• ಹೋಂ
  • »
  • ನ್ಯೂಸ್
  • »
  • Jobs
  • »
  • Admission: UG ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ CUET ಸ್ಕೋರ್‌ಗಳನ್ನು ಪರಿಗಣಿಸಿ ಎಂದ UGC

Admission: UG ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ CUET ಸ್ಕೋರ್‌ಗಳನ್ನು ಪರಿಗಣಿಸಿ ಎಂದ UGC

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪರೀಕ್ಷೆಯು ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಯುತ್ತದೆ.

  • Share this:

ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ), ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ದೇಶದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಬರೆದ ಪತ್ರದಲ್ಲಿ, ತಮ್ಮ ಯುಜಿ ಕೋರ್ಸ್​​ಗಳ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಯುಜಿ 2023 ಅಂಕಗಳನ್ನು ಬಳಸಲು ಹೇಳಿದೆ ಮತ್ತು ಪ್ರೋತ್ಸಾಹಿಸಿದೆ.  ವಿವಿಧ ದಿನಾಂಕಗಳಲ್ಲಿ ಕೆಲವೊಮ್ಮೆ ಪರಸ್ಪರ ಹೊಂದಿಕೆಯಾಗುವ ಅನೇಕ ಪ್ರವೇಶ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಬರೆಯಬೇಕಾದ ಪರಿಸ್ಥಿತಿ ಬರುತ್ತದೆ ಇದನ್ನು ತಪ್ಪಿಸುವ ಸಲುವಾಗಿ ಈ ರೀತಿ ಮಾಡಲು UGC ಸೂಚಿಸಿದೆ. ಈ ಕ್ರಮಕ್ಕೆ ಹಲವಾರು ಜನರ ಒಪ್ಪಿಗೆ ಕೂಡಾ ಇದೆ.  ಬೋರ್ಡ್‌ಗಳ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಲು, ಯುಜಿಸಿ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳನ್ನು ಪ್ರೋತ್ಸಾಹಿಸುತ್ತಿದೆ.


ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು (HEIs) ತಮ್ಮ UG ಕೋರ್ಸ್​​ಗಳ ಪ್ರವೇಶಕ್ಕಾಗಿ CUET ಸ್ಕೋರ್ ಅನ್ನು ಅಳವಡಿಸಿಕೊಳ್ಳಲು ಮತ್ತು ಅದನ್ನೇ ಬಳಸಲು, ಅಧಿಕೃತ ಪತ್ರವನ್ನು ಬರೆದಿದೆ. ಈ ಕ್ರಮದ ಬಗ್ಗೆ ಕೆಲವು ವರ್ಷಗಳಿಂದ ಅಧಿಕಾರಿಗಳು ಸಾಕಷ್ಟು ಯೋಚಿಸಿದ್ದರು ಆದರೆ ಈ ಬಾರಿ ಇದು ಜಾರಿಯಾಗುವ ಸಾಧ್ಯತೆ ಇದೆ. ಹಲವಾರು ಪ್ರವೇಶ ಪರೀಕ್ಷೆಗಳನ್ನು ತಪ್ಪಿಸಲು ಮತ್ತು ಮುಖ್ಯವಾಗಿ ವಿವಿಧ ಮಂಡಳಿಗಳ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಲು ಶಾಸನಬದ್ಧ ಸಂಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEIs) ಈ ಕಲ್ಪನೆಯನ್ನು ತಂದಿದೆ.


ದೇಶದಾದ್ಯಂತದ ಅನೇಕ ಕಾಲೇಜುಗಳು ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶ


ಈಗಿನಂತೆ ದೇಶದಾದ್ಯಂತದ ಅನೇಕ ಕಾಲೇಜುಗಳು ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ನಡೆಸುತ್ತವೆ. ಅಥವಾ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ವಿವಿಧ ಸ್ಟ್ರೀಮ್‌ಗಳಲ್ಲಿ ವಿದ್ಯಾರ್ಥಿಗಳು ಪ್ರವೇಶಿಸಲು ಸಹಾಯ ಮಾಡುತ್ತದೆ. ಈ ಅಂಕವನ್ನೇ ಮಾನದಂಡವಾಗಿಸಿಕೊಳ್ಳಲಾಗುತ್ತದೆ. ಹಿಂದಿನ ಡಿಸೆಂಬರ್ 2022 ರಲ್ಲಿ, UGC, ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಪತ್ರವೊಂದರಲ್ಲಿ, CUET - UG/PG 2023 ರ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಿದೆ.


ಇದನ್ನೂ ಓದಿ: CUET UG 2023: 10ನೇ ತರಗತಿ ಪರೀಕ್ಷೆ ಬರೆಯದೇ ಇರುವ ವಿದ್ಯಾರ್ಥಿಗಳಿಗೆ ಹೀಗೊಂದು ವಿಶೇಷ ಸೌಲಭ್ಯ


ಪತ್ರದಲ್ಲಿ, ಒಬ್ಬ ವಿದ್ಯಾರ್ಥಿ ಎಷ್ಟು ವಿಷಯಗಳಿಗೆ ಹಾಜರಾಗಬಹುದು ಎಂಬುದರ ಬಗ್ಗೆ ತಿಳಿಸಲಾಗಿದೆ. ಪ್ರಶ್ನೆ ಪತ್ರಿಕೆಯ ಮಾದರಿಯು ಒಂದೇ ಆಗಿರುತ್ತದೆ ಎಂದು ಬರೆಯಲಾಗಿದೆ. ಹೆಚ್ಚುವರಿಯಾಗಿ, ಅಭ್ಯರ್ಥಿಯು ಒಂದು/ಎರಡು ಭಾಷೆಗಳು ಮತ್ತು ಸಾಮಾನ್ಯ ಪರೀಕ್ಷೆಯ ಜೊತೆಗೆ ಆರು ಡೊಮೇನ್ ವಿಷಯಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.


13 ಭಾಷೆಗಳಲ್ಲಿ ನಡೆಯುತ್ತೆ ಪರೀಕ್ಷೆ

ಪರೀಕ್ಷೆಯು ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ನಡೆಯುತ್ತದೆ. ಪರೀಕ್ಷೆಯನ್ನು ಅಭ್ಯರ್ಥಿಗಳ ಸಂಖ್ಯೆ ಮತ್ತು ವಿಷಯದ ಆಯ್ಕೆಗಳ ಆಧಾರದ ಮೇಲೆ ಮೂರು ಪಾಳಿಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ನಡೆಸಲಾಗುತ್ತದೆ. CUET-UG ಫಲಿತಾಂಶಗಳನ್ನು ಜೂನ್ 2023 ರ ಮೂರನೇ ವಾರದಲ್ಲಿ ಪ್ರಕಟಿಸಲಾಗುವುದು ಮತ್ತು CUET-PG ಫಲಿತಾಂಶಗಳನ್ನು ಜುಲೈ 2023 ರ ಮೊದಲ ವಾರದಲ್ಲಿ ಘೋಷಿಸಲಾಗುತ್ತದೆ.
ಈ ವರ್ಷ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾದ ವಿಷಯಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಬಾರಿ, CUET UG ಪರೀಕ್ಷೆಯು ಪ್ರಾರಂಭವಾದಾಗ NTA ಅಭ್ಯರ್ಥಿಗಳಿಗೆ ಒಂಬತ್ತು ವಿಷಯಗಳನ್ನು ಆಯ್ಕೆ ಮಾಡಲು ಅವಕಾಶ ನೀಡಿತ್ತು. ಆದರೆ ಈ ವರ್ಷ ಅರ್ಜಿದಾರರು ಎಲ್ಲಾ ಮೂರು ವಿಭಾಗಗಳಿಂದ ಗರಿಷ್ಠ 10 ವಿಷಯಗಳನ್ನು ಆಯ್ಕೆ ಮಾಡಬಹುದು. ಪರೀಕ್ಷೆಯು ಮೇ 21 ರಿಂದ 31 ರವರೆಗೆ ನಡೆಯಲಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು