• ಹೋಂ
  • »
  • ನ್ಯೂಸ್
  • »
  • Jobs
  • »
  • Union Budget 2023: ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ಸಿಗಲಿದೆ ಬಂಪರ್​ ಕೊಡುಗೆ!

Union Budget 2023: ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ಸಿಗಲಿದೆ ಬಂಪರ್​ ಕೊಡುಗೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಎಲ್ಲಾ ಹಂತಗಳಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಅವಶ್ಯಕತೆಯಿದೆ. ಇದಕ್ಕೆ ಬಜೆಟ್​ನ ಸಹಕಾರ ಕೂಡಾ ಬೇಕೆ ಬೇಕು. 2023-24ರ ಯೂನಿಯನ್ ಬಜೆಟ್‌ನತ್ತ ಈಗ ಎಲ್ಲರ ಗಮನವಿದೇ ಅದೇ ರೀತಿ ಉನ್ನತ ಶಿಕ್ಷಣಕ್ಕೆ ಬಜೆಟ್​ ಯಾವ ರೀತಿ ಸಹಾಯ ಮಾಡಲಿದೆ ಎಂಬ ಕಾತರತೆಯೂ ಇದೆ.

ಮುಂದೆ ಓದಿ ...
  • Share this:

ಕೇಂದ್ರ ಬಜೆಟ್ 2023-24ರಲ್ಲಿ ಬಿಡುಗಡೆಯಾಗಲಿರುವ ಬಜೆಟ್​ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. 2023-24ರ ಕೇಂದ್ರ ಬಜೆಟ್‌ನಿಂದ ಶಿಕ್ಷಣ (Education) ಕ್ಷೇತ್ರಕ್ಕೆ ಕೆಲವು ನಿರೀಕ್ಷೆಗಳನ್ನು ಹೊಂದಿದೆ. ಭಾರತದ ಶಿಕ್ಷಣ ಕ್ಷೇತ್ರವು ಕೊರೊನಾ (Covid) ಸಾಂಕ್ರಾಮಿಕದಿಂದ ಚೇತರಿಸಿಕೊಂಡ ನಂತರ ಮತ್ತೆ ಇದೀಗ ಸುಧಾರಣೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಎಷ್ಟು ಬಜೆಟ್ (Budget)​ ಬಿಡುಗಡೆಯಾಗಲಿದೆ ಎಂಬುದು ಕೂತೂಹಲ ಮೂಡಿಸಿದೆ.


ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಎಲ್ಲಾ ಹಂತಗಳಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಅವಶ್ಯಕತೆಯಿದೆ. ಇದಕ್ಕೆ ಬಜೆಟ್​ನ ಸಹಕಾರ ಕೂಡಾ ಬೇಕೆ ಬೇಕು. 2023-24ರ ಯೂನಿಯನ್ ಬಜೆಟ್‌ನತ್ತ ಈಗ ಎಲ್ಲರ ಗಮನವಿದೇ ಅದೇ ರೀತಿ ಉನ್ನತ ಶಿಕ್ಷಣಕ್ಕೆ ಬಜೆಟ್​ ಯಾವ ರೀತಿ ಸಹಾಯ ಮಾಡಲಿದೆ ಎಂಬ ಕಾತರತೆಯೂ ಇದೆ.


ಕಳೆದ ಹಲವು ವರ್ಷಗಳಿಂದ ದೀರ್ಘಕಾಲಿಕವಾಗಿ ಅನುದಾನರಹಿತವಾಗಿರುವ ವಲಯಕ್ಕೆ ಈ ಬಾರಿ ಬಜೆಟ್​ನಲ್ಲಿ ಉತ್ತೇಜನ ಸಿಗಬಹುದು ಎಂಬ ನಿರೀಕ್ಷೆ ಇದೆ. 2022-23 ರಲ್ಲಿ, ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಹಂಚಿಕೆಯು ಒಟ್ಟು ನಿಧಿಯ 2.6 ಪ್ರತಿಶತದಷ್ಟು ಮಾತ್ರ ಆಗಿತ್ತು. ಉನ್ನತ ಶಿಕ್ಷಣಕ್ಕಾಗಿ 40828.35 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು, ಆದರೆ ಶಾಲಾ ಶಿಕ್ಷಣಕ್ಕಾಗಿ ರೂ 63449.37 ನಿಧಿಯನ್ನು ನೀಡಿತ್ತು. ಒಟ್ಟು 54,873.66 ಕೋಟಿ ರೂ ಮೀಸಲಿಟ್ಟಿತ್ತು.


ಇದನ್ನೂ ಓದಿ: Pariksha Pe Charcha 2023ರಲ್ಲಿ ಪ್ರಧಾನಿ ಮೋದಿ ಭಾಗಿ, 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿ


ಈ ಗಮನಾರ್ಹ ಹಣಕಾಸಿನ ಕೊರತೆಯ ನಡುವೆ, ಭಾರತವು ಈ ವರ್ಷ ತನ್ನ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಕನಿಷ್ಠ 3-3.5 ಪ್ರತಿಶತವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ 34 ಮಿಲಿಯನ್ ಹೆಚ್ಚುವರಿ ವಿದ್ಯಾರ್ಥಿಗಳನ್ನು ತಲುಪುವ ಮೂಲಕ 2035 ರ ವೇಳೆಗೆ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು (ಜಿಇಆರ್) 50 ಪ್ರತಿಶತಕ್ಕೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಈ ಬೆಳವಣಿಗೆಗೆ ಉತ್ತೇಜನ ನೀಡುವ ಸಂಸ್ಥೆಗಳು ಪ್ರಾಥಮಿಕವಾಗಿ ಖಾಸಗಿ ಸಂಸ್ಥೆಗಳಾಗಿವೆ.


ಶಿಕ್ಷಣ ಕ್ಷೇತ್ರಕ್ಕೆ ಈ ರೀತಿ ಕೊಡುಗೆ ಸಿಗಲಿದೆ


ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇರ್ಪಡೆಯಾಗುವ ನಿರೀಕ್ಷೆಯಿರುವ 3.5 ಕೋಟಿ ಸೀಟುಗಳಲ್ಲಿ ಹೆಚ್ಚಿನವು ಖಾಸಗಿ ವಲಯದವು ಎಂಬುದನ್ನು ನಿರಾಕರಿಸಲಾಗದು. ಭೌತಿಕ ಮೂಲಸೌಕರ್ಯ, ಅಧ್ಯಾಪಕರ ಅಭಿವೃದ್ಧಿ, ಸಂಶೋಧನೆ ಮತ್ತು ತಂತ್ರಜ್ಞಾನ ಕಲಿಕೆಯ ವಿಸ್ತರಣೆಗೆ ಬಜೆಟ್ ಸಹಕಾರಿಯಾಗಲಿದೆ. ಪ್ರಸ್ತುತ ವಿಶ್ವದರ್ಜೆಯ ಶಿಕ್ಷಣವನ್ನು ಪಡೆಯುವ ಅಗತ್ಯಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಗಳನ್ನು ಭಾರತದಲ್ಲಿ ತೆರೆಯಲು ಆಲೋಚನೆ ನಡೆಯುತ್ತಿದೆ ಅದಕ್ಕೂ ಸಹ ಬಜೆಟ್​ನ ಅವಶ್ಯಕತೆ ಇದೆ.
ಕಳೆದ ವರ್ಷವೊಂದರಲ್ಲೇ 11 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅಂದರೆ ಸರಿಸುಮಾರು 2.4 ಲಕ್ಷ ಕೋಟಿ ರೂ. 2024ರಲ್ಲಿ ಇದು 6.4 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ. ಆದರೆ ಈ ಬಾರಿ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಹೋಗದೇ ಇಲ್ಲೇ ಉಳಿಯುವಂತೆ ನೋಡಿಕೊಳ್ಳಲು ಮತ್ತು ವಿದೇಶದಿಂದ ವಿದ್ಯಾರ್ಥಿಗಳು ಕಲಿಕೆಗೆ ಭಾರತಕ್ಕೆ ಆಗಮಿಸುವಂತೆ ಮಾಡುವ ಆಲೋಚನೆ ಇದೆ.


ಅಧ್ಯಯನ ಮಾಡಲು ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಂದ ಆರ್ಥಿಕ ನಷ್ಟ


ಇಂಡಿಯಾ ಸ್ಕಿಲ್ಸ್ ಗ್ಯಾಪ್ ವರದಿಯ ಪ್ರಕಾರ, ಅಧ್ಯಯನ ಮಾಡಲು ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಂದ ಭಾರತದ ಆದಾಯ ಕಡಿಮೆಯಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಡಿಜಿಟಲೀಕರಣ ಆಗುತ್ತಿರುವುದರಿಂದ ಶೈಕ್ಷಣಿಕ ಡೇಟಾಬೇಸ್‌ಗಳು, ಜರ್ನಲ್‌ಗಳು ಮತ್ತು ಪುಸ್ತಕಗಳಂತಹ ಪರಿಕರಗಳಿಗೂ ಆರ್ಥಿಕ ನೆರವು ಬೇಕಾಗುತ್ತದೆ. ಪ್ರಸ್ತುತ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ (NEP) ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು