹೈದರಾಬಾದ್!


  ಕನಿಷ್ಠ 20,000 ಡಾಲರ್ ವಿದ್ಯಾರ್ಥಿವೇತನಕ್ಕೆ ಅರ್ಹರಾಗಲು, ಅರ್ಜಿದಾರರು ಎಸ್ಎಟಿ (ಸ್ಯಾಟ್) ಸ್ಕೋರ್ 1100 ಅಥವಾ ಐಇಎಲ್‌ಟಿಎಸ್ ಸ್ಕೋರ್ 6.5 ಅಥವಾ ತತ್ಸಮಾನ, 3.0 ಜಿಪಿಎ ಹೊಂದಿರಬೇಕು ಮತ್ತು ಪ್ರಬಂಧವನ್ನು ಸಹ ಸಲ್ಲಿಸಬೇಕು ಎಂದು ಸಂಸ್ಥೆ ಹೇಳುತ್ತದೆ.


  Rv university scholarship details
  ಅಪ್ಲೈ ಮಾಡಿ


  ಐಇಎಲ್‌ಟಿಎಸ್ ಸ್ಕೋರ್ 7.0 ಮತ್ತು 10 ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ 75 ಪ್ರತಿಶತದಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು ಈ ವಿದ್ಯಾರ್ಥಿವೇತನ ಗರಿಷ್ಠ 25,000 ಡಾಲರ್ ಅನ್ನು ಹೊಂದಿದೆ. ಅಗಸ್ಟನಾ ವಿಶ್ವವಿದ್ಯಾಲಯದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 30, 2023 ಆಗಿದೆ ಅಂತ ಹೇಳಲಾಗುತ್ತಿದೆ.


  ಯುಜಿ ಕೋರ್ಸ್ ಗಳಿಗಾಗಿ ಅಗಸ್ಟನಾ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ವಿದ್ಯಾರ್ಥಿವೇತನಗಳಿವು..


  ಐಇಎಲ್‌ಟಿಎಸ್ ಟೆಸ್ಟ್ ನಲ್ಲಿ 6.5 ಸ್ಕೋರ್ ಮಾಡಿದರೆ ಅಥವಾ ಅದಕ್ಕೆ ತತ್ಸಮಾನವಾದ 3.0 ಜಿಪಿಎ ಹೊಂದಿದವರಿಗೆ 15,000 ಡಾಲರ್ ವಿದ್ಯಾರ್ಥಿವೇತನವನ್ನು ಸಹ ನೀಡಲಾಗುವುದು. ಅಷ್ಟೇ ಅಲ್ಲದೆ ಐಇಎಲ್‌ಟಿಎಸ್ ಟೆಸ್ಟ್ ನಲ್ಲಿ 6.5 ಸ್ಕೋರ್ ಮಾಡಿದರೆ ಅಥವಾ ಸ್ಯಾಟ್ ನಲ್ಲಿ 1160 ಸ್ಕೋರ್ ಗಳಿಸಿದ್ದು, ಅದಕ್ಕೆ ತತ್ಸಮಾನವಾದ 3.0 ಜಿಪಿಎ ಹೊಂದಿದವರಿಗೆ 20,000 ಡಾಲರ್ ವಿದ್ಯಾರ್ಥಿವೇತನವನ್ನು ಸಹ ನೀಡಲಾಗುವುದು.
  ಅಗಸ್ಟನಾ ವಿಶ್ವವಿದ್ಯಾಲಯವು ಕಂಪ್ಯೂಟರ್ ಸೈನ್ಸ್, ಸಾಫ್ಟ್‌ವೇರ್ ಎಂಜಿನಿಯರಿಂಗ್, ಡೇಟಾ ಸೈನ್ಸ್ ಮತ್ತು ಬಿಸಿನೆಸ್ ನಂತಹ ಜನಪ್ರಿಯ ವಿಷಯಗಳನ್ನು ಒಳಗೊಂಡಂತೆ ಪದವಿಪೂರ್ವ ಪದವಿಗಳ ವ್ಯಾಪಕ ಆಯ್ಕೆಯನ್ನು ಒದಗಿಸುತ್ತದೆ.


  ವಿಮರ್ಶಾತ್ಮಕ ಚಿಂತನೆ, ಸಂವಹನ ಮತ್ತು ಪರಸ್ಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ತಾಂತ್ರಿಕ ಸಾಮರ್ಥ್ಯಗಳನ್ನು ಉದಾರ ಕಲಾ ವಿಧಾನದೊಂದಿಗೆ ಸಂಯೋಜಿಸುವ ಸುವ್ಯವಸ್ಥಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಒದಗಿಸುತ್ತದೆ ಅಂತ ಹೇಳಲಾಗಿದೆ.

  Published by:Kavya V
  First published: