ವಿದೇಶದಿಂದ ಭಾರತಕ್ಕೆ ಬಂದ ವಿದ್ಯಾರ್ಥಿಯೊಬ್ಬಳನ್ನ ಭಾರತೀಯ ಪ್ರಜೆ ಎಂದು ಪರಿಗಣಿಸಿ ಅವಳ ಬಳಿ ಕಾಲೇಜು (College) ಶುಲ್ಕವನ್ನು ಪಡೆದುಕೊಂಡ ಘಟನೆಯೊಂದು ಜರುಗಿದೆ. 26 ವರ್ಷದ ವೈದ್ಯಕೀಯ ಪದವೀಧರಳಾದ ತನ್ನನ್ನು ಹುಟ್ಟಿನಿಂದ ಯುಎಸ್ ಪ್ರಜೆಯಾಗಿದ್ದರೂ ಭಾರತೀಯ ಪ್ರಜೆ ಎಂದು ಸುಳ್ಳು ಘೋಷಿಸಿ ಸರ್ಕಾರಿ ಕೋಟಾದಡಿಯಲ್ಲಿ ಎಂಬಿಬಿಎಸ್ (MBBS) ಪದವಿ ಪೂರ್ಣಗೊಳಿಸಿದ್ಧಾಗಿ ಭಾರತೀಯ ಪ್ರಜೆ ಎಂದು ಸುಳ್ಳು ಘೋಷಿಸಿ, ಎನ್‌ಆರ್‌ಐಗೆ ನಿಗದಿಪಡಿಸಿದ ಶುಲ್ಕವನ್ನು (Fees) ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ ಎಂದು ವಿದ್ಯಾರ್ಥಿಯೊಬ್ಬಳು ತಿಳಿಸಿದ್ದಾಳೆ.
US ಗೆ ಹಿಂತಿರುಗಲು ನಿರ್ಗಮನ ಪರವಾನಗಿಯನ್ನು ಪಡೆಯಲು ಅವಳು ಬಯಸಿದರೆ ಕೋಟಾ ಸೀಟ್, ಅಥವಾ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇದಕ್ಕೆಲ್ಲಾ ಮೂಲ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಪೌರತ್ವ ಕಾಯ್ದೆ ಮತ್ತು ವಿದೇಶಿಯರ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅರ್ಜಿದಾರರಾದ ಭಾನು ಸಿ. ರಾಮಚಂದ್ರನ್ ವಿರುದ್ಧ ಯಾವುದೇ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಗೃಹ ವ್ಯವಹಾರಗಳ ಸಚಿವಾಲಯವು (MHA) ತನ್ನ ಅಧಿಕಾರ ಹೊಂದಿದೆ ಎಂದು ಹೇಳಿದ ನ್ಯಾಯಾಲಯ, ಆಕೆಗೆ ಅವಕಾಶ ನೀಡುವಲ್ಲಿ ಮುಂದಾಗಿದೆ. ಅವಳು ಎಲ್ಲಾ ಐದು ವರ್ಷಗಳ NRI ಕೋಟಾ ಶುಲ್ಕವನ್ನು ಪಾವತಿಸಿದರೆ US ಗೆ ಹಿಂತಿರುಗಿ ಹೋಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Canadaದಲ್ಲಿ 700 ಭಾರತೀಯ ವಿದ್ಯಾರ್ಥಿಗಳಿಗೆ ಗಡಿಪಾರು ನೋಟಿಸ್; ಬ್ರಿಜೇಶ್ ಮಿಶ್ರಾನಿಂದ ವೀಸಾ ವಂಚನೆ
ಅರ್ಜಿದಾರರು ಸರ್ಕಾರಿ ಕೋಟಾದಡಿಯಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೀಟು ಪಡೆಯುವ ನಿಜವಾದ ಭಾರತೀಯ ವಿದ್ಯಾರ್ಥಿಯ ಅವಕಾಶವನ್ನು ಕಸಿದುಕೊಂಡಿದ್ದಾರೆ. ಯಾವುದೇ ಷರತ್ತಿಲ್ಲದೇ ಆಕೆಯನ್ನು ಬಿಡಿಸಿದರೆ, ಅದು ತನ್ನನ್ನು ತಾನು 'ಭಾರತೀಯ ಪ್ರಜೆ' ಎಂದು ಕರೆದುಕೊಳ್ಳುವ ಮೂಲಕ ಆಕೆ ಮಾಡಿರುವ ತಪ್ಪು ನಿರೂಪಣೆಯಾಗುತ್ತದೆ ಎಂದು ಹೇಳಲಾಗಿದೆ.
ಆಕೆ ಇಲ್ಲಿ ಸುಳ್ಳು ಹೇಳಿಕೊಂಡು ಶಿಕ್ಷಣ ಪಡೆದು ಮತ್ತೆ ತನ್ನ ದೇಶಕ್ಕೆ ವಾಪಸ್ ಹೋಗಲು ಬಯಸುತ್ತಿದ್ದಾಳೆ ಇದು ತಪ್ಪು ಎಂದು ಹೇಳಲಾಗುತ್ತಿದೆ. ತನ್ನ ವೃತ್ತಿಜೀವನವನ್ನು ಮುಂದುವರಿಸಲು ಯುಎಸ್‌ಗೆ ಮರಳಲು ನಿರ್ಗಮನ ಪರವಾನಗಿಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಅಧಿಕಾರಿಗಳ ನಿರ್ಧಾರವನ್ನು ಪ್ರಶ್ನಿಸಿ ಶ್ರೀಮತಿ ಭಾನು ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಆದೇಶವನ್ನು ನೀಡಿದ್ದಾರೆ.
ತನ್ನ ಎಂಬಿಬಿಎಸ್ ಕೋರ್ಸ್‌ನ ಎಲ್ಲಾ ಐದು ವರ್ಷಗಳ ಎನ್‌ಆರ್‌ಐ ಕೋಟಾ ಶುಲ್ಕವನ್ನು ಪಾವತಿಸಿದರೆ ಮಾತ್ರ ಮತ್ತೆ ಅವಳ ದೇಶಕ್ಕೆ ಮರಳಿ ಕಳಿಸುವ ನಿರ್ಧಾರ ಮಾಡಬಹುದು ಎಂದು ಹೇಳಲಾಗುತ್ತಿದೆ.
ಈ ವಿದ್ಯಾರ್ಥಿನಿಯ ಹಿನ್ನೆಲೆ:
ವಿದ್ಯಾರ್ಥಿನಿ ಫೆಬ್ರವರಿ 1997 ರಲ್ಲಿ US ನ ಟೆನ್ನೆಸ್ಸಿಯ ನ್ಯಾಶ್‌ವಿಲ್ಲೆಯಲ್ಲಿ ಭಾರತೀಯ ದಂಪತಿಗೆ ಜನಿಸಿದವಳು. ಭಾರತೀಯ ಪ್ರಜೆಯಾಗಿರುವ ಆಕೆಯ ತಾಯಿ ತನ್ನ ಗಂಡನೊಂದಿಗೆ ಭಿನ್ನಾಭಿಪ್ರಾಯವಾಗಿ 2003 ರಲ್ಲಿ ಪ್ರವಾಸಿ ವೀಸಾದಲ್ಲಿ ಅರ್ಜಿಯನ್ನು ಪಡೆದುಕೊಂಡು ಭಾರತಕ್ಕೆ ಮರಳಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಪುತ್ರಿಯಾಗಿರುವ ಇವಳು ಇಲ್ಲೇ ವಿದ್ಯಾಭ್ಯಾಸ ಮಾಡಿ ಮತ್ತೆ ಈಗ ವಿದೇಶಕ್ಕೆ ಹಿಂದಿರುಗುವ ಆಲೋಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೇವಲ ಆರು ತಿಂಗಳ ಅವಧಿಯ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು ಎಂದು ಹೇಳಲಾಗುತ್ತದೆ. ಆದರೆ ಈಗ ಭಾರತಕ್ಕೆ ಬಂದು ಆರು ವರ್ಷಗಳು ಕಳೆದಿದೆ.
ಆದರೆ ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಗತಿಯನ್ನು ಆಧರಿಸಿ ಇದೀಗ ಚರ್ಚೆ ಆರಂಭವಾಗಿದೆ. ಅವಳು ತನ್ನ ಶಾಲಾ ಶಿಕ್ಷಣ ಮತ್ತು ಪಿಯು ಶಿಕ್ಷಣವನ್ನು "ಭಾರತೀಯ ಪ್ರಜೆ" ಪರಿಗಣಿಸಿ ಅದೇ ನಿಗದಿತ ಶುಲ್ಕವನ್ನು ಪಾವತಿಸಿ ಪೂರ್ಣಗೊಳಿಸಿದ್ದಾಳೆ ಎಂಬುದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ